Author: kannadanewsnow57

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಇಂದು ಜೈಲಿನ ವೈದ್ಯರು ನಟ ದರ್ಶನ್ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬೆನ್ನಲ್ಲೇ ಪತಿ ನಟ ದರ್ಶನ್ ನೋಡಲು ವಿಜಯಲಕ್ಷ್ಮೀ ಆಗಮಿಸಿದ್ದರು. ಈ ವೇಳೆ ತಮ್ಮ ಪತಿ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆಯಿಂದ ಚಿಕಿತ್ಸೆ ನೀಡಲು ಡಿಐಜಿ ಟಿ. ಪಿ. ಶೇಷ ಅವರ ಬಳಿ ಮನವಿ ಮಾಡಿದ್ದರು. ಹೀಗಾಗಿ ನಟ ದರ್ಶನ್ ಗೆ ಬೆನ್ನುನೋವಿನ ಕುರಿತು ಆಸ್ಪತ್ರೆ ದಾಖಲೆ ತರುವಂತೆ ಟಿಐಜಿ ಸೂಚನೆ ನೀಡಿದ್ದರು. ವಿಜಯಲಕ್ಷ್ಮೀ ಅವರು ಸದ್ಯ ಬೆನ್ನು ನೋವಿನ ಸಮಸ್ಯೆ ಕುರಿತು ಆಸ್ಪತ್ರೆ ದಾಖಲೆ ಸಲ್ಲಿಸಿದ್ದು, ಇಂದು ಜೈಲಿನ ವೈದ್ಯರು ನಟ ದರ್ಶನ್ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬೆನ್ನುನೋವು, ಮಲಬದ್ಧತೆ ಸಮಸ್ಯೆ ಅಷ್ಟೊಂದು ಗಂಭೀರ ಸಮಸ್ಯೆ ಅಲ್ಲ. ಅಗತ್ಯ ಬಿದ್ದರೆ ಜೈಲಿನ ವೈದ್ಯರೇ ಚಿಕಿತ್ಸೆ ಕೊಡುತ್ತಾರೆ ಎಂದು…

Read More

ಭಾರತ ಸೇರಿದಂತೆ ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಿಸುವ ದೇಶಗಳು ಸೆಪ್ಟೆಂಬರ್ 2 ರನ್ನು ತೆಂಗಿನ ದಿನವೆಂದು ಆಚರಿಸುತ್ತವೆ. 1969 ರಲ್ಲಿ ಏಷ್ಯನ್ ಪೆಸಿಫಿಕ್ ತೆಂಗಿನ ಸಮುದಾಯವನ್ನು (ಎಪಿಸಿಸಿ) ಸ್ಥಾಪಿಸಿದಾಗ ಈ ದಿನವನ್ನು ಮೊದಲು ಆಚರಿಸಲಾಯಿತು. ವಿಶ್ವ ತೆಂಗಿನ ದಿನದ ಪ್ರಾಮುಖ್ಯತೆ ಈ ದಿನವು ತೆಂಗಿನಕಾಯಿಯ ಅನೇಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ, ಅಡುಗೆಯಲ್ಲಿ ಅವುಗಳ ಬಳಕೆಯಿಂದ ಹಿಡಿದು ವಿವಿಧ ಕೈಗಾರಿಕೆಗಳಲ್ಲಿ ಅವರ ಪಾತ್ರದವರೆಗೆ. ಈ ಹಬ್ಬವು ತೆಂಗಿನಕಾಯಿಯ ಪೌಷ್ಠಿಕಾಂಶದ ಮೌಲ್ಯ ಮತ್ತು ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು. ಈ ಬಹುಮುಖ ಹಣ್ಣನ್ನು ನಮ್ಮ ಟೇಬಲ್‌ಗೆ ತರಲು ಶ್ರಮಿಸುವ ರೈತರು ಮತ್ತು ನಿರ್ಮಾಪಕರನ್ನು ಸಹ ಇದು ಗೌರವಿಸುತ್ತದೆ. ವಿಶ್ವ ತೆಂಗಿನ ದಿನವನ್ನು ಆಚರಿಸುವ ಮೂಲಕ, ಜಾಗತಿಕ ಆರೋಗ್ಯ ಮತ್ತು ಕೃಷಿಯಲ್ಲಿ ತೆಂಗಿನಕಾಯಿಯ ಪ್ರಮುಖ ಪಾತ್ರವನ್ನು ನಾವು ಸ್ವೀಕರಿಸುತ್ತೇವೆ. ವಿಶ್ವ ತೆಂಗಿನಕಾಯಿ ದಿನ 2024 ರ ವಿಷಯ ಯಾವುದು? ವಿಶ್ವ ತೆಂಗಿನಕಾಯಿ ದಿನ 2024 ರ ವಿಷಯ “ವೃತ್ತಾಕಾರದ ಆರ್ಥಿಕತೆಗಾಗಿ ತೆಂಗಿನಕಾಯಿ: ಗರಿಷ್ಠ ಮೌಲ್ಯಕ್ಕಾಗಿ…

Read More

ಬೆಂಗಳೂರು: ದಿನೇ ದಿನೇ ಆನ್ ಲೈನ್ ಗೇಮ್, ಬೆಟ್ಟಿಂಗ್ ಕಾರಣದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂತಹ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಅದರಲ್ಲಿ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅನೇಕ ಆನ್ ಲೈನ್ ಗೇಮ್ಸ್ ನಿಷೇಧಿಸಲಾಗಿತ್ತು. ಈಗಲೂ ಅಂತದ್ದೇ ಮಹತ್ವದ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸಚಿವ ಅಮಿತ್ ಶಾಗೆ ಬರೆದಂತ ಪತ್ರದಲ್ಲಿ ಕೋರಿದ್ದಾರೆ. ಆನ್ ಲೈನ್ ಗೇಮ್ಸ್ ಗೆ ಅಡಿಟ್ ಆಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ. ಆದರೇ ಆನ್ ಲೈನ್ ಗೇಮ್ಸ್ ಮಾಲೀಕರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಆನ್ ಲೈನ್ ಗೇಮ್ ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸಚಿವರಿಗೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ…

Read More

ಯಾದಗಿರಿ : ರಾಜ್ಯದಲ್ಲಿ ಭಾರೀ ಮಳೆಗೆ ಮತ್ತೊಂದು ಬಲಿಯಾಗಿದ್ದು, ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಿಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಭಾರೀ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದ ಪರಿಣಾಮ ಗ್ರಾಮದ ಸಕೀನಾಬಿ ನದಾಫ್ (70) ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದಲೇ ವಾರದಲ್ಲಿ 6 ದಿನವೂ ಮೊಟ್ಟೆ ವಿತರಣೆ ಮಾಡುವ ನಿರೀಕ್ಷೆಯಿದೆ. ಸೆಪ್ಟೆಂಬರ್‌ ತಿಂಗಳಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದ 6 ದಿನವೂ ಮೊಟ್ಟೆ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ಪ್ರಸ್ತುತ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ.ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇಂದಿನಿಂದ 6 ದಿನ ಮೊಟ್ಟೆ ವಿತರಣೆ ಮಾಡುವ ಸಾಧ್ಯತೆ ಇದೆ. ವಾರದ 6 ದಿನವೂ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ವಾರ್ಷಿಕ 1,400 ಕೋಟಿ ರು. ವೆಚ್ಚವಾಗಲಿದೆ.

Read More

ಶಿವಮೊಗ್ಗ: ಜಿಲ್ಲೆಯ ಜೋಗದ ಜಲಪಾತ ವೀಕ್ಷಣೆಗೆ ಈ ಮೊದಲು ಯಾವುದೇ ಸಮಯ ಇರಲಿಲ್ಲ. ಎಷ್ಟು ಹೊತ್ತಾದರೂ ಜೋಗದ ಜಲಪಾತದ ಸೊಬಗನ್ನು ಸವಿಯಬಹುದಾಗಿತ್ತು. ಆದರೇ ಇನ್ಮುಂದೆ ಇದಕ್ಕೆ ಅವಕಾಶವಿಲ್ಲ. ಕೇವಲ 2 ಗಂಟೆ ಮಾತ್ರವೇ ನೋಡಲು ಸಮಯ ನಿಗದಿ ಮಾಡಲಾಗಿದೆ. ಅಲ್ಲದೇ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ, ಪ್ರವಾಸಿಗರಿಗೆ ಬಿಗ್ ಶಾಕ್ ನೀಡಲಾಗಿದೆ. ಈ ಕುರಿತಂತೆ ಜೋಗ ನಿರ್ವಹಣಾ ಪ್ರಾಧಿಕಾರವು ಆದೇಶ ಹೊರಡಿಸಿದ್ದು, ಜೋಗದ ಜಲಪಾತವನ್ನು 2 ಗಂಟೆಯ ಒಳಗಾಗಿ ನೋಡಿಕೊಂಡು ವಾಪಾಸ್ಸು ಪ್ರವಾಸಿಗರು ಬರಬೇಕು. ಇದಕ್ಕಿಂತ ಹೆಚ್ಚು ಹೊತ್ತು ಇರುವಂತಿಲ್ಲ ಎಂಬುದಾಗಿ ತಿಳಿಸಿದೆ. ಇದಲ್ಲದೇ ಜೋಗದ ಜಲಪಾತ ವೀಕ್ಷಣೆಗೆ ತೆರಳುವಂತ ಬಸ್ ಗಳಿಗೆ 150 ರೂ ಇದ್ದಂತ ಶುಲ್ಕವನ್ನು 200 ರೂ.ಗೆ ಏರಿಕೆ ಮಾಡಲಾಗಿದೆ. ಕಾರಿಗೆ ರೂ.50 ಇದ್ದಂತ ಶುಲ್ಕವನ್ನು ರೂ.80ಕ್ಕೆ ಏರಿಸಲಾಗಿದೆ. ಪ್ರವಾಸಿಗರಿಗೆ 10 ರೂ ಇದ್ದಂತ ಪ್ರವೇಶ ಶುಲ್ಕವನ್ನು 20 ರೂ.ಗೆ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಲಾಗಿದೆ. ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಪಾರ್ಕಿಂಗ್ ಶುಲ್ಕ, ಪ್ರವೇಶ ಶುಲ್ಕವನ್ನು…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಧಿಕೃತ ಮತ್ತು ವೈಯಕ್ತಿಕವಾಗಿ ನಿರ್ವಹಿಸಲು ತಿಂಗಳಿಗೆ 54 ಲಕ್ಷ ರೂ. ವೆಚ್ಚ ಮಾಡುತ್ತಿದೆ ಎಂದು ಆರ್ ಟಿಐ ಅರ್ಜಿಯಲ್ಲಿ ಮಾಹಿತಿ ಬಹಿರಂಗವಾಗಿದೆ. ಆರ್‌ಟಿಐ ಕಾರ್ಯಕರ್ತ ಮಾರ್ಲಿಂಗಾ ಗೌಡ ಮಾಲಿ ಪಾಟೀಲ್ ಅರ್ಜಿ ಸಲ್ಲಿಸಿದ್ದು, ಆರ್ಟಿಐಗೆ ಉತ್ತರಿಸಿದ ವಿವರಗಳ ಪ್ರಕಾರ, ಸಿಎಂಒ ಪ್ರತಿ ತಿಂಗಳು 18% ಜಿಎಸ್ಟಿ ಸೇರಿದಂತೆ ಸುಮಾರು 53.9 ಲಕ್ಷ ರೂ.ಗಳನ್ನು ಪಾವತಿಸಿದೆ. ವೆಚ್ಚವನ್ನು ದೃಢಪಡಿಸಿದ ಸಿಎಂಒ ಅಧಿಕಾರಿಗಳು, ಇದು ಹಿಂದಿನ ಮುಖ್ಯಮಂತ್ರಿಗಳು ಖರ್ಚು ಮಾಡಿದ ತಿಂಗಳಿಗೆ 2 ಕೋಟಿ ರೂ.ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಗಮನಸೆಳೆದರು. ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಒದಗಿಸಿದ ವಿವರಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್ 25 ರಿಂದ ಮಾರ್ಚ್ 2024 ರವರೆಗೆ ಸಿಎಂಒ ಸುಮಾರು 3 ಕೋಟಿ ರೂ.ಗಳನ್ನು ಪಾವತಿಸಿದೆ, ಹೆಚ್ಚಿನ ಹಣವು ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವ ದಿ…

Read More

ಬೆಂಗಳೂರು : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ ಈ ಯೋಜನೆಗಳಿಗೆ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ರವರೆಗೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಬೃಹತ್ ಮರವೊಂದು ಬಿದ್ದ ಪರಿಣಾಮ ಮೂರು ಕಾರುಗಳು ಸಂಪೂರ್ಣ ಜಖಂ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬೃಹತ್ ಮರವೊಂದು ಬಿದ್ದಿದ್ದು, ಮೂರು ಕಾರುಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನು ಕಳೆದ ತಿಂಗಳ ಆಗಸ್ಟ್ 17 ರಂದು ಬೆಂಗಳೂರಿನಲ್ಲಿ ಮರ ಬಿದ್ದು ಗಾಯಗೊಂಡಿದ್ದ ಆಟೋ ಚಾಲಕ ಶಿವರುದ್ರಯ್ಯ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ವಿಜಯನಗರದಲ್ಲಿ ಬೃಹತ್ ಮರ ಧರೆಗೆ ಉರುಳಿ ಬಿದ್ದಿತ್ತು. ಈ ವೇಳೆ ಆಟೋ ಸಂಪೂರ್ಣ ಜಖಂಗೊಂಡಿತ್ತು. ಈ ವೇಳೆ ಚಾಲಕ, ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿತ್ತು. ಆದರೆ ಮಾರ್ಗಮಧ್ಯದಲ್ಲಿಯೇ ಆಟೋ ಚಾಲಕ ಶಿವರುದ್ರಯ್ಯ ಸಾವನ್ನಪ್ಪಿಪ್ಪಿದ್ದರು.

Read More

ಹಾವೇರಿ : ರಾಣೇಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರು ಅಡ್ಡಗಟ್ಟಿದ್ದ ಆರೋಪದಡಿ ಗ್ರಾಮಸ್ಥರ ವಿರುದ್ಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ದೇವರಗುಡ್ಡಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಎಂ ಪ್ರಯಾಣಿಸುತ್ತಿದ್ದ ಕಾರು ಅಡ್ಡಗಟ್ಟಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಚನ್ನಬಸಪ್ಪ ಹಡಪದ ಅವರು ದೂರು ನೀಡಿದ್ದರು. ಹೀಗಾಗಿ ಕಾಕೊಳ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆಗಸ್ಟ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಹನದಲ್ಲಿ ಕಾಕೋಳ ಗ್ರಾಮದ ಕಡೆಯಿಂದ ದೇವರಗುಡ್ಡದತ್ತ ಹೊರಟಿದ್ದರು. ದೇವರಗುಡ್ಡದ ದ್ವಾರಬಾಗಿಲು ಬಳಿ ಗ್ರಾಮಸ್ಥರು ಕಾರು ಅಡ್ಡಗಟ್ಟಿದ್ದರು.

Read More