Author: kannadanewsnow09

ಬೆಂಗಳೂರು: ಎಸ್ಐಟಿ ವಶದಲ್ಲಿದ್ದಂತ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ಜುಲೈ.8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ನಾಲ್ಕನೇ ಪ್ರಕರಣದಲ್ಲಿ ತಮ್ಮ ವಶಕ್ಕೆ ಪಡೆದಿದ್ದಂತ ಪ್ರಜ್ವಲ್ ರೇವಣ್ಣ ಅವರನ್ನು ಹಾಜರು ಪಡಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಜುಲೈ.8ರವಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುವಂತೆ ಅವರ ಪರ ವಕೀಲ ಅರುಣ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆ ಮನವಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸುವಂತೆ ಕೋರ್ಟ್ ಸೂಚಿಸಿತು. ಅಲ್ಲದೇ ಈ ಪ್ರಕರಣವನ್ನು ಸೋಮವಾರ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇನೆ. ಜೈಲು ಅಧಿಕಾರಿಗಳು ಮನವಿ ಸ್ವೀಕರಿಸದೇ ಇದ್ದರೇ ತಿಳಿಸುವಂತೆ ಹೇಳಿದೆ. https://kannadanewsnow.com/kannada/sda-accepts-bribe-through-phonepe-in-education-ministers-constituency/

Read More

ಪ್ರತಿಯೊಂದು ಶುಭ ಸಂದರ್ಭದಲ್ಲೂ ಪಂಚದೇವರನ್ನು ಪ್ರಾರ್ಥಿಸುವುದು ಕಡ್ಡಾಯವಾಗಿರಬೇಕು. ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು ದೇವರು ಸೇರಿ ಪಂಚದೇವರು ಎಂದು ಕರೆಯಲಾಗುತ್ತದೆ. ದೈನಂದಿನ ಪ್ರಾರ್ಥನೆಯಲ್ಲಿ ಅವುಗಳನ್ನು ಸೇರಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ನೀವು ಈ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಂಪತ್ತು, ಆರೋಗ್ಯ ಮತ್ತು ಸಂತೋಷ ಯಾವಾಗಲೂ ನಿಮ್ಮ ಸುತ್ತಲೂ ಇರುತ್ತದೆ. ಗಣೇಶ, ಶಿವ ಮತ್ತು ಭೈರವ ದೇವರಿಗೆ ತುಳಸಿ ಪತ್ರೆಯನ್ನು ಅರ್ಪಿಸಬಾರದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ…

Read More

ನವದೆಹಲಿ: ಲೇಹ್ನ ದೌಲತ್ ಬೇಗ್ ಓಲ್ಡಿ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಶನಿವಾರ ಮುಂಜಾನೆ ನದಿ ದಾಟುವ ಅಭ್ಯಾಸದ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾದ ಪರಿಣಾಮ ಭಾರತೀಯ ಸೇನೆಯ ಐವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಕೂಡ ಸೇರಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸೈನಿಕರು ವಾಡಿಕೆಯ ವ್ಯಾಯಾಮದಲ್ಲಿದ್ದರು. ಲೇಹ್ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ಹ್ ಬಳಿ ಬೋಧಿ ನದಿಯನ್ನು ತಮ್ಮ ಟಿ -72 ಟ್ಯಾಂಕ್ನಲ್ಲಿ ದಾಟುವಾಗ, ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. https://twitter.com/firefurycorps/status/1806948446739280068 ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಉಕ್ಕಿ ಹರಿದ ಪರಿಣಾಮ, ಟ್ಯಾಂಕರ್ ಹಾಗೂ ಸೈನಿಕರು ನೀರಿನಲ್ಲಿ ಮುಳುಗಿ ಹುತಾತ್ಮರಾಗಿದ್ದಾರೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಎಲ್ಲಾ ಐದು ಶವಗಳನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮರಾದಂತ…

Read More

ಬೆಂಗಳೂರು: KMFನಿಂದ ಎರಡು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು. ರೂ.2 ಏರಿಕೆ ಮಾಡಿದ್ದರಿಂದ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ದರ ಇಳಿಕೆಗೂ ಒತ್ತಾಯಿಸಲಾಗಿತ್ತು. ಇದರ ನಡುವೆ ಕೆಲವು ವರ್ತಕರು ನಂದಿನಿ ಹಾಲಿನ ದರವನ್ನು ಎಂಆರ್ ಪಿಗಿಂತ ಹೆಚ್ಚಿಗೆ ಮಾರಾಟ ಮಾಡುತ್ತಿರೋದು ತಿಳಿದು ಬಂದಿದೆ. ಇಂತವರಿಗೆ ನಂದಿನಿ ಹಾಲನ್ನು ಎಂಆರ್ ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದುಗೊಳಿಸೋದಾಗಿ ಕೆಎಂಎಫ್ ಎಚ್ಚರಿಕೆ ನೀಡಿದೆ. ನಂದಿನಿ ಹಾಲಿನ ಪ್ಯಾಕೇಟ್ 500 ಎಂಎಲ್ ನಿಂದ 550 ಎಂಎಲ್ ಹೆಚ್ಚಳ ಮಾಡಿ ಕೆಎಂಎಫ್ ದರವನ್ನೂ ರೂ.2 ಏರಿಕೆ ಮಾಡಲಾಗಿತ್ತು. ಒಂದು ಲೀಟರ್ ಹಾಲನ್ನು 1050 ಎಂಎಲ್ ಗೆ ಹೆಚ್ಚಳ ಮಾಡಿ ರೂ.2 ಏರಿಕೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ 500 ಎಂಎಲ್ ಇದ್ದಂತ ನಂದಿನಿ ಹಾಲಿನ ದರ 550 ಆದ ಬಳಿಕ ರೂ.22ರಿಂದ 24ಕ್ಕೆ ಏರಿಕೆಯಾಗಿತ್ತು. ಇನ್ನೂ ನಂದಿನಿ 1 ಲೀಟರ್ ಹಾಲು 1050 ಎಂಎಲ್ ಗೆ ಏರಿಕೆಯಾಗಿ ರೂ.46 ಇದ್ದದ್ದೂ ರೂ.48ಕ್ಕೆ…

Read More

ಬೆಂಗಳೂರು: ಸಿಎಂ ಬದಲಾವಣೆ, ಮೂವರು ಡಿಸಿಎಂ ಸೃಷ್ಠಿಯ ವಿವಾದ ರಾಜ್ಯದಲ್ಲಿ ತಾರಕಕ್ಕೇರಿದೆ. ಈ ವಿಚಾರವನ್ನು ಮಾತನಾಡದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದರು. ಆದ್ರೇ ಸಚಿವ ಕೆ.ಎನ್ ರಾಜಣ್ಣ ಮಾತ್ರ ಡಿಕೆಶಿ ವಾರ್ನಿಂಗ್ ನಾನು ಕೇಳ್ತೀನಾ? ನೋಟಿಸ್ ಕೊಡಲಿ ಆಮೇಲೆ ಮಾತಾಡ್ತೀನಿ ಅಂತ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಡಿದಂತ ಅವರು, ಡಿಕೆ ಶಿವಕುಮಾರ್ ನೋಡಿಸ್ ಕೊಟ್ಟ ಮೇಲೆ ನಾನು ಮಾತಾಡುತ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದರು. ನಾನು ವಿವಾದ ಆಗಬಾರದು ಎನ್ನುವ ಮಾತನ್ನು ಒಪ್ಪುತ್ತೇನೆ. ನಾನು ಡಿಸಿಎಂ ಬಗ್ಗೆ ತಪ್ಪಾಗಿ ಏನು ಹೇಳಿಲ್ಲ. ನಾವು ಕೇಳಬಾರದಾ ಅಂತ ಪ್ರಶ್ನಿಸಿದಂತ ಅವರು, ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಅಂದ್ರೆ ಯಾವುದೇ ಕ್ರಮ ತೆಗೆದುಕೊಂಡರು ಎದುರಿಸೋದಕ್ಕೆ ನಾನು ತಯಾರಿದ್ದೇನೆ ಅಂತ ಹೇಳಿದರು. ನಾನು ಡಿಕೆಶಿ ವಾರ್ನಿಂಗ್ ಕೇಳ್ತೀನಾ? ನಾನು ನಾನೇ,. ರಾಜಣ್ಣ, ರಾಜಣ್ಣನೇ. ಅಧಿಕಾರಕ್ಕೆ ನಾನು ಅಂಟಿಕೊಂಡಿಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್…

Read More

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಕಾಂಗ್ರೆಸ್‌ ಪಕ್ಷದೊಳಗೆ ಒಡಕು ಉಂಟಾಗಿದೆ. ಈ ಬಗ್ಗೆ ಒಕ್ಕಲಿಗ ಸ್ವಾಮೀಜಿ ಕೂಡ ಮಾತಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹಾಗೂ ಮೂರು ಡಿಸಿಎಂ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ಅಭಿವೃದ್ಧಿ ಕೆಲಸ ಮಾಡಲು ಯಾರೂ ಮುಂದಾಗುತ್ತಿಲ್ಲ. ಈ ಸರ್ಕಾರಕ್ಕೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ. ಡೆಂಘೀ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಅದಕ್ಕೆ ಸೂಕ್ತ ಕ್ರಮ ವಹಿಸಿಲ್ಲ ಎಂದರು. ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್‌ ಕಚ್ಚಾಟ ಹುಟ್ಟುಹಾಕಿರುವುದು ಒಳ್ಳೆಯದಲ್ಲ. ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದರು. ಒಂದು ಕುಟುಂಬಕ್ಕೆ…

Read More

ನವದೆಹಲಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪತ್ರಕರ್ತನನ್ನು ಬಂಧಿಸಿದೆ. ಶಂಕಿತನನ್ನು ಜಮಾಲುದ್ದೀನ್ ಎಂದು ಗುರುತಿಸಲಾಗಿದೆ. ಅವರು ‘ಪ್ರಭಾತ್ ಖಬರ್’ ಎಂಬ ಹಿಂದಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಬಂಧಿಸಲ್ಪಟ್ಟ ಹಜಾರಿ ಬಾಗ್ನ ಒಯಾಸಿಸ್ ಶಾಲೆಯ ಇಬ್ಬರು ಆರೋಪಿಗಳ ಸಹಚರ ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ನಿನ್ನೆಯಷ್ಟೇ ಜಾರ್ಖಂಡ್ ನ ಹಜಾರಿಬಾಗ್ನ ಒಯಾಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಶುಕ್ರವಾರ ಬಂಧಿಸಿತ್ತು. ಆರೋಪಿ ಪ್ರಾಂಶುಪಾಲ ಡಾ.ಎಹ್ಸಾನುಲ್ ಹಕ್ ಹಜಾರಿಬಾಗ್ನಲ್ಲಿ ನೀಟ್ ಪರೀಕ್ಷೆಯ ಜಿಲ್ಲಾ ಸಂಯೋಜಕರಾಗಿದ್ದರು ಮತ್ತು ಅವರ ಡೆಪ್ಯೂಟಿ ಇಮ್ತಿಯಾಜ್ ಆಲಂ ಎನ್ಟಿಎ ವೀಕ್ಷಕರಾಗಿರುವುದರ ಜೊತೆಗೆ ಒಯಾಸಿಸ್ ಶಾಲೆಯಲ್ಲಿ ಕೇಂದ್ರದ ಅಧೀಕ್ಷಕರಾಗಿದ್ದರು. https://kannadanewsnow.com/kannada/sda-accepts-bribe-through-phonepe-in-education-ministers-constituency/ https://kannadanewsnow.com/kannada/india-us-balanced-tax-treaty-extended-till-june-30/

Read More

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರದಲ್ಲೇ ಲಂಚಾವತಾರ ತಾಂಡವವಾಡುತ್ತಿದೆ. ಇಲ್ಲೊಬ್ಬ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಸಿಬ್ಬಂದಿಯೊಬ್ಬರು ಪೋನ್ ಪೇ ಮೂಲಕವೇ ಲಂಚದ ಹಣವನ್ನು ಸ್ವೀಕರಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಮಾಹಿತಿ ಹಕ್ಕು ಕಾಯ್ದೆ 2005ರ ಅನುಸಾರವಾಗಿ ಶಿವಮೊಗ್ಗದ ಗಾಡಿ ಕೊಪ್ಪದ ಎಲ್.ಅಭಿಷೇಕ್ ಎಂಬುವರು, ಗಾಡಿಕೊಪ್ಪ ಗ್ರಾಮ ಸರ್ವೇ ನಂಬರ್ 13, 14, 10 ಹಾಗೂ 11ರ ಮೈಲಾರಪ್ಪ, ಯಶವಂತ ಪವಾರ್ ಅವರಿಗೆ ಸೇರಿದಂತೆ ಸಂಪೂರ್ಣ ದಾಖಲೆ, ಪಹಣಿ, ಎಂ ಆರ್ ಮತ್ತು ಮ್ಯುಟೇಷನ್ ಗಳ ಪ್ರತಿಯನ್ನು ದೃಢೀಕರಿಸಿ ನೀಡುವಂತೆ ಕೋರಿದ್ದರು. ಮೇ.13ರಂದು ಆರ್ ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಂತ ಅಭಿಷೇಕ್ ಗೆ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಭಿನಂದನ್ ಕಳಿಸಿರಲಿಲ್ಲ. ಅಲ್ಲದೇ ಇಂದು, ನಾಳೆ ಅಂತ ಸುಳ್ಳು ಹೇಳುತ್ತಾ ಬಂದಿದ್ದಾರೆ. ಕೊನೆಗೆ ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದಾಗ ಮೇ.31ರಂದು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಭಿನಂದನ್ ಜುಲಾಕಿ ಅವರು…

Read More

ಉಡುಪಿ : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾನು ನೋಡಿದ ದಿಟ್ಟ ಮಹಿಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಾರ್ಡನ್ ಇಂದಿರಾ ಗಾಂಧಿ ಸ್ವರೂಪ ಹೊಂದಿರುವವರು ಅವರು. ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿ ಅವರಿಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಶ್ಲಾಘಿಸಿದರು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರ್ಯವೈಖರಿಯನ್ನು ಹೊಗಳಿದರು. ಸಚಿವರ ಕಾಳಜಿಯಿಂದಲೇ ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆ ಗೃಹಲಕ್ಷ್ಮಿ ಇಂದು ಮನೆ ಮನೆಗೆ ತಲುಪುತ್ತಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಇಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಆಡಳಿತ ವೈಖರಿ ಇತರರಿಗೂ ಮಾದರಿಯಾಗಿದೆ ಎಂದು ವಿನಯ್ ಗುರೂಜಿ ಹೇಳಿದರು. ಗ್ರಾಮೀಣ ಪ್ರದೇಶದ ಉದ್ಯಮಿಗಳಿಗೆ ಬೆಂಬಲ ಮನುಷ್ಯ ಕಷ್ಟಪಟ್ಟು ಮುಂದೆ ಬಂದಿದ್ದರಷ್ಟೇ ಆತನಿಗೆ ಕಷ್ಟಪಟ್ಟವರ ಬೆಲೆ ಗೊತ್ತಿರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗಬೇಕು.…

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬೃಹತ್ ಹಗರಣ, ಭ್ರಷ್ಟಾಚಾರದ ಸಂಬಂಧ ಸಿ.ಎಂ. ರಾಜೀನಾಮೆಗೆ ಆಗ್ರಹಿಸಿ ಜುಲೈ 3ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು. ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 3ರಂದು ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ನುಡಿದರು. ಬಿಜೆಪಿ ತೀವ್ರ ಹೋರಾಟದ ಬಳಿಕ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಎಸ್‍ಐಟಿ ಇಲ್ಲಿನವರೆಗೆ ನಾಗೇಂದ್ರರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಆಕ್ಷೇಪಿಸಿದರು. ನಮ್ಮ ಹೋರಾಟದ ಮುಂದುವರೆದ ಭಾಗವಾಗಿ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷ ದದ್ದಲ್, ಅಷ್ಟೇ ಅಲ್ಲ; ಮಾನ್ಯ ಮುಖ್ಯಮಂತ್ರಿಗಳೂ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿದೆ ಎಂದು ಆಗ್ರಹಿಸಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಹಣಕಾಸಿನ ಸಚಿವರಾಗಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ…

Read More