Author: kannadanewsnow57

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಗಳೂರಿನ ಜ್ಞಾನ ಭಾರತಿ ಠಾಣಾ ವ್ಯಾಪ್ತಿಯ ಉಳ್ಳಾಲ ಮುಖ್ಯರಸ್ತೆಯಲ್ಲಿರುವ ಸೆಂಟ್ರಿಂಗ್ ಗೋಡೌನ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮರದ ಸೆಂಟ್ರಿಂಗ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದ್ದು, ಗೋಡೌನ್ ಮಾಲೀಕರು ಸ್ಥಳದಿಂದ ತೆರಳಿದ ನಂತರ ಘಟನೆ ಸಂಭವಿಸಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಜೈಪುರ : ರಾಜಸ್ಥಾನದ ಜೋಧ್‌ಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಬೆಂಗಾವಲು ಪಡೆಯ ವಾಹನದ ಮೇಲೆ ದಾಳಿ ನಡೆದಿದೆ. ಮಾಹಿತಿಯ ಪ್ರಕಾರ, ಹೋಳಿ ದಿನದಂದು ಸಂಜೆ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಈ ಘಟನೆಯ ನಂತರ ಕೇಂದ್ರ ಸಚಿವರ ಭದ್ರತೆಯನ್ನು ಹೆಚ್ಚಿಸಲಾಗಿದೆ.ಅಪರಿಚಿತ ಆರೋಪಿಯು ಹಾಕಿ ಸ್ಟಿಕ್‌ನಿಂದ ಕಾರಿನ ಮುಂಭಾಗದ ಗಾಜನ್ನು ಒಡೆದಿದ್ದಾನೆ. ರಾವ್ಜಿ ಗೈರ್ ಅವರ ಭೇಟಿಯಲ್ಲಿ ಭಾಗವಹಿಸಲು ತೆರಳಿದ್ದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜೋಧ್‌ಪುರದ ಮಂಡೋರ್‌ಗೆ ತಲುಪಿದ್ದರು. ಪ್ರಕರಣದಲ್ಲಿ ಪೊಲೀಸರು ಎರಡರಿಂದ ಮೂವರನ್ನು ಬಂಧಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಜೇಂದ್ರ ಸಿಂಗ್ ಶೇಖಾವತ್ ಜೋಧ್‌ಪುರದಲ್ಲಿ ಜನರನ್ನು ಭೇಟಿಯಾಗುತ್ತಿದ್ದರು. ಈ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಮಂಡೋರ್ ರಾವ್ ಜಿ ಅವರ ಗೈರ್‌ನಲ್ಲಿ ಶೇಖಾವತ್ ಅವರ ಬೆಂಗಾವಲು ವಾಹನದ ಮೇಲೆ ದಾಳಿಯ ನಂತರ ಪೊಲೀಸರು ಜಾಗರೂಕರಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ.

Read More

ರಾಯಗಡ : ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ನಿಂದ 4 ಲಕ್ಷ ರೂಪಾಯಿ ಸಿಗದ ಕಾರಣ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ರಾಯಗಡದಲ್ಲಿ ನಡೆದಿದೆ. ತಂದೆಯ ಮರಣ ಮತ್ತು ತಾಯಿಯನ್ನು ತೊರೆದ ನಂತರ ಅಜ್ಜಿಯೊಂದಿಗೆ ವಾಸಿಸುತ್ತಿದ್ದ 10 ನೇ ತರಗತಿ ವಿದ್ಯಾರ್ಥಿನಿ ತನ್ನ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳು ಆನ್ಲೈನ್ ಗೇಮಿಂಗ್ಗೆ ವ್ಯಸನಿಯಾಗಿದ್ದಳು. ಆಗಾಗ್ಗೆ ಹಣವನ್ನು ಗೆಲ್ಲುತ್ತಿದ್ದಳು ಮತ್ತು ಕಳೆದುಕೊಳ್ಳುತ್ತಿದ್ದಳು ಎಂದು ಕುಟುಂಬ ಸದಸ್ಯರು ಬಹಿರಂಗಪಡಿಸಿದರು. ಇತ್ತೀಚೆಗೆ, ಅವರು 4 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ ಎಂದು ಹೇಳಿಕೊಳ್ಳುವುದನ್ನು ಮತ್ತು ಪ್ಲಾಟ್ಫಾರ್ಮ್ ಅವಳಿಗೆ ಪಾವತಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುವುದನ್ನು ಅವರು ಕೇಳಿದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆಗಳು: ಟೆಲಿ ಮನಸ್ (ಆರೋಗ್ಯ ಸಚಿವಾಲಯ) – 14416 ಅಥವಾ 1800 891 4416; ನಿಮ್ಹಾನ್ಸ್ – 080-46110007; ಪೀಕ್ ಮೈಂಡ್…

Read More

ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದ್ದರೆ ಮಾ.31 ರೊಳಗೆ ತೆರಿಗೆ ಪಾವತಿಸಿ ಇಲ್ಲದಿದ್ದರೆ ಏಪ್ರಿಲ್ 1 ರಿಂದ ಶೇ.100 ರಷ್ಟು ದಂಡ ಬೀಳುವುದು ಗ್ಯಾರೆಂಟಿ. ಹೌದು, ನೀವೇನಾದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದರೆ ಮಾರ್ಚ್ 31 ರ ೊಳಗೆ 100 ರೂ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿ. ಏ.1 ರಿಂದ ಶೇ 100 ದಂಡ ಪಾವತಿಸಬೇಕಾಗುತ್ತದೆ. ಮಾ.31 ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ರೆ ಏ.1 ರಿಂದ ಪಾವತಿಸುವಾಗ ಶೇ.100 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಆಸ್ತಿ ತೆರಿಗೆ ಸುಸ್ತಿದಾರರುಗಳಿಗೆ ದಂಡವನ್ನು ಉಳಿಸಲು ಕಡೆಯ ಅವಕಾಶ ಮಾ.31 : 2025 ಇಲ್ಲಿ ಪಾವತಿಸಿ : https://bbmptax.karnataka.gov.in ನೀವು ಎಸ್ಎಎಸ್ ಅರ್ಜಿ ಸಂಖ್ಯೆಯನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ದಿನಾಂಕ: 01.04.2025ರ ನಂತರ ಬಾಕಿ ಆಸ್ತಿ ತೆರಿಗೆಗೆ ಶೇಕಡಾ 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ .ನಿಮ್ಮ ಆಸ್ತಿ ತೆರಿಗೆ ಹೊಣೆಗಾರಿಕೆಯು…

Read More

ಧಾರವಾಡ : ಕನ್ನಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ (92) ಅವರು ನಿಧನರಾಗಿದ್ದಾರೆ. ಧಾರವಾಡದ ಜಯನಗರ ನಿವಾಸಿ ಹಾಗೂ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾದ್ಯಾಪಕ ಹಾಗೂ ಡಾ. ಪಂಚಾಕ್ಷರಿ ಹಿರೇಮಠ (92) ಶುಕ್ರವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933ರ ಜ. 6ರಂದು ಜನಿಸಿದ ಪಂಚಾಕ್ಷರಿ ಹಿರೇಮಠ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಪ್ಪಟ ದೇಶಪ್ರೇಮಿ, ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ಬಹುಭಾಷಾ ವಿಶಾರದರು. ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ವಾಗ್ಮಿಯಾಗಿದ್ದರು. ಹಿರೇಮಠರ ಅಂತ್ಯಕ್ರಿಯೆ ಮಾರ್ಚ್ 15 ರ ಇಂದು ಸಂಜೆ 4 ಗಂಟೆಗೆ ಕೊಪ್ಪಳ ಜಿಲ್ಲೆ ಬಿಸರಳ್ಳಿ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹಿರೇಮಠರು 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು,…

Read More

ವಿಜ್ಞಾನವು ಬಹಳಷ್ಟು ಪ್ರಗತಿ ಸಾಧಿಸಿದೆ ಆದರೆ ಇಲ್ಲಿಯವರೆಗೆ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ಇಂದಿಗೂ ಕ್ಯಾನ್ಸರ್ ಬಹಳ ಮಾರಕ ಕಾಯಿಲೆಯಾಗಿದೆ. ಕ್ಯಾನ್ಸರ್ ಬರಲು ಹಲವು ಅಂಶಗಳು ಕಾರಣವಾಗಿವೆ ಆದರೆ ನಮ್ಮ ಮನೆಗಳಲ್ಲಿಯೂ ಕ್ಯಾನ್ಸರ್ ಹರಡುವ ಅಪಾಯವನ್ನು ಹೆಚ್ಚಿಸುವ ಹಲವು ವಸ್ತುಗಳು ಇವೆ. ಅಂತಹ ವಿಷಯಗಳು ನಮ್ಮ ದೈನಂದಿನ ಅಗತ್ಯಗಳಾಗಿವೆ. ನಮ್ಮ ಮನೆಗಳು ಅಂತಹ ವಸ್ತುಗಳಿಂದ ತುಂಬಿವೆ. ಆದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಪ್ರಜ್ಞೆ ಹೊಂದಿದ್ದರೆ ಈ ವಸ್ತುಗಳನ್ನು ನಿಮ್ಮ ಮನೆಯಿಂದ ತೆಗೆದುಹಾಕಿ. ಇಲ್ಲದಿದ್ದರೆ ಈ ವಸ್ತುಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ಕ್ಯಾನ್ಸರ್ ಉಂಟುಮಾಡುವ ಮನೆಯ ವಸ್ತುಗಳು 1. ನಾನ್-ಸ್ಟಿಕ್ ಪಾತ್ರೆಗಳು ಆರಂಭದಲ್ಲಿ ನಾನ್-ಸ್ಟಿಕ್ ಪಾತ್ರೆಗಳನ್ನು ಪರಿಚಯಿಸಿದಾಗ ಅವು ಯಾವುದೇ ರೋಗವನ್ನು ಹರಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಸಂಶೋಧನೆಯ ಪ್ರಕಾರ ನಾನ್-ಸ್ಟಿಕ್ ಪಾತ್ರೆಗಳ ಮೇಲಿನ ಲೇಪನವು ಪರ್ಫ್ಲೋರೋಕ್ಟಾನೊಯಿಕ್ ಆಮ್ಲ ಮತ್ತು ಇತರ ವಿಷಕಾರಿ ವಸ್ತುಗಳನ್ನು ಹೊಂದಿದ್ದು ಅದು ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ, ನಾನ್-ಸ್ಟಿಕ್ ಪಾತ್ರೆಗಳ ಬದಲಿಗೆ ಉಕ್ಕಿನ ಪಾತ್ರೆಗಳನ್ನು ಬಳಸಿ. 2. ಪ್ಲಾಸ್ಟಿಕ್…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹೇಯ ಕೃತ್ಯವೊಂದು ನಡೆದಿದ್ದು, ಕಾಮುಕನೊಬ್ಬ ನಾಯಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ. ಹೌದು, ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಸಮೀಪ ನಡೆದಿದೆ. ಕಾಮುಕನೊಬ್ಬ ನಾಯಿಯ ಮರ್ಮಾಂಗ ಕೊಯ್ದು ಸಂಭೋಗ ನಡೆಸಿದ ಆರೋಪ ಕೇಳಿ ಬಂದಿದೆ. ಸಾರ್ವಜನಿಕರು ಇದನ್ನು ಗಮನಿಸಿ ವ್ಯಕ್ತಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರದ ಸುತ್ತಮುತ್ತ ವಿದ್ಯಾ ಎಂಬುವರು ನಾಯಿಗಳಿಗೆ ಪ್ರತಿದಿನ ಊಟ ಹಾಕುತ್ತಾರೆ. ಮಾರ್ಚ್ 13ರಂದು ರಾತ್ರಿ ನಾಯಿಗೆ ಊಟ ಹಾಕಲು ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ನಾಯಿಯೊಂದಿಗೆ ಸಂಭೋಗ ಮಾಡುತ್ತಿರುವುದನ್ನು ಗಮನಿಸಿ ಕೂಡಲೇ ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅದೇ ದಿನ ಶಾಲಿನಿ ಮೈದಾನದ ಬಳಿ ವಿದ್ಯಾ ಹೋಗಿದ್ದಾಗ ಅದೇ ವ್ಯಕ್ತಿ ಕಂಡಿದ್ದಾನೆ. ಆತನನ್ನು ಸ್ಥಳಿಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Read More

ವಿಮಾನದಲ್ಲಿ ಪ್ರಯಾಣಿಸುವಾಗ ಯಾವ ವಸ್ತುಗಳನ್ನು ಸಾಗಿಸಲು ನಿಷೇಧಿಸಲಾಗಿದೆ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ. ಈ ಸುದ್ದಿ ವಿಶೇಷವಾಗಿ ದುಬೈಗೆ ಹೋಗುವ ಪ್ರಯಾಣಿಕರಿಗೆ ಬಹಳ ಮುಖ್ಯವಾಗಿದೆ. ವಿಮಾನ ನಿಲ್ದಾಣದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅದನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ದುಬೈ ವಿಮಾನಗಳಲ್ಲಿ ಲಗೇಜ್ ಸಾಗಿಸುವ ನಿಯಮಗಳಲ್ಲಿ ಬದಲಾವಣೆ ಸಾಮಾನ್ಯವಾಗಿ ಜನರು ಅರಿವಿಲ್ಲದೆಯೇ ವಿಮಾನದಲ್ಲಿ ಸಾಗಿಸಲು ಕಾನೂನುಬದ್ಧ ಅಪರಾಧವೆಂದು ಪರಿಗಣಿಸಲಾದ ವಸ್ತುಗಳನ್ನು ಸಾಗಿಸುತ್ತಾರೆ. ಈಗ ದುಬೈಗೆ ಹೋಗುವ ಪ್ರಯಾಣಿಕರು ವಿಶೇಷವಾಗಿ ಜಾಗರೂಕರಾಗಿರಬೇಕು. ಅವರು ಯಾವುದೇ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಸಾಮಾನುಗಳನ್ನು ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಈ ವಸ್ತುಗಳನ್ನು ಚೀಲಗಳಲ್ಲಿ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ಈ ಕೆಳಗಿನ ವಸ್ತುಗಳನ್ನು ವಿಮಾನದಲ್ಲಿ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ: ಮಾದಕ ವಸ್ತುಗಳು: ಕೊಕೇನ್, ಹೆರಾಯಿನ್, ಅಫೀಮು, ಗಸಗಸೆ ಮತ್ತು ಯಾವುದೇ ಮಾದಕ ದ್ರವ್ಯಗಳು. ವೀಳ್ಯದ ಎಲೆಗಳು ಮತ್ತು ಕೆಲವು ಗಿಡಮೂಲಿಕೆಗಳು. ದಂತ, ಖಡ್ಗಮೃಗದ ಕೊಂಬುಗಳು, ಜೂಜಾಟದ ಉಪಕರಣಗಳು…

Read More

ಬೆಂಗಳೂರು : ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದುಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು. ಹಾಸನ, ಕೊಡಗು ಜಿಲ್ಲೆಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Read More

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ, ಮಾನಸಿಕ ಶಾಂತ ಚಿತ್ತತೆಯ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸೋದಕ್ಕೆ ನುರಿತ ಮನೋ ವೈದ್ಯರಿಂದ ಇಂದು ಯೂಟ್ಯೂಬ್ ನಲ್ಲಿ ವಿಶೇಷ ಕಾರ್ಯಕ್ರಮವ ಪ್ರಸಾರವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕರಾದಂತ ಹೆಚ್.ಎನ್ ಗೋಪಾಲಕೃಷ್ಣ ಮಾಹಿತಿ ನೀಡಿದ್ದು, ಎಸ್.ಎಸ್ಎಲ್.ಸಿ ಪರೀಕ್ಷೆಯನ್ನು ದಿನಾಂಕ:21-03-2025 ರಿಂದ 04-04-2025ರವರೆಗೆ ನಡೆಸಲಾಗುತ್ತಿದೆ. ಸದರಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕ ಮತ್ತು ಭಯವಿಲ್ಲದೆ ಆತ್ಮ ಕ್ರೌರ್ಯದಿಂದ ಎದುರಿಸಬೇಕು ಎಂಬುದು ಮಂಡಲಿಯ ಆಶಯವಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪೂರ್ವ, ಪರೀಕ್ಷಾ ಸಂದರ್ಭ ಮತ್ತು ಪರೀಕ್ಷಾ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಬಹುದಾದ ಮಾನಸಿಕ ಸಂದಿಗ್ಧತೆಗಳನ್ನು ನಿವಾರಿಸಿ, ಆತ್ಮ ಸ್ಟೈರ್ಯವನ್ನು ಹೆಚ್ಚಿಸಿ ಪರೀಕ್ಷೆಯನ್ನು ಅತ್ಯಂತ ಲವಲವಿಕೆಯಿಂದ ಎದುರಿಸಲು ಅಗತ್ಯವಿರುವ ಮಾರ್ಗದರ್ಶನವನ್ನು National Institute of Mental Health and Neuro Sciences (NIMHANS), ಬೆಂಗಳೂರು ಸಂಸ್ಥೆಯ…

Read More