Subscribe to Updates
Get the latest creative news from FooBar about art, design and business.
Author: kannadanewsnow57
ಬೀದರ್: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸೇರಿದಂತೆ 6 ಜನರ ವಿರುದ್ಧ ಕಲಬರುಗಿ ಪೊಲೀಸರು ಎಫ್ ಐಆರ್ ದಾಖಲಾಗಿದ್ದಾರೆ. ಬೀದರ್ ನಲ್ಲಿ ಚಲಿಸುತ್ತಿದ್ದಂತ ರೈಲಿಗೆ ತಲೆಕೊಟ್ಟು ಗುತ್ತಿಗೆದಾರ ಸಚಿನ್ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 7 ಪುಟಗಳ ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸೇರಿ 6 ಜನರ ವಿರುದ್ಧ ಕಲಬುರಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ರಾಜು ಕಪನೂರ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಬೀದರ್ : ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದ ವಿಜಯ್ ಕುಮಾರ್ ಜಗದೀಶ್ ಹೊಳ್ಳೆ ಎಂಬಾತ ಆನ್ ಲೈನ್ ಗೇಮ್ ಹುಚ್ಚಿಗೆ ಬಲಿಯಾಗಿದ್ದಾನೆ. ವಿಜಯ್ ಕುಮಾರ್ ಆನ್ ಲೈನ್ ಗೇಮ್ ನಿಂದಾಗಿ ಬರೋಬ್ಬರಿ 12 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲ ತೀರಿಸಲಾಗದೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮಹಾರಾಷ್ಟ್ರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ಆಗಿದ್ದು, ಶೀಲ ಶಂಕಿಸಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಅತ್ತಿಬೇಲಿಯ ಶುಭ ಅಪಾರ್ಟ್ ಮೆಂಟ್ ನಲ್ಲಿ ಪತ್ನಿಯ ಶೀಲ ಶಂಕಿಸಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪತಿ ಮೊಹಮ್ಮದ್ ಅನ್ಸಾರಿ ಎಂಬಾತ ತನ್ನ ಪತ್ನಿ ಮಲ್ಲಿಕಾ ಶೀಲಾ ಶಂಕಿಸಿ ಅಪಾರ್ಟ್ ಮೆಂಟ್ ನಲ್ಲಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ನವದೆಹಲಿ : ಯುದ್ಧದ ವಿನಾಶಕಾರಿ ಪರಿಣಾಮಗಳು, ನೈಸರ್ಗಿಕ ವಿಕೋಪಗಳು ಅಥವಾ ಸಾಂಕ್ರಾಮಿಕ ರೋಗಗಳ ನಿರಂತರ ಹರಡುವಿಕೆಯಿಂದ ಭೂಮಿಯು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಲಾಕ್‌ಡೌನ್, ಮಾಸ್ಕ್, ಸ್ಯಾನಿಟೈಸರ್ ನೆನಪಿದೆಯೇ? ಮಾರಣಾಂತಿಕ ಸಾಂಕ್ರಾಮಿಕವು ನಮ್ಮ ಜೀವನವನ್ನು ಪರಿವರ್ತಿಸಿದೆ ಮತ್ತು ಸಾರ್ವಜನಿಕ ಆರೋಗ್ಯದ ಆದ್ಯತೆಗಳನ್ನು ಮರು ವ್ಯಾಖ್ಯಾನಿಸಿದೆ. ಇದು ಮಾನವೀಯತೆಯ ಮೇಲೆ ಶಾಶ್ವತವಾದ ಗುರುತು ಬಿಟ್ಟಿದೆ. ಈಗ, ಐದು ವರ್ಷಗಳ ನಂತರ, ಪ್ರಪಂಚವು ಅದರ ನಂತರದ ಪರಿಣಾಮದಿಂದ ಚೇತರಿಸಿಕೊಳ್ಳುವುದನ್ನು ಮುಂದುವರೆಸುತ್ತಿರುವಾಗ, ಹೊಸ ಬೆದರಿಕೆಯೊಂದು ಎದುರಾಗಿದೆ. ಭಾರತ ಸೇರಿದಂತೆ ಏಷ್ಯಾದಂತಹ ಪ್ರದೇಶಗಳಲ್ಲಿ ದೀರ್ಘಕಾಲ ಗಮನಿಸಲಾಗಿದೆ, ವೈರಸ್ ಇತ್ತೀಚೆಗೆ ಆತಂಕಕಾರಿ ಬೆಳವಣಿಗೆಗಳನ್ನು ತೋರಿಸಿದೆ, ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ, ಜಾಗತಿಕ ಆರೋಗ್ಯ ಕಾಳಜಿಯನ್ನು ಆಳುತ್ತಿದೆ. H5N1 ಹಕ್ಕಿ ಜ್ವರದಂತಹ ಉದಯೋನ್ಮುಖ ಬೆದರಿಕೆಗಳನ್ನು ಪರಿಹರಿಸಲು COVID-19 ಸಾಂಕ್ರಾಮಿಕದಿಂದ ಕಲಿತ ಪಾಠಗಳನ್ನು ಯುನೈಟೆಡ್ ಸ್ಟೇಟ್ಸ್ ಇನ್ನೂ ಸಂಪೂರ್ಣವಾಗಿ ಅನ್ವಯಿಸಬೇಕಾಗಿದೆ, ಇದು ಸಾಂಕ್ರಾಮಿಕ ಸಂಭಾವ್ಯತೆಯ ಲಕ್ಷಣಗಳನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ ಎಂದು ಆರೋಗ್ಯ ತಜ್ಞರು ತಿಳಿಸಿದರು. ವರದಿಯ ಪ್ರಕಾರ, US ನಲ್ಲಿ ಹೆಚ್ಚಿನ ದೃಢಪಡಿಸಿದ H5N1…
ಬೆಂಗಳೂರು : ಚಿನ್ನದಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡರನ್ನು ಬಂಧಿಸಿದ್ದಾರೆ. ಐಶ್ವರ್ಯಾ ಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ವರಾಹಿ ವರ್ಲ್ಡ್ ಜ್ಯುವೆಲ್ಲರಿ ಅಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ 9 ಲಕ್ಷ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ವನಿತಾ ಐತಾಳ್ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಶ್ವರ್ಯಾ, ಆಕೆಯ ಪತಿ ಹರೀಶ್ ಗೌಡ, ನಟ ಧರ್ಮೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಂದು ಚಂದ್ರಾ ಲೌಟ್ ಠಾಣೆ ಪೊಲೀಸರು ವಿಚಾರಣೆ ಬಳಿಕ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುವ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯು ಇದೇ ಡಿ.29ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ. ಅಭ್ಯರ್ಥಿಗಳು ಕೆಪಿಎಸ್‍ಸಿಯಿಂದ ಡೌನ್‍ಲೋಡ್ ಮಾಡಿಕೊಂಡ ಮರು ಪರೀಕ್ಷೆಯ ಪ್ರವೇಶ ಪತ್ರ, ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (ಚುನಾವಣೆ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್‍ಕಾರ್ಡ್, ಪಾಸ್‍ಪೋರ್ಟ್, ಸರ್ಕಾರಿ ನೌಕರರ ಐಡಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಅಭ್ಯರ್ಥಿಗಳು ಮೊಬೈಲ್, ಕ್ಯಾಲ್ಕುಕಲೇಟರ್, ಸ್ಮಾರ್ಟ್‍ವಾಚ್, ಬ್ಲೂಟೂತ್, ವೈಟ್ ಫ್ಲೂಯಿಡ್, ವೈರ್ ಲೆಸ್ ಸೆಟ್, ಪೇಪರ್, ಬುಕ್ಸ್ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ತರುವಂತಿಲ್ಲ. ಅಭ್ಯರ್ಥಿಗಳು ಶೂ, ಸಾಕ್ಸ್, ಸ್ವೆಟರ್ ಮತ್ತು ಜರ್ಕಿನ್, ತುಂಬು ತೋಳಿನ ಷರ್ಟ್ ಮತ್ತು ಫೇಸ್ ಮಾಸ್ಕ್ ಹಾಗೂ ಇತರೆ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳು ಸಾಧಾರಣ ಚಪ್ಪಲಿಯನ್ನು ಮಾತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಾಮರ್ ಅಳವಡಿಕೆ: ಮೊಬೈಲ್ ಬ್ಲೂಟೂತ್ ಮತ್ತು…
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡುವ ಸಲುವಾಗಿ ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಕೊಪ್ಪಳ ಜಿಲ್ಲಾ ವೆಬ್‌ಸೈಟ್ koppal.nic.in ರಲ್ಲಿ ಪ್ರಕಟಿಸಲಾಗಿದ್ದು, ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಯು 2025ರ ಜನವರಿ 2 ಮತ್ತು 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಯು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಹಾಲ್ ನಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸಂಬಂಧಪಟ್ಟ ಮೂಲ ಹಾಗೂ ಒಂದು ಸೆಟ್ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ದಾಖಲಾತಿಗಳೊಂದಿಗೆ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ಸಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ಸದಸ್ಯರ ನೋಂದಣಿಗೆ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿದೆ. 16. ಈ ಕೆಳಕಂಡ ಸೌಲಭ್ಯಗಳನ್ನು ಯಶಸ್ಮಿನಿ ಸದಸ್ಯರಿಗೆ ಒದಗಿಸಲಾಗುವುದು. ಎ) ಪ್ರಸ್ತುತ ಯಶಸ್ಸಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರ್ತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಬಿ) ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುವಡಿಸಿ ಇತರೆ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ಸಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ, ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು. ಸಿ) ಯೋಜನೆಯಲ್ಲಿ ಒಳವಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್…
ಬೆಂಗಳೂರು : 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ಸಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ಸದಸ್ಯರ ನೋಂದಣಿಗೆ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿದೆ. ಆದೇಶದಲ್ಲಿ ಏನಿದೆ.? ಮೇಲೆ ಓದಲಾದ ಕ್ರ.ಸಂ. (1) ರ ಸರ್ಕಾರದ ಆದೇಶದಲ್ಲಿ 2023-24ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು. ಮೇಲೆ ಓದಲಾದ ಕ್ರ.ಸಂ. (2) ರ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ (Flagship) ವಿಶಿಷ್ಟ ಯೋಜನೆಯಾಗಿದ್ದು, ಇದರಲ್ಲಿ ಯಶಸ್ವಿನಿ ಪ್ರೋಟೋಕಾಲ್‌ನಂತೆ ನಿಗದಿ ಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳಪಟ್ಟು ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5.00 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು…
ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಗಂಟೆಗಟ್ಟಲೆ ಬಳಸುತ್ತಿರುವ ಫೋನ್‌ಗಳನ್ನು ಅವರ ಕೈಯಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಫೋನ್ ಬಳಕೆದಾರರು ದಿನವಿಡೀ Instagram ಅಥವಾ YouTube ನಲ್ಲಿ ಕಿರುಚಿತ್ರಗಳ ಮೂಲಕ ಸ್ಕ್ರೋಲ್ ಮಾಡುತ್ತಲೇ ಇರುತ್ತಾರೆ. ಆದರೆ, ಕೆಲವು ಜನರಿಗೆ, ಫೋನ್ ಅನ್ನು ವೃತ್ತಿಪರ ಕೆಲಸಕ್ಕಾಗಿ ಬಳಸುತ್ತಾರೆ, ಇದರಿಂದಾಗಿ ಅವರು ಫೋನ್ ಅನ್ನು 24 ಗಂಟೆಗಳ ಕಾಲ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಕೆಲವರು ಕೆಲಸಕ್ಕಾಗಿ ಅಥವಾ ವ್ಯಸನದಿಂದಾಗಿ ತಮ್ಮ ಫೋನ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ನಮಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ನಿದ್ದೆ ಮಾಡುವಾಗ, ಕೆಲವರು ತಲೆ ಅಥವಾ ಕೈಯಲ್ಲಿ ಫೋನ್ ಅನ್ನು ಮಲಗುತ್ತಾರೆ, ಆದರೆ ಇದು ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಮತ್ತು ಫೋನ್ ಯಾವ ರೀತಿಯಲ್ಲಿ ಹಾನಿಕಾರಕವಾಗಬಹುದು? ಇದರ ಅರಿವಿಲ್ಲದೆ ಉಳಿಯಿರಿ. ಫೋನ್ ಬಳಸುವುದು ಹೇಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಮತ್ತು ಮಲಗುವಾಗ ಫೋನ್ ಅನ್ನು ಎಷ್ಟು…












