Author: kannadanewsnow09

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತ ವೇತನದ ಕುರಿತಂತೆ ರಾಜ್ಯ ಸರ್ಕಾರವು ನಿವೃತ್ತಿ ವೇತನ ನಿಯಮಗಳನ್ನು ಸರಳೀಕರಿಸಿದ್ದು, ನಿವೃತ್ತಿ ವೇತನ ಕಡತಗಳನ್ನು ವಿಳಂಬ ಮಾಡದೆ ಸಿದ್ದಪಡಿಸಬೇಕು. ವಿಳಂಬವಾದಲ್ಲಿ ನೌಕರನಿಗೆ ಆರ್ಥಿಕ ತೊಂದರೆಗಳಾಗುತ್ತವೆ ಎಂದು ಸೂಚನೆ ನೀಡಲಾಗಿದೆ. ಕಚೇರಿ ಮುಖ್ಯಸ್ತರು ನಿವೃತ್ತರಾಗುವ ನಾನ್ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದಿರಬೇಕು. ಕಚೇರಿ ಮುಖ್ಯಸ್ತರು ನಿವೃತ್ತರಾಗುವ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದು ಮಹಾಲೇಖಪಾಲರಿಗೆ ಸಲ್ಲಿಸಬೇಕು. ನಿವೃತ್ತನಾಗುವ ಸರ್ಕಾರಿ ನೌಕರನಿಂದ ಪಡೆದ ನಮೂನೆ-1ಬಿ ವಿವರಗಳನ್ನು ಮತ್ತು ಇತರೆ ದಾಖಲೆಗಳನ್ನು ನಿವೃತ್ತಿ ದಿನಾಂಕಕ್ಕಿಂತ ಮೂರು ತಿಂಗಳು ಮುಂಚಿತವಾಗಿ ಮಹಾಲೇಖಪಾಲರಿಗೆ ಕಳುಹಿಸಬೇಕು. 285 ಮೇರೆಗೆ ನಿವೃತ್ತರಾಗುವ ನೌಕರರ ವಿವರಗಳನ್ನು 1 ಬಿ ನಮೂನೆಯಲ್ಲಿ ಸ್ವಯಂ ನಿವೃತ್ತಿ ಅಂಗೀಕಾರ ಆದೇಶ ಬಂದ ನಂತರ ಪಡೆದು ನಿವೃತ್ತಿ ವೇತನ ಕಡತ ತಯಾರಿಸಬೇಕು. ಮಹಾಲೇಖಪಾಲರು ಪ್ರತಿ ವರ್ಷದ ಜನವರಿ31 ಮತ್ತು ಜುಲೈ-31 ನಲ್ಲಿ ಮುಂದಿನ 12 ಮತ್ತು 18…

Read More

ಬೆಂಗಳೂರು: ನಗರದಲ್ಲಿ ಬೃಹತ್ ಗಾತ್ರದ ಮರವೊಂದು ಗಾಳಿಗೆ ಉರುಳಿ ಬಿದ್ದ ಪರಿಣಾಮ, ಅದರ ಅಡಿಯಲ್ಲಿ ಸಾಗುತ್ತಿದ್ದಂತ ಕಾರೊಂದು ಜಖಂ ಆಗಿರುವಂತ ಘಟನೆ ನಡೆದಿದೆ.  ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ, ಕಾರೊಂದರ ಮೇಲೆ ಬಿದ್ದಿದೆ. ಈ ಪರಿಣಾಮ ಕಾರು ಜಖಂ ಆಗಿದೆ. ಅದರಲ್ಲಿದ್ದಂತ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಗಾಯಾಳು ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೃಹತ್ ಗಾತ್ರದ ಮರವನ್ನು ಬಿಬಿಎಂಪಿಯ ಸಿಬ್ಬಂದಿಗಳು ತೆರವುಗೊಳಿಸುವಂತ ಕಾರ್ಯದಲ್ಲಿ ತೊಡಗಿದ್ದಾರೆ. https://kannadanewsnow.com/kannada/important-information-for-state-government-employees-heres-the-complete-list-of-da-calculations-recommendations/ https://kannadanewsnow.com/kannada/breaking-country-cant-wait-for-another-rape-sc/ https://kannadanewsnow.com/kannada/breaking-man-hacked-to-death-in-belagavi/

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ (Karnataka Govt Employees) ಹಲವು ಬೇಡಿಕೆಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿ, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿ, ಅದರಂತೆ ವೇತನ ನೀಡುವುದಾಗಿತ್ತು. ಇವುಗಳಲ್ಲಿ 7ನೇ ವೇತನ ಆಯೋಗ (7th Pay Commission) ಜಾರಿಯ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಗಾದ್ರೇ ಸರ್ಕಾರಿ ನೌಕರರ ಡಿಎ ಲೆಕ್ಕಾಚಾರ, ಶಿಫಾರಸ್ಸುಗಳ ಸಂಪೂರ್ಣ ಮಾಹಿತಿ ಮುಂದೆ ಓದಿ. ಈ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಆಗಸ್ಟ್.1ರಿಂದ 7ನೇ ವೇತನ ಆಯೋಗವನ್ನು ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಮಂಗಳವಾರದಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. 7ನೇ ವೇತನ ಆಯೋಗದ ಜಾರಿಯೇ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಅಜೆಂಡಾ ಆಗಿತ್ತು. ಇಂತಹ ಬೇಡಿಕೆಯನ್ನು ಈಡೇರಿಸುವಂತ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಮಂಗಳೂರು ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ…

Read More

ಬೆಂಗಳೂರು : Department of School Education & Literacy, ನವದೆಹಲಿ ರವರ ಮಾರ್ಗಸೂಚಿಯಂತೆ NMMS ಪರೀಕ್ಷೆಯನ್ನು 2024ನೇ ಡಿಸೆಂಬರ್ 8 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲು ಅನ್ ಲೈನ್ ಮೂಲಕ 2024ನೇ ಆಗಸ್ಟ್ 19 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ NMMS ಪರೀಕ್ಷೆಯನ್ನು ಸರ್ಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆ (Local body schools) ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿ ವೇತನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಸದರಿ ಪರೀಕ್ಷೆಯ ಆನ್‌ಲೈನ್ ಅರ್ಜಿಯು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ https://kseab.karnataka.gov.in/ ವೆಬ್ ಸೈಟ್ ನಲ್ಲಿ ಲಭ್ಯಮಾಡಲಾಗಿದೆ. ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ NMMS ಲಾಗಿನ್‌ನಲ್ಲಿ ಸಲ್ಲಿಸುವುದು. ಆನ್‌ಲೈನ್ ಅರ್ಜಿ ಸಲ್ಲಿಸಲು 2024ನೇ ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯ ಮಾಡಲಾಗಿರುವ…

Read More

ಶಿವಮೊಗ್ಗ : ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆಗಸ್ಟ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. ಆ. 23 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ ತಾಲೂಕು ಕಚೇರಿ ಸಭಾಂಗಣ, ಆ.27 ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ ಮತ್ತು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿಕಾರಿಪುರ ತಾಲೂಕು ಕಚೇರಿ ಸಭಾಂಗಣ, ಆ.28 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸಾಗರ ತಾಲೂಕು ಪಂಚಾಯಿತಿ ಸಭಾಂಗಣ ಮತ್ತು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಹೊಸನಗರ ತಾಲೂಕು ಕಚೇರಿ ಸಭಾಂಗಣ, ಆ.29 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣ, ಆ-30 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿವಮೊಗ್ಗ ತಾಲೂಕು ಪಂಚಾಯಿತಿ ಸಭಾಂಗಣಗಳಲ್ಲಿ ಕುಂದುಕೊರತೆ ಅರ್ಜಿ…

Read More

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲು ಉದ್ದೇಶಿಸಲಾಗಿದೆ. ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ 31 ಸಾವಿರ ರೂ. ದ್ವಿತೀಯ 21 ಸಾವಿರ ರೂ. ಮತ್ತು ತೃತೀಯ 11 ಸಾವಿರ ರೂ. ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ 3 ಸಾವಿರ ರೂ. ದ್ವಿತೀಯ 2 ಸಾವಿರ ರೂ ಮತ್ತು ತೃತೀಯ…

Read More

ಬೆಂಗಳೂರು : ತೋಟಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ.ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನವನ್ನು ನೀಡಲಾಗುವುದು. ಸೂಕ್ಷ್ಮ ನೀರಾವರಿ ಘಟಕ ಅಳವಡಿಸಿದ ಅರ್ಹ ಪ.ಜಾ./ಪ.ಪಂ.ದ ರೈತರ ಫಲಾನುಭವಿಗಳಿಗೆ ಮೊದಲ 2 ಹೆ. ಪ್ರದೇಶದವರೆಗೆ ಶೇ.90% ಮತ್ತು ಇತರೇ ವರ್ಗದ ರೈತ ಫಲಾನುಭವಿಗೆ ಶೇ.55 ರಷ್ಟು ಹಾಗೂ ಎಲ್ಲಾ ವರ್ಗದ ರೈತರಿಗೆ 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ಇಲಾಖೆಯಿಂದ ಅನುಮೋದಿತ ಕಂಪನಿಗಳ ಮಾಹಿತಿಯನ್ನು ಹಾಗೂ ಹೆಚ್ಚಿನ ವಿವರಗನ್ನು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ…

Read More

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಆಗಸ್ಟ್ 27, 2024 ರವರೆಗೆ ವಿಸ್ತರಿಸಿದೆ ಎಂದು ಎಎನ್ಐ ವರದಿ ಮಾಡಿದೆ. https://twitter.com/ANI/status/1825814762313363803 ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಆದರೆ ಸಂಬಂಧಿತ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸಿದ್ದರಿಂದ ಅವರು ಇನ್ನೂ ಜೈಲಿನಲ್ಲಿದ್ದಾರೆ. https://kannadanewsnow.com/kannada/ration-card-e-kyc-mandatory-august-31-last-date-ration-stopped-next-month-if-not-done/ https://kannadanewsnow.com/kannada/breaking-country-cant-wait-for-another-rape-sc/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಪಡಿತರ ಚೀಟಿಗೆ ಕುಟುಂಬ ಸದಸ್ಯರ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಹೀಗಿದ್ದರೂ ಇನ್ನೂ ಕೆಲವರು ಇ-ಕೆವೈಸಿ ಮಾಡಿರುವುದಿಲ್ಲ. ಇಂತಹ ಪಡಿತರ ಚೀಟಿಗಳಿಗೆ ರೇಷನ್ ನೀಡುವುದನ್ನು ಮುಂದಿನ ತಿಂಗಳಿನಿಂದ ಸ್ಥಗಿತಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಾಹಿತಿ ನೀಡಿದ್ದು, ಪ್ರತಿಯೊಂದು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವದು ಕಡ್ಡಾಯವಾಗಿದೆ ಎಂದಿದ್ದಾರೆ. ಆಗಸ್ಟ್.31 ರೊಳಗಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆ.7.00 ರಿಂದ ರಾ. 9.00 ರವರೆಗೆ ಉಚಿತವಾಗಿ ಮಾಡಿಸಿಕೊಳ್ಳುವುದು ಹಾಗೂ ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದೆ. https://kannadanewsnow.com/kannada/stogo-festival-2024-and-child-online-protection-cop-award-2024/ https://kannadanewsnow.com/kannada/breaking-country-cant-wait-for-another-rape-sc/

Read More

ಬೆಂಗಳೂರು : ಎಚ್‌ಕೆ ಕನ್ಸಲ್ಟೆನ್ಸಿ ಸಂಸ್ಥೆ ಹಾಗೂ ಟಾಕ್ಯೋನ್ ಸಿಸ್ಟಂ ಸೊಲ್ಯೂಷನ್ಸ್ ಪ್ರೈವೇಟ್ ಲಿ. ಸಂಸ್ಥೆಗಳು ಪ್ರಸಿದ್ಧ ಆರ್ ಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸಹಭಾಗಿತ್ವದಲ್ಲಿ ಸ್ಟೋಗೋ ಫೆಸ್ಟ್(STOGO FEST) 2024 ಮತ್ತು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ(COP) 2024 ಅನ್ನು ಘೋಷಿಸುತ್ತಿದೆ. ಆರ್ ಆರ್ ಸಮೂಹ ಸಂಸ್ಥೆಯ ಕ್ಯಾಂಪಸ್‌ನಲ್ಲಿ 2024ರ ಡಿಸೆಂಬರ್ 9 ಮತ್ತು 10ರಂದು ಕರ್ನಾಟಕದ ಪ್ರಾದೇಶಿಕ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ಟೋಗೋ ಫೆಸ್ಟ್ 2024 ಎನ್ನುವುದು ಅಂತಾರಾಷ್ಟ್ರೀಯ ಸ್ಟೀಮ್ ಸ್ಪರ್ಧೆಯಾಗಿದ್ದು, ಗ್ರೇಡ್ 4ರಿಂದ 12ನೇ ಗ್ರೇಡ್ ವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. “ಮಕ್ಕಳ ಡಿಜಿಟಲ್ ಯೋಗಕ್ಷೇಮಕ್ಕಾಗಿ ಎಐ ಮತ್ತು ರೊಬೋಟಿಕ್ಸ್ ಬಳಕೆ” ಎಂಬ ಥೀಮ್‌ನಡಿ ಈ ಸ್ಪರ್ಧೆ ನಡೆಯಲಿದೆ. ವಿಶೇಷವೆಂದರೆ, ಪ್ರಾದೇಶಿಕ ಸ್ಟೋಗೋ ಫೆಸ್ಟ್ ವಿಜೇತರು 2025ರ ಫೆಬ್ರವರಿ 06ರಂದು ಯುಎಇಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಟೋಗೋ ಫೆಸ್ಟ್ (ಗ್ರೇಡ್ 4ರಿಂದ ಗ್ರೇಡ್ 12)ನಲ್ಲಿ ಮಿಂಚಲಿದ್ದಾರೆ. ಇಲ್ಲಿ ಈ ಸ್ಟೋಗೋ ಉತ್ಸವ-2024ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಯುಎಇ…

Read More