Author: kannadanewsnow57

ರಾಮನಗರ : ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯೂನಿಟಿ ಸ್ಮಾಲ್ ಫೈನಾನ್ಸ್, ಆಶೀರ್ವಾದ್ ಮೈಕ್ರೋ ಫೈನಾನ್ಸ್, ಸತ್ಯಾ ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್, ಸೂರ್ಯೋದಯ ಫೈನಾನ್ಸ್, ಐಐಎಫ್ ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್, ಎಲ್ ಅಂಡ್ ಟಿ ಫೈನಾನ್ಷಿಯಲ್ ಸರ್ವಿಸ್ ಹಾಗೂ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋಧಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಹೀಗಾಗಿ ತಮ್ಮ ತಾಯಿ ಆತ್ಮಹತ್ಯೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಆರೋಪಿಸಿ ಪುತ್ರ ಕುಮಾರ್ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 7 ಮೈಕ್ರೋ ಫೈನಾನ್ಸ್ ಕಂಪನಿಗಳ ಮ್ಯಾನೇಜರ್ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Read More

ಹಾಸನ : ಶಾಲೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳು ಇದೀಗ ಮೈಸೂರಿನಲ್ಲಿ ಪತ್ತೆಯಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಯೊಬ್ಬನ ಫೋನ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುನಿಗನಹಳ್ಳಿ ಗ್ರಾಮದ ಶರತ್ (16), ಧನಂಜಯ್ (16), ಮುರುಳಿ (16) ನಿನ್ನೆ ಬೆಳಗ್ಗೆ 7.30 ಕ್ಕೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಮೂವರು ವಿದ್ಯಾರ್ಥಿಗಳು ನಿನ್ನೆ ಶಾಲೆಗೆ ಗೈರಾದ ಹಿನ್ನೆಲೆಯಲ್ಲಿ ಪೋಷಕರಿಗೆ ಶಿಕ್ಷಕರು ಕರೆ ಮಾಡಿ ತಿಳಿಸಿದ್ದರು. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗಾಗಿ ಗ್ರಾಮದ ತುಂಬ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆ ಆಗಿಲ್ಲ. ರಾತ್ರಿ ಆದರೂ ಮಕ್ಕಳು ಮನೆಗೆ ಬಂದಿಲ್ಲ. ಶರತ್ ಬಳಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸದ್ಯ ಪೋಷಕರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಪೊಲೀಸರು ನಾಪತ್ತೆಯಾದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳ ಉದ್ಯೋಗಾವಕಾಶದ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ Uniforce Technologies Consulting Pvt Ltd. Bengaluru d Toyota Kirloskar ಕಂಪನಿಯ ಬೆಂಗಳೂರು ಶಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಾಲಿಟೆಕ್ನಿಕ್ ಸಂಸ್ಥೆಗಳ Placement Officer ಗಳು ಈ ಕೆಳಕಂಡ ಡಿಪ್ಲೋಮ ಪ್ರೊಗ್ರಾಮ್‌ ಗಳಲ್ಲಿ ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳ (ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳುಳ್ಳ) ವಿವರವಾದ ಪಟ್ಟಿಯನ್ನು prakashsjep@gmail.com, Pavithra@uftech.com,gayathri@uftech.com, ಮಿಂಚಂಚೆ ವಿಳಾಸಗಳಿಗೆ ಶೀಘ್ರವಾಗಿ ಕಳುಹಿಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸಂಸ್ಥೆಗಳ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ.

Read More

ಫಿಲಿಫೈನ್ಸ್ : ಇಂದು ಬೆಳ್ಳಂಬೆಳಗ್ಗೆ ಫಿಲಿಫೈನ್ಸ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಉಂಟಾಗಿದೆ. ಭೂಕಂಪದ ಬಲವಾದ ಕಂಪನಗಳೊಂದಿಗೆ ಭೂಮಿಯು ಮತ್ತೊಮ್ಮೆ ನಡುಗಿದೆ. ಇಂದು ಬೆಳಿಗ್ಗೆ ಫಿಲಿಪೈನ್ಸ್‌ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ ಮಧ್ಯ ಫಿಲಿಪೈನ್ಸ್‌ನಲ್ಲಿ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಉಂಟಾಗಿದೆ. https://twitter.com/NexusGlobal01/status/1882288401271124376?ref_src=twsrc%5Etfw%7Ctwcamp%5Etweetembed%7Ctwterm%5E1882288401271124376%7Ctwgr%5E9ca76c07ad8e4913655dbefe08233d86b449058a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fhindi%2Fforyou%3Fmode%3Dpwalangchange%3Dtruelaunch%3Dtrue ರಿಕ್ಟರ್ ಮಾಪಕದಲ್ಲಿ ಭೂಕಂಪಗಳ ತೀವ್ರತೆ 5.4 ಮತ್ತು 5.9 ಎಂದು ದಾಖಲಾಗಿದೆ. ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (PHIVOLCS) ಭೂಕಂಪವನ್ನು ದೃಢಪಡಿಸಿದ್ದು, ಭೂಕಂಪದ ಕೇಂದ್ರ ಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕಂಡುಬಂದಿದ್ದು, ಲೇಟ್ ಪ್ರಾಂತ್ಯದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣದ ಬಳಿ ಕೇಂದ್ರೀಕೃತವಾಗಿದೆ ಎಂದು ತಿಳಿಸಿದೆ. ಏಜೆನ್ಸಿ ಸುಮಾರು 45 ಕಂಪನಗಳನ್ನು ದಾಖಲಿಸಿದೆ. ನಗರ ಮುಖ್ಯಸ್ಥ ಬಾರ್ನೆ ಕ್ಯಾಟಿಗ್ ಭೂಕಂಪವನ್ನು ದೃಢಪಡಿಸಿದರು ಮತ್ತು ಕಂಪನಗಳು ತುಂಬಾ ಪ್ರಬಲವಾಗಿದ್ದು, ದೇಶದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು. https://twitter.com/RenderNature/status/1882276580292268416?ref_src=twsrc%5Etfw%7Ctwcamp%5Etweetembed%7Ctwterm%5E1882276580292268416%7Ctwgr%5E9ca76c07ad8e4913655dbefe08233d86b449058a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fhindi%2Fforyou%3Fmode%3Dpwalangchange%3Dtruelaunch%3Dtrue

Read More

ಹಾಸನ : ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಕಾಂತಾರಾ-2 ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಅರಣ್ಯಾಧಿಕಾರಿಗಳು ನಿಯಮ ಉಲ್ಲಂಘನೆ ಆಗಿಲ್ಲ ಎಂದು ವರದಿ ನೀಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗವಿಗುಡ್ಡದಲ್ಲಿ ಕಾಂತಾರಾ-2 ಚಿತ್ರೀಕರಣದ ವೇಳೆ ಮರಗಳನ್ನು ಕಡಿಯಾಗಿದೆ. ಸ್ಪೋಟಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಇದೀಗ ವರದಿ ನೀಡಿದ್ದು, ಕಾಂತಾರಾ ಚಿತ್ರತಂಡ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದೆ. ಮರ ಕಡಿದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ಕಾಂತಾರಾ-2 ಚಿತ್ರತಂಡ ಯಾವುದೇ ಮರಗಳನ್ನು ಕಡಿದಿಲ್ಲ. ನಿಯಮ ಉಲ್ಲಂಘಿಸಿಲ್ಲ ಎಂದು ವರದಿ ನೀಡಿದೆ.

Read More

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಕೋಳಿಗಳನ್ನು ಕೊಲ್ಲುವ ನಿಗೂಢ ವೈರಸ್ ತೀವ್ರವಾಗಿ ಬಾಧಿಸುತ್ತಿದೆ. ಬೆಳಗ್ಗೆ ಆರೋಗ್ಯಕರವಾಗಿ ಕಾಣಿಸುವ ಕೋಳಿಗಳು ಸಂಜೆ ವೇಳೆಗೆ ಸಾವನ್ನಪ್ಪುತ್ತಿವೆ ಎಂದು ವರದಿಯಾಗಿದೆ. ನಿಗೂಢ ವೈರಸ್ ಗೆ ಈಗಾಗಲೇ ಜಿಲ್ಲೆಯಲ್ಲಿ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಕೋಳಿಗಳು ಈ ರೋಗಕ್ಕೆ ಬಲಿಯಾಗಿವೆ. ಅದರಲ್ಲೂ ವಿಶೇಷವಾಗಿ ಸ್ಪರ್ಧೆಗೆಂದೇ ಸಾಕಿದ್ದ ಕೋಳಿಗಳು ಕೂಡ ವೈರಸ್‌ನಿಂದ ಸಾವನ್ನಪ್ಪಿದ್ದು, ಇದರಿಂದ ಕೋಳಿ ಸಾಕಾಣಿಕೆದಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೂ ಇದೇ ವೈರಸ್ ಪಶ್ಚಿಮ ಗೋದಾವರಿಯಲ್ಲಿ ಕೋಳಿಗಳನ್ನು ತೀವ್ರವಾಗಿ ಬಾಧಿಸಿತ್ತು. ಆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸಾವನ್ನಪ್ಪಿದ್ದು, ಮಾರುಕಟ್ಟೆಯಲ್ಲಿ ಮಾರಾಟ ಸಂಪೂರ್ಣ ಕುಸಿದಿದೆ. ವೈರಸ್ ಕಡಿಮೆಯಾಗಲು ಹಲವಾರು ದಿನಗಳನ್ನು ತೆಗೆದುಕೊಂಡಿತು. ಈಗ ಮತ್ತೊಮ್ಮೆ ಅದೇ ವೈರಸ್ ಹರಡಿದೆ ಎಂಬ ಆರೋಪ ಕೇಳಿಬಂದಿದೆ. ಈ ವೈರಸ್ ಸೋಂಕಿತ ಕೋಳಿ ಯಾವುದೇ ನಿರ್ದಿಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಬೆಳಿಗ್ಗೆ ಆರೋಗ್ಯಕರವಾಗಿರುವ ಕೋಳಿ ಮಧ್ಯಾಹ್ನ ಅಥವಾ ಸಂಜೆ ಸಾಯುತ್ತದೆ. ವೈದ್ಯರ ಪ್ರಕಾರ, ಈ ವೈರಸ್ ನೇರವಾಗಿ ಕೋಳಿಯ…

Read More

ನವದೆಹಲಿ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ. ಭಾರತದಲ್ಲಿ ಮತದಾರರ ಸಂಖ್ಯೆ ಈಗ 99.1 ಕೋಟಿಗೆ ಏರಿದೆ, ಇದು ಕಳೆದ ವರ್ಷದ ಲೋಕಸಭಾ ಚುನಾವಣೆಯ ಸಮಯದಲ್ಲಿ 96.88 ಕೋಟಿಯಾಗಿತ್ತು. ರಾಷ್ಟ್ರೀಯ ಮತದಾರರ ದಿನಾಚರಣೆಗೆ ಮುನ್ನ ಬಿಡುಗಡೆ ಮಾಡಿದ ವರದಿಯಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯು ಯುವ ಮತ್ತು ಲಿಂಗ ಸಮತೋಲಿತವಾಗಿ ಕಾಣುತ್ತದೆ, 18-29 ವಯಸ್ಸಿನ 21.7 ಕೋಟಿ ಯುವ ಮತದಾರರಿದ್ದಾರೆ ಮತ್ತು ಮತದಾರರ ಲಿಂಗ ಅನುಪಾತವು 948 ರಿಂದ ಆರು ಅಂಕಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. 2024 ರಲ್ಲಿ 2025 ರಲ್ಲಿ 981 ಕ್ಕೆ. ಅದು 954 ಆಗಿದೆ. ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ 1950 ರಲ್ಲಿ ಈ ದಿನದಂದು ಸ್ಥಾಪನೆಯಾದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಜನವರಿ 7 ರಂದು ದೆಹಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು…

Read More

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಸಾಲಬಾಧೆಯಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸಾಲಬಾಧೆಯಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಲ್ಲಪ್ಪ ಲಾಳಿ (55) ಹಾಗೂ ಮಾದೇವಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಖಾದ್ಯ ತೈಲ ಗ್ರಾಹಕರಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಎಣ್ಣೆಬೀಜ ಬೆಳೆಗಳ ಬಿತ್ತನೆ ಕಡಿಮೆಯಾಗಿದೆ ಎಂಬ ವರದಿಗಳ ಮಧ್ಯೆ, ಖಾದ್ಯ ತೈಲದ ಬೆಲೆಗಳು ಕುಸಿದಿವೆ. ವರದಿಯ ಪ್ರಕಾರ, ಮಲೇಷ್ಯಾ ವಿನಿಮಯ ಕೇಂದ್ರದ ಕುಸಿತದಿಂದಾಗಿ, ಹೆಚ್ಚಿನ ದೇಶೀಯ ಎಣ್ಣೆಬೀಜಗಳ (ಸಾಸಿವೆ ಎಣ್ಣೆಕಾಳುಗಳು, ನೆಲಗಡಲೆ ಎಣ್ಣೆ, ಸೋಯಾಬೀನ್ ಎಣ್ಣೆ, ಕಚ್ಚಾ ಪಾಮ್ ಎಣ್ಣೆ ಅಥವಾ ಸಿಪಿಒ ಮತ್ತು ಪಾಮೋಲಿನ್ ಮತ್ತು ಹತ್ತಿಬೀಜದ ಎಣ್ಣೆ) ಬೆಲೆಗಳು ಬುಧವಾರ ದೇಶದ ಎಣ್ಣೆಬೀಜ ಮಾರುಕಟ್ಟೆಯಲ್ಲಿ ಕುಸಿದಿವೆ. . ದಿನ ತಿಂಗಳು ಮಾರುಕಟ್ಟೆಗೆ ಹೊಸ ಸಾಸಿವೆ ಬೆಳೆ ಬರುವ ಸಾಧ್ಯತೆಯಿರುವುದರಿಂದ ಸಾಸಿವೆ ಎಣ್ಣೆ ಮತ್ತು ಎಣ್ಣೆಕಾಳುಗಳ ಬೆಲೆ ಕುಸಿದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಕಡಲೆಕಾಯಿ ಮತ್ತು ಹತ್ತಿ ಬೀಜದ ಕೇಕ್ ಬೆಲೆಯಲ್ಲಿ ಸುಧಾರಣೆ ಕಂಡುಬಂದಿದೆ. ಎಲ್ಲಾ ರಾಜ್ಯಗಳಲ್ಲಿ ಈ ಎಣ್ಣೆಕಾಳುಗಳ ಬೆಲೆಗಳು ಕ್ವಿಂಟಲ್‌ಗೆ 15-20 ರೂ.ಗಳಷ್ಟು ಸುಧಾರಿಸಿದ್ದು, ಇದರಿಂದಾಗಿ ಈ ಎಣ್ಣೆಕಾಳುಗಳ ಖಾದ್ಯ ಎಣ್ಣೆಯ ಬೆಲೆಗಳು ಕುಸಿದಿವೆ, ಇದು ನೆಲಗಡಲೆ ಎಣ್ಣೆ ಮತ್ತು ಹತ್ತಿ ಬೀಜದ ಎಣ್ಣೆಯ…

Read More

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ:23.01.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ. ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ ಸುತ್ತುವಳಿ ಸಂಖ್ಯೆ 1 NICE-5EB ಬಿಡದಿ ಬಿಡುವ ವೇಳೆ:08-00 ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಬಿಡುವ ವೇಳೆ:18-00 ಕುಂಬಳಗೋಡು, ಅಂಚೇಪಾಳ್ಯ, ಬಸವನಗರ, ನೈಸ್ ರಸ್ತೆ, ಕೋನಪ್ಪನ ಅಗ್ರಹಾರ, (NON STOP ON NICE ROAD) 1 2 2 NICE-5K ಕೆಂಗೇರಿ ಟಿಟಿಎಂಸಿ ಎಲೆಕ್ಟ್ರಾನಿಕ್ಸ್ ಸಿಟಿ ನೈಸ್ ರಸ್ತೆ, ಕೋನಪ್ಪನ ಅಗ್ರಹಾರ. 4 32 ಬಿಡುವ ವೇಳೆ ಕೆಂಗೇರಿ ಟಿಟಿಎಂಸಿ 0715, 0745, 0815, 0845, 0945, 1035, 1105, 1135, 1250, 1320, 1350, 1420, 1550, 1620, 1650, 1720 ಎಲೆಕ್ಟ್ರಾನಿಕ್ಸ್ ಸಿಟಿ 0830, 0900, 0930,…

Read More