Author: kannadanewsnow57

ಬೆಂಗಳೂರು : ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಸಂಬಂಧ online module ಸಿದ್ಧಪಡಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪ್ರೌಢಶಾಲಾ ಸಹಶಿಕ್ಷಕರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 25.04.2025 ರಂದು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುತ್ತದೆ. ಮೇಲ್ಕಂಡಂತೆ ಪ್ರಕಟಿಸಿದ್ದ ಪಟ್ಟಿಗೆ ಆಕ್ಷೇಪಣೆಗಳನ್ನು ವಿಭಾಗೀಯ ಕಛೇರಿಯ ಹಂತದಲ್ಲಿ ಸ್ವೀಕರಿಸಿ ತಿದ್ದುಪಡಿಗಳನ್ನು (inconsistence data ಒಳಗೊಂಡಂತೆ) ತಂತ್ರಾಂಶದಲ್ಲಿ ಅಳವಡಿಸಲು ಉಲ್ಲೇಖ (2) ರ ಸಭಾ ನಡಾವಳಿಯಲ್ಲಿ ಸೂಚಿಸಲಾಗಿರುತ್ತದೆ. ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಈಗಾಗಲೇ ತಿದ್ದುಪಡಿಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಕಾರ್ಯವು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ಜ್ಞಾಪನದೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ದೃಢೀಕರಣ ಪತ್ರವನ್ನು ಸಿದ್ಧಪಡಿಸಿ ದಿನಾಂಕ : 27.06.2025 ರೊಳಗೆ ಈ ಕಛೇರಿಗೆ…

Read More

ನವದೆಹಲಿ : ರಾಜಧಾನಿ ದೆಹಲಿಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 27 ವರ್ಷದ ಹುಡುಗಿಯೊಬ್ಬಳು ಲೈಂಗಿಕ ಸುಖದ ಆಸೆಯಿಂದ ತನ್ನ ಗುಪ್ತಾಂಗದಲ್ಲಿ ಬಾಟಲಿಯನ್ನು ಸೇರಿಸಿಕೊಂಡಳು. ಇದಾದ ನಂತರ ಅವಳು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಹುಡುಗಿಗೆ ಹೊಟ್ಟೆ ನೋವು ಮತ್ತು ಮಲವಿಸರ್ಜನೆ ಮಾಡಲು ಸಾಧ್ಯವಾಗದ ಸಮಸ್ಯೆಗಳು ಪ್ರಾರಂಭವಾದವು. ಎರಡು ದಿನಗಳಲ್ಲಿ ಹುಡುಗಿಯ ಸ್ಥಿತಿ ತುಂಬಾ ಹದಗೆಟ್ಟಿತು. ಇದಾದ ನಂತರ, ಹುಡುಗಿ ಗಂಗಾ ರಾಮ್ ಆಸ್ಪತ್ರೆಗೆ ತಲುಪಿದಾಗ, ಅವಳ ಗುದದ್ವಾರದಲ್ಲಿ ಮಾಯಿಶ್ಚರೈಸರ್ ಬಾಟಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಮಾಹಿತಿಯ ಪ್ರಕಾರ, ಹುಡುಗಿ ಅವಮಾನದ ಭಯದಿಂದ ಎಲ್ಲಿಯೂ ಹೋಗಲಿಲ್ಲ ಮತ್ತು ಮನೆಯಲ್ಲಿ ಬಾಟಲಿಯನ್ನು ತೆಗೆದುಹಾಕಲು ಪ್ರಯತ್ನಿಸಿದಳು, ಆದರೆ ಅವಳು ಯಶಸ್ವಿಯಾಗಲಿಲ್ಲ. ಇದಾದ ನಂತರ ಅವಳು ಹತ್ತಿರದ ಆಸ್ಪತ್ರೆಯಲ್ಲಿ ತನ್ನನ್ನು ತಾನೇ ಪರೀಕ್ಷಿಸಿಕೊಂಡಳು, ಅಲ್ಲಿ ಎಕ್ಸ್-ರೇ ಅವಳ ಗುದದ್ವಾರದ (ಗುದನಾಳದ) ಮೇಲ್ಭಾಗದಲ್ಲಿ ಬಾಟಲಿ ಸಿಲುಕಿಕೊಂಡಿದೆ ಎಂದು ಬಹಿರಂಗಪಡಿಸಿತು. ಇಲ್ಲಿಯೂ ವೈದ್ಯರು ಅದನ್ನು ತೆಗೆದುಹಾಕಲು ವಿಫಲರಾದರು. ಹುಡುಗಿಯ ಸ್ಥಿತಿ ಗಂಭೀರವಾಗಿತ್ತು ಮತ್ತು ಕರುಳು ಒಡೆದುಹೋಗುವ ಭಯದಿಂದಾಗಿ, ಶಸ್ತ್ರಚಿಕಿತ್ಸೆಗೆ ತಕ್ಷಣವೇ…

Read More

ನವದೆಹಲಿ : ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ವಾಹನ ಸಾಲಗಳನ್ನು ತೆಗೆದುಕೊಳ್ಳುವವರಿಗೆ ರಿಸರ್ವ್ ಬ್ಯಾಂಕ್ ತುಂಬಾ ಅನುಕೂಲಕರ ನಿರ್ಧಾರವನ್ನು ತೆಗೆದುಕೊಂಡಿದೆ. ಇಲ್ಲಿಯವರೆಗೆ 15 ದಿನಗಳಿಗೊಮ್ಮೆ ನವೀಕರಿಸಲಾಗುತ್ತಿದ್ದ CIBIL ಸ್ಕೋರ್ ಮಾಹಿತಿಯನ್ನು ಈಗ ನೈಜ ಸಮಯದಲ್ಲಿ ಒದಗಿಸಬೇಕಾಗುತ್ತದೆ ಎಂದು RBI ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಈ ನಿರ್ಧಾರವು ಸಾಲಗಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು RBI ನಿರೀಕ್ಷಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಉಪ ಗವರ್ನರ್ ಟ್ರಾನ್ಸ್ಯೂನಿಯನ್ CIBIL ನಂತಹ ಕ್ರೆಡಿಟ್ ಮಾಹಿತಿ ಕಂಪನಿಗಳು (CIC ಗಳು) ಹದಿನೈದು ದಿನಗಳಿಗೊಮ್ಮೆ (15 ದಿನಗಳು) ಬದಲಾಗಿ ನೈಜ ಸಮಯದಲ್ಲಿ ಡೇಟಾವನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ. CIBIL ಮೂಲಕ ವೇಗವಾಗಿ ಡೇಟಾವನ್ನು ರವಾನಿಸುವುದರಿಂದ ಎಲ್ಲರಿಗೂ ವ್ಯವಸ್ಥೆಯಲ್ಲಿ ನಂಬಿಕೆ, ದಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಾಗುತ್ತದೆ ಎಂದು ಅವರು ಮಂಗಳವಾರ ನಡೆದ CIBIL ಕಾರ್ಯಕ್ರಮವೊಂದರಲ್ಲಿ ಹೇಳಿದರು. RBI ಬುಧವಾರ ತನ್ನ ವೆಬ್ಸೈಟ್ನಲ್ಲಿ ಈ ವಿಳಾಸವನ್ನು ಬಿಡುಗಡೆ ಮಾಡಿದೆ. ಇದು ಸಾಲಗಾರರಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.…

Read More

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದುದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡುಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. 11 ರಿಂದ 20 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ 6 ತಾಳೂಕಿನಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಜೋಯಿಡಾ, ಸಿದ್ದಾಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಮೂರು ತಾಲೂಕುಗಳಿಗೆ ರಜೆ ಘೋಷಿಸಿ…

Read More

ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಮತ್ತೊಬ್ಬ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪಿದ್ದಾನೆ. 21 ವರ್ಷದ ಮದನ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮೃತ ಮದನ್ ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ತಾಯಿ ಜೊತೆ ಚನ್ನಪಟ್ಟಣದಲ್ಲಿ ಮದನ್ ವಾಸವಾಗಿದ್ದ 2 ದಿನದ ಹಿಂದೆ ಚಿಕ್ಕಕೊಂಡಗುಳದ ಭಾವನ ಮನೆಗೆ ಬಂದಿದ್ದ ಈ ವೇಳೆ ನಿನ್ನೆ ರಾತ್ರಿ ಎದೆನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

Read More

ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸಂಬಂಧಿಗಳ ಮಧ್ಯೆ ಕಿರಿಕ್ , ಕಿಡಿಗೇಡಿಯೊಬ್ಬ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.  ಜುಲೈ 1 ರಂದು ಸಂಜೆ ಈ ಘಟನೆ ನಡೆದಿದ್ದು, ಬೆಂಗಳೂರಿನ ವಿವೇಕನಗರದಲ್ಲಿ ಸುಬ್ರಹ್ಮಣಿ ಎಂಬಾತ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಮನೆಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read More

ಮೈಸೂರು : ಆಷಾಡ ಮಾಸ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು  ತಮ್ಮ ಪತ್ನಿ ಜೊತೆಗೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಟ ದರ್ಶನ್ ಇಂದು ಹುಟ್ಟುರಾದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಈ ವೇಳೆ ದರ್ಶನ್ ಜೊತೆಗಿನ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಸ್ನೇಹಿತರ ಜೊತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ದರ್ಶನ್ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read More

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಜುಲೈ 4 ರಂದು CUET UG 2025 ಫಲಿತಾಂಶಗಳನ್ನು ಪ್ರಕಟಿಸಲಿದೆ ಎಂದು ಸಂಸ್ಥೆ ಮಂಗಳವಾರ ದೃಢಪಡಿಸಿದೆ. ಪದವಿಪೂರ್ವ ಕಾರ್ಯಕ್ರಮಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test for Undergraduate programmes -CUET UG) ಭಾರತದಾದ್ಯಂತ ಕೇಂದ್ರೀಯ ಮತ್ತು ಇತರ ಹಲವಾರು ಭಾಗವಹಿಸುವ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರಮುಖ ಪರೀಕ್ಷೆಯಾಗಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್ – exams.nta.ac.in/CUET-UG ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಅಂಕಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. https://twitter.com/NTA_Exams/status/1940411679780778084 ಈ ವರ್ಷ, CUET UG ಪರೀಕ್ಷೆಯನ್ನು ಮೇ 15 ಮತ್ತು ಮೇ 24, 2025 ರ ನಡುವೆ ಹೈಬ್ರಿಡ್ ಸ್ವರೂಪದಲ್ಲಿ ನಡೆಸಲಾಯಿತು – ಕೆಲವು ಪತ್ರಿಕೆಗಳನ್ನು CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮೋಡ್‌ನಲ್ಲಿ ಮತ್ತು ಇತರವುಗಳನ್ನು ಪೆನ್-ಅಂಡ್-ಪೇಪರ್ ಸ್ವರೂಪದಲ್ಲಿ ನಡೆಸಲಾಯಿತು. ಪರೀಕ್ಷೆಯನ್ನು ಭಾರತ ಮತ್ತು…

Read More

ಬೆಂಗಳೂರು : ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 247-A ರನ್ವಯ ಪಿಂಚಿಣಿ ಸೌಲಭ್ಯಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ದಿನಾಂಕ:01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಪದ್ದತಿಯನ್ನು ಕಡ್ಡಾಯಗೊಳಿಸಿ ಜಾರಿಗೆ ತರಲಾಗಿರುತ್ತದೆ. ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ಸದರಿ ಯೋಜನೆಯನ್ನು ಕಾರ್ಯರೂಪಗೊಳಿಸಿದೆ. ದಿನಾಂಕ:31.03.2006 ರ ಆದೇಶಾನುಸಾರ ನೌಕರನು ಸೇವೆಗೆ ವಾಸ್ತವವಾಗಿ ವರದಿ ಮಾಡಿಕೊಂಡ ದಿನಾಂಕದ ಆಧಾರದ ಮೇರೆಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಗೆ ಒಳಪಡುವುದಾಗಿದೆ. ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ರಾಜ್ಯ ಸಿವಿಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 1.4.2006 ರ ಪೂರ್ವದ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳ ಸಂಬಂಧದಲ್ಲಿ…

Read More

ಬೆಂಗಳೂರು : ರಾಜ್ಯದ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಎಲ್ಲಾ ಜಿಲ್ಲೆಗಳಲ್ಲಿ `ಶ್ರಮಿಕ ವಸತಿ ಶಾಲೆ’ ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.  ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದೊಂದು ‘ಶ್ರಮಿಕ ವಸತಿ ಶಾಲೆʼ ಆರಂಭಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಶಾಲೆಗಳಿಗೆ ರೂ.1125.25 ಕೋಟಿ ಮಂಜೂರು ಮಾಡಲಾಗಿದೆ.  ಈ ಶಾಲೆಗಳು ಕಾರ್ಮಿಕರ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳ ಜೊತೆಗೆ ವಸತಿಯನ್ನೂ ಒದಗಿಸುವುದರಿಂದ ಕಲಿಕೆಗೆ ಅನುಕೂಲವಾಗಲಿದೆ.

Read More