Author: kannadanewsnow57

ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ, ನಿಮಗೆ ವಿತರಿಸಲಾದ ಆಹಾರ ಧಾನ್ಯಗಳನ್ನು ಮಾರಾಟ ಮಾಡಿದ್ರೆ ಮುಕ್ತ ಮಾರಕಟ್ಟೆ ದರದಂತೆ ದಂಡ ವಿಧಿಸಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನವೆಂಬರ್-2025 ರ ಮಾಹೆಗೆ ಹಾಸನ ಜಿಲ್ಲೆಯ ಪ್ರತಿ ಅಂತ್ಯೋದಯ (ಎ.ಎ.ವೈ) ಪಡಿತರ ಚೀಟಿಗೆ 21 ಕೆ.ಜಿ ರಾಗಿಯನ್ನು ಹಾಗೂ 14 ಕೆ.ಜಿ ಸಾರವರ್ಧಿತ ಅಕ್ಕಿ ಹಾಗೂ ಪಿ.ಹೆಚ್.ಹೆಚ್ (ಬಿ.ಪಿ.ಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 3 ಕೆ.ಜಿ ರಾಗಿಯನ್ನು ಹಾಗೂ 02 ಕೆ.ಜಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರ ಜೊತೆಗೆ ಏಕ ಸದಸ್ಯ, ದ್ವಿಸದಸ್ಯ ಮತ್ತು ತ್ರಿಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ (ಕೇಂದ್ರ ಎನ್‌ಎಫ್‌ಎಸ್‌ಎ ಹಂಚಿಕೆಯ 35 ಕೆಜಿಯನ್ನು ಹೊರತುಪಡಿಸಿ) ಮತ್ತು ಪಿಹೆಚ್‌ಹೆಚ್ ಪಡಿತರ ಚೀಟಿಯ ಫ್ರತಿ ಫಲಾನುಭವಿಗೆ ನವೆಂಬರ್-2025 ರ ಮಾಹೆಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಾಗಿ ಹೆಚ್ಚುವರಿ 05…

Read More

ನವೆಂಬರ್-2025 ರ ಮಾಹೆಯಲ್ಲಿ ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ. ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡತಕ್ಕದ್ದು, ಯಾವುದೇ ಕಾರಣಕ್ಕಾಗಿಯೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡತಕ್ಕದ್ದಲ್ಲ. ಸರ್ಕಾರದ ಆದೇಶದಲ್ಲಿ Up to 5.00 kms free (no charges), Beyond 5 kms for every round trip km- Rs.1.60 per cylinder (Rs. One Rupee sixty paise only) ಗೃಹ ಉಪಯೋಗಿ ಗ್ಯಾಸ್ ಸಿಲಿಂಡರ್ ಗೆ ನಾಗರಿಕ ತಿದ್ದುಪಡಿಯಲ್ಲಿ ನಿಗಧಿಪಡಿಸಿರುವಂತೆ ಸಿಲಿಂಡರನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದಲ್ಲಿ, ಜಂಟಿ ನಿರ್ದೇಶಕರ ಕಚೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ…

Read More

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ರಿಲಯನ್ಸ್ ಜಿಯೋ-ಬಿಪಿ ಪೆಟ್ರೋಲ್ ಪಂಪ್ ಡೀಲರ್ ಶಿಪ್ ಉತ್ತಮ ವ್ಯಾಪಾರ ಅವಕಾಶವಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ವಿಶ್ವಾಸಾರ್ಹ ಬ್ರಾಂಡ್’ನೊಂದಿಗೆ ಸಹಯೋಗ ಹೊಂದಬಹುದು ಮತ್ತು ದೀರ್ಘಾವಧಿಯ ಆದಾಯವನ್ನ ಪಡೆಯಬಹುದು. ನೀವು ಪೆಟ್ರೋಲ್ ಪಂಪ್ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ನಿಮಗೆ ವಿಶೇಷ ಅವಕಾಶವನ್ನ ನೀಡುತ್ತಿದೆ. ರಿಲಯನ್ಸ್ ಪೆಟ್ರೋಲಿಯಂ ದೇಶಾದ್ಯಂತ ತನ್ನ ಪೆಟ್ರೋಲ್ ಪಂಪ್ ಜಾಲವನ್ನ ವಿಸ್ತರಿಸುತ್ತಿದೆ ಮತ್ತು ಅದಕ್ಕಾಗಿ ಹೊಸ ವಿತರಕರನ್ನು ಸೇರಿಸುತ್ತಿದೆ. ಗುಜರಾತ್ನಲ್ಲಿರುವ ರಿಲಯನ್ಸ್ನ ಅತಿದೊಡ್ಡ ಸಂಸ್ಕರಣಾಗಾರವು ದಿನಕ್ಕೆ 1.24 ಮಿಲಿಯನ್ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತದೆ ಮತ್ತು ರಿಲಯನ್ಸ್ ದೇಶಾದ್ಯಂತ 64,000ಕ್ಕೂ ಹೆಚ್ಚು ಪೆಟ್ರೋಲ್ ಪಂಪ್ಗಳನ್ನು ನಿರ್ವಹಿಸುತ್ತದೆ. ರಿಲಯನ್ಸ್ ಜಿಯೋ-ಬಿಪಿ ಪೆಟ್ರೋಲ್ ಪಂಪ್ ಡೀಲರ್ ಶಿಪ್ ಹುಡುಕುವುದು ಹೇಗೆ? ರಿಲಯನ್ಸ್ ಜಿಯೋ-ಬಿಪಿ ಪೆಟ್ರೋಲ್ ಪಂಪ್ ಡೀಲರ್ ಆಗಲು, ನೀವು ಮೊದಲು ಅವರ ಅಧಿಕೃತ ವೆಬ್ಸೈಟ್ ಜಿಯೋ-ಬಿಪಿಗೆ ಹೋಗಬೇಕು. ಅಲ್ಲಿ ನೀವು ನೋಂದಣಿಗಾಗಿ ನಿಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್…

Read More

ಬೆಂಗಳೂರು : ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಸಲು ನೋಟೀಸ್ ಜಾರಿ ಮಾಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಭೂಮಾಪನ ಕಂದಾಯ ವ್ಯವಸ್ಥೆ,ಮತ್ತು ಭೂದಾಖಲೆಗಳ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಭೂವ್ಯಾಜ್ಯಗಳನ್ನು ಮುಂಬರುವ ದಿನಗಳಲ್ಲಿ ತಡೆಗಟ್ಟುವ ಮಹತ್ತರವಾದ ಧೈಯವನ್ನು ಇಲಾಖೆಯು ಹೊಂದಿದ್ದು, ಇದಕ್ಕೆ ಪೂರಕವಾಗಿ 11ಇ ಸ್ಕೆಚ್ ತಯಾರಿಕೆ, ಸಂಯೋಜಿತ ಮ್ಯುಟೇಷನ್ ಪೋಡಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದಿರುತ್ತದೆ. ಈ ಯೋಜನೆಗಳ ಪ್ರಮುಖ ಉದ್ದೇಶವು ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ಸಿದ್ಧಪಡಿಸುವ ಹಂತದಲ್ಲಿಯೇ ಸರ್ವೆ ನಂಬರಿನಲ್ಲಿ ಹಿತಾಸಕ್ತಿಯುಳ್ಳವರೆಲ್ಲರಿಗೂ ಮುಂಚಿತವಾಗಿ ನೋಟೀಸ್ ಜಾರಿ ಮಾಡಿ, ಎಲ್ಲರ ಸಮಕ್ಷಮ ಅಳತೆ ಮಾಡಿ, ಎಲ್ಲಾ ಹಕ್ಕುದಾರರಿಗೂ ಪ್ರತ್ಯೇಕ ಗಡಿ ನಿರ್ಧರಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ನಕ್ಷೆಗಳನ್ನು ವಿತರಿಸುವುದಾಗಿದೆ. ಆದ್ದರಿಂದ, ಮ್ಯುಟೇಷನ್ ಪೂರ್ವ ನಕ್ಷೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಎಲ್ಲಾ ಆರ್.ಟಿ.ಸಿ. ದಾರರಿಗೆ ನೋಟೀಸ್ ಜಾರಿ ಮಾಡುವುದು ಮುಖ್ಯ ಕೆಲಸವಾಗಿದೆ. ನೋಟೀಸ್ ಜಾರಿ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ವಿಧಾನ :- 1) ಆರ್ .ಟಿ.ಸಿ.ಯ ಕಾಲಂ ನಂ 9 ರಲ್ಲಿ ನಮೂದಾಗಿರುವ…

Read More

ಬೆಂಗಳೂರು : ಸಾಮಾನ್ಯವಾಗಿ ಜನರಿಗೆ ಈ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಜವಾಬ್ದಾರಿ ಏನಿರುತ್ತೆ ಅನ್ನೋದು ಗೊತ್ತಿರಲ್ಲ. ಹಾಗಾಗಿ ಇದೀಗ ತಹಸೀಲ್ದಾರ್ ಕರ್ತವ್ಯ ಏನು? ಅವರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. 1. ಗ್ರಾಮಗಳ ಲೆಕ್ಕಗಳ ಪರಿಶೀಲನೆ: ತಾಲ್ಲೂಕಾ ಜಮಾಬಂದಿ ಅಧಿಕಾರಿಯಾಗಿರುವ ತಹಶೀಲ್ದಾರರು, ಅವರ ತಾಲ್ಲೂಕಾ ವ್ಯಾಪ್ತಿಯ ಶೇಕಡಾ 80 ರಷ್ಟು ಗ್ರಾಮಗಳ ಲೆಕ್ಕಗಳನ್ನು ಪರೀಕ್ಷಿಸಿ, ಸರಿಯಾದ ಲೆಕ್ಕ ಹೊಂದಾಣಿಕೆಗಳನ್ನು ತಯಾರಿಸಿ, ಬಾಕಿ ಮೊತ್ತವನ್ನು ಸರಿಯಾಗಿ, ನಮೂದಿಸತಕ್ಕದ್ದು. ಹಾಗೆಯೇ, ಹುಜೂರು ಜಮಾಬಂದಿ ಅಧಿಕಾರಿಗಳಿಂದ ಅಂತಿಮ ಅನುಮೋದನೆ ಪಡೆಯಲು ಲೆಕ್ಕ ವರದಿಯನ್ನು ಸಿದ್ಧಪಡಿಸಿಟ್ಟುಕೊಂಡಿರುವುದು. 2. ಪಹಣಿ ಪತ್ರಿಕೆಗಳ ಪರಿಶೀಲನೆ: ಪಹಣಿ ಪತ್ರಿಕೆಗಳನ್ನು ತೀವ್ರವಾಗಿ ಪರಿಶೀಲಿಸಬೇಕು. ಗ್ರಾಮಲೆಕ್ಕಾಧಿಕಾರಿಗಳು ಸರಿಯಾಗಿ ಪಹಣಿ ಬರೆದಿರುವುದನ್ನು ಕಂದಾಯ ನಿರೀಕ್ಷಕರು/ತಹಶೀಲ್ದಾರರು ಪರಿಶೀಲಿಸತಕ್ಕದ್ದು. ಹಾಗೂ ವಿವಿಧ ಬೆಳೆಗಳ ಬಗ್ಗೆ ನಿರ್ವಹಿಸಿದ ಬೆಳೆ ಪತ್ರಿಕೆ ಪರಿಶೀಲಿಸುವುದು (ನಮೂನೆ ನಂ 1 (0)) ರಲ್ಲಿ ಮಾಹಿತಿ ಪಡೆಯುವದು. 3. ಆಕಾರಬಂದ ಹಾಗೂ ಪಹಣಿ ಪತ್ರಿಕೆ: ಆಕಾರ ಬಂದದಲ್ಲಿ ನಮೂದಿಸಿದ…

Read More

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ. ಯೋಜನೆಗಳು: ಉದ್ಯೋಗಿನಿ ಯೋಜನೆ: ವಯೋಮಿತಿ 18 ರಿಂದ 55 ವರ್ಷಗಳೊಳಗಿರುವ ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕ್ ಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಆದಾಯ ಮಿತಿ ರೂ.02 ಲಕ್ಷ ಹೊಂದಿರಬೇಕು. ಘಟಕ ವೆಚ್ಚ ಕನಿಷ್ಠ ರೂ.01 ಲಕ್ಷದಿಂದ ಗರಿಷ್ಟ ರೂ.03 ಲಕ್ಷ, ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ ಆದಾಯ ಮಿತಿ ರೂ.1.50 ಲಕ್ಷ ಹೊಂದಿರಬೇಕು. ಘಟಕ ವೆಚ್ಚ ಗರಿಷ್ಟ ರೂ.03 ಲಕ್ಷ, ಶೇ.30 ರಷ್ಟು ಸಹಾಯಧನ ನೀಡಲಾಗುವುದು. ಚೇತನ ಯೋಜನೆ: ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ.30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ (ವಯೋಮಿತಿ 18 ವರ್ಷ ಮೇಲ್ಪಟ್ಟು).…

Read More

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಬೆಳೆದ ಕಿರು ಸಿರಿಧಾನ್ಯಗಳಾದ ಸಾಮೆ/ನವಣೆ, ರಾಗಿ, ಜೋಳ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಲಾಗುವುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಆದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಕಿರು ಸಿರಿಧಾನ್ಯ ಸಾಮೆ/ನವಣೆ, ರಾಗಿ,  ಜೋಳ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು. ಬೆಲೆ(ಕ್ವಿAಟಲ್ ಗೆ): ಬಿಳಿಜೋಳ-ಹೈಬ್ರೀಡ್: ರೂ.3699 ಬಿಳಿಜೋಳ- ಮಾಲ್ದಂಡಿ: ರೂ.3749 ರಾಗಿ: ರೂ.4886 ಕಿರು ಸಿರಿಧಾನ್ಯ (ಸಾಮೆ ಮತ್ತು ನವಣೆ): ರೂ.4886…

Read More

ಬೆಂಗಳೂರು : ಇಂದಿನಿಂದ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರಿಷೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿಯೊಂದಿಗೆ ಆಗಮಿಸಿ ಮಳಿಗೆಗಳನ್ನು ತೆರೆದಿದ್ದಾರೆ. ಈ ಬಾರಿ 5 ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಗುತ್ತಿದೆ. ಈ ಬಾರಿ ಬಸವನಗುಡಿ ರಸ್ತೆಗೆ ಸೀಮಿತವಾಗಿದ್ದ ಅಲಂಕಾರವನ್ನು ಗಾಂಧಿ ಬಜಾರ್, ಎನ್‌.ಆರ್. ರಸ್ತೆ ಸೇರಿ ಸುತ್ತಮುತ್ತ ರಸ್ತೆಗಳಿಗೆ ವಿಸ್ತರಿಸಲಾಗಿದೆ. ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಐತಿಹಾಸಿಕ ಹಿನ್ನೆಲೆ ಇದ್ದು, ಪ್ರತಿ ವರ್ಷದಂತೆ ಈ ವರ್ಷವು ಯಾವುದೇ ಅಹಿತಕರ ಘಟನೆ ಆಗದಂತೆ ಅದ್ಧೂರಿ ಆಗಿ ಕಡಲೆಕಾಯಿ ಪರಿಷೆ ನಡೆಸಲು ನಿರ್ಧರಿಸಲಾಗಿದೆ.

Read More

ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಕಾಮುಕರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ದೂರು ಗ್ರಾಮದ ಬಳಿ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದ ಮಹಿಳೆ ಯನ್ನು ಬೈಕ್‌ ನಲ್ಲಿ ಕರೆದೊಯ್ದು, ಬಲವಂತವಾಗಿ ಮದ್ಯ ಕುಡಿಸಿ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ರಾಜ್ಯಾದ್ಯಂತ ತಾಪಾಮಾನ ಭಾರೀ ಕುಸಿತವಾಗಿದ್ದು, ಎರಡು ದಿನ ಶೀತಗಾಳಿ ಮುನ್ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಚಳಿ ತೀವ್ರಗೊಳ್ಳುತ್ತಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪ ಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕನಿಷ್ಠ ಉಷ್ಣಾಂಶ ಬೀದರ್‌ನಲ್ಲಿ 10 ಡಿಗ್ರಿ, ವಿಜಯಪುರದಲ್ಲಿ 11.6, ಧಾರವಾಡದಲ್ಲಿ 11.8 ಡಿಗ್ರಿಗೆ ಕುಸಿದಿದೆ. ಬೆಳಗಿನ ವೇಳೆ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಮುಂದಿನ 2 ದಿನ ರಾಜ್ಯದಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ‘ಶೀತಗಾಳಿ’ಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಿನ ಜಾವ ಪಾರ್ಕ್ ಗೆ ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೀದರ್, ವಿಜಯಪುರ, ಕಲಬುರಗಿ, ಮಂಡ್ಯ, ಕೊಡಗು ಜಿಲ್ಲೆಯ ಹಲವಡೆ…

Read More