Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವೈಜಾಗ್ ಸ್ಟೀಲ್ ಕಾರ್ಖಾನೆ (RNIL)ಗೆ ಭೇಟಿ ನೀಡಲಿದ್ದಾರೆ. ಬುಧವಾರ ಸಂಜೆಯೇ ವಿಶಾಖಪಟ್ಟಣಕ್ಕೆ ಆಗಮಿಸಿರುವ ಸಚಿವರು, ಗುರುವಾರ ಬೆಳಗ್ಗೆ ತಮ್ಮ ಖಾತೆಯ ಸಹಾಯಕ ಸಚಿವರು, ಆಂಧ್ರ ಪ್ರದೇಶದವರೇ ಆದ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಉನ್ನತ ಅಧಿಕಾರಿಗಳ ಜತೆಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಕಂಪನಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನವದೆಹಲಿಯ ತಮ್ಮ ಸಚಿವಾಲಯದಲ್ಲಿ ಹಲವಾರು ಸಭೆಗಳನ್ನು ನಡೆಸಿರುವ ಸಚಿವರು, ತಾವೇ ಖುದ್ದು ವಿಶಾಖಪಟ್ಟಣಕ್ಕೆ ಬಂದು ಉಕ್ಕು ಕಾರ್ಖಾನೆಯನ್ನು ವೀಕ್ಷಿಸುತ್ತಿದ್ದಾರೆ. ಆರ್ಥಿಕವಾಗಿ ಹಾಗೂ ಇನ್ನಿತರೆ ಕಾರಣಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಂಪನಿಯನ್ನು ಮೇಲೆತ್ತುವ ಬಗ್ಗೆ ಪ್ರಯತ್ನ ನಡೆಸಿರುವ ಸಚಿವರು; ಭೂಪತಿರಾಜು ಅವರ ಜತೆಯೂ ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಸಚಿವಾಲಯದಲ್ಲಿ ಭೇಟಿಯಾಗಿದ್ದ ಆಂಧ್ರ ಪ್ರದೇಶದ ಸಂಸದರು, ಬಿಜೆಪಿ ಹಿರಿಯ ನಾಯಕಿಯಾದ ಪುರಂದೇಶ್ವರಿ ಅವರು, ಹೇಗಾದರೂ…
ಶಿವಮೊಗ್ಗ: ನಾಳೆ ಸೊರಬ ತಾಲ್ಲೂಕಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜಾಥಾ ಮತ್ತು ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಯ್ ಪಾಟೇಲ್ ಜಿ.ಎಲ್ ಅವರು, ದಿನಾಂಕ 11-07-2024ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಹೆಚ್ ಪಿಆರ್ ಆರ್ ನರ್ಸಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಜಾಥಾ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅಂತ ತಿಳಿಸಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ ಎನ್ನುವ ಘೋಷವಾಕ್ಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ಜಾಥಾ ಬಳಿಕ ಸೊರಬದ ಸ್ತ್ರೀಶಕ್ತಿ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದನ್ನು ಶಾಲಾ…
ಕೊಡಗು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಡ್ರಾಫ್ ನೀಡುವ ನೆಪದಲ್ಲಿ ಬಾಲಕಿಯೊಬ್ಬಳ ಮೇಲೆ ಕೀಚಕರ ಕೃತ್ಯವನ್ನು ದುರುಳರು ಮೆರೆದಿದ್ದಾರೆ. ಓರ್ವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರೇ, ಮತ್ತೋರ್ವ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಐವರು ಬಾಲಕಿಯರನ್ನು, ಮಾರುತಿ 800 ಅಪರಿಚಿತ ಕಾರಿನಲ್ಲಿ ಡ್ರಾಫ್ ಕೊಡುವುದಾಗಿ ಕರೆದೊಯ್ದಿದ್ದಾರೆ. ನಾಗರಹೊಳೆಗೆ ಡ್ರಾಫ್ ಕೊಡ್ತಾರೆ ಅಂತ ಕಾರು ಹತ್ತಿದಂತ ಬಾಲಕಿಯರನ್ನು ದಾರಿ ಮಧ್ಯೆ ಕಾಫಿ ತೋಟಕ್ಕೆ ಕರೆದೊಯ್ದು ಓರ್ವ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಮತ್ತೋರ್ವ ಬಾಲಕಿಯ ಮೇಲೆ ಮೂವರಿಂದ ಅತ್ಯಾಚಾರ ಯತ್ನ ನಡೆಸಲಾಗಿದೆ. ಆದ್ರೇ ತಪ್ಪಿಸಿಕೊಂಡು ಹೋಗಿ, ಸಮೀಪದಲ್ಲಿದ್ದಂತ ಸ್ಥಳೀಯರನ್ನು ರಕ್ಷಣೆಗೆ ಕೋರಿದಾಗ, ಕೀಚಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದಂತ ಅವರು, ಕುಟ್ಟ ಪೊಲೀಸ್ ಠಾಣೆಗೆ ತೆರಳಿದಂತ ಸಂತ್ರಸ್ತ ಬಾಲಕಿಯರು ದೂರು ನೀಡಿದ್ದಾರೆ. ಬಾಲಕಿಯರ ದೂರಿನ ಅನ್ವಯ ಐವರ ವಿರುದ್ಧ ದೂರು ದಾಖಲಿಸಿಕೊಂಡು, ಆ ಬಳಿಕ…
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂದು ಒಂದೇ ದಿನ ರಾಜ್ಯಾಧ್ಯಂತ 293 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1874 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 293 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 100 ಆಗಿದೆ ಅಂತ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 391 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 118 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರು, ಕೋಲಾರದಲ್ಲಿ 14, ತುಮಕೂರು 08, ದಾವಣಗೆರೆ 10, ಶಿವಮೊಗ್ಗ 07, ಬಾಗಲಕೋಟೆ 04, ಧಾರವಾಡ 15, ಹಾವೇರಿ 15, ಉತ್ತರ ಕನ್ನಡ 03, ಕಲಬುರ್ಗಿ 08, ಯಾದಗಿರಿ 04, ಬೀದರ್ 06, ಬಳ್ಳಾರಿ 03, ವಿಜಯನಗರ 10, ಕೊಪ್ಪಳ 03 ಮಂದಿಗೆ ಡೆಂಗ್ಯೂ…
ದಾವಣಗೆರೆ: ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್ ಡಿಸೈನಿಂಗ್ ಹಾಗೂ ಟೈಲರಿಂಗ್ ಕುರಿತ 30 ದಿನಗಳ ಉಚಿತ ತರಬೇತಿ ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾμÉ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ನರೇಗಾ ಯೋಜನೆಯ ಜಾಬ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್‍ನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ. https://kannadanewsnow.com/kannada/congress-sets-up-committee-to-submit-preliminary-report-on-bbmp-polls/ https://kannadanewsnow.com/kannada/hubballi-neha-murder-case-love-jihad-was-not-the-reason-for-murder-says-chargesheet/
ದಾವಣಗೆರೆ : ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇಎಲ್.ಇಡಿ.ಗೆ ದಾಖಲಾತಿ ಪಡೆಯಲು ಜುಲೈ 31 ರವಗೆ ಆಫ್‍ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪ್ರವೇಶ ಪಡೆಯಬಹುದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,( ಡಯಟ್), ದಾವಣಗೆರೆ ಇಲ್ಲಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ನಮೂನೆಗಳನ್ನು WWW.schooleducation.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್. ದಾವಣಗೆರೆ ಇಲ್ಲಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಅರ್ಹತೆ. ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು WWW.schooleducation.karnataka.gov.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: ಕನ್ನಡ ಮಾಧ್ಯಮ – 9164489972, 988030377. 9844401092. 08192-231156, ಉರ್ದು ಮಾಧ್ಯಮ- 9164489972, 8867932439, 08192-231156 ಸಂಪರ್ಕಿಸಲು ಡಯಟ್ ಪ್ರಾಂಶುಪಾಲರಾದ ಗೀತಾ ತಿಳಿಸಿದ್ದಾರೆ. https://kannadanewsnow.com/kannada/congress-sets-up-committee-to-submit-preliminary-report-on-bbmp-polls/ https://kannadanewsnow.com/kannada/hubballi-neha-murder-case-love-jihad-was-not-the-reason-for-murder-says-chargesheet/
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿ ಚುನಾವಣೆಗೆ ಭರ್ಜರಿ ತಯಾರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಗೂ ಮುನ್ನವೇ ಬಿಬಿಎಂಪಿ ಚುನಾವಣೆ ಪ್ರಾಥಮಿಕ ವರದಿಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಅಗತ್ಯವಾದ ಪೂರ್ವಸಿದ್ಧತೆಗಳ ಬಗ್ಗೆ ಅಧ್ಯಯನ ನಡೆಸಿ ಒಂದು ವರದಿಯನ್ನು ಸಲ್ಲಿಸಲು ಈ ಕೆಳಕಾಣಿಸಿದಂತೆ “ಬಿ.ಬಿ.ಎಂ.ಪಿ. ಚುನಾವಣೆ ಪ್ರಾಥಮಿಕ ವರದಿ ಸಮಿತಿ”ಯನ್ನು ನೇಮಕ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಸಮಿತಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟ ಸಚಿವರುಗಳು, ಸಂಸದರು, ಶಾಸಕರು, ಡಿಸಿಸಿ ಅಧ್ಯಕ್ಷರು, ಮಾಜಿ ಶಾಸಕರು, 2024ರ ಲೋಕಸಭೆ ಅಭ್ಯರ್ಥಿಗಳು, 2023ರ ವಿಧಾನಸಭೆ ಅಭ್ಯರ್ಥಿಗಳು ಹಾಗೂ ಇತರ ಹಿರಿಯ ನಾಯಕರುಗಳನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿ ಬಿಬಿಎಂಪಿ ಚುನಾವಣೆ ಅಧ್ಯಯನ ನಡೆಸಿ ಒಂದು ತಿಂಗಳುಗಳ ಒಳಗಾಗಿ ಒಂದು ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಬೆಂಗಳೂರು ಪೂರ್ವಕ್ಕೆ ಮಾಜಿ ಮೇಯರ್ ಜೆ.ಹುಚ್ಚಪ್ಪ,…
ದಾವಣಗೆರೆ : ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ (ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸ್ ನ ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ https://shp.karnataka.gov.in ನ ಮೂಲಕ ಆಹ್ವಾನಿಸಲಾಗಿದೆ. ಆಗಸ್ಟ್ 8 ರೊಳಗಾಗಿ ರಾಜ್ಯ ವಿದ್ಯಾರ್ಥಿನಿಲಯದ ತಂತ್ರಾಂಶದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳ ವಿವರ: ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಕುಂದುವಾಡ ರಸ್ತೆ, 1 & 2, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ, ಶಿವಕುಮಾರ್ ಸ್ವಾಮಿ ಬಡಾವಣೆ, ದಾವಣಗೆರೆ 1 & 2, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕ ವಿದ್ಯಾರ್ಥಿನಿಲಯ, ಗುತ್ತೂರು ಕಾಲೋನಿ,ಹರಿಹರ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಕೆರೆಬಿಳಚಿ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ, ಜಗಳೂರು ಟೌನ್, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ: 08192-250022 ಹಾಗೂ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಚೇರಿ ದೂ.ಸಂ: 08192-250066 ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಅಲ್ಲದೇ ಸದಸ್ಯರು ಪತ್ರಕರ್ತರನ್ನು ನೇಮಿಸಲಾಗಿದೆ. ಇಂದು ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಬೈಲಾದ ಕಂಡಿಕೆ 5(1) ಮತ್ತು 5(5)ರಲ್ಲಿ ಪುದತ್ತವಾಗಿರುವ ಅಧಿಕಾರದನ್ವಯ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೇ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ಅವರನ್ನು ನೇಮಕ ಮಾಡಿದ್ರೇ, ಸದಸ್ಯರನ್ನಾಗಿ ಎಂ.ಎನ್ ಅಹೋಬಳಪತಿ, ಕೆ.ವೆಂಕಟೇಶ್ ಹಾಗೂ ಕೆ ನಿಂಗಜ್ಜ ಅವರನ್ನು ನೇಮಕ ಮಾಡಲಾಗಿದೆ. https://kannadanewsnow.com/kannada/special-buses-arranged-by-ksrtc-to-visit-chamundi-hill-in-mysuru-on-ashada-friday/ https://kannadanewsnow.com/kannada/good-news-for-job-seekers-notification-for-recruitment-of-2000-linemen-to-be-issued-in-15-days/
ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇದರ ಜೊತೆ ಜೊತೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರದಂದು ದರ್ಶನಕ್ಕೆ ತೆರಳೋರಿಗೆ ವಿಶೇಷ ಕೆ ಎಸ್ ಆರ್ ಟಿಸಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಕೆ ಎಸ್ ಆರ್ ಟಿಸಿಯಿಂದ ಮಾಹಿತಿ ಹಂಚಿಕೊಂಡಿದ್ದು, ಮೈಸೂರು ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಪ್ರಯುಕ್ತ ಹಲವಾರು ಅನುಕೂಲಗಳನ್ನು ಕಲ್ಪಿಸಲಾಗಿದ್ದು, ಈ ಬಾರಿಯೂ ಪಾಸ್ ವ್ಯವಸ್ಥೆ ಇರುವುದಿಲ್ಲ. ದರ್ಶನಕ್ಕೆ ವಿಶೇಷ ಟಿಕೆಟ್ ವ್ಯವಸ್ಥೆ ಇದೆ ಅಂತ ತಿಳಿಸಿದೆ. ಆಷಾಢ ಶುಕ್ರವಾರಗಳಾದ ಜುಲೈ 12,19,26, ಆಗಸ್ಟ್ 26 ಮತ್ತು ಚಾಮುಂಡೇಶ್ವರಿ ವರ್ಧಂತಿ ದಿನವಾದ 27 ರಂದು ದೇವಾಲಯದ ವತಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಬೆಟ್ಟಕ್ಕೆ ಪ್ರಯಾಣಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಅಂತ ಮಾಹಿತಿ ನೀಡಿದೆ. https://kannadanewsnow.com/kannada/ksrp-inspector-caught-by-lokayukta-while-accepting-rs-18000-bribe/ https://kannadanewsnow.com/kannada/hubballi-neha-murder-case-love-jihad-was-not-the-reason-for-murder-says-chargesheet/