Author: kannadanewsnow57

ಧಾರವಾಡ : ಭಾರತದ ಸಂವಿಧಾನ ರಚಿಸಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಸಂವಿಧಾನ ಪುಸ್ತಕ ರೀತಿಯಲ್ಲಿ ನಿರ್ಮಿಸಿ, ನಗರದ ಪ್ರಸಿದ್ದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಸಚಿವ ಸಂತೋಷ ಲಾಡ್ ಅವರಿಂದ ಲೋಕಾರ್ಪಣೆ ಮಾಡಲಾಯಿತು. ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಲೋಹದಲ್ಲಿ ರಚಿತ ಪೀಠಿಕೆಯನ್ನು ಲೋಕಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಲೋಹದಿಂದ ರಚಿತ ಸಂವಿಧಾನ ಪೀಠಿಕೆಯ ವಿಶೇಷತೆಗಳನ್ನು ಹಾಗೂ ಅನುಕೂಲತೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರಾದ ದುರ್ಗಮ್ಮ ಬಿಜವಾಡ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ‌ ಸಿ.ಡಿ.,…

Read More

ಚಿತ್ರದುರ್ಗ :ಬರುವ ಏಪ್ರಿಲ್ 21 ಸರ್ಕಾರಿ ನೌಕರರ ದಿನಾಚರಣೆಯಂದು ರಾಜ್ಯ ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಿದೆ. ಈಗಾಗಲೇ ಮುಖ್ಯಮಂತ್ರಿಗಳು ಯೋಜನೆ ಜಾರಿ ಆದೇಶ ಹೊರಡಿಸಿದ್ದಾರೆ. ಆರೋಗ್ಯ ಸಂಜೀವಿನಿ ಯೋಜನೆಯಿಂದ ಸರ್ಕಾರಿ ನೌಕರರರು ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಉಚಿತ ಆರೋಗ್ಯ ಸೇವೆ ದೊರಕಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ. ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ 7ನೇ ವೇತನ ಆಯೋಗ ಶಿಫಾರಸ್ಸನ್ನು ಜಾರಿ ಮಾಡಿದೆ. ಇದರೊಂದಿಗೆ ಆರೋಗ್ಯ ಸಂಜೀವಿನಿ ಯೋಜನೆಗೂ ಅನುಮತಿ ನೀಡಿದೆ. ಸರ್ಕಾರಿ ನೌಕರರಿಗೆ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಸ್ಯಾಲರಿ ಪ್ಯಾಕಜ್ ಅಕೌಂಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಸರ್ಕಾರಿ ನೌಕರರು ಕೆಲಸದ ವೇಳೆ ಅಪಘಾತದಲ್ಲಿ ಮೃತಪಟ್ಟರೆ ರೂ.1 ಕೋಟಿ ಪರಿಹಾರ ನೀಡಲಾಗುವುದು. ಅಂಗವೈಕಲ್ಯತೆಗೆ ಒಳಗಾದರೆ ರೂ.35 ಲಕ್ಷದ ವರೆಗೆ ಪರಿಹಾರ ದೊರಕಲಿದೆ. ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ, ಗೃಹ, ಹಾಗೂ…

Read More

ದಾವಣಗೆರೆ :ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿ ಜೋಳವನ್ನು ರೈತರಿಂದ ಖರೀದಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಬಿತ್ತನೆ ಪ್ರಮಾಣ ಆಧರಿಸಿ ಭತ್ತ ಕ್ವಿಂಟಾಲ್‍ಗೆ ರೂ.2300 ಹಾಗೂ ಭತ್ತ ಗ್ರೇಡ್‍ಎ ರೂ.2320 ಗಳಂತೆ ಮತ್ತು ಹೈಬ್ರಿಡ್ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ ರೂ.3371/- ಹಾಗೂ ಮಾಲ್ದಂಡಿ ಜೋಳವನ್ನು ಕ್ವಿಂಟಾಲ್‍ಗೆ ರೂ. 3421/- ನಂತೆ ಯಾವುದೇ ವ್ಯತ್ಯಾಸಗಳಿಗೆ ಅವಕಾಶ ನೀಡದೆ ನೊಂದಣಿ ಮತ್ತು ಖರೀದಿಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ಪ್ರಸಕ್ತ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ಮಾರ್ಚ್ 15 ರಿಂದ ನೊಂದಣಿ ಪ್ರಕ್ರಿಯ ಪ್ರಾರಂಭಿಸಲಾಗಿದ್ದು, ಮೇ 31 ರವರೆಗೆ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ನಡೆಯಲಿದೆ. ಖರೀದಿ ಕೇಂದ್ರಗಳನ್ನು ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆರಂಭಿಸಲಾಗಿದೆ. ರೈತರಿಂದ…

Read More

ಗ್ರಾಮ ಪಂಚಾಯತ್‌ ಅರಿವು ಕೇಂದ್ರದ ಮೂಲಕ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಸಜ್ಜಾಗಿದೆ. ಸ್ಥಳೀಯ ಅಂಚೆ ಕಚೇರಿ, ಹಾಲು ಉತ್ಪಾದಕ ಸಹಕಾರ ಸಂಘ, ಬ್ಯಾಂಕ್‌, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತ್‌, ಆಸ್ಪತ್ರೆ ಮುಂತಾದ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ಪರಿಚಯ ಮಾಡಿಸಲಾಗುವುದು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಯೋಜನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಯೋಜಿಸಲಾಗಿದ್ದು, ಪ್ರಮುಖವಾಗಿ ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜಾನಪದ ಗೀತೆಗಳು – ಕಥೆಗಳು, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಮಕ್ಕಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್‌ಗ್ರ್ಯಾಮ್‌, ಪೇಪರ್‌ ಫ್ಯಾನ್‌, ಜೆಟ್‌ ಪ್ಲೇನ್‌, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ,…

Read More

ಕಲಬುರಗಿಯ ಪ್ರತಿಭಾವಂತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಕಲಬುರಗಿಯ ಕೆಸಿಟಿ ಕಾಲೇಜ್ ಕ್ಯಾಂಪಸ್‌ನಲ್ಲಿ ಇದೇ ಏಪ್ರಿಲ್ 16ನೇ ತಾರೀಖಿನಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ರಾಜ್ಯದ ಪ್ರತಿಷ್ಠಿತ ಕಂಪೆನಿಗಳು ಭಾಗಿಯಾಗುವ ಈ ಉದ್ಯೋಗ ಮೇಳದ ಪ್ರಯೋಜನವನ್ನು ಉದ್ಯೋಗಾಕಾಂಕ್ಷಿಗಳು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕು. ಯಾವುದೇ ವಿದ್ಯಾರ್ಹತೆ ಇದ್ದರೂ ಸಹ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು. ಸ್ಕಿಲ್ ಕನೆಕ್ಟ್ ಪೋರ್ಟಲ್ (skillconnect. http://Kaushalkar.com) ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಆಯ್ಕೆಯ ಕಂಪೆನಿಗಳ ಸಂದರ್ಶನದಲ್ಲಿ ಭಾಗಿಯಾಗಬಹುದು. ಕಲಬುರಗಿಯ ಯುವ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಉತ್ತಮ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.

Read More

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಹೊರ ಗುತ್ತಿಗೆ ಆಧಾರ ಮೇಲೆ ಘಟಕ ಆಡಳಿತಾಧಿಕಾರಿಗಳು 02 ಹುದ್ದೆ, ಆಪ್ತ ಸಮಾಲೋಚಕರು 01 ಹುದ್ದೆ, ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ 07 ಹುದ್ದೆ, ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) 09 ಹುದ್ದೆ ಮತ್ತು ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ 07 ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ಘಟಕ ಆಡಳಿತಾಧಿಕಾರಿಗಳು ಹುದ್ದೆಗೆ ಎಂ.ಎಸ್ ಡಬ್ಲೂ., ಸ್ನಾತಕೋತ್ತರ ಕಾನೂನು ಪದವಿ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಹೊಂದಿರಬೇಕು. ಆಪ್ತ ಸಮಾಲೋಚಕರ ಹುದ್ದೆಗೆ ಎಂ.ಎಸ್ ಡಬ್ಲೂ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಸಮಾಜ ಸೇವಾ ಕಾರ್ಯಕರ್ತರ /…

Read More

ಬೆಂಗಳೂರು : ಬೆಂಗಳೂರು : ವೃತ್ತಿಪರ ಪದವಿ ಕೋರ್ಸ್ ಪ್ರವೇಶಕ್ಕೆ ಏಪ್ರಿಲ್ 16, 17 ರಂದು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ನಡೆಸಲಾಗುತ್ತದೆ. ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ಸೂಕ್ಷ್ಮವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ಏಪ್ರಿಲ್ 16ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ಹಾಗೂ ಪರೀಕ್ಷಾ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇರುತ್ತದೆ. ಪರೀಕ್ಷಾ…

Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ದೇಹದ ಮೇಲೆ ಮಚ್ಚೆಗಳು ಕಂಡುಬರುತ್ತವೆ. ಆದರೆ,  ನರುಳ್ಳೆ ಅಥವಾ ನರಹುಲಿಗಳು ಕೆಲವರ ದೇಹದ ಮೇಲೆ ಮಾತ್ರ ಕಂಡುಬರುತ್ತವೆ. ನರಹುಲಿಗಳು ಹೆಚ್ಚಾಗಿ ಮುಖ ಮತ್ತು ಕುತ್ತಿಗೆಯ ಮೇಲೆ ಕಂಡುಬರುತ್ತವೆ. ಆದರೆ ದೊಡ್ಡ ನರಹುಲಿಗಳು ಚರ್ಮದ ಸೌಂದರ್ಯವನ್ನು ಹಾಳುಮಾಡುತ್ತವೆ. ವಾಸ್ತವವಾಗಿ, ನರಹುಲಿಗಳು ನೋವನ್ನು ಉಂಟುಮಾಡುವುದಿಲ್ಲ. ನರಹುಲಿಗಳನ್ನು ತೆಗೆದುಹಾಕಲು ಅನೇಕ ಜನರು ಉತ್ಪನ್ನಗಳು ಅಥವಾ ಚಿಕಿತ್ಸೆಗಳನ್ನು ಆಶ್ರಯಿಸುತ್ತಾರೆ. ಕೆಲವು ಮನೆಮದ್ದುಗಳ ಸಹಾಯದಿಂದ ನೀವು ನರಹುಲಿಗಳನ್ನು ತೆಗೆದುಹಾಕಬಹುದು. ನರಹುಲಿಗಳನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳ ಬಗ್ಗೆ ನಮಗೆ ತಿಳಿಸೋಣ. ಸುಣ್ಣ ಬಳಸಿ ನಿಮ್ಮ ಮುಖ ಅಥವಾ ಹಣೆಯಿಂದ ನರಹುಲಿಗಳನ್ನು ತೆಗೆದುಹಾಕಲು ನೀವು ಸುಣ್ಣವನ್ನು ಸಹ ಬಳಸಬಹುದು. ಇದಕ್ಕಾಗಿ, 1 ಚಮಚ ಸುಣ್ಣವನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ. ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ನರಹುಲಿಗಳ ಮೇಲೆ 15 ನಿಮಿಷಗಳ ಕಾಲ ಹಚ್ಚಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಬೆಳ್ಳುಳ್ಳಿ ಬಳಸಿ ಬೆಳ್ಳುಳ್ಳಿ ಪೇಸ್ಟ್ ಮುಖ ಮತ್ತು ಕುತ್ತಿಗೆಯ ಮೇಲಿನ…

Read More

ಶಿವಮೊಗ್ಗ : ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ವರ್ತಕರು ಉಪಯೋಗಿಸುವ ತೂಕ/ಅಳತೆ/ತೂಕದ ಸಾಧನಗಳು/ಅಳತೆ ಸಾಧನಗಳು, ತೂಕ ಮತ್ತು ಅಳತೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಅವುಗಳ ನಿಖರತೆಗಾಗಿ ಪರಿಶೀಲಿಸಿ ಮುದ್ರೆ ಮಾಡಿಸಿಕೊಂಡಿದ್ದಾರೆಯೇ ಹಾಗೂ ಪ್ರಮಾಣ ಪತ್ರ ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಅಥವಾ ಸಾಮಗ್ರಿಗಳನ್ನು ಖರೀದಿಸಬೇಕೆಂದು ಕಾನೂನು ಮಾಪನಶಾಸ್ತ್ರ ಇಲಾಖೆ ತಿಳಿಸಿದೆ. ಗ್ರಾಹಕರು ಅಂಗಡಿಯಲ್ಲಿ ವಸ್ತುಗಳನ್ನ ಖರೀದಿಸುವಾಗ ತಯಾರಕರ/ಪ್ಯಾಕರ್ ರವರ/ಆಮದುದಾರರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ, ಸಾಮಗ್ರಿ ಅಥವಾ ವಸ್ತುವಿನ ಹೆಸರು, ಸಾಮಗ್ರಿಯ ನಿವ್ವಳ ತೂಕ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ-ಗ್ರಾಂ/ಲೀಟರ್/ಸಂಖ್ಯೆ), ಸಾಮಗ್ರಿಗಳು ತಯಾರಾದ ತಿಂಗಳು ಮತ್ತು ವರ್ಷ, ಎಂಆರ್‌ಪಿ ಅಥವಾ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ರೂ….(ಎಲ್ಲಾ ತೆರಿಗೆ ಸೇರಿ), ಅನ್ವಯಿಸುವಂಥ ಪದಾರ್ಥಗಳಿಗೆ ಸಾಮಗ್ರಿ ಅಳತೆ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ) ಪರಿಶೀಲಿಸಿಕೊಳ್ಳಬೇಕು. ಪೊಟ್ಟಣ ಸಾಮಗ್ರಿಗಳನ್ನು ಎಂಆರ್‌ಪಿ ಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವುದು ದಂಡಾರ್ಹ ಅಪರಾಧ. ಪೊಟ್ಟಣ ಸಾಮಗ್ರಿಗಳ ಮೇಲೆ ಎಂಆರ್‌ಪಿ/ಮೇಲೆ ಹೇಳಲಾದ ಯಾವುದೇ ಕಡ್ಡಾಯ ಘೋಷಣೆಗಳನ್ನು ತಿದ್ದುವುದು/ಅಳಿಸುವುದು/ಸ್ಟಿಕ್ಕರ್ ಬಳಸಿ ಮಾರ್ಪಡಿಸುವುದು…

Read More

ನವದೆಹಲಿ : ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಕಾನೂನುಗಳ ದುರುಪಯೋಗದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಒಂದು ದೊಡ್ಡ ತೀರ್ಪು ನೀಡಿದೆ. ನ್ಯಾಯಾಲಯವು ಐಪಿಸಿಯ ಸೆಕ್ಷನ್ 498A ಅನ್ನು ಸಂವಿಧಾನದ 14 ನೇ ವಿಧಿಯ ಉಲ್ಲಂಘನೆ ಎಂದು ಪರಿಗಣಿಸಲಿಲ್ಲ. ಸೆಕ್ಷನ್ 498A ಪ್ರಕಾರ, ಪತಿ ಅಥವಾ ಅವರ ಕುಟುಂಬ ಸದಸ್ಯರು ಮಹಿಳೆಯರ ಮೇಲೆ ಕ್ರೌರ್ಯ ಮೆರೆದರೆ ಅಪರಾಧವಾಗುತ್ತದೆ. ಸಂವಿಧಾನದ 14ನೇ ವಿಧಿಯು ಜಾತಿ, ಧರ್ಮ ಮತ್ತು ಲಿಂಗವನ್ನು ಲೆಕ್ಕಿಸದೆ ಸಮಾನತೆಯ ಹಕ್ಕನ್ನು ಸರ್ವೋಚ್ಚವೆಂದು ಪರಿಗಣಿಸುತ್ತದೆ. ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಇಂದಿನ ತೀರ್ಪು ಪ್ರಕಟಿಸಿತು. ವಿವಾಹ ಸಂಬಂಧಿತ ವಿವಾದಗಳಲ್ಲಿ ಮಹಿಳೆಯರು ಐಪಿಸಿ ಸೆಕ್ಷನ್ 498A ಮತ್ತು ಇತರ ರೀತಿಯ ನಿಬಂಧನೆಗಳ ದುರುಪಯೋಗದ ವಿಷಯವನ್ನು ನ್ಯಾಯಾಲಯದ ಇಬ್ಬರು ಸದಸ್ಯರ ಪೀಠದ ಮುಂದೆ ಎತ್ತಲಾಯಿತು. ಸುದೀರ್ಘ ವಿಚಾರಣೆಯ ನಂತರ, ಸೆಕ್ಷನ್ 498A ಯ ನಿಬಂಧನೆಗಳಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೆಕ್ಷನ್…

Read More