Author: kannadanewsnow57

ಬೆಂಗಳೂರು : ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಕರ್ನಾಟಕ SSLC ಪರೀಕ್ಷೆ-2ರ ಫಲಿತಾಂಶ ಈ ರೀತಿ ಚೆಕ್ ಮಾಡಿ ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ನಮೂದಿಸಿ ಪಡೆಯಬಹುದಾಗಿದೆ. ಈ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ  ನಂತರ ವೀಕ್ಷಿಸಬಹುದಾಗಿದೆ. SMS ಮೂಲಕ ಫಲಿತಾಂಶ ಪಡೆಯಲು KAR 10 ಅಂತ ಬರೆದು ಸ್ಪೇಸ್ ಬಿಟ್ಟು ನೋಂದಣಿ ಸಂಖ್ಯೆ ಟೈಪ್ ಮಾಡಿ 56263ಗೆ ಸಂದೇಶ ಕಳುಹಿಸಿ. ಫಲಿತಾಂಶ ಅದೇ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತದೆ. 2025 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಫಲಿತಾಂಶದ ಅಂಕಿಅಂಶಗಳು 2025 SSLC Exam-2 Result Statistics 2025 ರ ಮೇ.26 ರಿಂದ 02-06-2025 ರವರೆಗೆ ಒಟ್ಟು 967 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಯಿತು. 2025 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2…

Read More

ಬೆಂಗಳೂರು : ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಕರ್ನಾಟಕ SSLC ಪರೀಕ್ಷೆ-2ರ ಫಲಿತಾಂಶ ಈ ರೀತಿ ಚೆಕ್ ಮಾಡಿ ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯನ್ನು ನಮೂದಿಸಿ ಪಡೆಯಬಹುದಾಗಿದೆ. ಈ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ  ನಂತರ ವೀಕ್ಷಿಸಬಹುದಾಗಿದೆ. SMS ಮೂಲಕ ಫಲಿತಾಂಶ ಪಡೆಯಲು KAR 10 ಅಂತ ಬರೆದು ಸ್ಪೇಸ್ ಬಿಟ್ಟು ನೋಂದಣಿ ಸಂಖ್ಯೆ ಟೈಪ್ ಮಾಡಿ 56263ಗೆ ಸಂದೇಶ ಕಳುಹಿಸಿ. ಫಲಿತಾಂಶ ಅದೇ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತದೆ.

Read More

ಬೆಂಗಳೂರು : ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ನಿಧನ ಹೊಂದಿದ್ದು, ವಿಜಯ್ ರೂಪಾನಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ‘ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಬಲಿಯಾದವರಲ್ಲಿ ಒಬ್ಬರಾದ ವಿಜಯ್ ರೂಪಾನಿ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಈ ಹಿಂದೆ ರಾಜ್ಯಸಭಾ ಸಂಸದರಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು. ನಾನು ಕೆಲವು ಸಂದರ್ಭಗಳಲ್ಲಿ ಅವರ ಜೊತೆ ಮಾತನಾಡಿದ್ದೇನೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ. https://twitter.com/siddaramaiah/status/1933416127389913231?ref_src=twsrc%5Etfw%7Ctwcamp%5Etweetembed%7Ctwterm%5E1933416127389913231%7Ctwgr%5Eb4d934b18e6414a2a939d62d3c29398b0284599b%7Ctwcon%5Es1_c10&ref_url=https%3A%2F%2Fkannadadunia.com%2Fbig-news-e0b28fe0b2b0e0b38d-e0b287e0b282e0b2a1e0b2bfe0b2afe0b2be-e0b2b5e0b2bfe0b2aee0b2bee0b2a8-e0b2a6e0b381e0b2b0e0b282e0b2a4e0b2a6%2F

Read More

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧ ಶಾಸಕ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ. ಯೋಗೇಶ್ ಕೊಲೆ ಪ್ರಕರಣ ಸಂಬಂಧ ಕೋರ್ಟ್ ಸೂಚನೆಗೆ ಮೇರೆಗೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ಪರಪ್ಪನ ಅಗ್ರಹಾರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ವಿನಯ್ ಕುಲಕರ್ಣಿ ಅವರು, ಕೋರ್ಟ್ ಗೆ ಹಾಜರಾಗುತ್ತಿದ್ದಂತೆ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.

Read More

ಕೊಪ್ಪಳ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ 09 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 88 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳ ಭರ್ತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 09 ಅಂಗನವಾಡಿ ಕಾರ್ಯಕರ್ತೆ ಹಾಗೂ 88 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳ ಭರ್ತಿಗಾಗಿ ದಿನಾಂಕ: 23-09-2024 ರಿಂದ 23-10-2024 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲು ಕ್ರಮ ವಹಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು. ಅಂತಿಮ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಅಭ್ಯರ್ಥಿಗಳ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳುಹಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳು ಅಥವಾ ಇದಕ್ಕೆ ಸಂಬಂದಿಸಿದಂತೆ ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡಬಾರದು ಎಂದು ಕೊಪ್ಪಳ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Read More

ಬೆಂಗಳೂರು: ಇಂದು ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ಕರ್ನಾಟಕ ಮೂಲಕ ಕೋ ಪೈಲಟ್ ಸೇರಿದಂತೆ ಎಲ್ಲಾ 242 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಪ್ ಆದಂತ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಮೀಪದ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ ಪತನಗೊಂಡಿದೆ. ಈ ವಿಮಾನದಲ್ಲಿ 230 ಪ್ರಯಾಣಿಕರು, ವಿದೇಶಿಕರು, ವಿಮಾನ ಸಿಬ್ಬಂದಿಗಳು ಸೇರಿದಂತೆ 242 ಮಂದಿ ಇದ್ದರು. ಇವರಲ್ಲಿ ಕರ್ನಾಟಕದ ಕರಾವಳಿ ಮೂಲಕ ಕ್ಲೈವ್ ಕುಂದರ್ ಎಂಬುವರೂ ಕೋ ಪೈಲಟ್ ಆಗಿದ್ದರು. ಅವರು ಕೂಡ ವಿಮಾನ ದುರಂತದ ಬಳಿಕ ದುರ್ಮರಣಕ್ಕೆ ಈಡಾಗಿರುವುದಾಗಿ ತಿಳಿದು ಬಂದಿದೆ. ಕರ್ನಾಟಕದ ಕರಾವಳಿ ಮೂಲದವಾರದ ಕ್ಲೈವ್‌ ಕುಂದರ್‌ ಅವರು ಮುಂಬೈನಲ್ಲಿ ವಾಸವಾಗಿದ್ದರು. ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಲೈವ್ ಕುಂದರ್‌ ಅವರಿಗೆ 1100 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಕ್ಲೈವ್‌ ಕುಂದರ್‌…

Read More

ನವದೆಹಲಿ : ಗೂಗಲ್ ಪೇ, ಫೋನ್‌ ಪೇ, ಪೇಟಿಎಂನಂತಹ ಅಪ್ಲಿಕೇಶನ್‌’ಗಳನ್ನು ಬಳಸುವ ಕೋಟ್ಯಾಂತರ ಬಳಕೆದಾರರಿಗೆ ಒಂದು ಸುದ್ದಿ ಇದೆ. ಆಗಸ್ಟ್ 1 ರಿಂದ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತನ್ನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ತರುತ್ತಿದೆ. ವರದಿಯ ಪ್ರಕಾರ, ಈ ತಾಂತ್ರಿಕ ಬದಲಾವಣೆಯನ್ನ ಆಗಸ್ಟ್ 1ರಿಂದ ಜಾರಿಗೆ ತರಲಾಗುವುದು. ವರದಿಯ ಪ್ರಕಾರ, ಯುಪಿಐ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆ ಮಾಡುವುದು ಹೊಸ ನಿಯಮವನ್ನ ತರುವ ಉದ್ದೇಶವಾಗಿದೆ. ಇದರ ಪರಿಣಾಮವೆಂದರೆ ಯುಪಿಐ ಅಪ್ಲಿಕೇಶನ್‌’ನಿಂದ ನೀವು ಪರಿಶೀಲಿಸುವ ಬ್ಯಾಲೆನ್ಸ್ ಮೇಲೆ ಮಿತಿ ಇರುತ್ತದೆ. ನೀವು ನಿಗದಿಪಡಿಸಿದ ಸ್ವಯಂ ಪಾವತಿಗಳಲ್ಲಿ ಬದಲಾವಣೆ ಇರುತ್ತದೆ. ವರದಿಯ ಪ್ರಕಾರ, UPI ಪಾವತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ತಿಂಗಳು ಸುಮಾರು 16 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯ ವಹಿವಾಟುಗಳಿಂದಾಗಿ, UPI ವ್ಯವಸ್ಥೆಯ ಮೇಲಿನ ಹೊರೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ, ಬ್ಯಾಂಕುಗಳು ವ್ಯವಸ್ಥೆಯನ್ನ ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು…

Read More

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಮನೆಯ ಬಳಿಯೇ ಕಳ್ಳನೊಬ್ಬ ಕಂಪೌಂಡ್ ಜಿಗಿದು ಸಂಪ್ ಮುಚ್ಚಳವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರ ಮನೆಯ ಕೂಗಳತೆ ದೂರದಲ್ಲೇ ಕುಮಾರ ಕೃಪಾ ವೆಸ್ಟ್ನಲ್ಲಿ ಹಾಡಹಗಲೇ ಕಂಪೌಂಡ್ ಜಿಗಿದು ಸಂಪ್ ಮುಚ್ಚಳವನ್ನು ಖದೀಮ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡಿದ್ದ ಸಂಪ್ ಮುಚ್ಚಳವನ್ನ ಮನೆಯ ಮರೆಯಲ್ಲಿಟ್ಟಿದ್ದ ಆರೋಪಿ, ಜನರ ಓಡಾಟ ಕಡಿಮೆಯಾದ ನಂತರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

ಹೈದರಾಬಾದ್ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮನೆಯಲ್ಲಿ ಒಬ್ಬಂಟಿಯಾಗಿದ್ದ 90 ವರ್ಷದ ವೃದ್ಧ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಯಾಚಾರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 90 ವರ್ಷದ ಮಹಿಳೆಯೊಬ್ಬರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಬುಧವಾರ ರಾತ್ರಿ ಎಂದಿನಂತೆ ಆಕೆ ತನ್ನ ಮನೆಯಲ್ಲಿ ಮಲಗಿದ್ದಳು. ಮಧ್ಯರಾತ್ರಿ 12 ಗಂಟೆಯಾಗಿತ್ತು. ಆಗಲೇ, ಯಾರೋ ಬಾಗಿಲು ಬಡಿಯುತ್ತಿರುವಂತೆ ಆಕೆಗೆ ಅನಿಸಿತು ಮತ್ತು ಅದನ್ನು ಪಡೆಯಲು ಹೋದಳು. ತಕ್ಷಣ, ಹೊರಗಿನಿಂದ ಬಂದ 25 ವರ್ಷದ ವ್ಯಕ್ತಿ ವೃದ್ಧೆಯ ಮೇಲೆ ಮೃಗದಂತೆ ಹಲ್ಲೆ ಮಾಡಿದ. ಆ ಸಮಯದಲ್ಲಿ, ವೃದ್ಧೆ ಏನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಆಘಾತಕ್ಕೊಳಗಾಗಿದ್ದಳು. ಆಕೆಯ ಕಿರುಚಾಟ ಅವಳ ಬಾಯಿಂದ ಹೊರಬರಲಿಲ್ಲ. ವೃದ್ಧೆಗೆ ವಿರೋಧಿಸುವ ಶಕ್ತಿ ಇಲ್ಲದ ಕಾರಣ, ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿ ಓಡಿಹೋದ. ಆದರೆ, ಆಕೆ ಪ್ರಜ್ಞೆ ತಪ್ಪಿ ರಾತ್ರಿಯಿಡೀ ಅಲ್ಲೇ ಬಿದ್ದಿದ್ದಳು. ಬೆಳಿಗ್ಗೆ ಬಂದ ಕೆಲಸದಾಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ…

Read More

ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಬಳಿಯ ಕುತ್ತಾರಿನಲ್ಲಿ ನಡೆದಿದೆ. ಕುತ್ತಾರು ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ ಬಟ್ಟೆ ಒಣಗಿಸಲೆಂದು ಹೋಗಿದ್ದ ಹಿಬಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ವೈದ್ಯ ದಂಪತಿ ಡಾ.ಮುಮ್ತಾಜ್ ಅಹ್ಮದ್ ದಂಪತಿ ಅಪಾರ್ಟ್ ಮೆಂಟ್ ನ 12ನೇ ಮಹಡಿಯಲ್ಲಿ ವಾಸವಾಗಿದ್ದರು. ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More