Author: kannadanewsnow57

ಬೆಂಗಳೂರು : ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ  ಜುಲೈ 27 ರ ನಾಳೆ, ಜುಲೈ 28 ರ ನಾಡಿದ್ದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.   ವಿದ್ಯುತ್ ವಿತರಣಾ ಕೇಂದ್ರದ ಹೆಸರು 220/66/11 ಕೆವಿ ಹೆಬ್ಬಾಳ ಕೇಂದ್ರದಲ್ಲಿ 220ಕೆವಿ ಸಹಕಾರನಗರ-ಮಾನ್ಯತಾ ಜಿಐಎಸ್-ಹೆಬ್ಬಾಳ ಮಾರ್ಗದ ಬಿ ಹಂತದ ಕೇಬಲ್ ಸರಿಪಡಿಸುವ ಕೆಲಸಗಳಿಂದಾಗಿ ದಿನಾಂಕ 27.07.2024 ರಂದು ಬೆಳಿಗ್ಗೆ 11:00 ರಿಂದ 15:00 ಗಂಟೆಗಳವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜುಲೈ 27 ರಂದು ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು ಗಂಗಾನಗರ, ಲಕ್ಷ್ಮಯ್ಹ್ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾರ್ಟರ್ಸ್,, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾಟರ್ಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್. ಟಿ ನಗರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್,,ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವತ್ನಗರ, ಡಾಲರ್ಸ್ ಕಾಲೋನಿ, ಎಂಎಲ್ಎ ಲೇಔಟ್,…

Read More

ಬೆಂಗಳೂರು : ಹಲವು ಪ್ರಖ್ಯಾತಿಗೆ ಪಾತ್ರವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಮತ್ತೊಂದು ಸಾಧನೆ ಮಾಡಿದೆ. 14-ವರ್ಷದ ರೋಗಿಯೊಬ್ಬರಿಗೆ ಮೊದಲ ಪೀಡಿಯಾಟ್ರಿಕ್ ಮ್ಯಾಚಡ್ ಸಿಬ್ಲಿಂಗ್ ಡೋನರ್ ಅಲೋಜೆನಿಕ್ ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ (ಬಿಎಂಟಿ) (ಅಸ್ತಿಮಜ್ಜೆ ಕಸಿ) ಚಿಕಿತ್ಸೆಯನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯ ಕಿದ್ವಾಯಿ ಆಸ್ಪತ್ರೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಅಕ್ಯೂಟ್ ಮೈಲೋಯ್ಡ್ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್ ಪ್ರಕಾರ) ದಿಂದ ಬಳಲುತ್ತಿದ್ದ 14-ವರ್ಷದ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎರಡು ತಿಂಗಳ ಹಿಂದೆ ನಗರದಲ್ಲಿರುವ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗದ ಕ್ಯಾನ್ಸರ್ ವಕ್ರೀಕಾರಕವಾಗಿತ್ತು, ಅಂದರೆ ಇದು ಸಾಂಪ್ರದಾಯಿಕ ಕೀಮೋಥೆರಪಿಗೆ ನಿರೋಧಕವಾಗಿತ್ತು. ಬಿಎಂಟಿ ಮಕ್ಕಳ ವಿಭಾಗದ ವೈದ್ಯೆ ಡಾ ವಸುಂಧರಾ ಕೈಲಾಸನಾಥ್ ಹಾಗೂ ಅವರ ತಂಡವು ರೋಗಿಯ ಕಿರಿಯ ಸಹೋದರನ ಕಾಂಡಕೋಶಗಳನ್ನು ಬಳಸಿಕೊಂಡು ಅಲೋಜೆನಿಕ್ ನಂತರ ಹೆಚ್ಚಿನ ಪ್ರಮಾಣದ ಕೀಮೋಥೆರಪಿಯೊಂದಿಗೆ ಚಿಕಿತ್ಸೆ ನೀಡಲು ನಿರ್ಧರಿಸಿತು. ಆಕೆಯ ಕಿರಿಯ ಸಹೋದರ ಸಂಪೂರ್ಣ ಆನುವಂಶಿಕ ಹೊಂದಾಣಿಕೆ 12/12 ಎಚ್‌ಎಲ್‌ಎ ಹೊಂದಾಣಿಕೆಯಾಗಿದ್ದರಿಂದ ಕಸಿ ಯಶಸ್ವಿಗೊಳಿಸಲಾಯಿತು. ಅರ್ಚನಾಳ ತಂದೆ ದಿನಗೂಲಿ…

Read More

ನವದೆಹಲಿ : ಕರ್ನಾಟಕದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಮತ್ತೊಮ್ಮೆ ತರಿಸಿಕೊಂಡು ಪರಾಮರ್ಶೆ ಮಾಡಿ ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಮನವಿ ಮಾಡಲಾಗಿದೆ. ಕರ್ನಾಟಕದ ಕಾಡುಗೊಲ್ಲ ಹಟ್ಟಿಗೊಲ್ಲ ಅಡವಿಗೊಲ್ಲರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ರಿಜಿಸ್ಟರ್ ಜನರಲ್ ಆಪ್ ಇಂಡಿಯಾ ಅನುಮತಿಸಿಲ್ಲದೆ ಇರುವುದರಿಂದ ಅವರು ಅದಕ್ಕೆ ಸಹಮತಿ ನೀಡದೆ ಕರ್ನಾಟಕದ ಸರ್ಕಾರಕ್ಕೆ ಕಳುಹಿಸಿರುವುದು ದುರಾದೃಷ್ಟಕರ ಬೆಳವಣಿಗೆ R G I ರವರು 27/3/2024 ರಂದು ಸಹಮತಿ ನೀಡಲು ಅಥವಾ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಾದ್ಯವಿಲ್ಲ ಎಂದು ಷರಾ ಬರೆದು ಕರ್ನಾಟಕ ಸರ್ಕಾರಕ್ಕೆ ವಾಪಸ್ ಕಳಿಸಿರುವುದರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ ಮತ್ತು RGI ಸರಿಯಾಗಿ ಪರಾಮರ್ಶೆ ಮಾಡದೆ ಹಿಂದಿರುಗಿಸಲಾಗಿದೆ. ಸದರಿ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ 2014 ರಲ್ಲಿ ಕಾಡುಗೊಲ್ಲರ ಕುಲ ಶಾಸ್ತ್ರ ಅಧ್ಯಯನದ ವರದಿಯನ್ನು ಸಚಿವ ಸಂಪುಟದ ಚರ್ಚಿಸಿ ಕರ್ನಾಟಕದ ಕಾಡುಗೊಲ್ಲರಿಗೆ ಎಸ್ ಟಿ ಪಟ್ಟಿಗೆ ಸೇರ್ಪಡೆಯಾಗಲು ಎಲ್ಲಾ ಲಕ್ಷಣಗಳನ್ನು ಗಮಸಿ…

Read More

ನವದೆಹಲಿ : ನಿರುದ್ಯೋಗಿಗಳಿಗೆ ಗುಡ್ ನ್ಯೂಸ್.. 10 ನೇ ತರಗತಿ, ಇಂಟರ್ಮೀಡಿಯೇಟ್, ಪದವಿ, ಎಂಜಿನಿಯರಿಂಗ್ ಮುಂತಾದ ಅಧ್ಯಯನವನ್ನು ಪೂರ್ಣಗೊಳಿಸಿದ ಮತ್ತು ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಅನೇಕ ಕೇಂದ್ರ ಸರ್ಕಾರಿ ಸಂಸ್ಥೆಗಳು ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿವೆ. ಇಲ್ಲಿದೆ ಖಾಲಿ ಹುದ್ದೆಗಳ ವಿವರ * ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ -2024 (ಎಸ್ಎಸ್ಸಿ ಸಿಜಿಎಲ್ 2024) ಗೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಮೂಲಕ ವಿವಿಧ ಕೇಂದ್ರ ಸಚಿವಾಲಯಗಳ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಇಲಾಖೆಗಳಲ್ಲಿ 17,727 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಟೈರ್-1 ಮತ್ತು ಟೈರ್-2 ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ https://ssc.nic.in/ ಸಂಪರ್ಕಿಸಿ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 2025-2026ನೇ ಸಾಲಿನ ಸಾಮಾನ್ಯ…

Read More

ಬೆಂಗಳೂರು : ವೈದ್ಯ ವೃತ್ತಿಯ ಗೌರವಯುತ ನಿರ್ವಹಣೆಗಾಗಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಮೇಲಾಗುವ ಹಿಂಸಾಚಾರ, ಹಲ್ಲೆ, ಅಪಮಾನ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ನಿಂದನೆಯನ್ನು ನಿಯಂತ್ರಿಸಲು ಮಸೂದೆ ರೂಪಿಸಿ ಅಂಗೀಕರಿಸಲಾಗಿದೆ.  ಈ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ಹಂಚಿಕೊಂಡಿದ್ದು,  ಈಗಿರುವ ಕಾಯ್ದೆಗೆ ತಿದ್ದುಪಡಿ ತಂದು ಈ ರೀತಿಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ. ಇದರಿಂದ ಸಮಾಜದಲ್ಲಿ ಗೌರವಯುತವಾಗಿ ವೃತ್ತಿ ನಿರತ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಲು ಅನುಕೂಲವಾಗಿದೆ. ವೈದ್ಯರ, ವೈದ್ಯಕೀಯ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ವೃತ್ತಿನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ತಡೆಗೆ ಮಸೂದೆ ಅಂಗೀಕಾರ * ವೈದ್ಯರ ಮೇಲಿನ ಹಿಂಸೆ, ಅಪಮಾನ, ಆಸ್ತಿ-ಪಾಸ್ತಿ ಹಾನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಳ * 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ * 25 ಸಾವಿರ ರೂಪಾಯಿಯಿಂದ 2 ಲಕ್ಷದವರೆಗೆ ದಂಡ * ಸಾಮಾಜಿಕ ಜಾಲತಾಣದ ಮೂಲಕ ವೈದ್ಯರ ಅವಹೇಳನವೂ ಶಿಕ್ಷಾರ್ಹ *…

Read More

ಬೆಂಗಳೂರು : ನೋಂದಾಯಿತ ಕಟ್ಟಡ ಕಾರ್ಮಿಕರು ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ, ಮಂಡಳಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬಹುದು. ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣ ಮಾಡಿಕೊಳ್ಳಲು ಅಗತ್ಯ ದಾಖಲೆಗಳು ಉದ್ಯೋಗ ದೃಢೀಕರಣ ಪತ್ರ ಸ್ವಯಂ ದೃಢೀಕರಣ ಪತ್ರ ಮಂಡಳಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್ ಆಧಾರ್ ಕಾರ್ಡ್ ಪ್ರತಿ

Read More

ಬೆಂಗಳೂರು : ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ  ಜುಲೈ 30 ರಂದು‌ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.   66kV ಲೈನ್ ಬಸ್‌ನ ನಿರ್ವಹಣಾ ಕೆಲಸ ಮತ್ತು 11kV ಬಸ್ ಬಾರ್ ಐಸೊಲೇಟರ್ ನಿರ್ವಹಣೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವ್ಯತ್ಯಯ ಉಂಟಾಗಲಿದೆ ಜುಲೈ 30 ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಮಂಜುನಾಥ್ ನಗರ, ತಿವ್ಮ್ಮಯ್ಯ ರಸ್ತೆ, ಭುವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅರ್ಪಾಟ್‍ಮೆಂಟ್, ಶಿವನಹಳ್ಳಿ ಪಾರ್ಕ್ ಆದರ್ಶನಗರ, ಆದರ್ಶಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ, 1ನೇ ಬ್ಲಾಕ್, ಬಿ-ನಗರ ಲಕ್ಷ್ಮೀ ನಗರ, ಹೆಚ್.ವಿ.ಕೆ.ಲೇಔಟ್, ಕಿರ್ಲೋಸ್ಸರ್ ಕಾಲೋನಿ, ಕರ್ನಾಟಕ ಕಾಲೋನಿ, ಕಮಲನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಆಫಿಸ್ ಸುತ್ತ ಮುತ್ತಲಿನ ಪ್ರದೇಶ, ಗೃಹಲಕ್ಷ್ಮೀ ಲೇಔಟ್ 1ನೇ ಹಂತ, ನಾಗಪುರ, ಮಹಾಲಕ್ಷ್ಮೀ ಪುರಂ, ಮೋದಿ ಹಾಸ್ಪಿಟಲ್ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ…

Read More

ಬೆಂಗಳೂರು : ರಾಜ್ಯಾದ್ಯಂತ ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಾಜ್ಯದ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಮುಖ್ಯವಾಗಿ ಅಪಘಾತಕ್ಕೆ ಕಾರಣವಾಗಿರುವ ಪ್ರಖರ ಬೆಳಕು ಹೊರಹಾಕುವ (ಹೈ ಬೀಮ್ ಲೈಟ್) ಮತ್ತು ಕಣ್ಣು ಕುಕ್ಕುವ ಎಲ್​ಇಡಿ ಲೈಟ್​ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ನಡೆಸಲಾಗಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎಲ್ಲಾ ಘಟಕಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿ, ಈ ಕುರಿತು ಸದರಿ ಕಾರ್ಯಾಚರಣೆಗೆ ಆಸಕ್ತಿ ತೋರಿಸಿರುವ ಘಟಕಗಳಾದ ಬೆಂಗಳೂರು ನಗರ, ಮಂಗಳೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಮೈಸೂರು ನಗರ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿರುವುದನ್ನು ಶ್ಲಾಘಿಸಲಾಗಿದೆ. (ಪುತಿ ಲಗತ್ತಿಸಿದೆ). ಇದೇ ರೀತಿ, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ…

Read More

ಬೆಂಗಳೂರು : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್‌ ತಿಳಿಸಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. https://twitter.com/ANI/status/1816775672830001434?ref_src=twsrc%5Egoogle%7Ctwcamp%5Eserp%7Ctwgr%5Etweet

Read More

ಬೆಂಗಳೂರು : ಮುಡಾ ಹಗರಣದ ಕುರಿತಂತೆ ಮತ್ತೊಂದು ಸಂಚಲನ ಶುರುವಾಗಿದ್ದು, ಸಚಿವ ಭೈರತಿ ಸುರೇಶ್ ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇನ್ನು ಮುಡಾ ಬದಲಿ ಸೈಟ್ ಪಡೆದುಕೊಂಡವರ ಪಟ್ಟಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೆಸರು ಸಹ ಇದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮುಡಾದಲ್ಲಿ ಜಿ.ಟಿ.ದೇವೇಗೌಡ, ಸಿ.ಎನ್​.ಮಂಜೇಗೌಡ, ಹೆಚ್​.ವಿಶ್ವನಾಥ್​. ಸಾ.ರಾ.ಮಹೇಶ್, ಹೆಚ್.ಡಿ.ಕುಮಾರಸ್ವಾಮಿಗೂ ನಿವೇಶನ ಹಂಚಿಕೆ ಇವರಿಗೆಲ್ಲರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ ಎಂದು ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ.

Read More