Subscribe to Updates
Get the latest creative news from FooBar about art, design and business.
Author: kannadanewsnow09
ಹಾವೇರಿ : ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆ ಇದ್ದು. ಸಂಸದನಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಪಡೆದು ಅತ್ಯಂತ ಪ್ರಮಾಣಿಕವಾಗಿ ನಿಷ್ಟೆಯಿಂದ ಶ್ರಮವಹಿಸಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಗೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಹತ್ತು ಹನ್ನೆರಡು ವರ್ಷಗಳ ಹಿಂದೆ ಮಾಡಿದ್ದೇವು. ನಮ್ಮ ನಾಯಕರಾಗಿದ್ದ ಸಿ.ಎಂ. ಉದಾಸಿಯವರು ಏತ ನೀರಾವರಿ ಯೋಜನೆಗಳನ್ನು ಮಾಡಬೇಕೆಂದು ಹೇಳಿದಾಗ ಹಾನಗಲ್‌ನಲ್ಲಿ ಮೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಿಎಂ ಉದಾಸಿಯವರ ಪ್ರಯತ್ನ, ಶದ್ದೆಯಿಂದ ಮಾಡಿದ್ದೇವೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ಇತ್ತು. ಹೀಗಾಗಿ ಹಾನಗಲ್ ತಾಲೂಕಿನ ಬಹುತೇಕ ಕೆರೆಗಳು ತುಂಬುವಂತಾಗಿದೆ. ಅದೇ ರೀತಿ ಧರ್ಮಾ…
ಬೆಂಗಳೂರು: ನಗರದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆ ಅನುಮತಿ ಪತ್ರವನ್ನು ಇಲಾಖೆಯಿಂದ ಏಕಗವಾಕ್ಷಿ ಪದ್ದತಿಯಡಿ ಪಡೆಯಲು ಬಿಬಿಎಂಪಿ ವ್ಯಾಪ್ತಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ವವ ಆಚರಣೆಗಾಗಿ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಆಚರಣೆ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿಯ ವೇಳೆ ಎಲ್ಲಾ ರೀತಿಯ ಸಿದ್ದತೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವ ಸಲುವಾಗಿ 63 ಉಪ ವಿಭಾಗ ಕಛೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಕೂಡಲೆ ತೆರದು, ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಬೇಕು. ನಿಯೋಜಿಸಿದ…
ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) 2024 ರ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್ಗಾಗಿ ಟೈರ್ 1 ಪ್ರವೇಶ ಪತ್ರವನ್ನು ಪ್ರಕಟಿಸಿದೆ. ಎಸ್ಎಸ್ಸಿ ಸಿಜಿಎಲ್ ನೇಮಕಾತಿ 2024 ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಕಾಲ್ ಲೆಟರ್ಗಳನ್ನು ಎಸ್ಎಸ್ಸಿ ssc.nic.in ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ಆಯೋಗವು ಎಸ್ಎಸ್ಸಿ ಸಿಜಿಎಲ್ ಶ್ರೇಣಿ 1 2024 ಪರೀಕ್ಷೆಯನ್ನು ಸೆಪ್ಟೆಂಬರ್ 9 ರಿಂದ 24 ರವರೆಗೆ ನಡೆಸಲಿದೆ. ಇದಕ್ಕಾಗಿ ಪ್ರವೇಶ ಪತ್ರಗಳನ್ನು ಎಸ್ಎಸ್ಸಿಯ ಪ್ರಾದೇಶಿಕ ಅಧಿಕೃತ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡಲಾಗಿದೆ. ಅಭ್ಯರ್ಥಿಗಳು ಎಸ್ಎಸ್ಸಿ ಸಿಜಿಎಲ್ 2024 ಶ್ರೇಣಿ 1 ಪ್ರವೇಶ ಪತ್ರವನ್ನು ssc.nic.in ಅಧಿಕೃತ ವೆಬ್ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿದೆ. ಎಸ್ಎಸ್ಸಿ ಸಿಜಿಎಲ್ ಟೈಯರ್ 1 ಅಡ್ಮಿಟ್ ಕಾರ್ಡ್ 2024 ಡೌನ್ಲೋಡ್ ಮಾಡುವುದು ಹೇಗೆ? ಎಸ್ಎಸ್ಸಿಯ ಪ್ರಾದೇಶಿಕ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಎಸ್ಎಸ್ಸಿ ಸಿಜಿಎಲ್ 2024 ಟೈರ್ 1 ಪ್ರವೇಶ ಪತ್ರಕ್ಕೆ ಲಿಂಕ್ ಅನ್ನು ನ್ಯಾವಿಗೇಟ್ ಮಾಡಿ ಇದು ನಿಮ್ಮನ್ನು…
ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಪವರ್ ಕಟ್ ಸಮಸ್ಯೆಯಿಂದಾಗಿ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ 10 ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಿದ ಕಾರಣ, ಈಗ ರೈಲು ಸಂಚಾರ ಪುನಾರಾರಂಭಗೊಂಡಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ಹಸಿರು ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಶ್ರೀರಾಂಪುರ ನಿಲ್ದಾಣಗಳ ನಡುವೆ ರೈಲುಗಳು ಸಂಜೆ 4.11 ರಿಂದ 4.23 ಗಂಟೆಯವರೆಗೆ ವಿದ್ಯುತ್ ವೈಫಲ್ಯದಿಂದಾಗಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಅವಧಿಯಲ್ಲಿ ಶಾರ್ಟ್ ಲೂಪ್ ಸೇವೆಗಳನ್ನು ನಡೆಸಲಾಯಿತು ಎಂದು ತಿಳಿಸಿದೆ. ನಾಗಸಂದ್ರ ಮತ್ತು ರಾಜಾಜಿನಗರ ನಡುವೆ ನ್ಯಾಷನಲ್ ಕಾಲೇಜು ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ 4.23 ಗಂಟೆಯಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ನಡೆಯುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತಿರುವುದಾಗಿ ಬಿ.ಎಂ.ಆರ್.ಸಿ.ಎಲ್ ಹೇಳಿದೆ. https://kannadanewsnow.com/kannada/jammu-and-kashmir-assembly-elections-2019-congress-hits-back-at-bjp-over-alliance-with-nc/ https://kannadanewsnow.com/kannada/india-gifts-four-bhishma-cubes-to-ukraine-bhishm-cubes/
ಬೆಂಗಳೂರು: ನಗರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲಿನಲ್ಲಿ ಸಂಚಾರ ವ್ಯತ್ಯಯ ಉಂಟಾಗಿರುವುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸುಮಾರು 10 ನಿಮಿಷಗಳ ಕಾಲ ನಿಂತಲ್ಲೇ ಮೆಟ್ರೋ ರೈಲು ನಿಲ್ಲುವಂತೆ ಆಗಿತ್ತು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ನಮ್ಮ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ತಾಂತ್ರಿಕ ಕಾರಣದಿಂದ ರೈಲು ದಿಢೀರ್ ಆಫ್ ಆಗಿ ನಿಲ್ಲುವಂತೆ ಆಗಿತ್ತು. ಸುಮಾರು 10 ನಿಮಿಷಗಳ ಕಾಲ ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ನಿಂತಿತ್ತು ಎಂಬುದಾಗಿ ತಿಳಿದು ಬಂದಿದೆ. ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ಈಗ ಸಂಚಾರ ವ್ಯತ್ಯಯ ಉಂಟಾಗಿದೆ. ಮೆಜೆಸ್ಟಿಂಕ್ ನಿಂದ ಪೀಣ್ಯ ಕಡೆಗೆ ನಮ್ಮ ಮೆಟ್ರೋ ರೈಲು ತೆರಳುತ್ತಿತ್ತು. ಈ ವೇಳೆಯಲ್ಲಿ ಮಹಾಲಕ್ಷ್ಮೀ ಲೇಔಟ್ ನಿಲ್ದಾಣದಲ್ಲಿ ದಿಢೀರ್ ಆಫ್ ಆಗಿದ್ದರಿಂದ ಸಂಚಾರ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/good-news-for-medical-students-state-govt-orders-25-hike-in-scholarships/ https://kannadanewsnow.com/kannada/jammu-and-kashmir-assembly-elections-2019-congress-hits-back-at-bjp-over-alliance-with-nc/ https://kannadanewsnow.com/kannada/india-gifts-four-bhishma-cubes-to-ukraine-bhishm-cubes/
ಬೆಂಗಳೂರು: ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಿದಾಗ ಅದಕ್ಕೆ ಸ್ಪಷ್ಟೀಕರಣ ಕೊಟ್ಟು ಮನವರಿಕೆ ಮಾಡುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ರೂಪಿಸಿದೆ. ಇಂತಹ ವಿಧೇಯಕಗಳ ಸಾಧಕ-ಬಾಧಕಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಹತ್ತಾರು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದರು ಎಂದರು. ರಾಜಭವನ ಎಂದರೆ ಬಿಜೆಪಿ ಕಚೇರಿ ಎನ್ನುವುದು ಹಳಸಿದ ಮಾತು. ವಿಧೇಯಕವನ್ನು ಮರಳಿ ಕಳುಹಿಸಿದರೆ ಅದಕ್ಕೆ ಸರ್ಕಾರ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು. ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಮಾಡದೇ ಇದ್ದಲ್ಲಿ ಅದು ಸರ್ಕಾರದ ನಿರ್ಲಕ್ಷ್ಯವೇ ಹೊರತು ರಾಜ್ಯಪಾಲರ ತಪ್ಪಲ್ಲ. ಸರ್ಕಾರ ತಪ್ಪು ಮಾಡಿ ಅದನ್ನು ರಾಜ್ಯಪಾಲರ ಮೇಲೆ ಹೇರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು…
ಹುಬ್ಬಳ್ಳಿ: ಮುಡಾ ಹಗರಣ ಮರೆಮಾಚಲು ಮುಖ್ಯಮಂತ್ರಿ ದೆಹಲಿಯಲ್ಲಿ ಶಾಸಕರ ಪೇರೇಡ್ ಮಾಡಲು ತಯಾರಿ ಮಾಡುತಿದ್ದು ದೆಹಲಿಯಲ್ಲಿ ಏನೇ ಪೇರೇಡ್ ಮಾಡಲಿ ಬಿಡಲಿ ಅವರಿಗೆ ಬಿಟ್ಟಿದ್ದು ಈಗಾಗಲೇ ಕಾನೂನು ಹೋರಾಟ ಆರಂಭ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಚಂಡು ಕಾನೂನು ಅಂಗಳಕ್ಕೆ ಹೋಗಿದ್ದು ಕಾನೂನಿನ ಮೂಲಕವೇ ಇದು ಇತ್ಯರ್ಥ ಆಗಬೇಕು ಏನೇಲ್ಲಾ ಬೆಳವಣಿಗೆ ಆಗುತ್ತವೆ ನೋಡಬೇಕು ಹೈಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತದೆ ನೋಡಿಕೊಂಡು ಅದರ ಮೇಲೆ ಮುಂದಿನ ಹೋರಾಟ ನಡೆಸಲಾಗುವುದು. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ರಾಜಕೀಯ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಿಂದಾಲ್ ಗೆ ಕಡಿಮೆ ದರಕ್ಕೆ ಜಮೀನು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರ ಇದ್ದಾಗ ಒಂದು ವಿರೋಧ ಪಕ್ಷದಲ್ಲಿ ಇದ್ದಾಗ ಒಂದು ರೀತಿ ನಡೆದುಕೊಳ್ಳುವ ಮೂಲಕ ಎರಡು ನಾಲಿಗೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು…
ಬೆಂಗಳೂರು: ಜವಾಹರಲಾಲ್ ನೆಹರು ತಾರಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಂಡು, ಗೆಲ್ಲುವಂತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ 40,000 ಸಿಗಲಿದೆ. – ಸ್ಪರ್ಧೆಯಲ್ಲಿ ಬ್ಲಾಕ್ ಹಂತ, ಜಿಲ್ಲಾ ಮಟ್ಟ, ವಿಭಾಗೀಯ ಮಟ್ಟ, ರಾಜ್ಯ ಮಟ್ಟ ಮತ್ತು ಅಂತಿಮ ಹಂತ ಎಂಬ 5 ಹಂತಗಳು ಇರಲಿವೆ. – ಪ್ರಥಮ ಬಹುಮಾನ ಪಡೆದ ತಂಡಕ್ಕೆ 40 ಸಾವಿರ ರೂ., ಹಾಗೂ ಪ್ರಶಂಸಾ ಪತ್ರ ವಿತರಿಸಲಾಗುತ್ತದೆ. – ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30 ಸಾವಿರ ರೂ. ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ಬಹುಮಾನವಿದೆ. ಪ್ರತಿ ಪ್ರೌಢಶಾಲೆಗಳಿಂದ ಇಬ್ಬರು ವಿದ್ಯಾರ್ಥಿಗಳುಳ್ಳ ಒಂದು ತಂಡಕ್ಕೆ ಇದರಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಒಂದು ತಂಡದಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಇರತಕ್ಕದ್ದು. ಬಾಲಕಿಯರ ಶಾಲೆಯಾಗಿದ್ದಲ್ಲಿ ಇಬ್ಬರು ಬಾಲಕಿಯರು ಮತ್ತು…
ಪುಣೆ: ಪ್ರತಿಕೂಲ ಹವಾಮಾನದಿಂದಾಗಿ ಪುಣೆ ಜಿಲ್ಲೆಯ ಪೌಡ್ ಗ್ರಾಮದ ಬಳಿ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಖಾಸಗಿ ವಿಮಾನಯಾನ ಕಂಪನಿಗೆ ಸೇರಿದೆ. ವಿಮಾನವು ಮುಂಬೈನಿಂದ ಹೈದರಾಬಾದ್ಗೆ ಹೋಗುತ್ತಿತ್ತು, ಹೆಲಿಕಾಪ್ಟರ್ನಲ್ಲಿ 4 ಜನರು ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಲಾಗುತ್ತಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಎಸ್ಪಿ ಪಂಕಜ್ ದೇಶ್ಮುಖ್ ತಿಳಿಸಿದ್ದಾರೆ. https://twitter.com/ANI/status/1827280692754997747 ಹೆಲಿಕಾಪ್ಟರ್ ನಲ್ಲಿದ್ದ ನಾಲ್ವರಲ್ಲಿ ಕ್ಯಾಪ್ಟನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರ ಸ್ಥಿತಿ ಸ್ಥಿರವಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಎಸ್ಪಿ ಪಂಕಜ್ ದೇಶ್ಮುಖ್ ತಿಳಿಸಿದ್ದಾರೆ. https://twitter.com/ANI/status/1827285418292752793 https://kannadanewsnow.com/kannada/jammu-and-kashmir-assembly-elections-2019-congress-hits-back-at-bjp-over-alliance-with-nc/ https://kannadanewsnow.com/kannada/india-gifts-four-bhishma-cubes-to-ukraine-bhishm-cubes/
ಬೆಂಗಳೂರು: ನಿಗದಿಯಂತೆ ಕೆಪಿಎಸ್ಸಿಯ ಕೆಎಎಸ್ ಪರೀಕ್ಷೆಗಳು ನಡೆಯಲಿದ್ದಾವೆ. ಆದರೇ ಕೃಷ್ಣ ಜನ್ಮಾಷ್ಟಮಿಯಂದು ನಿಗದಿ ಪಡಿಸಲಾಗಿರುವಂತ ಪರೀಕ್ಷೆಯ ದಿನಾಂಕವನ್ನು ಮಾತ್ರವೇ ಬದಲಾವಣೆ ಮಾಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಅವರು ಇಂದು ಗಾಂಧಿಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೆಪಿಎಸ್ ಸಿ ಪರೀಕ್ಷೆ ಬಗ್ಗೆ ಗೊಂದಲವಿರುವ ಬಗ್ಗೆ ಮಾತನಾಡುತ್ತಾ, ಪರೀಕ್ಷೆ ಬಗ್ಗೆ ಗೊಂದಲವಿಲ್ಲ. ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗುವುದಿಲ್ಲ. ಕೃಷ್ಣಜನ್ಮಾಷ್ಟಮಿಯಂದು ಇರುವ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದರು. ಸರ್ಕಾರ ಬಸ್ ದರಗಳನ್ನು ಹೆಚ್ಚಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಸ್ ದರದಂತೆಯೇ ನೀರಿನ ದರವನ್ನು ಏರಿಸಲಾಗುವುದು ಎಂದಿದ್ದರು. ಆದರೆ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ನೀರಿನ ದರವನ್ನೂ ಬಹಳ ವರ್ಷಗಳಿಂದ ಏರಿಸಿಲ್ಲ. ಜಲಮಂಡಳಿಯಲ್ಲಿ ಕಷ್ಟ ಪರಿಸ್ಥಿತಿಯಿದ್ದು, ದರಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಅಂದಹಾಗೇ ಆಗಸ್ಟ್.27ರಿಂದ ಕೆಪಿಎಸ್ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದಾವೆ. ಆಗಸ್ಟ್.27ರ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಇನ್ನೂ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಪತ್ರಿಕೆ-2ರ…