Subscribe to Updates
Get the latest creative news from FooBar about art, design and business.
Author: kannadanewsnow57
ಬೆಳಗಾವಿ : ಉಡುಪಿಯಲ್ಲಿ 5 ವರ್ಷದ ಬಾಲಕಿಗೆ ಅಪರಿಚಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ತ್ವರಿತ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದ್ದಾರೆ. ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಘಟನೆಯ ಮಾಹಿತಿ ಬಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಘಟನೆಯ ವಿವರ ಪಡೆದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ತಕ್ಷಣ ಪತ್ತೆ ಹಚ್ಚಬೇಕು. ಜೊತೆಗೆ, ಬಾಲಕಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡಬೇಕು ಎಂದು ಸಚಿವರು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಸೂಚನೆ ನೀಡಿದರು.
ನವದೆಹಲಿ : ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಸುವರ್ಣಾವಕಾಶವೊಂದು ಹೊರಹೊಮ್ಮಿದೆ. FCI (ಆಹಾರ ಇಲಾಖೆ ನೇಮಕಾತಿ 2025) ನೇಮಕಾತಿ 2025 ರ ಅಡಿಯಲ್ಲಿ, ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಒಟ್ಟು 55,000 ಕ್ಕೂ ಹೆಚ್ಚು ನೇಮಕಾತಿಗಳು ನಡೆಯಲಿವೆ. ಖಾಲಿ ಹುದ್ದೆಗಳ ವಿವರ ವರ್ಗ ಪೋಸ್ಟ್‌ಗಳ ಸಂಖ್ಯೆ ವರ್ಗ II 6,221 ವರ್ಗ III 27,345 ಒಟ್ಟು ಹುದ್ದೆಗಳು 33,566 ಪ್ರಮುಖ ದಿನಾಂಕಗಳು ಅಧಿಸೂಚನೆ ಬಿಡುಗಡೆ: ಜನವರಿ 2025 ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಜನವರಿ-ಫೆಬ್ರವರಿ 2025 ತಾತ್ಕಾಲಿಕ ಪರೀಕ್ಷೆ ದಿನಾಂಕ: ಜನವರಿ 2025 ಹುದ್ದೆಯ ವಿವರಗಳು FCI ನೇಮಕಾತಿ ವಿವಿಧ ಹುದ್ದೆಗಳಿಗೆ ಅವಕಾಶಗಳನ್ನು ನೀಡುತ್ತಿದೆ: ವರ್ಗ II ಹುದ್ದೆಗಳು: ವ್ಯವಸ್ಥಾಪಕ (ಜನರಲ್/ಡಿಪೋ/ಚಳುವಳಿ) ವ್ಯವಸ್ಥಾಪಕ (ಖಾತೆಗಳು) ವ್ಯವಸ್ಥಾಪಕ (ತಾಂತ್ರಿಕ) ವ್ಯವಸ್ಥಾಪಕ (ಸಿವಿಲ್ ಎಂಜಿನಿಯರಿಂಗ್) ವರ್ಗ III ಪೋಸ್ಟ್‌ಗಳು: ಸಹಾಯಕ ದರ್ಜೆ-III (ಸಾಮಾನ್ಯ/ಲೆಕ್ಕಪತ್ರಗಳು/ತಾಂತ್ರಿಕ/ಡಿಪೋ) ಸ್ಟೆನೋಗ್ರಾಫರ್ ಹಿಂದಿ ಟೈಪಿಸ್ಟ್ ಕಾವಲುಗಾರ ಶೈಕ್ಷಣಿಕ ಅರ್ಹತೆ ವರ್ಗ II: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವರ್ಗ III:…
ಆಕಾಶದಲ್ಲಿ ಮತ್ತೊಂದು ಅಪರೂಪದ ದೃಶ್ಯವು ತೆರೆದುಕೊಳ್ಳಲಿದೆ. ರಾತ್ರಿ ಆಕಾಶದಲ್ಲಿ ಅನುಕ್ರಮವಾಗಿ ಗೋಚರಿಸುತ್ತಿರುವ ಮಂಗಳ, ಗುರು, ಯುರೇನಸ್, ನೆಪ್ಚೂನ್, ಶುಕ್ರ ಮತ್ತು ಶನಿ ಗ್ರಹಗಳ ಜೊತೆ ಬುಧ ಗ್ರಹವು ಸೇರಲಿದೆ. ಭೂಮಿಯಿಂದ ನೋಡಿದಾಗ, ಅವು ಒಂದೇ ಸರಳ ರೇಖೆಯಲ್ಲಿ ಇರುವಂತೆ ಕಾಣುತ್ತವೆ. ‘ಗ್ರಹ ಮೆರವಣಿಗೆ’ ಎಂದು ಕರೆಯಲ್ಪಡುವ ಈ ಆಕಾಶ ಅದ್ಭುತವು ಫೆಬ್ರವರಿ 28 ರಂದು ಅನಾವರಣಗೊಳ್ಳಲಿದೆ. ದೂರದರ್ಶಕದ ಅಗತ್ಯವಿಲ್ಲದೆಯೇ ನೀವು ಈ 7 ಗ್ರಹಗಳನ್ನು ಒಮ್ಮೆಗೇ ನೋಡಬಹುದು. ಅಮೆರಿಕ, ಮೆಕ್ಸಿಕೊ, ಕೆನಡಾ ಮತ್ತು ಭಾರತದ ಜನರು ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ತಿಂಗಳ 19 ರಂದು, ಶುಕ್ರ ಮತ್ತು ಶನಿ ಒಂದೇ ಸಾಲಿನಲ್ಲಿ ಬಂದರು. ನಂತರ ಜನವರಿ 21 ರಂದು ಶುಕ್ರ, ಗುರು, ಯುರೇನಸ್, ನೆಪ್ಚೂನ್ ಮತ್ತು ಮಂಗಳ ಗ್ರಹಗಳು ಆ ಸಾಲಿನಲ್ಲಿ ಸೇರಿಕೊಂಡವು. ಈ ಆರು ಗ್ರಹಗಳನ್ನು ಈ ತಿಂಗಳ 31 ರವರೆಗೆ ರಾತ್ರಿಯಲ್ಲಿ ಒಂದೇ ಸಾಲಿನಲ್ಲಿ ಕಾಣಬಹುದು. ಇದಲ್ಲದೆ, ಜನವರಿ 25 ರ ಇಂದುಭೂಮಿಯ ಹತ್ತಿರ…
ಮನೆಯಲ್ಲಿ ಎಲ್ಲರೂ ಸುಖ ಶಾಂತಿಯಿಂದ ಬಾಳಲಿ ಎಂದು ಹಾರೈಸುತ್ತೇವೆ. ಅಂತಹ ಶಾಂತಿಯಿಂದ ಬದುಕಬೇಕಾದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಬೇಕು. ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಬೇಕಾದರೆ, ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಬೇಕು. ಇದಲ್ಲದೇ ಮನೆಯ ಜೀವನ ಪರಿಸ್ಥಿತಿಯೂ ಬದಲಾಗಬೇಕು. ಇಷ್ಟೆಲ್ಲಾ ಆಗಬೇಕೆಂದು ಬಯಸುವವರು ಹೇಗೆ ಪೂಜಾ ಕೋಣೆಯಲ್ಲಿ ದೀಪ ಹಚ್ಚಿ ಪೂಜಿಸಬೇಕು ಎಂಬುದನ್ನು ಈ ಆಧ್ಯಾತ್ಮಿಕ ಬರಹದಲ್ಲಿ ನೋಡಲಿದ್ದೇವೆ . ಭೂಮಂಡಲದಲ್ಲಿ ಜಲ, ಮಣ್ಣು, ವಾಯು, ಭಾನು ಮತ್ತು ಅಗ್ನಿಯಿಂದ ನಡೆಸಲ್ಪಡುತ್ತದೆ. ಒಂದು ಮನೆ ನಿರ್ಮಿಸಲು ಪಂಚಭೂತಗಳ ಲೆಕ್ಕ ಚಾರ ಮಾಡಲಾಗುತ್ತದೆ. ಪುರಾತನ ವಾಸ್ತುಶಾಸ್ತ್ರದಲ್ಲಿ ಪಂಚಭೂತಗಳಿಗೆ ವಿಶೇಷ ಸ್ಥಾನವಿದೆ. ಇವುಗಳ ಸ್ಥಾನಗಳಿಗೆ ಅನುಗುಣವಾಗಿ ಮನೆ ಕಟ್ಟಡ ಮಾಡಲಾಗುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ,…
ಬೆಂಗಳೂರು: ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ರವರು ತಿಳಿಸಿದರು. ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ರೂ.11.00 ಕೋಟಿಗಳನ್ನು ನಿಗದಿಗೊಳಿಸಲಾಗಿತ್ತು.13-3-1997 ರಂದು ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿಹಿಡಿದಿರುತ್ತದೆ. 27 ವರ್ಷಗಳ ನಂತರ ಈ ವ್ಯಾಜ್ಯ ಮುಂಚೂಣಿಗೆ ಬಂದಿದ್ದು, 1996 ರಲ್ಲಿ 472 ಎಕರೆ 16 ಗುಂಟೆ ಜಾಗಕ್ಕೆ ರೂ.11.00 ಕೋಟಿಗಳನ್ನು (ಪ್ರತಿ ಎಕರೆಗೆ 2.30ಲಕ್ಷ ರೂ.…
ನಂಜನಗೂಡು : ನಂಜನಗೂಡಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಲೋ ಬಿಪಿಯಿಂದಾಗಿ ಕುಸಿದು ಬಿದ್ದು 13 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ತರಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತರಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಮಹಾಂತೇಶ (13) ಲೋ ಬಿಪಿಯಿಂದ ಮೃತಪಟ್ಟ ಬಾಲಕ. ಅನಾರೋಗ್ಯದ ಕಾರಣ ಗುರುವಾರ ರಾತ್ರಿ ಮಹಾಂತೇಶ್ ನನ್ನು ಸಮೀಪದ ಹುಲ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷೆ ನಡೆಸಿದಾಗ ಲೋ ಬಿಪಿ ಕಂಡು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ನವದೆಹಲಿ: 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಹ್ವೂರ್ ರಾಣಾ ನನ್ನು ನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತಕ್ಕೆ ರಾಜತಾಂತ್ರಿಕೆ ಗೆಲುವು ಸಿಕ್ಕಿದೆ. ಯುಎಸ್ ಸುಪ್ರೀಂಕೋರ್ಟ್ ಒಂಬತ್ತನೇ ಸರ್ಕ್ಯೂಟ್ ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ತಹವೂರ್ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿದೆ. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಪ್ರಮಾಣೀಕರಿಸಿದ್ದನ್ನು ಪ್ರಶ್ನಿಸಿ ತಹವೂರ್ ಹುಸೇನ್ ರಾಣಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಹಲವು ಜಿಲ್ಲೆಗಳಲ್ಲಿ ಜನರು ಊರನ್ನು ತೊರೆಯುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈ ಒಂದು ವಿಚಾರವಾಗಿ ಇಂದು ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹೌದು, ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ, ಬಾಕಿ ವಸೂಲಿ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಸಭೆ ನಡೆಸಲಾಗುವುದು ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಹಲವರು ಪ್ರಾಣ ಕಳೆದುಕೊಂಡಿದ್ದಾರೆ.ಅಲ್ಲದೆ ನಿನ್ನೆ ಹಾವೇರಿಯಲ್ಲಿ ಮಹಿಳೆಯರು ವಿನೂತನ ಪ್ರತಿಭಟನೆ ನಡೆಸಿ ಅಂಚೆ ಪೋಸ್ಟ್ ಮೂಲಕ ಮಾಂಗಲ್ಯ ಸರವನ್ನು ಪ್ಯಾಕ್ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಳುಹಿಸಿ ಮೈಕ್ರೋ…
ಮಾಜಿ ಗ್ರೀನ್ ಬೇ ಪ್ಯಾಕರ್ಸ್ ಸೂಪರ್ ಬೌಲ್ ಚಾಂಪಿಯನ್ ಕ್ಯಾಲ್ವಿನ್ ಜೋನ್ಸ್ ಬುಧವಾರ, ಜನವರಿ 22, 2025 ರಂದು ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅಲ್ಲದೆ, ಮೂರು ಋತುಗಳಲ್ಲಿ 3,000 ಗಜಗಳಿಗೂ ಹೆಚ್ಚು ದೂರ ಕ್ರಮಿಸಿದ ನೆಬ್ರಸ್ಕಾ ಕಾರ್ನ್‌ಹಸ್ಕರ್ಸ್ ದಂತಕಥೆ, ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಕಾರ್ಬನ್ ಮಾನಾಕ್ಸೈಡ್ ವಿಷ ಅನಿಲಕ್ಕೆ ಬಲಿಯಾದಂತೆ ತೋರುತ್ತದೆ. ಬುಧವಾರ ರಾತ್ರಿ 8:30 ರ ಸುಮಾರಿಗೆ ಉತ್ತರ ಒಮಾಹಾದ ಮನೆಯ ನೆಲಮಾಳಿಗೆಯಲ್ಲಿ ಜೋನ್ಸ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ ವಾಸನೆಯ ವರದಿಗೆ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದರು. ಸಾವಿನ ಕಾರಣದ ಬಗ್ಗೆ ಊಹಾಪೋಹಗಳು ಗಾಳಿಯಲ್ಲಿ ಹೆಚ್ಚಿದ್ದರೂ, ಬಾಕಿ ಇರುವ ಶವಪರೀಕ್ಷೆಯು ಇನ್ನೂ ಅಧಿಕೃತವಾಗಿ ಏನನ್ನೂ ದೃಢಪಡಿಸಿಲ್ಲ. ಕ್ಯಾಲ್ವಿನ್ ಜೋನ್ಸ್ ಅವರ ಸ್ನೇಹಿತ ಜೋ ಡುಸಾಟ್ಕೊ ಅವರು ಒಮಾಹಾ ವರ್ಲ್ಡ್-ಹೆರಾಲ್ಡ್‌ಗೆ ತಮ್ಮ ಮನೆಯಲ್ಲಿನ ಕುಲುಮೆ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವರು ನೆಲಮಾಳಿಗೆಯಲ್ಲಿ ಜನರೇಟರ್ ಅನ್ನು ಬಳಸುತ್ತಿದ್ದರು ಎಂದು ಹೇಳಿದರು. ಒಮಾಹಾ ಮೂಲದ ಈ ವ್ಯಕ್ತಿ ಆರಂಭದಲ್ಲಿ 1991-93…
ಕಲಬುರಗಿ: ಬೀದರ್ ನಲ್ಲಿ ರೈಲಿಗೆ ತಲೆಕೊಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಸಿಐಡಿ ನೋಟಿಸ್ ಜಾರಿ ಮಾಡಿದೆ. ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಜ.29 ಅಥವಾ ಜ.30 ರಂದು ಒಂದು ದಿನ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸಾವಿಗೂ ಮುನ್ನ ಸಚಿನ್ ಡೆತ್ ನೋಟ್ ಬರೆದಿಟ್ಟಿದ್ದರು. ಡೆತ್ ನೋಟ್ ನಲ್ಲಿ ಚಿತ್ತಾಪುರದ ಮಣಿಕಂಠ ರಾಠೋಡ್ ಹಾಗೂ ಶಾಸಕ ಬಸವರಾಜ್ ಮತ್ತಿಮೂಡ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು, ಈ ಬಗ್ಗೆ ವಿಚಾರಣೆ ನಡೆಸಲು ಸಿಐಡಿ ನೋಟಿಸ್ ನೀಡಿದೆ. ಬೀದರ್ ನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದು, ಸಿಡಿಐ ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.











