Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ-2024 ಅನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಮೂಲಕ ಡಿಜಿಟಲ್ ಮೀಡಿಯಾಗಳಿಗೂ ಸರ್ಕಾರಿ ಜಾಹೀರಾತು ನೀಡುವ ಕೆಲಸ ಶೀಘ್ರವೇ ಆಗಲಿದೆ. ಇದಕ್ಕೆ ಕಾರಣವಾಗಿದ್ದೇ, ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯ ವೇದಿಕೆ(KSDMF) ಆಗಿದೆ. ಕೆ ಎಸ್ ಡಿ ಎಂ ಎಫ್ ನ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹಾಗೂ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್ ಬೆಸಗರಹಳ್ಳಿ ಅವರ ಸತತ ಓಡಾಟ, ಪರಿಶ್ರಮದ ಫಲವಾಗಿ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ. ಬಿ.ಸಮೀವುಲ್ಲಾ ಬೆಲಗೂರು ಕರ್ನಾಟಕ ಪತ್ರಿಕಾ ಮಾಧ್ಯಮದಲ್ಲಿ ಚಿರಪರಿಚಿತ ಹೆಸರು. ಈಟಿವಿ, ವಿಜಯ ಕರ್ನಾಟಕ, ಅಭಿಮಾನಿ ಪ್ರಕಾಶನ, ಸುದ್ದಿ ಟಿವಿ, ಸ್ವರಾಜ್ ಟಿವಿ, ಈ ಸಂಜೆ, ಉದಯ ನ್ಯೂಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದಂತ ಇವರು, ಈಗ ದಿ ಪೋಸ್ಟ್ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಡಿಜಿಟಲ್ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಂತ ಇವರು, ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ವೇದಿಕೆ(KSDMF)ನ ಅಧ್ಯಕ್ಷರಾಗಿರುವಂತ…
ಬೆಂಗಳೂರು: ನಗರದಲ್ಲಿ ಇಂದು ಬೆಚ್ಚಿ ಬೀಳಿಸುವಂತ ಕೃತ್ಯ ನಡೆಸಲಾಗಿದೆ. ಬೆಂಗಳೂರಿನ ಏರ್ ಪೋರ್ಟ್ ನಲ್ಲಿಯೇ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಂತ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1ರಲ್ಲೇ ಟ್ರಾಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಂತ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಂತ ಟ್ರಾಲಿ ಆಪರೇಟರ್ ಒಬ್ಬನನ್ನು ಆಕೆಯ ಪತಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಸ್ಥಳಕ್ಕೆ ಏರ್ ಪೋರ್ಟ್ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/bengaluru-wifes-throat-slit-on-suspicion-of-murder/ https://kannadanewsnow.com/kannada/the-process-of-transformation-has-begun-in-jammu-and-kashmir-under-the-bjp-central-government/
ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಮತ್ತೊಂದು ಭೀಕರ ಮರ್ಡರ್ ನಡೆದಿದೆ. ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಇಂದು ಪತ್ನಿಯ ಶೀಲ ಶಂಕಿಸಿದಂತ ಪತಿಯೊಬ್ಬ ಕುರ್ಚಿಗೆ ಕಟ್ಟಿಹಾಕಿ, ಕತ್ತು ಕೊಯ್ದು ಮರ್ಡರ್ ಮಾಡಿದ್ದಾನೆ. ನವ್ಯ(24) ಎಂಬಾಕೆಯನ್ನು ಕತ್ತು ಕೊಯ್ದು ಬರ್ಬರವಾಗಿ ಮನೆಯಲ್ಲಿ ಹತ್ಯೆ ಮಾಡಿದಂತ ಪತಿ ಕಿರಣ್ ಪರಾರಿಯಾಗಿದ್ದಾನೆ. ಮೂರು ವರ್ಷಗಳ ಹಿಂದೆ ಕಿರಣ್ ಹಾಗೂ ನವ್ಯ ಮದುವೆಯಾಗಿದ್ದರು. ಕಿರಣ್ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರೇ, ನವ್ಯ ಖಾಸಗಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಮರ್ಡರ್ ಸುದ್ದಿ ತಿಳಿದಂತ ಕೆಂಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/the-process-of-transformation-has-begun-in-jammu-and-kashmir-under-the-bjp-central-government/
ಹಾಸನ : “ಬಹುನಿರೀಕ್ಷಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಏತ (Lift) ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಯೋಜನೆ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದರು. ಹಾಸನ ಜಿಲ್ಲೆ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ಪರಿಶೀಲನೆ ಮಾಡಿದರು. ನಂತರ ಸಕಲೇಶಪುರದ ದೊಡ್ಡನಗರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, “ಎತ್ತಿಹೊಳೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ತಾಯಿ ಗಂಗೆ ಪೂಜೆ ಮಾಡಿ ಖುದ್ದಾಗಿ ನಾನೇ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಿದ್ದೇನೆ. ನಮ್ಮ ಅಧಿಕಾರಿಗಳು ಈ ಯೋಜನೆಯ ವಿವರ ಮತ್ತು ವಿಡಿಯೋಗಳನ್ನು ತೋರಿಸಿದರು. ನಾನು ಕಣ್ಣಾರೆ ನೋಡಬೇಕು ಎಂದು ಬಂದಿದ್ದೇನೆ. ಈ ಹಿಂದೆ ಭೇಟಿ ನೀಡಿದಾಗ ಶೀಘ್ರವಾಗಿ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದೇ, ಅದರಂತೆ ಒಂದೆರಡು ತಿಂಗಳು ತಡವಾಗಿಯಾದರೂ ಕೆಲಸ ಮುಗಿದಿದೆ” ಎಂದು…
ಬೆಂಗಳೂರು: ಒಂದು ವರ್ಷದ ಹಿಂದೆ ತಿರುಪತಿ ತಿರುಮಲಕ್ಕೆ ಸಾಗಿಸಲಾಗುತ್ತಿದ್ದಂತ ನಂದಿನಿ ತುಪ್ಪದ ಸರಬರಾದು ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಗೊಂಡಿದೆ. ಟ್ಯಾಂಕರ್ ಮೂಲಕ ನಂದಿನಿ ತುಪ್ಪವನ್ನು ತಿರುಪತಿ ತಿರುಮಲಕ್ಕೆ ಸಾಗಿಸಲು ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಿರುಪತಿ ತಿರುಮಲಕ್ಕೆ ಸ್ಥಗಿತವಾಗಿದ್ದ ನಂದಿನಿ ತುಪ್ಪ ಸರಬಾಜಿಗೆ ಟ್ಯಾಂಕರ್ ಮೂಲಕ ಸಾಗಿಸುವುದಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಎಂಡಿ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತಿರಾಗಿದ್ದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ಕಳೆದ 05 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 24 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ, “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ಯಾಂಡಿನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ. “ನಂದಿನಿ” ಯು ಕರ್ನಾಟಕ ರಾಜ್ಯದ ಮನೆ…
ಫ್ರಾನ್ಸ್: ಇಲ್ಲಿ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಟೆಲಿಗ್ರಾಮ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಪಾವೆಲ್ ಡುರೊವ್ ಬುಧವಾರ ಪ್ಯಾರಿಸ್ನ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಅಲ್ಲಿ ಅವರ ವಿರುದ್ಧ ಔಪಚಾರಿಕವಾಗಿ ಆರೋಪ ಹೊರಿಸಲಾಯಿತು. ಆ ಬಳಿಕ ಕೋರ್ಟ್ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಗೆ ಸೂಚಿಸಿದ ಕಾರಣ, ಟೆಲಿಗ್ರಾಮ್ ಸ್ಥಾಪಕ ಡುರೊವ್ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಗೊಳಿಸಲಾಗಿದೆ. 900 ಮಿಲಿಯನ್ ಬಳಕೆದಾರರ ಸಾಮಾಜಿಕ ನೆಟ್ವರ್ಕ್ ಟೆಲಿಗ್ರಾಮ್ನಲ್ಲಿನ ಅಕ್ರಮ ವಿಷಯದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ರಷ್ಯಾ ಮೂಲದ 39 ವರ್ಷದ ವ್ಯಕ್ತಿಯನ್ನು ಶನಿವಾರ ತಡರಾತ್ರಿ ಫ್ರೆಂಚ್ ರಾಜಧಾನಿಯ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸಿಎನ್ಎನ್ ವರದಿಯ ಪ್ರಕಾರ, ಡುರೊವ್ ಬುಧವಾರ ಮಧ್ಯಾಹ್ನ ಪೊಲೀಸ್ ವಾಹನದಲ್ಲಿ ಪ್ಯಾರಿಸ್ನ ಹೊರಗಿನ ವಂಚನೆ ವಿರೋಧಿ ಕಚೇರಿಯಿಂದ ನಿರ್ಗಮಿಸಿದರು. ಫ್ರೆಂಚ್ ರಾಜಧಾನಿಯ ನ್ಯಾಯಾಲಯದಲ್ಲಿ ಅವರು ಈಗ “ಆರಂಭಿಕ ವಿಚಾರಣೆ ಮತ್ತು ಸಂಭಾವ್ಯ ದೋಷಾರೋಪಣೆಯನ್ನು” ಎದುರಿಸಲಿದ್ದಾರೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ ಎಂದು ವರದಿ ತಿಳಿಸಿದೆ. ಕನಿಷ್ಠ…
ಬೆಂಗಳೂರು : ರಾಜ್ಯ ಸರ್ಕಾರದಿಂದ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ಪ್ರಕಟಿಸಲಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಿಕ್ಕಂತ ಮೊದಲ ಗೆಲುವು ಎಂಬುದಾಗಿ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಪ್ರಸ್ತುತ ಜಗತ್ತಿನ ಮುಂಚೂಣಿ ಮಾಧ್ಯಮ ಡಿಜಿಟಲ್ ಮಾಧ್ಯಮ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಇರಲಿಲ್ಲ. ಹೀಗಾಗಿ ಡಿಜಿಟಲ್ ಮಾಧ್ಯಮಗಳಿಗೆ ಮಾನ್ಯತೆ ದೊರಕಿಸಿಕೊಡುವ ಉದ್ದೇಶ ಹಾಗೂ ಡಿಜಿಟಲ್ ಮಾಧ್ಯಮಗಳ ವೃತ್ತಿಪರ ಪತ್ರಕರ್ತರ ಉಳಿವಿಗಾಗಿ ಟಿವಿ ಹಾಗೂ ಪತ್ರಿಕೆಗಳ ಮಾದರಿಯಲ್ಲೇ ಡಿಜಿಟಲ್ ಮಾಧ್ಯಮಗಳಿಗೆ ಜಾಹೀರಾತು ಪಡೆಯುವ ಮೂಲ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪಿಸಲಾಗಿತ್ತು. 24-08-2022 ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಸಂಸ್ಥೆ ಈ ದಿಸೆಯಲ್ಲಿ ಸಾಕಷ್ಟು ಶ್ರಮ ಹಾಕಿದೆ ಎಂದರು. 10-06-2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಾರ್ತಾ…
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಹೊಲಿಗೆ ತರಬೇತಿ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯಕ್ಕೆ ಸೇರಿದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಖರೀದಿಸಿ ವಿತರಿಸುವ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಹಾನಗರಪಾಲಿಕೆಯ ವೆಬ್‍ಸೈಟ್ www.davanagerecity.gov.in ಮೂಲಕ ಅಥವಾ ಕಚೇರಿಗೆ ಖುದ್ದು ಭೇಟಿ ನೀಡಿ ಎಲ್ಲಾ ದಾಖಲೆಗಳೊಂದಿಗೆ ಸೆ.26 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಶಾಖೆ, ಮಹಾನಗರಪಾಲಿಕೆ, ದಾವಣಗೆರೆ (ಹಳೇ ಕಂದಾಯ ಶಾಖೆ ಕಟ್ಟಡ) ಇಲ್ಲಿ ಸಂಪರ್ಕಿಸಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ. https://kannadanewsnow.com/kannada/crucial-state-cabinet-meeting-scheduled-for-september-5/ https://kannadanewsnow.com/kannada/breaking-court-extends-actor-darshans-judicial-custody-till-september-9/ https://kannadanewsnow.com/kannada/the-process-of-transformation-has-begun-in-jammu-and-kashmir-under-the-bjp-central-government/
ಬೆಂಗಳೂರು: ಸಿಎಂ ವಿರುದ್ಧ ಮುಡಾ ಹಗರಣಕ್ಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದ ವಿಚಾರ ಸಂಬಂಧ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಲಹೆ ನೀಡುವಂತ ತೀರ್ಮಾನ, ಆ ಬಳಿಕ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಖಂಡಿಸುವಂತ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಸೆಪ್ಟೆಂಬರ್.5ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿ ಮಾಡಲಾಗಿದೆ. ಈ ಕುರಿತಂತೆ ಸಚಿವ ಸಂಪುಟದ ಸರ್ಕಾರದ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಿದ್ದು, ದಿನಾಂಕ 05-09-2024ರಂದು ಗುರುವಾರ ಸಂಜೆ 4 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 18ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ ಎಂದಿದ್ದಾರೆ. ದಿನಾಂಕ 05-09-2024ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ನೇತೃತ್ವದಲ್ಲಿ ಈ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ಜೊತೆಗೆ ಅನುದಾನ ಒದಗಿಸುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ…
ದಾವಣಗೆರೆ : ಅಂಚೆ ಇಲಾಖೆಯಿಂದ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹಕ್ಕೆ ಉತ್ತೇಜಿಸಲು ‘ದೀನ್ ದಯಾಳ ಸ್ಪರ್ಶ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಅಂಚೆ ಚೀಟಿಗಳ ಮೌಲ್ಯ ಮತ್ತು ಸಂಶೋಧನೆಯ ಕುರಿತಾದ ಹವ್ಯಾಸ ಬೆಳೆಸಲು ವಿದ್ಯಾರ್ಥಿವೇತನ ನೀಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಉತ್ತೇಜನದ ಮೂಲಕ ಸದಾಭಿರುಚಿಯ ಆರೋಗ್ಯ ಪೂರ್ಣ ಜ್ಞಾನಾಧಾರಿತ ಹವ್ಯಾಸ ಬೆಳೆಸುವ್ಯದು ಇದರ ಉದ್ದೇಶವಾಗಿದೆ. 2023-24 ನೇ ಶೈಕ್ಷಣಿಕ ವರ್ಷದಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು ಮತ್ತು ಅಂಚೆ ಚೀಟಿಗಳ ಠೇವಣಿ ಖಾತೆಯನ್ನು ಅಥವಾ ಶಾಲೆಗಳ ಅಂಚೆ ಚೀಟಿ ಕ್ಲಬ್ ಸದಸ್ಯರಾಗಿರಬೇಕು. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಮತ್ತು ಯೋಜನೆ ಕಾರ್ಯದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.3 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ www.indiapost.gov.in ಅಥವಾ www.karnatakapost.gov.in 8861126883 2019146755, 08192-236277…