Author: kannadanewsnow57

ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಮಾಟ ಮಂತ್ರ ಪ್ರಯೋಗವಾಗಿದ್ದರೆ ಹಾಗೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದನ್ನು ಹೋಗಲಾಡಿಸಿ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ದೊರಕಬೇಕು ಎಂದರೆ ನಾವು ಹೇಳುವ ಈ ಸರಳ ತಂತ್ರವನ್ನು ಪ್ರಯೋಗ ಮಾಡಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ…

Read More

ನವದೆಹಲಿ : ಬೆನ್ನು ನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿರುವ ಕೊಲೆ ಆರೋಪಿ ನಟ ದರ್ಶನ್ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 6 ಅಥವಾ 9 ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳ್ಳಾರಿ ಜೈಲಿನಲ್ಲಿ ಬೆನ್ನುನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ 6 ವಾರ ಷರತ್ತುಬದ್ದ ಜಾಮೀನು ನೀಡಿತ್ತು ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದುವರೆಗೂ ಶಸ್ತ್ರಚಿಕಿತ್ಸೆ ಪಡೆದಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಪ್ರಾಸಿಕ್ಯೂಷನ್ ಪರ ವಕ ಪರ ವಕೀಲರು ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Read More

ತುಮಕೂರು : ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರಿನ ಯಲ್ಲಾಪುರ ಬಳಿ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಉಮಾ (50) ಹಾಗೂ ವಿನೋದ್ (24) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಭಾರತದ ಒಟ್ಟು ಬಾಹ್ಯ ಸಾಲವು 2023 ರಲ್ಲಿ USD 31 ಶತಕೋಟಿ USD ಯಿಂದ 646.79 ಶತಕೋಟಿ ಡಾಲರ್‌ಗೆ ಏರಿದೆ ಎಂದು ವಿಶ್ವ ಬ್ಯಾಂಕ್ ಅಂತರರಾಷ್ಟ್ರೀಯ ಸಾಲ ವರದಿ ತಿಳಿಸಿದೆ. ಬಡ್ಡಿ ಪಾವತಿಯು 2022 ರಲ್ಲಿ USD 15.08 ಶತಕೋಟಿಯಿಂದ 2023 ರಲ್ಲಿ USD 22.54 ಶತಕೋಟಿಗೆ ಏರಿದೆ ಎಂದು ವರದಿ ಹೇಳಿದೆ. ದೀರ್ಘಾವಧಿಯ ಸಾಲದ ಸ್ಟಾಕ್‌ಗಳು 2023 ರಲ್ಲಿ USD 498 ಶತಕೋಟಿಗೆ 7 ಶೇಕಡಾ ಏರಿಕೆಯಾಗಿದ್ದರೆ, ಅಲ್ಪಾವಧಿಯ ಸಾಲದ ಷೇರುಗಳು 2023 ರಲ್ಲಿ USD 126.32 ಶತಕೋಟಿಗೆ ಕಡಿಮೆಯಾಗಿದೆ. ವರದಿಯ ಪ್ರಕಾರ, ರಫ್ತಿನ ಶೇಕಡಾವಾರು ಪ್ರಮಾಣದಲ್ಲಿ ಬಾಹ್ಯ ಸಾಲದ ಸ್ಟಾಕ್ ಶೇಕಡಾ 80 ರಷ್ಟಿದ್ದರೆ, 2023 ರಲ್ಲಿ ರಫ್ತುಗಳಲ್ಲಿ ಸಾಲ ಸೇವೆಯು ಶೇಕಡಾ 10 ರಷ್ಟಿತ್ತು. ವಿಶ್ವ ಬ್ಯಾಂಕ್ ಅಂತರಾಷ್ಟ್ರೀಯ ಸಾಲ ವರದಿ, 2024, ವರ್ಷದಲ್ಲಿ ನಿವ್ವಳ ಸಾಲದ ಒಳಹರಿವು USD 33.42 ಶತಕೋಟಿಗೆ ಕೆಲಸ ಮಾಡಿದೆ, ಆದರೆ ನಿವ್ವಳ ಇಕ್ವಿಟಿ ಒಳಹರಿವು 2023 ರಲ್ಲಿ…

Read More

ನವದೆಹಲಿ: ಅಡಿಕೆಯ ಆರೋಗ್ಯದ ಪರಿಣಾಮಗಳ ಕುರಿತು ನಿರ್ಣಾಯಕ ಪುರಾವೆಗಳನ್ನು ಒದಗಿಸಲು ‘ಅಡಿಕೆ ಮತ್ತು ಮಾನವನ ಆರೋಗ್ಯದ ಕುರಿತು ಸಾಕ್ಷ್ಯ ಆಧಾರಿತ ಸಂಶೋಧನೆ’ಯನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ಕೇಂದ್ರ ಹೇಳಿದೆ. ಇತ್ತೀಚೆಗೆ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ (ಕ್ಯಾಂಪ್ಕೊ) ಲಿಮಿಟೆಡ್ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಡಬ್ಲ್ಯುಎಚ್‌ಒ ವರ್ಗೀಕರಿಸುವುದರ ವಿರುದ್ಧ ಮಧ್ಯಪ್ರವೇಶಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಮಾನವನ ಆರೋಗ್ಯದ ಮೇಲೆ ಅಡಿಕೆಯ ಪ್ರಯೋಜನಗಳನ್ನು ಎತ್ತಿ ತೋರಿಸಿರುವ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳ ಸಂಶೋಧನೆಗಳೊಂದಿಗೆ ಸಹಕಾರಿ ತನ್ನ ಬೇಡಿಕೆಯನ್ನು ಬೆಂಬಲಿಸಿತು. ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಭಗೀರಥ ಚೌಧರಿ, ಜ್ಞಾನದ ಅಂತರವನ್ನು ಪರಿಹರಿಸಲು ಸಚಿವಾಲಯವು ‘ಅಡಿಕೆ ಮತ್ತು ಮಾನವ ಆರೋಗ್ಯದ ಕುರಿತು ಸಾಕ್ಷ್ಯ ಆಧಾರಿತ ಸಂಶೋಧನೆ’ ಶೀರ್ಷಿಕೆಯ ಅಧ್ಯಯನವನ್ನು ಕೈಗೊಳ್ಳಲು ಯೋಜಿಸಿದೆ ಎಂದು ಹೇಳಿದರು. ಈ ಅಧ್ಯಯನವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ…

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ತುಮಕೂರಿನ ನವಿಲಹಳ್ಳಿ ನಿವಾಸಿ ಹನುಮಂತರಾಜು(40) ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಹನುಮಂತರಾಜು ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಮುಂಬೈ : ತೀವ್ರ ಹಗ್ಗ ಜಗ್ಗಾಟದ ನಡುವೆ ಕೊನೆಗೂ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು. ಹೌದು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರುವ ವಿಚಾರದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ನಡುವೆ ನಡೆದಿದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ಆಯ್ಕೆಯಾಗಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದಲ್ಲಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ದೇವೇಂದ್ರ ಫಡ್ನವೀಸ್ ಅವರು ನೂತನ ಸಿಎಂ ಎಂದು ಮಹಾರಾಷ್ಟ್ರ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಕೇಂದ್ರ ವೀಕ್ಷಕರದ ನಿರ್ಮಲಾ, ವಿಜಯ್ ರೂಪಾಣಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಇಂದು ರಾಜ್ಯಪಾಲರನ್ನು ಮಹಾಯುತಿ ನಿಯೋಗ ಭೇಟಿಯಾಗಲಿದೆ. ಇದೆ ವೇಳೆ ದೇವೇಂದ್ರ ಫಡ್ನವಿಸ್ ಗೆ…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿಗಳ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕಿನ ನಿರುದ್ಯೋಗ ಯುವಕ-ಯುವತಿಯರಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿ.ಎಂ.ಇ.ಜಿ.ಪಿ)ಯಡಿ ಆರ್ಥಿಕ ಸಾಲ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು, ಪ.ಜಾ, ಪ.ಪಂ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಅರ್ಜಿ ಸಲ್ಲಿಸಬಹುದು. ವಿವಿಧ ಹಣಕಾಸು ಸಂಸ್ಥೆಗಳು (ಬ್ಯಾಂಕುಗಳ) ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಯಾವುದೇ ಆದಾಯದ ಮಿತಿ ಇರುವುದಿಲ್ಲ. ಅಸಕ್ತಿ ಹೊಂದಿರುವ ಉದ್ಯಮಶೀಲರು www.kviconline.gov.in ವೆಬ್ ಸೈಟ್ ನಲ್ಲಿ kvib ಏಜೆನ್ಸಿ ಲಾಗಿನ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಬೆಂಗಳೂರು…

Read More

ಕಲಬುರಗಿ : ಕಲಬುರಗಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲಬುರಗಿ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪಿಯುಸಿ ಸೈನ್ಸ್ ನಲ್ಲಿ ಓದುತ್ತಿರುವ ನಮೀರಾ ಆಳಂದ ಪಟ್ಟಣದಿಂದ ಕಲಬುರಗಿಗೆ ಬಂದಿದ್ದು, ನಂತರ ಹಾಸ್ಟೆಲ್ ನ ರೂಮಿನಲ್ಲಿ ಯಾರೂ ಇರದೇ ಇದ್ದಾಗ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು: ಮೈಸೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಗಂಡನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ನಗರದಲ್ಲಿ ಕತ್ತು ಕೊಯ್ದು ಪತ್ನಿಯನ್ನು ಕೊಂದು ಪತಿ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ. ಶ್ರುತಿ ಕೊಲೆಯಾದ ಮಹಿಳೆ. ಪತ್ನಿ ಕೊಲೆ ಮಾಡಿದ ಪತಿ ಅರುಣ್ ಪೊಲೀಸರಿಗೆ ಶರಣಾಗಿದ್ದಾನೆ. ಕೂರ್ಗಳ್ಳಿ ನಿವಾಸಿ ಶ್ರುತಿ ಮತ್ತು ಚಾಮರಾಜನಗರ ಮೂಲದ ಅರುಣ್ 4 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಪೋಷಕರಿಂದ ಶ್ರುತಿ, ಅರುಣ್ ದಂಪತಿ ದೂರವಾಗಿದ್ದರು. ಯಾರ ಸಂಪರ್ಕವಿಲ್ಲದೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೈಸೂರಿನ ಹೆಬ್ಬಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More