Author: kannadanewsnow09

ನವದೆಹಲಿ: ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League – IPL) 2025 ರ ಮೆಗಾ ಹರಾಜಿಗೆ ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾ ಸ್ಥಳವಾಗಿದೆ. ಆರಂಭದಲ್ಲಿ ರಿಯಾದ್ನಲ್ಲಿ ಹರಾಜು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕೊನೆಯ ಕ್ಷಣದ ಸ್ಥಳದ ಬದಲಾವಣೆಯ ನಂತರ ಅಬಾಡಿ ಅಲ್ ಜೋಹರ್ ಅರೆನಾ ಎರಡು ದಿನಗಳ ಹರಾಜನ್ನು ಆಯೋಜಿಸಲಿದೆ ಎಂದು ಈಗ ಬೆಳಕಿಗೆ ಬಂದಿದೆ. ಐಪಿಎಲ್ ಪಾಲುದಾರರನ್ನು ಉದ್ದೇಶಿಸಿ ಇಂಡಿಯಾ ಟುಡೇ ಆಂತರಿಕ ಇಮೇಲ್ ಅನ್ನು ಪ್ರವೇಶಿಸಿದ್ದು, ಅದು ರಿಯಾದ್ನಿಂದ ಜೆಡ್ಡಾಗೆ ಸ್ಥಳವನ್ನು ಬದಲಾಯಿಸುವುದನ್ನು ದೃಢಪಡಿಸಿದೆ. “ಹರಾಜಿನ ಸ್ಥಳವು ಅಬಾದಿ ಅಲ್ ಜೋಹರ್ ಅರೆನಾ (ಬೆಂಚ್ಮಾರ್ಕ್ ಅರೆನಾ ಎಂದೂ ಕರೆಯಲ್ಪಡುತ್ತದೆ) ಮತ್ತು ವಸತಿ ಸ್ಥಳವು ಹರಾಜು ಸ್ಥಳದಿಂದ 10 ನಿಮಿಷಗಳ ದೂರದಲ್ಲಿರುವ ಹೋಟೆಲ್ ಶಾಂಗ್ರಿ-ಲಾದಲ್ಲಿ ನಡೆಯಲಿದೆ. ವೀಸಾ ಮತ್ತು ಲಾಜಿಸ್ಟಿಕ್ಸ್ ಅವಶ್ಯಕತೆಗಳಿಗಾಗಿ ನಮ್ಮ ಕಾರ್ಯಾಚರಣೆ ತಂಡವು ಸಂಪರ್ಕದಲ್ಲಿರುತ್ತದೆ” ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ. ಬಿಸಿಸಿಐ ಮಂಗಳವಾರ ಜೆಡ್ಡಾವನ್ನು ಸ್ಥಳವೆಂದು ದೃಢಪಡಿಸಿದೆ.…

Read More

ವಾರಣಾಸಿ: ರಾಜೇಂದ್ರ ಗುಪ್ತಾ ಎಂಬ ವ್ಯಕ್ತಿ ತನ್ನ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ವಾರಣಾಸಿಯಲ್ಲಿ ಸೋಮವಾರ ತಡರಾತ್ರಿ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಶಾಕಿಂಗ್ ಎನ್ನುವಂತೆ ಜ್ಯೋತಿಷಿಯ ಮಾತು ಕೇಳಿ ಪತ್ನಿ, ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದಿರುವುದಾಗಿ ಹೇಳಲಾಗುತ್ತಿದೆ. ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಭದೈನಿ ಪ್ರದೇಶದಲ್ಲಿ ಈ ಅಪರಾಧ ನಡೆದಿದ್ದು, ಗುಪ್ತಾ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ಬಾಡಿಗೆದಾರರು ಮಂಗಳವಾರ ಮಧ್ಯಾಹ್ನ ಕೊಲೆಗಳನ್ನು ಕಂಡುಹಿಡಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಗುಪ್ತಾ ತನ್ನ ಪತ್ನಿ ನೀತು ಗುಪ್ತಾ (45), ಪುತ್ರರಾದ ನವೇಂದ್ರ ಗುಪ್ತಾ (25) ಮತ್ತು ಸುಬೇಂದ್ರ ಗುಪ್ತಾ (15) ಮತ್ತು ಅವರ ಮಗಳು ಗೌರಂಗಿ ಗುಪ್ತಾ (16) ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಕಟ್ಟಡದಲ್ಲಿ ಸುಮಾರು 20 ಬಾಡಿಗೆದಾರರು ವಾಸಿಸುತ್ತಿದ್ದರೂ, ರಾತ್ರಿಯಲ್ಲಿ ಯಾವುದೇ ಗದ್ದಲ ಅಥವಾ ಅಸಾಮಾನ್ಯ ಚಟುವಟಿಕೆಯನ್ನು ಯಾರೂ ಗಮನಿಸಲಿಲ್ಲ. ಗುಪ್ತಾ ಜ್ಯೋತಿಷಿಯೊಬ್ಬರ ಸಲಹೆಯಿಂದ ಪ್ರಭಾವಿತರಾಗಿದ್ದರು ಕೆಲವು ಬಾಡಿಗೆದಾರರನ್ನು ಉಲ್ಲೇಖಿಸಿ ವರದಿಗಳ…

Read More

ಶಿವಮೊಗ್ಗ: ಜಿಲ್ಲೆಯ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದು ಸುಬ್ಬಯ್ಯ ಆಸ್ಪತ್ರೆ. ಈ ಆಸ್ಪತ್ರೆಗಳ ಸಮೂಹದ ಅಧ್ಯಕ್ಷರಾಗಿದ್ದಂತ ಟಿ.ಸುಬ್ಬರಾಮಯ್ಯ (88) ಅವರು ಇಂದು ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅವರು, ಅನಾರೋಗ್ಯದ ಕಾರಣದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಂದಹಾಗೇ 2003ರಲ್ಲಿ ಗುತ್ತಿಗೆದಾರರಾಗಿದ್ದಂತ ಟಿ.ಸುಬ್ಬರಾಮಯ್ಯ ಅವರು ಸುಬ್ಬಯ್ಯ ಟ್ರಸ್ಟ್ ಆರಂಭಿಸಿದ್ದರು. ಆ ನಂತ್ರ ಆಸ್ಪತ್ರೆಗಳನ್ನು ಪ್ರಾರಂಭಿಸಿದ್ದರು. ಇದಾದ ನಂತ್ರ ಸುಬ್ಬಯ್ಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಮ್ಯಾಕ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಿ, ಆರೋಗ್ಯ ಸೇವೆಯನ್ನು ನೀಡಲು ಕಾರಣಕರ್ತರಾಗಿದ್ದರು. ಇಂತಹ ಸುಬ್ಬರಾಮಯ್ಯ ಅವರು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. https://kannadanewsnow.com/kannada/state-food-department-releases-provisional-merit-list-for-386-vacancies/ https://kannadanewsnow.com/kannada/good-news-for-farmers-2-lakh-loan-available-under-this-scheme-of-central-government-you-can-also-apply/

Read More

ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಬಳಿಕ ಇಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆಗೆ ಮೂಲ ದಾಖಲೆಗಳ ಪರಿಶೀಲನೆಗೂ ದಿನಾಂಕ ನಿಗದಿಗೊಳಿಸಲಾಗಿದೆ. ಇಂದು ರಾಜ್ಯ ಆಹಾರ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಈ ಕೆಳಕಂಡ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪತ್ರಿಕೆ, ನಿರ್ದಿಷ್ಟ ಪತ್ರಿಕೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ಕಂಪ್ಯೂಟರ್ ಜ್ಞಾನ ಮುಂತಾದ ವಿಷಯಗಳಲ್ಲಿ ಸ್ಮರ್ಧಾತ್ಮಕ ಪರೀಕ್ಷೆಯನ್ನು ಅಕ್ಟೋಬರ್- 2023 ಮತ್ತು ನವೆಂಬರ್-2023ರ ಮಾಹೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುತ್ತದೆ ಎಂದಿದೆ. ಸಹಾಯಕ ವ್ಯವಸ್ಥಾಪಕರು – 10 ಗುಣಮಟ್ಟ ನಿರೀಕ್ಷಕರು – 23 ಹಿರಿಯ ಸಹಾಯಕರು (ಲೆಕ್ಕ) – 33 ಹಿರಿಯ ಸಹಾಯಕರು -57 ಕಿರಿಯ ಸಹಾಯಕರು – 263 ಒಟ್ಟು ಹುದ್ದೆಗಳು -386 ಸ್ಮರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ ತರುವಾಯ,…

Read More

ಗದಗ: ಜಿಲ್ಲೆಯಲ್ಲಿ ಮೂವರು ಮಕ್ಕಳ ಜೊತೆಗೆ ನದಿಗೆ ಹಾರಿದಂತ ತಂದೆ, ಆತ್ಮಹತ್ಯೆಗೆ ಶರಣಾಗಿರುವಂತ ಧಾರುಣ ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿರುವಂತ ತುಂಗಭದ್ರಾ ನದಿಗೆ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಎಸೆದು, ತಾನು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಮೃತರನ್ನು ವೇದಾಂತ(3),  ಪವನ್(4) ಹಾಗೂ ಧನ್ಯಾ(6), ತಂದೆ ಮಂಜುನಾಥ್ ಎಂಬುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿಶಾಮಕ ಸಿಬ್ಬಂದಿಗಳು, ಮೃತರ ಶವಗಳನ್ನು ತುಂಗಭದ್ರಾ ನದಿಯಿಂದ ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. https://kannadanewsnow.com/kannada/kumaranna-did-not-solve-your-problem-despite-being-cm-dk-shivakumar-suresh/ https://kannadanewsnow.com/kannada/good-news-for-farmers-2-lakh-loan-available-under-this-scheme-of-central-government-you-can-also-apply/

Read More

ರಾಮನಗರ : “ಮುಖ್ಯಮಂತ್ರಿಯಾಗಿದ್ದರೂ ಕುಮಾರಣ್ಣ ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ. ತಾಜ್ ವೆಸ್ಟ್ ಎಂಡ್ ಹೊಟೇಲ್ ಒಳಗೆ ದಳದ ಕಾರ್ಯಕರ್ತರನ್ನು ಬಿಡದ ಕಾರಣ, ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು. ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಕೋಡಂಬಳ್ಳಿ, ಅಕ್ಕೂರು, ಅರಲಾಳುಸಂದ್ರ, ಮೆಣಸಿಗನಹಳ್ಳಿ ಗ್ರಾಮದಲ್ಲಿ ಸುರೇಶ್ ಅವರು ಮಂಗಳವಾರ ಪ್ರಚಾರ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು; ಚನ್ನಪಟ್ಟಣ ಕ್ಷೇತ್ರದ ಜನರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿ ಆದವರಿಗೆ ತಾಲ್ಲೂಕಿನ ಅಭಿವೃದ್ಧಿ ಮಾಡಲು ಎಷ್ಟು ಸಮಯ ಬೇಕು? ವಿರೂಪಾಕ್ಷಿಪುರ, ಅಕ್ಕೂರು ಹೋಬಳಿಯ ಸಮಸ್ಯೆ ಏನು? ಈ ಭಾಗದ ರೈತರ ಸಮಸ್ಯೆ ಏನು ಎಂದು ಗೊತ್ತಿದ್ದರೆ ಅವುಗಳನ್ನು ಬಗೆಹರಿಸಲು ಹತ್ತರಿಂದ ಹದಿನೈದು ದಿನಗಳು ಸಾಕು. ನೀವು ಮುಖ್ಯಮಂತ್ರಿ ಮಾಡಿದರೂ ಕುಮಾರಸ್ವಾಮಿ ಅವರಾಗಲಿ ಅಥವಾ ಜೆಡಿಎಸ್ ಮುಖಂಡರಾಗಲಿ ನಿಮ್ಮ ಊರಿನ ಋಣ ತೀರಿಸುವ ಕೆಲಸ ಮಾಡಲಿಲ್ಲ. ನೀವು ಅವರನ್ನು ಮುಖ್ಯಮಂತ್ರಿಗಿಂತ ಇನ್ನೇನು…

Read More

ಕಲಬುರಗಿ : ಸೇಡಂ ತಾಲೂಕಿನ ತೊಟ್ನಳ್ಳಿಯ ಶ್ರೀ ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರಿಗೆ ಸೇರಿದ 5ಎಕರೆ 24 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ನಮೂದಾಗಿದ್ದು, ಇದನ್ನು ಖಂಡಿಸಿ ಶ್ರೀಗಳು ನ.6ರಂದು ತೊಟ್ನಳ್ಳಿಯಿಂದ ಸೇಡಂನ ಸಹಾಯಕ ಆಯುಕ್ತರ ಕಾರ್ಯಾಲಯದ ವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗೆ ಬಿಜೆಪಿಯ ಬೆಂಬಲಿವಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ. ಈ ವಕ್ಫ್ ಕಾಯಿದೆ ಅಡ್ಡ ಇಟ್ಟುಕೊಂಡು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ರೈತರ ಭೂಮಿ ಮಾತ್ರವಲ್ಲದೆ ಮಠ, ಮಂದಿರಗಳ ಆಸ್ತಿಯನ್ನು ಕೊಳ್ಳೆಹೊಡೆಯುವ ಕೆಲಸಕ್ಕೆ ಕೈಹಾಕುತ್ತಿದೆ. ಹಿಂದೂಗಳ ದೇವಾಲಯಗಳ ಸ್ಥಳಗಳ ಮೇಲೆಯೂ ವಕ್ಫ್ ನಮೂದು ಮಾಡಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕೊಳ್ಳೆ ಹೊಡೆದರೆ ಕೇಳುಯವವರು ಯಾರು ಇಲ್ಲ ಎನ್ನುವಂತಹ ಮನಸ್ಥಿತಿ ಕಾಂಗ್ರೆಸ್ ಹೊಂದಿದದ್ದರೆ ಇದು ಕಾಂಗ್ರೆಸ್ ಮೂರ್ಖತನ ಹಿಂದೂಗಳು ಸಿಡಿದು ಎದ್ದು ನಿಂತರೆ ಕೈ ಖುರ್ಚಿ ಅಲುಗಾಡುತ್ತದೆ. ಆದ್ದರಿಂದ ಕೂಡಲೇ ಎಚ್ಚೆತ್ತು ಯಾವೇಲ್ಲ ಮಠ, ಮಂದಿರ ಮತ್ತು ಇನ್ನಿತರ ಧಾರ್ಮಿಕ ಕೇಂದ್ರಗಳ ಆಸ್ತಿಯಲ್ಲಿ…

Read More

ಲವಂಗದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಮೂರು ಶುಕ್ರ ವಾರ ಗಳ ಕಾಲ ಈ ಪರಿಹಾರವನ್ನು ನೀವು ಪಾಲಿಸಿಕೊಂಡು ಬಂದಿದೆ ಅದರೆ ನಿಮ್ಮ ಜೀವನದಲ್ಲಿ ಎದುರಾಗುತ್ತ ಇರುವಂತಹ ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳು ಬೇಗ ಪರಿಹರವಾಗುತ್ತದೆ. ಪಂಡಿತ್  ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564 ಅದು ಹೇಗೆ ಅಂತೀರಾ ಈ ಲವಂಗಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗೂ ದುಷ್ಟಶಕ್ತಿಯನ್ನು ದೂರ ಮಾಡುವಂತಹ…

Read More

ಧಾರವಾಡ : 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, ವೃತ್ತಿ ಪರ ಪದವಿ ಹಾಗೂ ವೃತ್ತಿ ಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅಕ್ಟೋಬರ್ 31, 2024 ಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 10, 2024 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು https://ssp.postmatric.karnataka.gov.in ವೆಬ್‍ಸೈಟ್ ಮೂಲಕ ನವೆಂಬರ್ 10, 2024 ರೊಳಗಾಗಿ ಅರ್ಜಿ ಸಲ್ಲಿಸಬಹುದು.…

Read More

ಬೆಂಗಳೂರು : ಇಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉತ್ತಮ ಚಾರ್ಚಿಂಗ್‌ ಮೂಲಸೌಕರ್ಯ ಕಲ್ಪಿಸಿರುವ ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ ಸಂದಿದೆ. ಇ-ಮೊಬಿಲಿಟಿ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಇವಿ ಚಾರ್ಚಿಂಗ್‌ ಸೇವೆ ಒದಗಿಸುವ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇವಿ ಉದ್ಯಮದ ಪ್ರಮುಖರು ಸಮಾರಂಭದಲ್ಲಿ ಭಾಗಿಯಾಗಿದ್ದರು. ದೇಶದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮದಾಗಿದ್ದು, ಒಟ್ಟು 5,765 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿರುವ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, 3,728 ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ- 1,989 ಮತ್ತು ದಿಲ್ಲಿ- 1,941 ಚಾರ್ಜಿಂಗ್ ಸ್ಟೇಷನ್ ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ದೇಶದ ಪ್ರಮುಖ ನಗರಗಳಲ್ಲಿ ಇವಿ ಬಳಕೆದಾರರ ಸಂಖ್ಯೆ ಹೆಚ್ಚಿದ್ದರೂ, ರಾಜ್ಯ ಅದರಲ್ಲೂ…

Read More