Subscribe to Updates
Get the latest creative news from FooBar about art, design and business.
Author: kannadanewsnow57
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ)ಯು ತನ್ನ ಸದಸ್ಯರ ಸೇವೆಗಳನ್ನು ಸುಧಾರಿಸುವ ಮತ್ತು ಸದಸ್ಯರ ದತ್ತಾಂಶದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪ್ರೊಫೈಲ್ (ವೈಯಕ್ತಿಕ ವಿವರ) ಅನ್ನು ನವೀಕರಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ ಎಂದು ಬಳ್ಳಾರಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ. ಪರಿಷ್ಕೃತ ಕಾರ್ಯವಿಧಾನದಡಿ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಈಗಾಗಲೇ ಆಧಾರ್ ಮೂಲಕ ಮೌಲ್ಯೀಕರಿಸಿದ ಸದಸ್ಯರು ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅಗತ್ಯವಿಲ್ಲದೆ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಷ್ಟಿçÃಯತೆ, ತಂದೆ-ತಾಯಿಯ ಹೆಸರು, ವೈವಾಹಿಕ ಸ್ಥಿತಿ, ಸಂಗಾತಿಯ ಹೆಸರು, ಸೇರಿದ ದಿನಾಂಕ ಮತ್ತು ತೊರೆದ ದಿನಾಂಕಗಳನ್ನು ತಮ್ಮ ಪ್ರೊಫೈಲ್ ನಲ್ಲಿ ನವೀಕರಿಸಬಹುದು. 1-10-2017 ಕ್ಕಿಂತ ಮೊದಲು ಯುಎಎನ್ ಪಡೆದ ಕೆಲವು ಸಂದರ್ಭಗಳಲ್ಲಿ ಮಾತ್ರ ನವೀಕರಣಕ್ಕೆ ಉದ್ಯೋಗದಾತರ ಪ್ರಮಾಣೀಕರಣ ಮಾತ್ರ ಅಗತ್ಯ ಇತ್ತು. ಸೇವೆಗಳನ್ನು ತಡೆರಹಿತವಾಗಿ ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ನಿಧಿಯಿಂದ ತಪ್ಪು / ಮೋಸದ ಪಾವತಿಯ ಅಪಾಯವನ್ನು ತಪ್ಪಿಸಲು ಇಪಿಎಫ್‌ಓ ಡೇಟಾಬೇಸ್ ನಲ್ಲಿ ಇಪಿಎಫ್ ಸದಸ್ಯರ ವೈಯಕ್ತಿಕ ಡೇಟಾದ…
ಬೆಂಗಳೂರು : ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ರಾಜಧಾನಿಯ ಕರ್ತವ್ಯಪಥದಲ್ಲಿ (ರಾಜ್‍ಪಥ್) ಇದೇ ಜ. 26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ. ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಐಪಿಎಸ್ ಅವರು ನುಡಿದರು. ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳಿವೆ. ಈ ಪೈಕಿ…
ನೋಂದಣಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸಲು ಭಾರತ ಸರ್ಕಾರ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು ಜನವರಿ 1, 2025 ರಿಂದ ದೇಶಾದ್ಯಂತ ಅನ್ವಯವಾಗುತ್ತವೆ. ನಾಗರಿಕರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸದಂತೆ ನೋಂದಣಿ ಪ್ರಕ್ರಿಯೆಯನ್ನು ಡಿಜಿಟಲ್ ಮತ್ತು ಸುಲಭಗೊಳಿಸುವುದು ಈ ನಿಯಮಗಳ ಉದ್ದೇಶವಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ಸಂಪೂರ್ಣ ನೋಂದಣಿ ಪ್ರಕ್ರಿಯೆಯು ಡಿಜಿಟಲ್ ಆಗುತ್ತದೆ. ಕಾಗದಪತ್ರಗಳ ಬದಲಿಗೆ ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಬಳಸಲಾಗುವುದು. ಇದು ನೋಂದಾವಣೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಸುಲಭಗೊಳಿಸುತ್ತದೆ ಮಾತ್ರವಲ್ಲದೆ ಭ್ರಷ್ಟಾಚಾರದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಮತ್ತು ವೀಡಿಯೊ ರೆಕಾರ್ಡಿಂಗ್‌ನಂತಹ ಹೊಸ ನಿಯಮಗಳು ನೋಂದಾವಣೆಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಭೂ ನೋಂದಣಿ ಹೊಸ ನಿಯಮಗಳು 2025 ಹೊಸ ಭೂ ನೋಂದಣಿ ನಿಯಮಗಳು 2025 ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿಸುವ ಗುರಿಯನ್ನು ಹೊಂದಿದೆ. ಈ ನಿಯಮಗಳು ಜನವರಿ 1, 2025 ರಿಂದ…
ನವದೆಹಲಿ: ಭಾರತ ಸರ್ಕಾರ, ರೈಲ್ವೆ ಸಚಿವಾಲಯ, ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಪಾಯಿಂಟ್ಸ್ಮನ್, ಅಸಿಸ್ಟೆಂಟ್, ಟ್ರ್ಯಾಕ್ ಮೆಂಟೇನರ್ ಮತ್ತು ಇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖ ದಿನಾಂಕಗಳು: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23-01-2025 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-02-2025 ರೈಲ್ವೆ ಗ್ರೂಪ್ ಡಿ ಹುದ್ದೆಗಳ ವಿವರ ಹೀಗಿದೆ ಟ್ರ್ಯಾಕ್ ಮೇಂಟೆನರ್ ಗ್ರೇಡ್ IV ತಾಂತ್ರಿಕ ವಿಭಾಗದ ಸಹಾಯಕ ಅಸಿಸ್ಟಂಟ್ ಪಾಯಿಂಟ್ಸ್‌ಮನ್ ಟ್ರ್ಯಾಕ್ ಮನ್ ಅಸಿಸ್ಟಂಟ್ ಬ್ರಿಡ್ಜ್ ಇತರೆ ಹಲವು ವಿಭಾಗಗಳ ಲೆವೆಲ್ 1 ಪೋಸ್ಟ್‌ಗಳು: ಆರ್ಆರ್ಬಿ ಗ್ರೂಪ್ ಡಿ ಅರ್ಹತಾ 2025 ಎನ್ಸಿವಿಟಿ / ಎಸ್ಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರೌಢಶಾಲಾ (10 ನೇ ತರಗತಿ) ಪೂರ್ಣಗೊಳಿಸಿದ ಅಥವಾ ಎನ್ಸಿವಿಟಿ ಒದಗಿಸಿದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಹೊಂದಿರುವ…
ಹೈದರಾಬಾದ್ : ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ನಲ್ಲಿ ದುಷ್ಕೃತ್ಯ ನಡೆದಿದೆ. ಪತ್ನಿಯನ್ನು ಕೊಂದು ಶವವನ್ನು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಜಿಲ್ಲೆಯಗೌಡನ ನ್ಯೂ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ. ಜನವರಿ 16ರಂದು ಪತಿ ಗುರುಮೂರ್ತಿ, ತಾಯಿ ಸುಬ್ಬಮ್ಮ ಅವರೊಂದಿಗೆ ಪತ್ನಿ ವೆಂಕಟಮಾಧವಿ ಕಾಣೆಯಾಗಿದ್ದಾರೆ ಎಂದು ಮೀರ್‌ಪೇಟ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿದ್ದ ವಿಷಯ ತಿಳಿದ ಪೊಲೀಸರು ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದರಿಂದ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹಗಳನ್ನು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ನಂತರ ಜಿಲ್ಲೆಲಗುಡ ಕೆರೆಯಲ್ಲಿ ಎಸೆದಿದ್ದಾರೆ ಎಂದು ತಿಳಿಸಿದರು. ಸದ್ಯ ಪೊಲೀಸರು ಗುರುಮೂರ್ತಿ ಹೇಳಿದ್ದಕ್ಕೆ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೃತದೇಹದ ಕುರುಹುಗಳಿಗಾಗಿ ಹುಡುಕಾಟ ನಡೆದಿದೆ. ಗುರುಮೂರ್ತಿ ಅವರು ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಸ್ತುತ ಕಾಂಚನ್‌ಬಾಗ್‌ನಲ್ಲಿ…
ಬಾಗಲಕೋಟೆ : ಪ್ರತಿ ವರ್ಷ ಬೇಸಿಗೆ ಆರಂಭವಾದರೆ ಸಾಕು, ಲೋಡ್ ವೆಡ್ಡಿಂಗ್ ನಿಂದ ಜನರು ಹೈರಾಣಾಗುತಾರೆ. ಒಂದು ಕಡೆ ವಿಪರೀತ ಸುಡುವ ಬಿಸಿಲು ಆದರೆ ಇನ್ನೊಂದು ಕಡೆ ಲೋಡ್ ಶೆಡ್ಡಿಂಗ್ ನಿಂದ ಜನರು ವಿದ್ಯುತ್ ಇಲ್ಲದೆ ಸೆಕೆಯಿಂದ ಬೇಸತ್ತು ಹೋಗುತ್ತಾರೆ. ಆದರೆ ಈ ಬಾರಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಒಂದು ಇದ್ದು, ಈ ಬಾರಿ ಬೇಸಿಗೆಯಲ್ಲಿ ಯಾವುದೇ ರೀತಿಯ ಲೋಡ್ ಶೇಡ್ಡಿಂಗ್ ಮಾಡಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಬೇಸಿಗೆ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ರಾಜ್ಯದಲ್ಲಿ ಬರಗಾಲ ಇದ್ದಾಗಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಹೀಗಾಗಿ ಈ ವರ್ಷ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ತಿಳಿಸಿದರು. ಒಂದು ವೇಳೆ ವಿದ್ಯುತ್ ಕೊರತೆ ಉಂಟಾದರೆ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುತ್ತೇವೆ.ಈ ವರ್ಷವೂ ಬೇಡಿಗೆ ಜಾಸ್ತಿಯಾಗಿದೆ. ಈಗ 16 ರಿಂದ 17 ಸಾವಿರ ಮೆಗಾ ವೇಟ್ ಬೇಡಿಕೆ ಬರ್ತಾ…
ಬೆಂಗಳೂರು: ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಬೆಂಗಳೂರು ವತಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೇಮಕಾತಿ ಪ್ರಾಧಿಕಾರಿಗಳು ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು. ಜನವರಿ 27 ರಿಂದ ಫೆಬ್ರವರಿ 4 ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಪರೀಕ್ಷಾ ಪೂರ್ವ ತರಬೇತಿಯು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ನಡೆಯಲಿದೆ. ಪರೀಕ್ಷಾ ಪೂರ್ವ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಸಿ.ಓ.ಇ ಕಟ್ಟಡ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ಪೀಣ್ಯ, ಬೆಂಗಳೂರು ಅಥವಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 2ನೇ ಬ್ಲಾಕ್ , ರಾಜಾಜಿನಗರ, ಬೆಂಗಳೂರು ಇಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಬೆಂಗಳೂರಿನ ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್ ಸೆಟ್ ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿಧಿಗಳು ಹಾಗೂ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, “ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಯೋಜನೆ 2004ರಿಂದಲೇ ಜಾರಿಯಲ್ಲಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯಡಿ 4.5 ಲಕ್ಷ ಅರ್ಜಿಗು ಬಾಕಿ ಇದ್ದವು. ಪ್ರಸ್ತುತ 2.5 ಲಕ್ಷ ಪಂಪ್ ಸೆಟ್ ಗಳನ್ನು ಅಕ್ರಮಗೊಳಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ಬಳಿಕ ಹೊಸದಾಗಿ ಬಂದ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾ ಕೈಗೊಳ್ಳಲಾಗುವುದು,” ಎಂದರು. “ರೈತರಿಗೆ ನಿರಂತರ 7 ಗಂಟೆ ಸೇರಿದಂತೆ ರಾಜ್ಯದ ಜನರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್…
ಬೆಂಗಳೂರು : SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಸಂಬಂಧಿಸಿದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 2 ವರ್ಷಗಳಿಂದ SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಮೌಲೀಕರಣವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದುವರೆಗೂ ರಾಜ್ಯದಲ್ಲಿ ಒಟ್ಟಾರೆ 1.04 ಕೋಟಿ ವಿದ್ಯಾರ್ಥಿಗಳಲ್ಲಿ 78 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕಣ ಮಾತ್ರ ಯಶಸ್ವಿಯಾಗಿ ಪೂರ್ಣಗೊಂಡಿರುತ್ತದೆ, 18 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ಇದುವರೆಗೂ ತಂತ್ರಾಂಶದಲ್ಲಿ ಮೌಲೀಕರಿಸಲಾಗಿರುವುದಿಲ್ಲ. ಹಾಗೂ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಿಸಲಾಗಿದ್ದರು ಆಧಾರ್ ಮತ್ತು SATS ನಲ್ಲಿ ವಿದ್ಯಾರ್ಥಿಯ ಹೆಸರು ತಾಳೆಯಾಗದ ಕಾರಣ ಮೌಲೀಕರಣ ವಿಫಲವೆಂದು ಪರಿಗಣಿಸಲಾಗಿದೆ. ಈ ಅಂತರವನ್ನು ಪೂರ್ಣಗೊಳಿಸಲು ಉಲ್ಲೇಖ-4 ರ ಈ ಕಚೇರಿಯ ಸುತ್ತೋಲೆಯಲ್ಲಿ ಶಾಲೆಗಳಲ್ಲಿ ವಿಶಿಷ್ಟ ಆಧಾರ್ ಶಿಬಿರಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿರುತ್ತದೆ. ಇದುವರೆಗೂ ಒಟ್ಟಾರೆ 26 ಲಕ್ಷ ವಿದ್ಯಾರ್ಥಿಗಳ ಆಧಾರ್ ಮೌಲೀಕರಣ ತಂತ್ರಾಂಶದಲ್ಲಿ ಬಾಕಿಯಿರುವುದರಿಂದ, ವಿವಿಧ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಇತರೆ…
ಬೆಂಗಳೂರು : ಬೆಂಗಳೂರಿನಲ್ಲಿ ಜನವರಿ 23 ರ ಇಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ಹೊರಡಿಸಿದೆ. ಜಲಮಂಡಳಿ 4ನೇ ಹಂತ, 2ನೇ ಹಂತದ ಹೆಗ್ಗನಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ ಕೊಳವೆ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನಲೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 23ರ ಬೆಳಗ್ಗೆ 5ರಿಂದ ಜನವರಿ 24 ರ ಬೆಳಗ್ಗೆ 5ರವರೆಗೆ 24 ಗಂಟೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ. ಎಲ್ಲೆಲ್ಲಿ ವ್ಯತ್ಯಯ ನಾಗರಭಾವಿ, ಎಸ್.ಎಂ.ವಿ ಲೇಔಟ್ – 1 ರಿಂದ 9 ನೇ ಬ್ಲಾಕ್, ಮಲ್ಲತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮಿ ದೇವಿನಗರ, ಲೆಗ್ಗೇರೆ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಆರ್.ಆರ್. ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಹಲಗೆ ವಡೇರನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ಮರಿಯಪ್ಪನ ಪಾಳ್ಯ, ಟಿ.ದಾಸರಹಳ್ಳಿ, ನೆಲಗದರನಹಳ್ಳಿ, ಹೆಚ್.ಎಂ.ಟಿ ಲೇಔಟ್, ಬಗಲಗುಂಟೆ, ಎಂ.ಇ.ಐ ಲೇಔಟ್, ಅಬ್ಬಿಗೇರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು,…














