Author: kannadanewsnow57

ಬೆಂಗಳೂರು : ಅರಣ್ಯ ಒತ್ತುವರಿ ಮಾಡಿಕೊಂಡವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ, 2015ರ ಬಳಿಕ ಆಗಿರುವ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸುವಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ಉತ್ತರ ಕನ್ನಡ, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಜಿಲ್ಲೆಗಳೂ ಸೇರಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ 2015ರ ಬಳಿಕ ಆಗಿರುವ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.

Read More

ಲಕ್ನೋ: ಅಯೋಧ್ಯೆಯಲ್ಲಿ ಇಬ್ಬರು ಪುರುಷರಿಂದ ಅತ್ಯಾಚಾರಕ್ಕೊಳಗಾದ 12 ವರ್ಷದ ಬಾಲಕಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾದ ಒಂದು ದಿನದ ನಂತರ, ಜಿಲ್ಲಾಡಳಿತವು ಶನಿವಾರ ಆರೋಪಿ ಮೊಯಿದ್ ಖಾನ್ ಬೇಕರಿಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಿದೆ. ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಪ್ರಾಪ್ತ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಬೇಕರಿಯನ್ನು ಆಹಾರ ಕಲಬೆರಕೆ ಇಲಾಖೆ ಮುಚ್ಚಿದ್ದು, ಅದನ್ನು ನೆಲಸಮಗೊಳಿಸುವ ಕ್ರಮವನ್ನು ಶನಿವಾರ ಪ್ರಾರಂಭಿಸಲಾಯಿತು. “ಬೇಕರಿ ಕಾನೂನುಬಾಹಿರ ಎಂದು ಕಂಡುಬಂದ ನಂತರ ಅದನ್ನು ಸೀಲ್ ಮಾಡಲಾಗಿದೆ ಮತ್ತು ಬೇಕರಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಎಸ್ಡಿಎಂ ಸೊಹವಾಲ್, ಅಶೋಕ್ ಕುಮಾರ್ ಹೇಳಿದ್ದಾರೆ. https://twitter.com/i/status/1819641691785122031 ಅಯೋಧ್ಯೆಯಲ್ಲಿ ಇಬ್ಬರು ಪುರುಷರಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಶುಕ್ರವಾರ ಭೇಟಿಯಾದರು. ಸಭೆಯ ನಂತರ, ಪ್ರಕರಣದ ತನಿಖೆ ನಡೆಸಲು ವಿಳಂಬ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಯಿತು. ಸಭೆಯ ನಂತರ, ಪ್ರಕರಣದ ತನಿಖೆಯನ್ನು ನಡೆಸಲು ವಿಳಂಬ ಮಾಡಿದ್ದಕ್ಕಾಗಿ ಪುರಕಲಂದರ್ ಪೊಲೀಸ್ ಠಾಣೆಯ ಸ್ಟೇಷನ್…

Read More

ಮೈಸೂರು : ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಾವು ಬಿಜೆಪಿಯವರ  ಹಗರಣ ಬಯಲು ಮಾಡುತ್ತೇವೆ. ಮೈಸೂರಿನಲ್ಲಿ ದೊಡ್ಡ ಸಮಾವೇಶ ನಡೆಸುತ್ತೇವೆ.  ದೇಶದಲ್ಲಿ ಬಿಜೆಪಿ ಭ್ರಷ್ಟಾಚಾರದ  ಪಿತಾಮಹ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆರ್. ಅಶೋಕ್, ಬಿ.ವೈ. ವಿಜಯೇಂದ್ರಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಷ್ಟು ದಿನ ಮಂತ್ರಿ ಇರ್ತಾರೋ ನೋಡೋಣ,ಅವರು ಮಂತ್ರಿಯಾಗಿ ತುಂಬಾ ದಿನ ಇರಲ್ಲ ಎಂದರು.

Read More

ಬೆಂಗಳೂರು : ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದವರು ಅಧಿಕೃತ ವೆಬ್‌ ಸೈಟ್‌ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು:- ಮೊದಲಿಗೆ, ಇಲ್ಲಿ ನೀಡಲಾದ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ ಮೆನು ಪಟ್ಟಿಯಿಂದ, “e-Services” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. “e-Ration card” ಲಿಂಕ್ ಮೇಲೆ ಕ್ಲಿಕ್ ಮಾಡಿ. “Village list” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಈ ಕೆಳಗಿನ ಮಾಹಿತಿಯನ್ನು ಆಯ್ಕೆಮಾಡಿ- ಜಿಲ್ಲೆ ತಾಲ್ಲೂಕು ಗ್ರಾಮ ಪಂಚಾಯತ್ ಗ್ರಾಮ “ಗೋ” ಬಟನ್ ಕ್ಲಿಕ್ ಮಾಡಿ. ಪಡಿತರ ಚೀಟಿದಾರರ ಪಟ್ಟಿಯನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

Read More

ಬೆಂಗಳೂರು : ಪಶ್ಚಿಮಘಟ್ಟದ ಅಕ್ರಮ ರೆಸಾರ್ಟ್ ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ. ಪಶ್ಚಿಮಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿರುವ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ ಗೊಳ್ಳಬೇಕು. ಅಲ್ಲದೇ, ಅರಣ್ಯ ಒತ್ತುವರಿಗಳನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

Read More

ಬೆಂಗಳೂರು :  ಸರ್ಕಾರವು ದೇಶದ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ರೂ.ಗಳ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುತ್ತಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅರ್ಹ ನಾಗರಿಕರಿಗೆ ಉಚಿತ ಚಿಕಿತ್ಸಾ ವ್ಯಾಪ್ತಿಯನ್ನು ಒದಗಿಸುತ್ತಿದೆ. ಪಿಎಂ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಕಲ್ಯಾಣ್ ಯೋಜನಾ ಕಾರ್ಡ್ ಮೂಲಕ ಈ 5 ಲಕ್ಷ ರೂ.ಗಳ ವ್ಯಾಪ್ತಿಯನ್ನು ನೀಡಲಾಗುತ್ತಿದೆ. ಆದಾಗ್ಯೂ, ಇದಕ್ಕಾಗಿ, ನೀವು ಆಯುಷ್ಮಾನ್ ಕಾರ್ಡ್ ಹೊಂದಿರಬೇಕು. ಇದನ್ನು ತಯಾರಿಸುವುದು ತುಂಬಾ ಸುಲಭ. ಆಯುಷ್ಮಾನ್ ಕಾರ್ಡ್ ಗಳನ್ನು ಮನೆಯಲ್ಲಿ ಕುಳಿತು ಆನ್ ಲೈನ್ ಮೋಡ್ ನಲ್ಲಿ ಮಾಡಬಹುದು. ನೀವು ಸರಿಯಾಗಿ ಅರ್ಜಿ ಸಲ್ಲಿಸಿದರೆ, ಆಯುಷ್ಮಾನ್ ಕಾರ್ಡ್ ಅನುಮೋದನೆ ಪಡೆಯಲು ಕೇವಲ 24 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಯಾರು ಪಡೆಯಬಹುದು? ಬಡತನ ರೇಖೆಯಲ್ಲಿ ಅಂದರೆ ಬಿಪಿಎಲ್ ವರ್ಗಕ್ಕೆ ಸೇರಿದ ಜನರು ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಬಹುದು. ಇದಲ್ಲದೆ, ಕಡಿಮೆ ಆದಾಯ ಮತ್ತು ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್ಇಸಿಸಿ) ಡೇಟಾಬೇಸ್ನಲ್ಲಿ…

Read More

ಬೆಂಗಳೂರು : ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಕುಟುಂಬ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಅರ್ಜಿದಾರರು ನೇರವಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿ ಪಿಂಚಣಿ ಮಂಜೂರಾತಿ ಆದೇಶ ರೇಷನ್ ಕಾರ್ಡ್ ಪ್ರತಿ ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ಬ್ಯಾಂಕ್ ಖಾತೆ ವಿವರ ಮರಣ ಪ್ರಮಾಣ ಪತ್ರ ಮೃತರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ ಅರ್ಜಿದಾರರ ಕೋರಿಕೆ ಪತ್ರ

Read More

ಬೆಂಗಳೂರು : ಮುಡಾಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗಾಗಿ ಬಿಜೆಪಿ-ಜೆಡಿಎಸ್ ನಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯನವರೇ, ಬರೀ ನೋಟಿಸ್ ಕೊಟ್ಟಿದ್ದಕ್ಕೆ ನಡುಗುತ್ತಿದ್ದಿರಲ್ಲಾ.! ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಕತೆ ಏನಾಗಬಹುದು.! ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟವಿದು. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ನಡೆಯುತ್ತಿರುವ ಪಾದಯಾತ್ರೆ ಇದು ಎಂದು ಹೇಳಿದ್ದಾರೆ. https://twitter.com/i/broadcasts/1OwxWNRYjrmJQ

Read More

ಬೆಂಗಳೂರು : ಪಾದಯಾತ್ರೆ ಮುಗಿದ ಬಳಿಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಗ್ಯಾರಂಟಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಕಾಂಗ್ರೆಸ್‌ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ನಿಶ್ಚಿತ. ಬಿಜೆಪಿ ಜೆಡಿಎಸ್‌ ಪಕ್ಷಗಳ ಜಂಟಿ ಪಾದಯಾತ್ರೆ ಯಶಸ್ವಿಯಾಗುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ೆಂದು ಹೇಳಿದ್ದಾರೆ. ಇನ್ನು ಮೈಸೂರಿನ ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯನವರು ನೇಮಕ ಮಾಡಿರುವ ಮುಡಾ ಅಧ್ಯಕ್ಷರು ಹೇಳಿದ್ದಾರೆ. ಶೋಷಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್, ST ಸಮುದಾಯದ ಬಹುಕೋಟಿ ಹಣ ಲೂಟಿ ಹೊಡೆದಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್‌ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಂದು ಆರೋಪಿಸಿದ್ದಾರೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್‌ಗಳಿಗೆ ಉದ್ಯೋಗವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ  ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್‌ಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ. ಯುಎಇನಲ್ಲಿ ಪುರುಷ ನರ್ಸ್ ಗಳಿಗೆ ಉದ್ಯೋಗ ಪಡೆದವರಿಗೆ ಮಾಸಿಕವಾಗಿ 1,11,000 ರೂ. ಸಂಬಳ ಸಿಗಲಿದೆ. ಆಗಸ್ಟ್ ನಲ್ಲಿ ಆನ್ ಲೈನ್ ಮೂಲಕ ಸಂದರ್ಶನ ನಡೆಯಲಿದೆ.

Read More