Author: kannadanewsnow57

ಕೋಲಾರ : ಕೋಲಾರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೂವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮುನಿರಾಜು, ರತ್ನಮ್ಮ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಸ್ಪೋಟದ ರಭಸಕ್ಕೆ ಮನೆಯ ವಸ್ತುಗಳು ಛಿದ್ರ ಛಿದ್ರವಾಗಿದೆ. ಘಟನೆ ನಡೆದ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ನವದೆಹಲಿ : ಸಂಭಾಲ್ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಭೇಟಿ ನೀಡಲು ತೆರಳಿದ್ದ ವೇಳೆ ಗಡಿಯಲ್ಲೇ ಅವರನ್ನು ಪೊಲೀಸರು ತಡೆದಿದ್ದಾರೆ. ಲೋಕಸಭೆಯ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಹಿಂಸಾಚಾರ ಪೀಡಿತ ಸಂಭಾಲ್‌ಗೆ ಹೋಗುವ ಮಾರ್ಗದಲ್ಲಿ ಗಾಜಿಪುರ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಸಂಭಾಲ್‌ಗೆ ತೆರಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಾಜಿಪುರ ಗಡಿ ತಲುಪಿದ್ದಾರೆ. ನಿಯೋಜಿತ ಪೊಲೀಸ್ ಸಿಬ್ಬಂದಿ ಗಡಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಅವರ ಬೆಂಗಾವಲು ಪಡೆಯನ್ನು ತಡೆದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಅವರ ಸಹೋದರಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಇದ್ದಾರೆ. ರಾಹುಲ್ ಸಂಭಾಲ್ ಪ್ರವಾಸದ ಬಗ್ಗೆ ಪೊಲೀಸರು ಹೆಚ್ಚಿನ ಅಲರ್ಟ್ ಆಗಿದ್ದಾರೆ. https://twitter.com/ANI/status/1864186618774737219

Read More

ನವದೆಹಲಿ : ಸಂಭಾಲ್ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಭೇಟಿ ನೀಡಲು ತೆರಳಿದ್ದ ವೇಳೆ ಗಡಿಯಲ್ಲೇ ಅವರನ್ನು ಪೊಲೀಸರು ತಡೆದಿದ್ದಾರೆ. ಲೋಕಸಭೆಯ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಹಿಂಸಾಚಾರ ಪೀಡಿತ ಸಂಭಾಲ್‌ಗೆ ಹೋಗುವ ಮಾರ್ಗದಲ್ಲಿ ಗಾಜಿಪುರ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. https://twitter.com/ANI/status/1864186618774737219

Read More

ಬೆಂಗಳೂರು : ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುವಂತಹ ‘IV’ ಫ್ಲುಯೆಡ್ ಅಸುರಕ್ಷಿತವಾಗಿವೆ. ಈ ಕುರಿತು ರಾಜ್ಯದ ಲ್ಯಾಬ್ ನಲ್ಲಿ ಸುಮಾರು 92 ಐವಿ ಫ್ಲುಯೆಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 22 ಅಸುರಕ್ಷಿತ ಎಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ. ಹೌದು 92 ಐವಿ ಫ್ಲುಯೆಡ್ ಗಳಲ್ಲಿ 22 ‘ಐವಿ ಫ್ಲ್ಯೂಯೆಡ್’ ರಿಪೋರ್ಟ್ ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಲ್ ಅಂಶ ಪತ್ತೆಯಾಗಿದೆ. ಆಸ್ಪತ್ರೆಗಳಲ್ಲಿ ಬಳಸೋ ಬಹುತೇಕ ಐವಿ ಫ್ಲುಯೆಡ್ ಅಸುರಕ್ಷಿತ ಎಂದು ವರದಿ ಬಂದಿದೆ. 92 ಸ್ಯಾಂಪಲ್ಗಳ ರಿಪೋರ್ಟ್ ನಲ್ಲಿ 22 ಅಸುರಕ್ಷಿತ ಎಂದು ರಾಜ್ಯದ ಲ್ಯಾಬ್ ನಲ್ಲಿ ಈ ಒಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ. ರಾಜ್ಯದ ಐವಿ ಫ್ಲುಯೆಡ್ ವರದಿಯಲ್ಲಿ ಶಾಕಿಂಗ್ ವರದಿ ಬಹಿರಂಗವಾಗಿದೆ. 92 ಸ್ಯಾಂಪಲ್ಸ್ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ 22 ಅಸುರಕ್ಷಿತ ಎಂದು ತಿಳಿದು ಬಂದಿದೆ. 22 ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ. ಐ ವಿ ಫ್ಲೂಯೆಡ್ ರಿಪೋರ್ಟ್ ನಲ್ಲಿ ಸುರಕ್ಷಿತ ಎಂದು ಉಲ್ಲೇಖವಾದ ಹಿನ್ನೆಲೆಯಲ್ಲಿ ಕೇಂದ್ರದ…

Read More

ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸತ್ತರೆ, ಅದು ಭಾವನಾತ್ಮಕವಾಗಿ ತುಂಬಾ ಸವಾಲಿನ ಸಂಗತಿಯಾಗಿದೆ. ಈ ಸವಾಲಿನ ಪ್ರಯಾಣದಲ್ಲಿ, ಆ ವ್ಯಕ್ತಿಯ ಅಧಿಕೃತ ದಾಖಲೆಗಳನ್ನು ಅಂದರೆ ಐಡಿ ಪುರಾವೆಯನ್ನು ಏನು ಮಾಡಬೇಕು ಎಂಬ ಪ್ರಶ್ನೆ ಯಾವಾಗಲೂ ಉದ್ಭವಿಸುತ್ತದೆ? ಈ ದಾಖಲೆಗಳನ್ನು ಇಟ್ಟುಕೊಳ್ಳಬೇಕೆ? ಒಪ್ಪಿಸಬೇಕೆ ಎಂಬ ಗೊಂದಲ ಇರುತ್ತದೆ. ವ್ಯಕ್ತಿಯ ಮರಣದ ನಂತರ ಈ ದಾಖಲೆಗಳೊಂದಿಗೆ ನೀವು ಏನು ಮಾಡಬೇಕೆಂದು ಇಲ್ಲಿದೆ ಮಾಹಿತಿ. ಆಧಾರ್ ಕಾರ್ಡ್‌ ಆಧಾರ್ ಕಾರ್ಡ್ ಅನ್ನು ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಲ್ಲಿ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಸತ್ತರೆ, ಈ ಕಾರ್ಡ್ನೊಂದಿಗೆ ಏನು ಮಾಡಬೇಕು? ಪ್ರಸ್ತುತ, ಆಧಾರ್ ಕಾರ್ಡ್ ನೀಡುವ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ನಿಷ್ಕ್ರಿಯಗೊಳಿಸುವ ಬಗ್ಗೆ ಯಾವುದೇ ನಿಯಮಗಳನ್ನು ಮಾಡಿಲ್ಲ. ಇದರರ್ಥ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯು ಸತ್ತರೆ ನೀವು ಅದನ್ನು ನವೀಕರಿಸಲಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಯಾರೂ ಈ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳದಂತೆ ನೀವು ಈ ಕಾರ್ಡ್…

Read More

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದ ಕಟ್ಟಡದಲ್ಲಿ ದಿನಾಂಕ 09-12-2024ರಿಂದ ನಡೆಯುವ ವಧಆನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುವಂತ ಮುಖ್ಯಮಂತ್ರಿ ಸಿದ್ಧರಾಮಯಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಬೆಳಗಾವಿ ಸುವರ್ಣ ಸೌಧದ ಕಟ್ಟಡದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಈ ಕೆಳಕಂಡಂತೆ ಕೊಠಡಿಗಳನ್ನು ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಹೀಗಿದೆ ಬೆಳಗಾವಿ ಸುವರ್ಣಸೌಧದ ಸಿಎಂ, ಡಿಸಿಎಂ, ಸಚಿವರ ಕೊಠಡಿಗಳ ಸಂಖ್ಯೆ ಸಿಎಂ ಸಿದ್ಧರಾಮಯ್ಯ – 346, 347 ಡಿಸಿಎಂ ಡಿ.ಕೆ ಶಿವಕುಮಾರ್ – 306, 306ಎ ಗೃಹ ಸಚಿವ ಡಾ.ಜಿ ಪರಮೇಶ್ವರ್ – 302, 302ಎ ಕಾನೂನು ಸಚಿವ ಹೆಚ್.ಕೆ ಪಾಟೀಲ್ – 3030, 303ಎ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ – 320, 320ಎ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ – 321, 321ಎ ಬೃಹತ್ ಮತ್ತು ಕೈಗಾರಿಕೆ ಸಚಿವ…

Read More

ತುಮಕೂರು : ಕಲ್ಲು ಕ್ವಾರಿಯಲ್ಲಿ ಮದ್ದು ಸ್ಪೋಟಗೊಂಡು ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ. ಹೊಸಹಳ್ಳಿ ಸಮೀಪದ ಕಲ್ಲು ಕ್ವಾರಿಯಲ್ಲಿ ಮದ್ದು ಇಟ್ಟು ಸ್ಪೋಟಿಸಲು ನಿರ್ಧರಿಸಲಾಗಿತ್ತು. ಅದರೆ ಮದ್ದು ಸ್ಪೋಟಗೊಳ್ಳದ ಕಾರಣ ನಿಷ್ಕ್ರಿಯ ಮಾಡಲು ಹೋದಾಗ ಮದ್ದು ಸ್ಪೋಟಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಮದ್ದು ಸ್ಪೋಟದಿಂದ ಗಾಯಗೊಂಡವರನ್ನು ಮಂಜುನಾಥ್, ಕೋಟಪ್ಪ ಎಂದು ಗುರುತಿಸಲಾಗಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಚಲಿಸುತ್ತಿರುವಾಗಲೇ ಏಕಾಏಕಿ ಬಿಎಂಟಿಸಿ ಬಸ್ ನ ಟೈರ್ ಸ್ಪೋಟಗೊಂಡು ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ವೈಟ್ ಫೀಲ್ಡ್ ಬಸ್ ನಿಲ್ದಾಣದ ಬಳಿ ಬಸ್ ನ ಟೈರ್ ಸ್ಪೋಟಗೊಂಡು ಅಜಯ್, ಜಿತೇಂದ್ರ ಎಂಬ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಪೋ-33 ಎಜಿಎಸ್ ಲೇಔಟ್ ಹರೇಹಳ್ಳಿಗೆ ಸೇರಿದ ಬಸ್ ಇದಾಗಿದ್ದು, ಐಟಿಪಿಎಲ್ ನಿಂದ ಸಿಲ್ಕ್ ಬೋರ್ಡ್ ಗೆ ಬಸ್ ತೆರಳುತ್ತಿತ್ತು. ಚಲಿಸುತ್ತಿದ್ದ ಬಿಎಂಟಿಸಿ ಬಸ್ ಟೈರ್ ಏಕಾಏಕಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ.

Read More

ಬೆಂಗಳೂರು : ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಶಾಕ್‌ ನೀಡಿದ್ದು, ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ನೀರಿನ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಈ ಬಾರಿ ಅವಕಾಶ ನೀಡಲಾಗಿತ್ತು. ಗೃಹ, ಗೃಹೇತರರ ನೀರಿನ ಬಳಕೆದಾರರು, ಹೋಟೆಲ್, ಅಪಾರ್ಟ್ಮೆಂಟ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಮಾಡಲಾಗಿದ್ದು, ನೀರಿನ ದರ ಮಾತ್ರ ಪರಿಷ್ಕರಣೆ ಮಾಡಿಲ್ಲ ಹೀಗಾಗಿ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಜಲಮಂಡಳಿಯ ಅದಾಯಕ್ಕಿಂತಲೂ ವೆಚ್ಚ ಹೆಚ್ಚಾಗಿದೆ. ಗೃಹ ಬಳಕೆ ನೀರಿನ ದರವನ್ನು ಶೇ. 30 ರಿಂದ 40 ಹಾಗೂ ವಾಣಿಜ್ಯ ಬಳಕೆಗೆ ಶೇ. 45 ರಷ್ಟು ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ. 2014 ರ ನವೆಂಬರ್‌-2024…

Read More

ಅಮೃತಸರ : ಪಂಜಾಬ್‌ನ ಅಮೃತಸರದಲ್ಲಿ ಇಂದು ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಸುಖ್‌ಬೀರ್ ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಿಂದ ಬಾದಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅವರು ಧಾರ್ಮಿಕ ಶಿಕ್ಷೆಯಾಗಿ ಕಾವಲು ಕಾಯುತ್ತಿದ್ದಾಗ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಈ ಘಟನೆ ನಡೆದಿದೆ. ಸುಖ್ಬೀರ್ ಅವರ ಕಾಲಿಗೆ ಮುರಿತವಾಗಿದೆ, ಆದ್ದರಿಂದ ಅವರು ಗಾಲಿಕುರ್ಚಿಯ ಮೇಲೆ ಕುಳಿತು ಕೈಯಲ್ಲಿ ಈಟಿಯೊಂದಿಗೆ ಕಾವಲು ಕಾಯುತ್ತಿದ್ದರು. https://twitter.com/ANI/status/1864159596333449666?ref_src=twsrc%5Etfw%7Ctwcamp%5Etweetembed%7Ctwterm%5E1864159596333449666%7Ctwgr%5E2501ea83ce98e5822ca861ede02bfb873a496e4d%7Ctwcon%5Es1_c10&ref_url=https%3A%2F%2Fapi-news.dailyhunt.in%2F ಅಷ್ಟರಲ್ಲಿ ದಾಳಿಕೋರ ತನ್ನ ಕೈಯಲ್ಲಿ ಪಿಸ್ತೂಲನ್ನು ಬೀಸುತ್ತಾ ಬಂದು ಸುಖ್ಬೀರ್ ಸಿಂಗ್ ರ ಮೇಲೆ ಗುಂಡು ಹಾರಿಸಿದ್ದಾನೆ.ಆದರೆ, ಅಲ್ಲಿದ್ದ ಜನ ಎಚ್ಚೆತ್ತು ನೇರವಾಗಿ ದಾಳಿಕೋರನನ್ನು ಎದುರಿಸಿದರು. ಅಷ್ಟರಲ್ಲಿ ದಾಳಿಕೋರ ಟ್ರಿಗರ್ ಒತ್ತಿದ ಪರಿಣಾಮ ಬುಲೆಟ್ ಗಾಳಿಗೆ ಹೋಯಿತು. ಗುಂಪು ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ದಾಳಿಕೋರ ತನ್ನ ಹೆಸರನ್ನು ನಾರಾಯಣ ಸಿಂಗ್ ಚೌರಾ ಎಂದು ಬಹಿರಂಗಪಡಿಸಿದ್ದಾನೆ. ಮಾಹಿತಿ…

Read More