Subscribe to Updates
Get the latest creative news from FooBar about art, design and business.
Author: kannadanewsnow57
ಹಾಸನ : ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಮತ್ತೊಂದು ಬಲಿಯಾಗಿದ್ದು, ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಬೇಲೂರು ಬಸ್ ನಿಲ್ದಾಣದ ಬಳಿಯಿರುವ ಪುಷ್ಪಗಿರಿ ಲಾಡ್ಜ್ ನಲ್ಲಿ ಬೇಲೂರು ತಾಲೂಕಿನ ಚೋಕನಹಳ್ಳಿ ಗ್ರಾಮದ ರಾಕೇಶ್ ಗೌಡ (23) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಕೇಶ್ ಟಾಟಾ ಕ್ಯಾಪಿಟಲ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ತಿಂಗಳಿಂದ ಆನ್ ಲೈನ್ ಗೇಮ್ ಆಡುತ್ತಿದ್ದ ಎನ್ನಲಾಗಿದೆ. ರಮ್ಮಿ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ ರಾಕೇಶ್ ಗೌಡ ಇದೀಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಮ್ಮಿ ಆನ್ ಲೈನ್ ಗೇಮ್ ಬ್ಯಾನ್ ಮಾಡಬೇಕು, ಯಾರೂ ಗೇಮ್ ಆಡಬೇಡಿ ಎಂದು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ 14 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಚಾಮರಾಜನಗರದಲ್ಲಿ ಮಳೆಯಾಗಲಿದೆ. ಇನ್ನು ದಕ್ಷ ಿಣಕನ್ನಡ ಜಿಲ್ಲೆಯಲ್ಲಿ ಎರಡು ದಿನ ಮಳೆ ಇರಲಿದ್ದು, ಉತ್ತರ ಒಳನಾಡು ಜಿಲ್ಲೆಗಳ ಕೆಲ ಕಡೆ ಮೋಡ ಕವಿದ ವಾತಾವರಣ ಹಾಗೂ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಕನ್ನಡ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಮಾನವೀಯ ಘಟನೆ ನಡೆದಿದ್ದು, ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕತ್ತರಿಸಿರುವ ದುರುಳರು ದೇಹವನ್ನು ಕೊಂಡೊಯ್ದಿರುವ ಘಟನೆ ನಡೆದಿದೆ. ಹೌದು ಇಂತಹ ಒಂದು ಕೃತ್ಯ ಎಸಗಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮೇವಿಗಾಗಿ ಬಿಟ್ಟಿದ್ದ ಹಸು ರಾತ್ರಿಯಾದರೂ ಬಂದಿರಲಿಲ್ಲ. ಬೆಳಿಗ್ಗೆ ಹಸುವಿಗಾಗಿ ಮಾಲೀಕ ಕೃಷ್ಣ ಆಚಾರ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು, ರುಂಡ ಪತ್ತೆಯಾಗಿದೆ. ದುಷ್ಕರ್ಮಿಗಳು ಕೇವಲ ಹಸುವಿನ ರುಂಡವನ್ನು ಮಾತ್ರ ಅಲ್ಲಿ ಬಿಟ್ಟು ದೇಹವನ್ನು ಸೇವನಿಗೆ ಎಂದು ತೆಗೆದುಕೊಂಡು ಹೋಗಿದ್ದಾರೆ ಎಂದು ಹಸುವಿನ ಮಾಲೀಕರಾದಂತಹ ಕೃಷ್ಣ ಆಚಾರಿ ಅನುಮಾನ ವ್ಯಕ್ತಪಡಿಸಿದ್ದಾರೆ.…
ಬೆಂಗಳೂರು : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸರ್ಕಾರ ಹಾಗೂ ಸಹಕಾರ ಇಲಾಖೆ ಪ್ರಕಟಣೆ ಹೊರಡಿಸಿದ್ದು ನೋಂದಣಿ ಮಾಡಿಸಲು ದಿನಾಂಕ:-31-01-2025 ಕೋನೆಯ ದಿನಾಂಕವಾಗಿರುತ್ತದೆ. ಬೇಕಾದ ಅಗತ್ಯ ದಾಖಲೆಗಳು ನವೀಕರಣ ಮಾಡಲು 1.ಯಶಸ್ವಿನಿ ಐಡಿ ಕಾರ್ಡು, 2.ಆಧಾರ್ ಕಾರ್ಡ್ ಜೆರಾಕ್ಸ್ (ನೋಂದಣಿ ಮಾಡಿಸುವ ಪ್ರತಿಯೋಬ್ಬ ಸದಸ್ಯರದ್ದು) 3.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಢದವರಿಗೆ ಜಾತಿ ಪ್ರಮಾಣ ಪತ್ರದ ನಕಲು.(ಕುಟುಂಬದ ಒಬ್ಬರದ್ದು) ಹೋಸದಾಗಿ ನೋದಾಯಿಸಲು:- 1.ಸಹಕಾರ ಸಂಘದಲ್ಲಿ ಸದಸ್ಯತ್ವ ಹೋದಿರಬೇಕು. 2.ಕುಟುಂಬದ ರೇಷನ್ ಕಾರ್ಡ್ ಪ್ರತಿ ಜೆರಾಕ್ಸ್, 3.ಆಧಾರ್ ಕಾರ್ಡ್ ಜೆರಾಕ್ಸ್ (ನೋದವಣಿ ಮಾಡಿಸುವ ಪ್ರತಿಯೋಬ್ಬ ಸದಸ್ಯರದ್ದು) 4.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಢದವರಿಗೆ ಜಾತಿ ಪ್ರಮಾಣ ಪತ್ರದ ನಕಲು. (ಕುಟುಂಬದ ಒಬ್ಬರದ್ದು) 5. ಪ್ರತಿಯೊಬ್ಬರದ್ದು 2 ಕಾಪೀ ಪೋಟೊ. ಸಹಕಾರ ಇಲಾಖೆ ವತಿಯಿಂದ ರಾಜ್ಯದ ಯಶಸ್ವನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಯಶಸ್ವಿನಿ ಯೋಜನೆಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು. ದಿ: 1/1/2024 ರಿಂದ ಯಶಸ್ವಿನಿ ನೋಂದಣಿ ಆರಂಭಗೊಂಡಿದ್ದು, ದಿ: 01-04-2025 ರಿಂದ 31/3/2026 ರವರೆಗೆ ಚಿಕಿತ್ಸಾ…
ನವದೆಹಲಿ. ಪ್ರಧಾನಿ ಮೋದಿ ಮನ್ ಕಿ ಬಾತ್ ಪ್ರಧಾನಿ ನರೇಂದ್ರ ಮೋದಿ ಅವರು 2025 ರ ಮೊದಲ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದು ಅದರ 118 ನೇ ಕಂತು. ಕಾರ್ಯಕ್ರಮದಲ್ಲಿ, ಪ್ರಧಾನಿಯವರು ಚುನಾವಣೆಗಳ ಬಗ್ಗೆ ಹಾಗೂ ಪ್ರಯಾಗ್‌ರಾಜ್‌ನ ಮಹಾಕುಂಭದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ, ಪ್ರತಿ ಬಾರಿಯೂ ಮನ್ ಕಿ ಬಾತ್ ತಿಂಗಳ ಕೊನೆಯ ಭಾನುವಾರ ನಡೆಯುತ್ತದೆ ಎಂಬುದನ್ನು ನೀವು ಗಮನಿಸಿರಬೇಕು, ಆದರೆ ಈ ಬಾರಿ ನಾವು ನಾಲ್ಕನೇ ಭಾನುವಾರದ ಬದಲು ಒಂದು ವಾರ ಮುಂಚಿತವಾಗಿ ಮೂರನೇ ಭಾನುವಾರ ಮನ್ ಕಿ ಬಾತ್ ನಡೆಸಲಾಗುತ್ತಿದೆ ಎಂದು ಹೇಳಿದರು. ಮುಂದಿನ ವಾರ ಭಾನುವಾರ ಗಣರಾಜ್ಯೋತ್ಸವ ಇರುವುದರಿಂದ, ನನ್ನ ಎಲ್ಲಾ ದೇಶವಾಸಿಗಳಿಗೆ ಮುಂಚಿತವಾಗಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮನ್ ಕಿ ಬಾತ್ ಭಾಷಣದ ಮುಖ್ಯಾಂಶಗಳು ಈ ಬಾರಿಯ ‘ಗಣರಾಜ್ಯೋತ್ಸವ’ ಬಹಳ ವಿಶೇಷವಾಗಿದೆ ಎಂದು ಪ್ರಧಾನಿ ಹೇಳಿದರು.…
ನವದೆಹಲಿ : ಜನವರಿ 21 ಮತ್ತು 27 ರಂದು ನಡೆಯಲಿರುವ ಯುಜಿಸಿ ನೆಟ್ ಪರೀಕ್ಷೆಯ ಪ್ರವೇಶ ಪತ್ರಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳು nta ಅಧಿಕೃತ ವೆಬ್‌ಸೈಟ್ (ugcnet.nta.ac.in) ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಂಸ್ಥೆ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಜನವರಿ 14 ರಂದು https://ugcnet.nta.ac.in/ ನಲ್ಲಿ ಸಾರ್ವಜನಿಕ ಸೂಚನೆಯ ಮೂಲಕ ತಿಳಿಸಲಾಗಿದೆ ಎಂದು ಹೇಳಲಾಗಿದೆ. ಜನವರಿ 21, 2025 ಮತ್ತು ಜನವರಿ 27, 2025 ರಂದು ನಿಗದಿಯಾಗಿದ್ದ UGC-NET ಡಿಸೆಂಬರ್ 2024 ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ. ಆದ್ದರಿಂದ, ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು (ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು) ವೆಬ್‌ಸೈಟ್‌ನಿಂದ ಭರವಸೆಯೊಂದಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ತಿಳಿದುಕೊಳ್ಳಿ NTA ಪರಿಷ್ಕರಿಸಿದ ಹೊಸ ಪರೀಕ್ಷಾ ವೇಳಾಪಟ್ಟಿಯ ಪ್ರಕಾರ, ಬೆಳಗಿನ ಪಾಳಿ ಅಂದರೆ ಮೊದಲ ಪಾಳಿ (ಬೆಳಿಗ್ಗೆ 9 ರಿಂದ ಮಧ್ಯಾಹ್ನ…
ಕತಿಹಾರ್ : ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಒಂದು ದೊಡ್ಡ ದೋಣಿ ಅಪಘಾತ ಸಂಭವಿಸಿದೆ. ಕತಿಹಾರ್‌ನ ಅಹಮದಾಬಾದ್‌ನಲ್ಲಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ದೋಣಿಯಲ್ಲಿ ಒಟ್ಟು 17 ಜನರಿದ್ದು, ಅದರಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಲ್ಕು ಜನರು ಈಜುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡರು. ಎಲ್ಲಾ ಜನರು ದಕ್ಷಿಣ ಕರಿಮುಲ್ಲಾಪುರದ ಮೇಘು ಘಾಟ್‌ನಿಂದ ದೋಣಿ ಹತ್ತಿ ಗಡ್ಡೈ ದಿಯಾರಾಗೆ ಹೋಗುತ್ತಿದ್ದರು. ದೋಣಿ ಅಪಘಾತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. ಮೃತದೇಹಗಳನ್ನು ಹೊರತೆಗೆಯಲಾದ ಮೂವರಲ್ಲಿ 60 ವರ್ಷದ ಪವನ್ ಕುಮಾರ್, 70 ವರ್ಷದ ಸುಧೀರ್ ಮಂಡಲ್ ಮತ್ತು ಒಂದು ವರ್ಷದ ಮುಗ್ಧ ಮಗು ಸೇರಿದ್ದಾರೆ. ಕಾಣೆಯಾದ ಉಳಿದವರನ್ನು ಹುಡುಕಲು ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ದೋಣಿಯಲ್ಲಿದ್ದ ಜನರುಕೃಷಿ ಕೆಲಸ ಮಾಡಲು ಡಯಾರಾ ಪ್ರದೇಶಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ನದಿಯಯಲ್ಲಿ…
ಹರಿಯಾಣ : ಭೀಕರ ಅಪಘಾತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ, ಚಿಕ್ಕಪ್ಪ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಹರಿಯಾಣದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಮನು ಭಾಕರ್ ಅವರ ಅಜ್ಜಿ, ಚಿಕ್ಕಪ್ಪ ಸಾವನಪ್ಪಿದ್ದಾರೆ.ಸ್ಕೂಟರ್ ಮತ್ತು ಬ್ರೆಝಾ ಕಾರು ಡಿಕ್ಕಿ ಹೊಡೆದವು. ಈ ಅಪಘಾತದಲ್ಲಿ ಮನು ಭಾಕರ್ ಅವರ ಅಜ್ಜಿ ಮತ್ತು ಚಿಕ್ಕಪ್ಪ ಸಾವನ್ನಪ್ಪಿದರು. ಈ ಘಟನೆಯಿಂದ ಮನು ಭಾಕರ್ ಮತ್ತು ಅವರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರು ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದರು ಆದರೆ ಇದಾದ ನಂತರ ಅವರ ಕುಟುಂಬದಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತು. ಅವರ ಅಜ್ಜಿ ಮತ್ತು ಚಿಕ್ಕಪ್ಪ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ನವದೆಹಲಿ : ಭಾಷೆಗಳು ನಮ್ಮ ಸಂಸ್ಕೃತಿಯ ಪ್ರತೀಕ. ಜಗತ್ತಿನಲ್ಲಿ ಹಲವು ಭಾಷೆಗಳಿವೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಭಾಷೆ ಮತ್ತು ಉಪಭಾಷೆಯನ್ನು ಹೊಂದಿದೆ. ವಿಶ್ವದಲ್ಲಿ ಬಹುಪಾಲು ಜನರು ಮಾತನಾಡುವ ಟಾಪ್-10 ಭಾಷೆಗಳ ಪಟ್ಟಿ ಇಲ್ಲಿದೆ 1. ಇಂಗ್ಲೀಷ್ ಪ್ರಪಂಚದಾದ್ಯಂತ 113 ಕೋಟಿ 20 ಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆಯನ್ನು ಮುಖ್ಯವಾಗಿ ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮಾತನಾಡುತ್ತಾರೆ. ವಿಶ್ವಾದ್ಯಂತ ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಇದು ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿದೆ. 2. ಮ್ಯಾಂಡರಿನ್ ಚೈನೀಸ್ ವಿಶ್ವಾದ್ಯಂತ ಈ ಭಾಷೆಯನ್ನು ಮಾತನಾಡುವವರು: 111 ಕೋಟಿ 70 ಲಕ್ಷ. ಈ ಭಾಷೆಯನ್ನು ಚೀನಾದಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ. ಇದು ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಮಾತೃಭಾಷೆಯಾಗಿದೆ. 3. ಹಿಂದಿ ಜಗತ್ತಿನಾದ್ಯಂತ 61 ಕೋಟಿ 50 ಲಕ್ಷ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ. ಹಿಂದಿ ನಮ್ಮ ದೇಶದ…
ಬೆಂಗಳೂರು : ಬೆಂಗಳೂರಿನಲ್ಲಿ ಇದೆ ಜನವರಿ 23 ರಿಂದ ಫೆಬ್ರವರಿ 17ರ ವರೆಗೆ ಏರ್ ಶೋ ಆ ಯೋಜನೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ, ಯಲಹಂಕದ ಸುತ್ತಮುತ್ತಲೂ ಇದೀಗ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಆದೇಶ ಹೊರಡಿಸಿದೆ. ಜನವರಿ 23ರಿಂದ ಫೆಬ್ರವರಿ 17ರವರೆಗೂ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ವಾಯುನೆಲೆಯಲ್ಲಿ ವಿಮಾನಗಳ ರಿಹರ್ಸಲ್ ನಡೆಸಲಿವೆ. ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕದ ಸುತ್ತಮುತ್ತ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ. ಯಲಹಂಕದ ಸುಮಾರು 13 ಕಿಲೋ ಮೀಟರ್ ಸುತ್ತಲೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಮಾಂಸ ಮಾರಾಟ ಹಾಗೂ ಉದ್ದಿಮೆಗಳ ಬಂದ್ಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 10 ರಿಂದ 14ರ ವರೆಗೂ ಈ ಒಂದು ಏರ್ ಶೋ ನಡೆಯಲಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.













