Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಧಿಕಾರಿ/ಸಿಬ್ಬಂದಿಗಳಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡುವ ಕುರಿತು ಸರ್ಕಾರ ಮಹತ್ವದಅದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರ. ಸಂ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಇತ್ಯಾದಿ ಕೆಲಸಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಮುಖ್ಯಮಂತ್ರಿಯವರ ಪದಕವನ್ನು ನೀಡುವ ಸಂಬಂಧ ರಚಿಸಲಾದ ನಿಯಮಗಳಿಗೆ ಸರ್ಕಾರದ ಅನುಮೋದನ ನೀಡಲಾಗಿದೆ. ಮೇಲೆ ಓದಲಾದ ಕ್ರ.ಸಂ (2)ರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡ ಮುಖ್ಯಸ್ಥರು) ಪ್ರಸ್ತಾವನೆಯಲ್ಲಿ ಅರಣ್ಯ ಇಲಾಖೆಯಲ್ಲಿ ವೃತ್ತವಾರು ಸಮಿತಿ ಹಾಗೂ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಸರ್ಕಾರಿ ಆದೇಶದಲ್ಲಿ ಸೂಚಿಸಿರುವಂತೆ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡುತೋಪು ಬೆಳಸುವಂತಹ ಸಾಧನೆ, ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ…
ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ ಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ಇತಿಹ್ಯ: ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ…
ಬೆಂಗಳೂರು : ‘UPI ವ್ಯವಹಾರ’ ನಡೆಸಿದ ‘ಸಣ್ಣ ವ್ಯಾಪಾರಸ್ತ’ರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಬಿಗ್ ಶಾಕ್ ನೀಡಿದ್ದು, ಟ್ಯಾಕ್ಸ್ ಕಟ್ಟುವಂತೆ ಖಡಕ್ ಸೂಚನೆ ನೀಡಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕದ ಹಲವು ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸುಗಳ ಬಗ್ಗೆ ವರದಿಯಾಗಿರುತ್ತದೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯು ಈ ಕೆಳಕಂಡ ಮಾಹಿತಿಯನ್ನು ನೀಡಿರುತ್ತದೆ. ಜುಲೈ 1, 2017 ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂಪಾಯಿಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿ.ಎಸ್.ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು…
ಕಲಬುರ್ಗಿ : ಕಲಬುರ್ಗಿಯಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ನಡೆಸಲಾಗಿದೆ. ಕಲ್ಬುರ್ಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಸರಫ್ ಬಜಾರ್ ನಲ್ಲಿ ಮಾಲಿಕ್ ಜ್ಯುವೆಲರಿ ಅಂಗಡಿಗೆ ನುಗ್ಗಿ ಗನ್ ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ. ಹೌದು ಕಲ್ಬುರ್ಗಿಯ ಸರಾಫ್ ಬಜಾರ್ ನಲ್ಲಿ ಈ ಒಂದು ದರೋಡೆ ನಡೆದಿದೆ. ಮಾಲಿಕ್ ಜುವೆಲರ್ಸ್ ನಲ್ಲಿ ಗನ್ ಹಿಡಿದು ಹಾಡ ಹಗಲೇ ದರೋಡೆ ನಡೆಸಲಾಗಿದ್ದು, ಏಕಾಏಕಿ ನಾಲ್ವರ ಗ್ಯಾಂಗ್ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಿದೆ. ಸದ್ಯ ಘಟನಾ ಸ್ಥಳಕ್ಕೆ ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರರಿಂದ ಈ ಕೃತ್ಯ ತೆಗೆದುರಿಸಿ ದರೋಡೆಸಿದರೆ ಸುಮಾರು ಎರಡರಿಂದ ಮೂರು ಕೆಜಿ ಚಿನ್ನ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಲ್ಲಿದಂತಹ ಪ್ರತ್ಯಕ್ಷದರ್ಶಿ ಒಬ್ಬರು…
ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಒಟ್ಟು 11 ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಮೈಕೆಲ್ ಡಿ.ಕುನ್ಹಾ ನೇತೃತ್ವದ ತನಿಖಾ ಆಯೋಗ ವರದಿ ಸಲ್ಲಿಸಿದ್ದು, ಹಲವಾರು ಅಂಶಗಳನ್ನು ಉಲ್ಲೇಖಿಸಿದೆ. ಕಾಲ್ತುಳಿತ ಪ್ರಕರಣಕ್ಕೆ ಕೆ ಎಸ್ ಸಿಎ, ಆರ್ ಸಿಬಿ, ಡಿಎನ್ ಎ ಹಾಗೂ ಪೊಲೀಸರೇ ನೇರ ಹೊಣೆ. ವಿಜಯೋತ್ಸವ ಕಾರ್ಯಕ್ರಮ ನಡೆಸುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ. ಇದರಿಂದಾಗಿ ಅಪಾರ ಜನಸಂಖ್ಯೆ ನುಗ್ಗುತ್ತಿದಂತೆ ಕಾಲ್ತುಳಿತ ದುರಂತ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದರು. ಈ ಒಂದು ಪ್ರಕರಣ ಗಂಭೀರವಾಗಿ ಪರಿಗಣಿಸಿದ…
ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ವಿಕೃತ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸರು ಹಾಜ ಮೊಯಿನುದ್ದಿನ್ ಎಂಬಾತನನ್ನು ಬಂಧಿಸಿದ್ದಾರೆ. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್, ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದ. ಇದೇ ರೀತಿ ಕಳೆದ ಮಂಗಳವಾರ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ-ಮಗಳು ಬಾತ್ರೂಮ್ಗೆ ಸ್ನಾನಕ್ಕೆ ತೆರಳಿದ್ದಾರೆ. ಇದನ್ನ ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಮಗಳು ವಿಡಿಯೋ ಮಾಡೋದನ್ನ ಗಮನಿಸಿದ್ದಾಳೆ. ಬಳಿಕ ಹೊರಗೆ ಬಂದು ತಂದೆಗೆ ಹೇಳಿದ್ದಾಳೆ, ಬಾಲಕಿ ತಂದೆ ಹೋಗಿ ನೋಡುವಷ್ಟರಲ್ಲಿ ಕಾಮುಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನ ಬಂಧಿಸಿದ್ದಾರೆ.
ರಾಯ್ಪುರ: ಶುಕ್ರವಾರ ಬಿಲಾಸ್ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಲೀನಾ ಅಗ್ರಹರಿ ಎಂಬ ಮಹಿಳಾ ವಕೀಲೆ ತಮ್ಮ ಕಕ್ಷಿದಾರ ಸುಮನ್ ಠಾಕೂರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ನ್ಯಾಯಾಲಯದ ಆವರಣದೊಳಗೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ. ಮಹಿಳಾ ಸಿಬ್ಬಂದಿ ಸೇರಿದಂತೆ ಪೊಲೀಸರ ಉಪಸ್ಥಿತಿಯ ಹೊರತಾಗಿಯೂ, ಹಲ್ಲೆಯ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತನ್ನ ಪತಿಯ ವಿರುದ್ಧ ಕೌಟುಂಬಿಕ ವಿವಾದ ಪ್ರಕರಣವನ್ನು ಮುಂದುವರಿಸಲು ನ್ಯಾಯಾಲಯವನ್ನು ಸಂಪರ್ಕಿಸಿದ್ದ ಸುಮನ್ ಠಾಕೂರ್, ಹೃದಯ ರೋಗಿಯಾಗಿರುವ ತನ್ನ ತಾಯಿ ಸಾವಿತ್ರಿ ದೇವಿ ಮತ್ತು ಸಹೋದರ ಮುಕುಂದ್ ಠಾಕೂರ್ ಅವರೊಂದಿಗೆ ಬಂದರು. ಈಗಾಗಲೇ ಪಾವತಿ ಪಡೆದಿದ್ದ ವಕೀಲೆ ಲೀನಾ ಅಗ್ರಹರಿ ಪ್ರಕರಣವನ್ನು ಮುಂದುವರಿಸಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರಶ್ನಿಸಿದಾಗ, ವಕೀಲರು ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ. ಅಗ್ರಹರಿ ಸುಮನ್ ಅವರ ಕೂದಲನ್ನು ಬಲವಾಗಿ ಹಿಡಿದು, ನೆಲಕ್ಕೆ ತಳ್ಳಿ, ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸುಮನ್ ಅವರ ವೃದ್ಧ ತಾಯಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರನ್ನೂ ಬಲವಂತವಾಗಿ ನೆಲಕ್ಕೆ…
ನವದೆಹಲಿ : ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಬಾಂಬ್ ಬೆದರಿಕೆ ಬಂದಿದೆ. ಇನ್ಸ್ಟಾಗ್ರಾಮ್ ಮೂಲಕ ಅವರಿಗೆ ಈ ಬೆದರಿಕೆ ಬಂದಿದ್ದು, ಜುಲೈ 20 ರೊಳಗೆ ಅವರನ್ನು ಸ್ಫೋಟಿಸಲಾಗುವುದು ಎಂದು ಹೇಳಲಾಗಿದೆ. ಇದರ ನಂತರ, ಕೇಂದ್ರ ಸಚಿವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈ ಬಗ್ಗೆ ಸಕ್ರಿಯವಾಗಿವೆ ಮತ್ತು ಚುನಾವಣಾ ಪ್ರಚಾರದಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಂಡಿವೆ. ಚಿರಾಗ್ ಪಾಸ್ವಾನ್ 2024 ರ ಲೋಕಸಭಾ ಚುನಾವಣೆಯಲ್ಲಿ ಹಾಜಿಪುರ ಸ್ಥಾನದಿಂದ ಬಂಪರ್ ಗೆಲುವು ಸಾಧಿಸಿದ್ದಾರೆ. ಅವರು ಪ್ರಸ್ತುತ ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸಕ್ರಿಯ ರಾಜಕೀಯಕ್ಕೆ ಬರುವ ಮೊದಲು, ಚಿರಾಗ್ ಬಾಲಿವುಡ್ ನಟರೂ ಆಗಿದ್ದಾರೆ. ಸಿನಿಮಾ ಪ್ರಪಂಚದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಚಿರಾಗ್ ಪಾಸ್ವಾನ್,…
ಆಪರೇಷನ್ ಬಿಎಎಂ ಎಂಬ ಪಾಕಿಸ್ತಾನಿ ಸೇನೆಯ ವಿರುದ್ಧ ಬಲೂಚ್ ಬಂಡುಕೋರ ಗುಂಪು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ನಡೆಸಿದ 3 ದಿನಗಳ ಸುದೀರ್ಘ ಕಾರ್ಯಾಚರಣೆ ಈಗ ಕೊನೆಗೊಂಡಿದೆ. ಜುಲೈ 9 ರಿಂದ ಜುಲೈ 11 ರವರೆಗೆ ಐಇಡಿ ಸ್ಫೋಟಗಳು ಸೇರಿದಂತೆ ಪಾಕಿಸ್ತಾನಿ ಸೇನೆಯ 84 ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ. ಈ ಸಮಯದಲ್ಲಿ ಕನಿಷ್ಠ 50 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ಪ್ರಕಾರ, ಪಾಕಿಸ್ತಾನಿ ಸೇನೆಯ ಹೊರತಾಗಿ, ಬಿಎಲ್ಎಫ್ ತನ್ನ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಾದ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಮತ್ತು ಐಎಸ್ಐನ 9 ಏಜೆಂಟ್ಗಳನ್ನು ಕೊಂದಿದೆ. ಆಪರೇಷನ್ ಬಿಎಎಂ ಸಮಯದಲ್ಲಿ, ಬಲೂಚ್ ಹೋರಾಟಗಾರರು 7 ಮೊಬೈಲ್ ಟವರ್ಗಳಿಗೆ ಬೆಂಕಿ ಹಚ್ಚಿದರು ಮತ್ತು ಅವರ ಯಂತ್ರೋಪಕರಣಗಳು ಮತ್ತು ತಾತ್ಕಾಲಿಕ ಚೆಕ್ಪೋಸ್ಟ್ಗಳನ್ನು ಪಾಕಿಸ್ತಾನಿ ಸೇನೆಯ ಚಟುವಟಿಕೆಗಳನ್ನು ನಿಲ್ಲಿಸಲು 22 ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ…
ಬೆಂಗಳೂರು : ರಾಜ್ಯ ಚುನಾವಣಾ ಆಯೋಗ 5 ಪಟ್ಟಣ ಪಂಚಾಯಿತಿ ಹಾಗೂ 3 ವಾರ್ಡುಗಳ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 29 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಗಸ್ಟ್ 5 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ರಾಜ್ಯ ಚುನಾವಣಾ ಆಯೋಗವು ಸಂವಿಧಾನದ ಪರಿಚ್ಛೇದ 243-ಜೆಡ್ಎ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ರ ಪ್ರಕರಣ 17 ಮತ್ತು 19 ರನ್ವಯ ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರನ್ವಯ ಅನುಬಂಧ-01 ರಲ್ಲಿ ಹೆಸರಿಸಲಾದ ಹೊಸದಾಗಿ ರಚನೆಯಾಗಿರುವ 05 ಪಟ್ಟಣ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಅನುಬಂಧ – 02 ರಲ್ಲಿ ಹೆಸರಿಸಲಾದ ವಾರ್ಡುಗಳಿಗೆ ಉಪ ಚುನಾವಣೆಯನ್ನು ಈ ಕೆಳಕಂಡ ಚುನಾವಣಾ ವೇಳಾಪಟ್ಟಿಯನುಸಾರ ನಡೆಸಲು ಆದೇಶಿಸಲಾಗಿದೆ. 1) ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ : 29/07/2025 ಮಂಗಳವಾರ 2 )…