Author: kannadanewsnow57

ನವದೆಹಲಿ : 2024 ರಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸುಮಾರು 3200 ಜನರು ಪ್ರಾಣ ಕಳೆದುಕೊಂಡರು. ಈ ಅಂಕಿಅಂಶಗಳನ್ನು ಭಾರತೀಯ ಹವಾಮಾನ ಇಲಾಖೆ ಬುಧವಾರ ಬಿಡುಗಡೆ ಮಾಡಿದೆ. 2024 ಭಾರತಕ್ಕೆ ಅತ್ಯಂತ ಬಿಸಿಯಾದ ವರ್ಷವಾಗಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಿಂಚು ಮತ್ತು ಗುಡುಗು ಸಹಿತ ಮಳೆಯಿಂದಾಗಿ ಗರಿಷ್ಠ 1,374 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ 1287 ಜನರು ಪ್ರಾಣ ಕಳೆದುಕೊಂಡರು. ಬಿಸಿಗಾಳಿ 459 ಜನರ ಸಾವಿಗೆ ಕಾರಣವಾಯಿತು. https://twitter.com/Indiametdept/status/1879511104294137947?ref_src=twsrc%5Etfw%7Ctwcamp%5Etweetembed%7Ctwterm%5E1879511104294137947%7Ctwgr%5Ea3959301c1dd6e429f6e739731bf555573705118%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fhindi%2Fforyou%3Fmode%3Dpwalangchange%3Dtruelaunch%3Dtrue ಬಿಹಾರದಲ್ಲಿ ಹೆಚ್ಚಿನ ಸಾವುಗಳು ಹವಾಮಾನ ಇಲಾಖೆಯು ವಾರ್ಷಿಕ ಹವಾಮಾನ ಸಾರಾಂಶವನ್ನು ಮಂಡಿಸಿತು. ಇದರಲ್ಲಿ ಅನೇಕ ಪ್ರಮುಖ ವ್ಯಕ್ತಿಗಳು ದಾಖಲಾಗಿದ್ದಾರೆ. ಇದರ ಪ್ರಕಾರ, ಬಿಹಾರದಲ್ಲಿ ಸಿಡಿಲು ಮತ್ತು ಬಿರುಗಾಳಿಯಿಂದ ಗರಿಷ್ಠ ಸಾವುಗಳು ಸಂಭವಿಸಿವೆ. ಅದೇ ಸಮಯದಲ್ಲಿ, ಕೇರಳದಲ್ಲಿ ಹೆಚ್ಚಿನ ಸಾವುಗಳು ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಸಂಭವಿಸಿವೆ. ಇವುಗಳಲ್ಲದೆ, ಹವಾಮಾನ ವೈಪರೀತ್ಯದಿಂದಾಗಿ ಜನರು ಪ್ರಾಣ ಕಳೆದುಕೊಂಡ ಟಾಪ್ 5 ರಾಜ್ಯಗಳಲ್ಲಿ ಉತ್ತರ ಪ್ರದೇಶ,…

Read More

ಮುಂಬೈ: ಹೊಸ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಗ್ರಾಹಕರ ಠೇವಣಿ ಖಾತೆಗಳು ಮತ್ತು ಸುರಕ್ಷತಾ ಲಾಕರ್‌ಗಳಲ್ಲಿ ನಾಮನಿರ್ದೇಶನಗಳನ್ನು ಖಚಿತಪಡಿಸಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಶುಕ್ರವಾರ ಬ್ಯಾಂಕುಗಳನ್ನು ಕೇಳಿದೆ, ಹೆಚ್ಚಿನ ಸಂಖ್ಯೆಯ ಖಾತೆಗಳಿಗೆ ನಾಮನಿರ್ದೇಶನಗಳಿಲ್ಲ ಎಂಬುದನ್ನು ಎತ್ತಿ ತೋರಿಸಿದೆ. ಠೇವಣಿದಾರರು/ಖರೀದಿದಾರರು ಸಾವನ್ನಪ್ಪಿದಾಗ ಕುಟುಂಬ ಸದಸ್ಯರ ಕ್ಲೈಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮತ್ತು ತೊಂದರೆಗಳನ್ನು ಕಡಿಮೆ ಮಾಡಲು ನಾಮನಿರ್ದೇಶನ ಸೌಲಭ್ಯವನ್ನು ಉದ್ದೇಶಿಸಲಾಗಿದೆ. ಆದಾಗ್ಯೂ, ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣಾ ಮೌಲ್ಯಮಾಪನದ ಆಧಾರದ ಮೇಲೆ, ಕೇಂದ್ರ ಬ್ಯಾಂಕಿನ ಸುತ್ತೋಲೆಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಠೇವಣಿ ಖಾತೆಗಳಲ್ಲಿ, ನಾಮನಿರ್ದೇಶನ ಲಭ್ಯವಿಲ್ಲ ಎಂದು ಗಮನಿಸಲಾಗಿದೆ. “ಮೃತ ಠೇವಣಿದಾರರ ಬದುಕುಳಿದವರು/ಕುಟುಂಬ ಸದಸ್ಯರಿಗೆ ಅನಾನುಕೂಲತೆ ಮತ್ತು ಅನಗತ್ಯ ತೊಂದರೆಗಳನ್ನು ತಪ್ಪಿಸಲು, ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು ಠೇವಣಿ ಖಾತೆಗಳು, ಸುರಕ್ಷಿತ ಕಸ್ಟಡಿ ವಸ್ತುಗಳು ಮತ್ತು ಸುರಕ್ಷತಾ ಲಾಕರ್‌ಗಳನ್ನು ಹೊಂದಿದ್ದರೆ, ಸಂದರ್ಭಾನುಸಾರ ನಾಮನಿರ್ದೇಶನವನ್ನು ಪಡೆಯುವ ಅಗತ್ಯವನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ಅದು ಹೇಳಿದೆ. ಮಂಡಳಿ / ನಿರ್ದೇಶಕರ ಮಂಡಳಿಯ ಗ್ರಾಹಕ ಸೇವಾ ಸಮಿತಿ (ಸಿಎಸ್‌ಸಿ) ನಾಮನಿರ್ದೇಶನ ವ್ಯಾಪ್ತಿಯ…

Read More

ಬೆಂಗಳೂರು : ಈಗಾಗಲೇ ಸಾರಿಗೆ ಬಸ್ ಗಳಲ್ಲಿ ಟಿಕೆಟ್ ದರ ಶೇಕಡಾ 15 ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ ನೀಡುತ್ತಿದ್ದೂ, ಇಂದು ಮೆಟ್ರೋ ಪ್ರಯಾಣದ ಟಿಕೆಟ್ ದರ ಶೇಕಡ 40 ರಿಂದ 45ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಿಸಲು ಬಿಎಂಆರ್ ಸಿಲ್ ಸಿದ್ದತೆ ನಡೆಸಿದ್ದು, ಶೇ.15 ರಿಂದ 20 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಜನವರಿ 18ರ ಇಂದು ದರ ಪರಿಷ್ಕರಣೆ ಸಮಿತಿ ಸಲ್ಲಿಸಲಿರುವ ಅಂತಿಮ ವರದಿ ಕುರಿತು ಸಮಾಲೋಚನೆ ನಡೆಯಲಿದೆ. ಇಂದು ಸುದ್ದಿಗೋಷ್ಟಿ ನಡೆಸಿ ಟಿಕೆಟ್ ದರ ಏರಿಕೆ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ. ನಮ್ಮ ಮೆಟ್ರೋ 2017ರಲ್ಲಿ ಕೊನೆಯ ಬಾರಿ ದರ ಪರಿಷ್ಕರಣೆ ಮಾಡಿತ್ತು. 10-15 ಪ್ರತಿಶತ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಬಳಿಕ ಹಣದುಬ್ಬರ ಹೆಚ್ಚಳ, ಕಾರ್ಯಾಚರಣೆ…

Read More

ಬೀದರ್ : ಎಸ.ಬಿ.ಐ ಬ್ಯಾಂಕ್ ಎಟಿಎಂ ದರೋಡೆ ದಾಳಿಯಲ್ಲಿ ಹತ್ಯೆಗೀಡಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ್ದು, ಒಟ್ಟು 18 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಮಗ್ರ ಪರಿಹಾರ ಒದಗಿಸಲು ಬದ್ಧವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ₹8 ಲಕ್ಷ ಪರಿಹಾರ ಮತ್ತು ಹೆಚ್ಚುವರಿಯಾಗಿ ₹10 ಲಕ್ಷ, ಪಿಂಚಣಿ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ, ತಾತ್ಕಾಲಿಕವಾಗಿ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದುರಂತಕ್ಕೆ ಕಾರಣವಾದ ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ತಿಳಿಸಿ, ಕುಟುಂಬದ ನೋವಿನಲ್ಲಿ ಸರ್ಕಾರ ಮತ್ತು ತಾವೂ ಕೂಡ ಸದಾ ಜೊತೆಯಲ್ಲಿದ್ದೆವೆ ಎಂದು ಭರವಸೆ ನೀಡಿದ್ದಾರೆ. https://twitter.com/i/status/1880212620633845804 ಬೀದರ್ ಉಸ್ತುವಾರಿ ಸಚಿವ ಈಶ್ವರ…

Read More

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಜ.19 ಮತ್ತು 25 ರಂದು ಪರೀಕ್ಷೆಗಳನ್ನು ನಡೆಸಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ದಿನಾಂಕ: 19-01-2025 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಪತ್ರಿಕೆ ಪರೀಕ್ಷೆ ಹಾಗೂ ದಿ: 25-01-2025 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಲಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋಗ್ರಫಿ ಮಾಡಲಾಗುವುದು. ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಇರುತ್ತದೆ. ಜೊತೆಗೆ ಜಾಮರ್‌ಗಳನ್ನು ಅಳವಡಿಸಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಎಲೆಕ್ಟಾçನಿಕ್ ವಸ್ತುಗಳಿಗೆ ಅವಕಾಶ ಇರುವುದಿಲ್ಲ. ನಿಯೋಜಿತ ಪೊಲೀಸರಿಂದ ಅಭ್ಯರ್ಥಿಗಳ ತಪಾಸಣೆ ನಡೆಸಿ ಕೇಂದ್ರಗಳ ಒಳಗೆ ಬಿಡಲಾಗುವುದು. ಅಂಗವಿಕಲ ಅಭ್ಯರ್ಥಿಗಳಿಗ ಲಿಪಿಕಾರರ ಸೇವೆಯನ್ನು…

Read More

ಬೆಂಗಳೂರು: ದಿನಾಂಕ 18.01.2025 ರ ಇಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ “66/11ಕೆ.ವಿ ವಿಕ್ಟೋರಿಯಾ” ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂಬುದಾಗಿ ಬೆಸ್ಕಾಂ ತಿಳಿಸಿದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್‌ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ನೆಫ್ರೋರಾಲಜಿ, ಮಿಂಟೊ, ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮರ‍್ಕೆಟ್ ಕಾಂಪ್ಲೆಕ್ಸ್, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರತ್ ಪೇಟೆ, ತಿಗಳರಪೇಟೆ, ಎನ್, ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆಯಲ್ಲಿ ಕರೆಂಟ್ ಇರೋದಿಲ್ಲ. ಎಸ್‌ಜೆಪಿ ಪರ‍್ಕ್, ಬಸಪ್ಪ…

Read More

ನವದೆಹಲಿ : ಪತ್ನಿ ಮದ್ಯ ಸೇವಿಸುತ್ತಾಳೆ ಎಂಬ ಕಾರಣಕ್ಕಾಗಿ ವಿಚ್ಛೇದನ ನೀಡುವಾಗ, ಮದ್ಯ ಸೇವಿಸಿದ ನಂತರ ಅಸಭ್ಯವಾಗಿ ವರ್ತಿಸದ ಹೊರತು, ಅದನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದ್ಯಪಾನವು ಅನುಚಿತ ಮತ್ತು ಅನಾಗರಿಕ ನಡವಳಿಕೆಯನ್ನು ಅನುಸರಿಸದಿದ್ದರೆ ಅದನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ. ಮಧ್ಯಮ ವರ್ಗದ ಸಮಾಜದಲ್ಲಿ ಮದ್ಯಪಾನ ಇನ್ನೂ ನಿಷಿದ್ಧವಾಗಿದ್ದು, ಅದು ಸಂಸ್ಕೃತಿಯ ಭಾಗವಲ್ಲದಿದ್ದರೂ, ಪತಿ/ಮೇಲ್ಮನವಿದಾರರಿಗೆ ಮದ್ಯಪಾನವು ಹೇಗೆ ಕ್ರೌರ್ಯಕ್ಕೆ ಕಾರಣವಾಯಿತು ಎಂಬುದನ್ನು ತೋರಿಸಲು ಯಾವುದೇ ಪುರಾವೆಗಳು ದಾಖಲೆಯಲ್ಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಜೋಡಿಗಳ ವಿವಾಹವು 2015 ರಲ್ಲಿ ನಡೆಯಿತು. ಅದಾದ ನಂತರ, ಹೆಂಡತಿಯ ವರ್ತನೆಯಲ್ಲಿ ತೀವ್ರ ಬದಲಾವಣೆಯಾಯಿತು. ಇತರ ವಿಷಯಗಳ ಜೊತೆಗೆ, ಪ್ರತಿವಾದಿ-ಪತ್ನಿ ಮೇಲ್ಮನವಿದಾರನನ್ನು ತನ್ನ ಹೆತ್ತವರನ್ನು ಬಿಟ್ಟು ಕೋಲ್ಕತ್ತಾಗೆ ಹೋಗುವಂತೆ ಒತ್ತಾಯಿಸಲು ಪ್ರಯತ್ನಿಸಿದರು, ಆದರೆ ಅವನು ಒಪ್ಪಲಿಲ್ಲ. ಕೊನೆಗೆ, ಪತ್ನಿ ತನ್ನ ಅಪ್ರಾಪ್ತ ಮಗನೊಂದಿಗೆ ಕೋಲ್ಕತ್ತಾಗೆ ಹೋದರು ಮತ್ತು ಪತಿಯ ವಿನಂತಿಗಳ ಹೊರತಾಗಿಯೂ ಹಿಂತಿರುಗಲು ನಿರಾಕರಿಸಿದರು. ಮೇಲ್ಮನವಿದಾರ-ಪತಿ ಲಕ್ನೋದಲ್ಲಿ…

Read More

ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಬ್ಯಾಂಕಾಕ್ ನಿಂದ 23 ಕೋಟಿ ರೂ. ಮೌಲ್ಯದ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 23 ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : ಅನಾರೋಗ್ಯದಿಂದ ನಿನ್ನೆ ನಿಧನರಾಗಿರುವ ಸ್ಯಾಂಡಲ್ ವುಡ್ ಹಿರಿಯ ಹಾಸ್ಯ ನಟ ಸರಿಗಮ ವಿಜಿ ಅವರ ಅಂತ್ಯಕ್ರಿಯೆ ಇಂದು ಚಾಮರಾಜಪೇಟೆ ಬಳಿಯ ಚಿತಾಗಾರದಲ್ಲಿ ನಡೆದಿದೆ. ಶ್ವಾಸಕೋಶದ ಸೋಂಕಿನಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಜಿ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನರಾಗಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ರಾಜಕೀಯ, ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸರಿಗಮ ವಿಜಿ ಅಂತಿಮ ದರ್ಶನಕ್ಕೆ ವ್ಯವಸ್ಥೆಕ್ಕೆ ಮಾಡಲಾಗಿತ್ತು. ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಪುತ್ರ ಅಗ್ನಿ ಸ್ಪರ್ಶ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದಾರೆ. ಸರಿಗಮ ವಿಜಿ ಎಂಬ ತಮ್ಮ ರಂಗನಾಮದಿಂದ ಕರೆಯಲ್ಪಡುವ ಆರ್. ವಿಜಯ್ಕುಮಾರ್ ಕನ್ನಡದ ಜನಪ್ರಿಯ ಹಾಸ್ಯ ನಟ, ಬರಹಗಾರರಾಗಿದ್ದಾರೆ. ವಿಜಿ ನಟನಾಗಿ ಚೊಚ್ಚಲ ಕನ್ನಡ ಚಲನಚಿತ್ರ ಬೆಳುವಲದ ಮಡಿಲಲ್ಲಿ (1975) ಬಂದಿತು. 2018 ರ ಹೊತ್ತಿಗೆ ಅವರು ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ. 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ಕೆಎಸ್ ಆರ್ ಟಿಸಿ ಬಸ್ ಹರಿದ ಪರಿಣಾಮ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ವೆಂಕಟೇಶ್ (29) ಹಾಗೂ ಮೋಕ್ಷಿತಾ (8) ಸ್ಥಳದಲ್ಲೇ ಸಾವನ್ನಪ್ಪಿದ್ದು, ಲಾವಣ್ಣ ಹಾಗೂ ನರಸಮ್ಮ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

Read More