Author: kannadanewsnow57

ಬೆಂಗಳೂರು : ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ, ಇಂದು ಸಾರ್ವತ್ರಿಕ ರಜೆ ಇರುವುದರಿಂದ, ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ.  ಹೆಚ್ಚುವರಿಯಾಗಿ, ಮೆಜೆಸ್ಟಿಕ್‌ರೈಲಿನ ಸಂಚಾರವನ್ನು ಕಡಿಮೆ ಮಾಡಿ ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ. ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳು ಪ್ರಾರಂಭವಾಗುತ್ತವೆ. ಅಲ್ಲದೆ, ಇಂದು ಸಂಜೆ ಐಟಿಪಿಎಲ್ ನಿಂದ ರೈಲುಗಳು ಎಂದಿನಂತೆ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

Read More

ಬೆಂಗಳೂರು : ಸಾಕು ನಾಯಿ ಅಥವಾ ಅಪರಿಚಿತ ಬೀದಿ ನಾಯಿ ಕಚ್ಚಿದ್ದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ರೇಬೀಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ರೇಬೀಸ್ ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸಿ. ನಾಯಿಗಳು, ಬೆಕ್ಕುಗಳು, ಮೇಕೆಗಳು, ಹಸುಗಳು ಮತ್ತು ಸಾಕುಪ್ರಾಣಿಗಳು ಕಚ್ಚುವುದರಿಂದ ಮನುಷ್ಯರಿಗೆ ರೇಬೀಸ್ ಸೋಂಕು ತಗುಲುತ್ತದೆ. ರೇಬೀಸ್ ನಾಯಿ ಕಡಿತದಿಂದ ಮಾತ್ರವಲ್ಲ, ಅವುಗಳ ಲಾಲಾರಸವು ನಮ್ಮ ದೇಹದ ಮೇಲಿನ ಗಾಯಗಳ ಸಂಪರ್ಕದಿಂದಲೂ ಹರಡುತ್ತದೆ. ಸಾಮಾನ್ಯವಾಗಿ, ನಾಯಿ ಕಚ್ಚಿದರೆ ಅಥವಾ ಗೀಚಿದರೆ, ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಸೋಪು ಮತ್ತು ನೀರಿನಿಂದ ತೊಳೆಯಬೇಕು. ನಾಲ್ಕು ಡೋಸ್‌ಗಳ ARV ಲಸಿಕೆಗಳನ್ನು ಪಡೆಯುವ ಮೂಲಕ ರೇಬೀಸ್ ಅನ್ನು ತಡೆಗಟ್ಟಬಹುದು. ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೇಬೀಸ್ ಲಸಿಕೆಯನ್ನು ನೀಡಲಾಗುತ್ತದೆ. ನಾಯಿ ಕಚ್ಚಿದ ನಂತರ ಮೊದಲ, ಮೂರನೇ, ಏಳನೇ ಮತ್ತು 28 ನೇ ದಿನದಂದು ಲಸಿಕೆಗಳನ್ನು ಹಾಕಬೇಕು. ಇದಲ್ಲದೆ, ಗಾಯವು ಆಳವಾಗಿದ್ದರೆ, ಹೆಚ್ಚುವರಿ ಇಮ್ಯುನೊಗ್ಲಾಬ್ಯುಲಿನ್ ಲಸಿಕೆಯನ್ನು ಆ ಪ್ರದೇಶಕ್ಕೆ…

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕಿಯ ಅಂತ್ಯಕ್ರಿಯೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿರುವ ಬಾಡಿಗೆ ಮನೆಗೆ ಬಾಲಕಿಯ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಬಳಿಕ ಬಾಲಕಿಯನ್ನು ಹುಬ್ಬಳ್ಳಿ ನಗರದ ದೇವಾಂಗಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಹಿನ್ನೆಲೆ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದ. ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಬಾಲಕಿ ಶವವಿಟ್ಟು ಪರಾರಿಯಾಗಿದ್ದ. ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು 24ಗಂಟೆಯೊಳಗೆ ಬಂಧಿಸಿದ್ದರು. ಹುಬ್ಬಳ್ಳಿಯಲ್ಲಿ ಬಿಹಾರದ ಯುವಕನಿಂದ ಐದು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದಂತ ಆರೋಪಿಯನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಂತ ಸಂದರ್ಭದಲ್ಲಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದರು ಎನ್ನಲಾಗಿತ್ತು. ಆದರೇ ಆ ಬಳಿಕ ಪೊಲೀಸರು ನಡೆಸಿದಂತ…

Read More

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಈ ದಿನಗಳಲ್ಲಿ, ಒತ್ತಡದ ಜೀವನ ಮತ್ತು ಬಿಡುವಿಲ್ಲದ ಕೆಲಸದಿಂದಾಗಿ, ಪೋಷಕರಿಗೆ ತಮ್ಮ ಮಕ್ಕಳನ್ನ ಪ್ರೋತ್ಸಾಹಿಸಲು ಮತ್ತು ಗಂಟೆಗಳ ಕಾಲ ಆಹಾರವನ್ನ ನೀಡಲು ಸಾಕಷ್ಟು ಸಮಯವಿಲ್ಲ. ಹೀಗಾಗಿ ಪೋಷಕರು ಸಮಯವನ್ನ ಉಳಿಸಲು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಸಹಾಯವನ್ನ ತೆಗೆದುಕೊಳ್ಳುತ್ತಾರೆ. ಮಕ್ಕಳು ಮೊಬೈಲ್ ಫೋನ್’ಗಳನ್ನ ನೋಡುತ್ತಾರೆ ಮತ್ತು ಬೇಗನೆ ತಿನ್ನುತ್ತಾರೆ. ಇದು ಅವರನ್ನ ರಂಜಿಸುತ್ತದೆ. ಮಕ್ಕಳು ಫೋನ್ ಅಥವಾ ಟಿವಿ ನೋಡುತ್ತಿದ್ದಾರೆ, ಕನಿಷ್ಠ ಆಹಾರವನ್ನ ಪಕ್ಕಕ್ಕೆ ಇಡದೆ ತಿನ್ನಲು ಸಾಧ್ಯವಾಗುತ್ತದೆ ಎಂಬ ಅಂಶವು ಪೋಷಕರಿಗೆ ಭರವಸೆ ನೀಡುತ್ತದೆ. ಆದ್ರೆ, ನೀವು ಬಳಸುವ ಈ ಶಾರ್ಟ್ ಕಟ್ ನಿಮ್ಮ ಮಗುವಿನ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಟಿವಿ ಅಥವಾ ಮೊಬೈಲ್ ನೋಡುವಾಗ ಮಕ್ಕಳಿಗೆ ಆಹಾರ ನೀಡುವುದು ಎಷ್ಟು ಅಪಾಯಕಾರಿ.? ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಸಂಶೋಧನೆಯನ್ನ ಎನ್ವಿರಾನ್ಮೆಂಟಲ್ ಜರ್ನಲ್ ಆಫ್ ಹೆಲ್ತ್’ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಯನ್ನ ವಿಶ್ವದ ಅನೇಕ ದೊಡ್ಡ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ನಡೆಸಲಾಯಿತು. ಟಿವಿ ನೋಡುವ ಅಥವಾ ಮೊಬೈಲ್…

Read More

ಗೃಹ ಸಾಲ ಪಡೆಯುವವರಿಗೆ ಇಲ್ಲಿದೆ ಸಿಹಿ ಸುದ್ದಿ. ನೀವು ಹೊಸ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಅಥವಾ ಈಗಾಗಲೇ ಸಾಲದ ಕಂತು ಪಾವತಿಸುತ್ತಿದ್ದರೆ, ನಿಮ್ಮ ಇಎಂಐ ಶೀಘ್ರದಲ್ಲೇ ಕಡಿಮೆಯಾಗಬಹುದು. ವಾಸ್ತವವಾಗಿ, ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರದಲ್ಲಿ 0.25 ಬೇಸಿಸ್ ಪಾಯಿಂಟ್‌ಗಳ ಕಡಿತವನ್ನು ಘೋಷಿಸಿತ್ತು. ಆರ್‌ಬಿಐನ ಈ ನಿರ್ಧಾರದ ಕೆಲವೇ ಗಂಟೆಗಳಲ್ಲಿ, ದೇಶದ ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರಗಳಲ್ಲಿ 0.25% ವರೆಗೆ ಕಡಿತವನ್ನು ಘೋಷಿಸುವ ಮೂಲಕ ತಮ್ಮ ಗ್ರಾಹಕರಿಗೆ ಪರಿಹಾರ ನೀಡಿವೆ. ಯಾವ ಬ್ಯಾಂಕುಗಳು ಬಡ್ಡಿದರಗಳನ್ನು ಕಡಿಮೆ ಮಾಡಿವೆ? ಪ್ರಸ್ತುತ, ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ಬಡ್ಡಿದರಗಳಲ್ಲಿ ಕಡಿತವನ್ನು ಜಾರಿಗೆ ತಂದಿವೆ. ಈ ಬ್ಯಾಂಕುಗಳ ಪ್ರಕಾರ, ಹೊಸ ಮತ್ತು ಹಳೆಯ ಗ್ರಾಹಕರು ಇಬ್ಬರೂ ಇದರಿಂದ ಪ್ರಯೋಜನ ಪಡೆಯುತ್ತಾರೆ. ರೆಪೊ ದರ ಸಂಬಂಧಿತ ಸಾಲಗಳನ್ನು ಹೊಂದಿರುವ ಗ್ರಾಹಕರಿಗೆ, ಅವರ ಇಎಂಐ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. EMI ನಲ್ಲಿ ಹೇಗೆ ವ್ಯತ್ಯಾಸವಾಗುತ್ತದೆ? ರೆಪೊ ದರದಲ್ಲಿ 0.25% ಕಡಿತವು…

Read More

ರೈತರು ಅಥವಾ ಫಲಾನುಭವಿಗಳು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20 ನೇ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ, ರೈತರು ಪ್ರತಿ ವರ್ಷ 6000 ರೂ.ಗಳ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ. ಈ ಹಣವನ್ನು ಎಲ್ಲಾ ರೈತರಿಗೆ ಮೂರು ವಿಭಿನ್ನ ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ರೈತರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ರೈತ ಸಹೋದರ ಸಹೋದರಿಯರು ಯಾವುದೇ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಬೇಕಾದರೆ, ಅವರಿಗೆ ಸ್ವಲ್ಪ ಸಹಾಯ ಸಿಗುತ್ತದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ, ನಿಮ್ಮ ಹಣ ಸಿಲುಕಿಕೊಳ್ಳಬಹುದು. ಕಂತು ಸಿಲುಕಿಕೊಳ್ಳಬಹುದು? ಒಬ್ಬ ರೈತ ಯೋಜನೆಗೆ ಸಂಬಂಧಿಸಿದ ಇ-ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ, ಕಂತು ಬಾಕಿ ಉಳಿಯಬಹುದು. ಇದರೊಂದಿಗೆ, ನೋಂದಾಯಿಸಲಾದ ಬ್ಯಾಂಕ್ ಖಾತೆಯು ಸಕ್ರಿಯವಾಗಿರಬೇಕು. ಈ ಯೋಜನೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಸಹ ಅಗತ್ಯವಾಗಿದೆ. ಭೂಮಿಯ ತಪ್ಪಾದ ವಿವರಗಳನ್ನು ನೀಡುವುದರಿಂದ ಕಂತು ಪಾವತಿಯಲ್ಲಿ ಅಡಚಣೆ ಉಂಟಾಗಬಹುದು. ನಿಮ್ಮ ಮೊಬೈಲ್ ಸಂಖ್ಯೆಯು ಯೋಜನೆಯಡಿಯಲ್ಲಿ…

Read More

ಕಲಬುರಗಿಯ ಪ್ರತಿಭಾವಂತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಕಲಬುರಗಿಯ ಕೆಸಿಟಿ ಕಾಲೇಜ್ ಕ್ಯಾಂಪಸ್‌ನಲ್ಲಿ ಇದೇ ಏಪ್ರಿಲ್ 16ನೇ ತಾರೀಖಿನಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ರಾಜ್ಯದ ಪ್ರತಿಷ್ಠಿತ ಕಂಪೆನಿಗಳು ಭಾಗಿಯಾಗುವ ಈ ಉದ್ಯೋಗ ಮೇಳದ ಪ್ರಯೋಜನವನ್ನು ಉದ್ಯೋಗಾಕಾಂಕ್ಷಿಗಳು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕು. ಯಾವುದೇ ವಿದ್ಯಾರ್ಹತೆ ಇದ್ದರೂ ಸಹ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು. ಸ್ಕಿಲ್ ಕನೆಕ್ಟ್ ಪೋರ್ಟಲ್ (skillconnect. http://Kaushalkar.com) ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಆಯ್ಕೆಯ ಕಂಪೆನಿಗಳ ಸಂದರ್ಶನದಲ್ಲಿ ಭಾಗಿಯಾಗಬಹುದು. ಕಲಬುರಗಿಯ ಯುವ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಉತ್ತಮ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.

Read More

ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ 2024-25ನೇ ಸಾಲಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಪಡೆಯಲು ತಮ್ಮ ನಾಮ ನಿರ್ದೇಶನ ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. “ಸರ್ವೋತ್ತಮ ಸೇವಾ ಪ್ರಶಸ್ತಿ”ಯ ಎರಡು ಹಂತದ ಪ್ರಶಸ್ತಿಗಳಿಗೂ ಅರ್ಜಿ ಸಲ್ಲಿಸಬಯಸುವವರು, ಪ್ರತಿ ಹಂತಕ್ಕೂ ಪ್ರತ್ಯೇಕವಾಗಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಬೇಕು. ನಾಮ ನಿರ್ದೇಶನವನ್ನು ಸಲ್ಲಿಸಬಯಸುವವರು ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in/ ನಲ್ಲಿ ಏ.28 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆದೇಶದ ಪ್ರತಿಗಳನ್ನು ಜಾಲತಾಣ https://dparar.karnataka.gov.in/ ರ ಸರ್ಕಾರದ ಆದೇಶಗಳು, ತರಬೇತಿ ಹಾಗೂ ಇತರೆ ವಿವರಗಳನ್ನು ಇಲ್ಲಿ ಅವಲೋಕಿಸಬಹುದಾಗಿದೆ. ಪ್ರಶಸ್ತಿ ವಿವರ: ಜಿಲ್ಲಾ ಮಟ್ಟದ (31 ಜಿಲ್ಲೆ*10 ಪ್ರಶಸ್ತಿ) ಸೇರಿದಂತೆ 310 ಪ್ರಶಸ್ತಿಗಳು, ರಾಜ್ಯ ಮಟ್ಟದ 30 ಪ್ರಶಸ್ತಿಗಳನ್ನು ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-22230060ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಹೂರಣವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರೂಪಿಸಲಾದ ವಿನೂತನ ಬಾನುಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್‌. ಅಂಬೇಡ್ಕರ್‌ ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಮಾನತೆಯ ಬೆಳಕು, ಶೋಷಿತರ ಧ್ವನಿ, ಸಂವಿಧಾನದ ರೂವಾರಿ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಚಿಂತನಾ ಲಹರಿ, ವಿಚಾರಧಾರೆ, ಸಾಮಾಜಿಕ ಹೋರಾಟಗಳ ಹೂರಣವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರೂಪಿಸಲಾದ ವಿನೂತನ ಬಾನುಲಿ ಕಾರ್ಯಕ್ರಮವೇ “ಮನೆ ಮನೆಯ ಹಣತೆ” 26 ಕಂತುಗಳಲ್ಲಿ ಪ್ರತಿ ಶನಿವಾರ 7.15 ರಿಂದ 7.30ರವರೆಗೆ ಪ್ರಸಾರವಾಗಲಿದೆ.

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಬಾಲಕಿಯ ಮೃತದೇಹವನ್ನು ಮನೆಗೆ ತಲುಪಿಸಲಾಗಿದೆ. ಹುಬ್ಬಳ್ಳಿಯಲ್ಲಿರುವ ಬಾಡಿಗೆ ಮನೆಗೆ ಬಾಲಕಿಯ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಬಾಲಕಿಯ ಶವವನ್ನು ನೋಡಿ ಸಂಬಂಧಿಗಳು ಕಣ್ಣೀರು ಹಾಕುತ್ತಿದ್ದಾರೆ. ಘಟನೆ ಹಿನ್ನೆಲೆ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದ. ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಬಾಲಕಿ ಶವವಿಟ್ಟು ಪರಾರಿಯಾಗಿದ್ದ. ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು 24ಗಂಟೆಯೊಳಗೆ ಬಂಧಿಸಿದ್ದರು. ಹುಬ್ಬಳ್ಳಿಯಲ್ಲಿ ಬಿಹಾರದ ಯುವಕನಿಂದ ಐದು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದಂತ ಆರೋಪಿಯನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಂತ ಸಂದರ್ಭದಲ್ಲಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದರು ಎನ್ನಲಾಗಿತ್ತು. ಆದರೇ ಆ ಬಳಿಕ ಪೊಲೀಸರು ನಡೆಸಿದಂತ ಎನ್ ಕೌಂಟರ್…

Read More