Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕುತ್ತಿದ್ದಾರೆ. ನಮಗೂ ಅವರಿಗೂ ಯಾವುದೇ ದ್ವೇಷವಿಲ್ಲ. ಅಧಿಕಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಅಂತ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದ ಬಳಿ ಇರುವಂತ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀಯವರು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇಬ್ಬರು ಸ್ವಾಮೀಜಿಗಳು ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕಿಸುತ್ತಿದ್ದಾರೆ. ಇದರ ಹಿಂದೆ ನಮಗೂ ಅವರಿಗೂ ಇರೋ ದ್ವೇಷ ಕಾರಣವಲ್ಲ. ಬದಲಾಗಿ ಅವರು ಅಧಿಕಾರ ಹಿಡಿಯೋದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದರು. ನಾನು ಇದಕ್ಕೆಲ್ಲ ಹೆದರೋದಿಲ್ಲ. ಇಂತವರ ವಿರುದ್ಧ ಗಟ್ಟಿಯಾಗೇ ಹೋರಾಡುತ್ತೇನೆ. ಇನ್ನೂ ಈ ವಿಷಯ ಎಲ್ಲಿಗೆ ಹೋಗುತ್ತದೋ ಕಾದು ನೋಡಬೇಕು ಎಂಬುದಾಗಿ ತಿಳಿಸಿದರು. https://kannadanewsnow.com/kannada/supreme-court-seeks-details-on-safety-measures-to-prevent-train-accidents/ https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/
ನವದೆಹಲಿ: ಜಾತಿ ಸಮೀಕ್ಷೆಯ ದತ್ತಾಂಶವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿದ್ದು, ಅದನ್ನು ಬಹಿರಂಗಪಡಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಸಮೀಕ್ಷೆಯನ್ನು ಎತ್ತಿಹಿಡಿದ ಪಾಟ್ನಾ ಹೈಕೋರ್ಟ್ನ 2023 ರ ನಿರ್ಧಾರಕ್ಕೆ ಸವಾಲುಗಳಿಗೆ ಸಂಬಂಧಿಸಿದಂತೆ ಜನವರಿ 29 ಕ್ಕೆ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ. ಜಾತಿ ಸಮೀಕ್ಷೆಯ ದತ್ತಾಂಶವನ್ನು ಸಾರ್ವಜನಿಕ ಡೊಮೇನ್ ನಲ್ಲಿ ಇಡುವಂತೆ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚಿಸಿದೆ. ಬಿಹಾರ ಜಾತಿ ಸಮೀಕ್ಷೆಯಲ್ಲಿನ ದತ್ತಾಂಶಗಳು ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ, ಏಕೆಂದರೆ ಯಾರಾದರೂ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ ಅವರು ಆ ಡೇಟಾವನ್ನು ಹೊಂದಲು ಸಾಧ್ಯವಾಗುತ್ತದೆ. ಜಾತಿ ಆಧಾರಿತ ಸಮೀಕ್ಷೆಯನ್ನು ಕೈಗೊಳ್ಳುವ ಬಿಹಾರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ 2023 ರ ಆಗಸ್ಟ್ 2 ರ ಪಾಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 29 ಕ್ಕೆ ಮುಂದೂಡಿದೆ. https://twitter.com/ANI/status/1742144399218446417 https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/ https://kannadanewsnow.com/kannada/supreme-court-seeks-details-on-safety-measures-to-prevent-train-accidents/
ಇಸ್ರೇಲ್: ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ ನ ಮಾಜಿ ಮುಖ್ಯಸ್ಥ ಝ್ವಿ ಝಮೀರ್ (98) ನಿಧನರಾಗಿದ್ದಾರೆ. 1968 ರಿಂದ 1974 ರವರೆಗೆ ಅವರ ನೇತೃತ್ವದ ಮೊಸ್ಸಾದ್ ಅವರ ಮರಣವನ್ನು ಘೋಷಿಸಿತು. ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ, “ಇಸ್ರೇಲ್ನ ಭದ್ರತೆಗೆ ಅವರು ನೀಡಿದ ಕೊಡುಗೆಯನ್ನು ಮುಂಬರುವ ಅನೇಕ ವರ್ಷಗಳವರೆಗೆ ನೆನಪಿಸಿಕೊಳ್ಳಲಾಗುವುದು” ಎಂದು ಹೇಳಿದ್ದಾರೆ. ಝ್ವಿ ಝಮೀರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು 1972ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಇಸ್ರೇಲಿ ಅಥ್ಲೀಟ್ಗಳ ಹತ್ಯಾಕಾಂಡಕ್ಕೆ ಕಾರಣರಾದ ಫೆಲೆಸ್ತೀನ್ ಕಮಾಂಡರ್ಗಳನ್ನು ಹತ್ಯೆ ಮಾಡುವ ಇಸ್ರೇಲ್ನ ಅಭಿಯಾನದ ಮೇಲ್ವಿಚಾರಣೆಯನ್ನು ಝ್ವಿ ಝಮೀರ್ ವಹಿಸಿದ್ದರು. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾ ಇಸ್ರೇಲ್ ಮೇಲೆ ದಾಳಿ ನಡೆಸಲಿವೆ ಎಂಬ ಝ್ವಿ ಝಮೀರ್ ಅವರ ಎಚ್ಚರಿಕೆಯನ್ನು ಸರ್ಕಾರ ಹೆಚ್ಚಾಗಿ ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು. ಅಕ್ಟೋಬರ್ 6, 1973 ರಂದು ಸಿರಿಯಾ ಮತ್ತು ಈಜಿಪ್ಟ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಝ್ವಿ ಝಮೀರ್ ಮೊಸ್ಸಾದ್ ಉಸ್ತುವಾರಿ ವಹಿಸಿದ್ದರು. ಕೈರೋ…
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕಕ್ಕೇ ಒಳಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ಮಾಡಿದ್ದಾರೆ. ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು. ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರೇ ಹೇಳಿದ್ದಾರೆ.ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್…
ಮೈಸೂರು: ಅಂದಕಾಸುರ ಸಂಹಾರ ವೇಳೆಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವರ ಉತ್ಸವ ಮೂರ್ತಿಯ ಮೇಲೆ ನೀರೆರಚಲಾಗಿತ್ತು. ಇದರಿಂದ ಭಕ್ತರು, ಅರ್ಚಕರು ತೀವ್ರ ಖೇದವನ್ನು ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಖಂಡಿಸಿ, ಜನವರಿ.4ರಂದು ನಂಜನಗೂಡು ತಾಲೂಕು ಬಂದ್ ಗೆ ಕರೆ ನೀಡಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ಅನ್ನು ಜನವರಿ.4ರಂದು ಬಂದ್ ಗೆ ಕರೆ ನೀಡಲಾಗಿದೆ. ಶ್ರೀಕಂಠೇಶ್ವರ ಭಕ್ತರಿಂದ ಜನವರಿ.4ರಂದು ಬಂದ್ ಗೆ ಕರೆ ನೀಡಲಾಗಿದೆ. ಅಂದಕಾಸುರ ಸಂಹಾರದ ವೇಳೆಯಲ್ಲಿ ನೀರೆರಚಿದ ಪ್ರಕರಣ ಖಂಡಿಸಿ, ಜನವರಿ.4ರಂದು ಬಂದ್ ನಡೆಸಲಾಗುತ್ತಿದೆ. ಈ ಮೂಲಕ ಶ್ರೀಕಂಠೇಶ್ವರ ಉತ್ಸವ ಮೂರ್ತಿಯ ಮೇಲೆ ನೀರು ಎರಚಿದಂತ ಘಟನೆಯನ್ನು ಖಂಡಿಸಲಾಗುತ್ತಿದೆ. https://kannadanewsnow.com/kannada/state-cabinet-meeting-scheduled-for-january-5/ https://kannadanewsnow.com/kannada/supreme-court-seeks-details-on-safety-measures-to-prevent-train-accidents/
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜನವರಿ.5ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಕುರಿತಂತೆ ಸಚಿವ ಸಂಪುಟದ ಸರ್ಕಾರದ ಜಂಟಿ ಕಾರ್ಯದರ್ಶಿ ಆರ್.ಚಂದ್ರಶೇಖರ್ ಮಾಹಿತಿ ನೀಡಿದ್ದು, ದಿನಾಂಕ 05-01-2024ರ ಶುಕ್ರವಾರ ಸಂಜೆ 4 ಘಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿ ಪಡಿಸಿರೋದಾಗಿ ತಿಳಿಸಿದ್ದಾರೆ. ದಿನಾಂಕ 05-01-2024ರಂದು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ 2024ನೇ ಸಾಲಿನ 1ನೇ ಸಭೆಯನ್ನು ಕರೆಯಲಾಗಿದೆ ಅಂತ ಹೇಳಿದ್ದಾರೆ. ಜ.5ರಂದು ನಡೆಯಲಿರುವಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆದು, ರಾಜ್ಯದ ಅಭಿವೃದ್ಧಿ ಕಾಮಗಾರಿ, ಯೋಜನೆಗಳಿಗೆ ಅನುದಾನ ಒದಗಿಸೋ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ. https://kannadanewsnow.com/kannada/supreme-court-seeks-details-on-safety-measures-to-prevent-train-accidents/
ಕೊಪ್ಪಳ : ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಅವರು ಇಂದು ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಪ್ಪು ಮಾಡಿದವರಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಸುಮ್ಮನೆ ಬಿಟ್ಟುಬಿಡಬೇಕೇ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅದರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು. ನ್ಯಾಯಾಲಯದ ಸೂಚನೆ ಇದ್ದರೆ, ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಅತಿಥಿ ಉಪನ್ಯಾಸಕರು ಪಾದಯಾತ್ರೆ ಮಾಡುವ ಬಗ್ಗೆ ಮಾತನಾಡಿ ಅವರೊಂದಿಗೆ ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡಿ ಎಂದು ಬೇಡಿಕೆ ಇದೆ. ಖಾಯಂ ಮಾಡುವುದು ಕಷ್ಟದ ಕೆಲಸ ಎಂದರು. ರಾಮಮಂದಿರ ಉದ್ಘಾಟನೆಗೆ ಕೇವಲ ರಾಮಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರಿಗೆ ಆಹ್ವಾನ ಹೋಗಿದೆ , ಬಿಟ್ಟಿದೆ ಎಂದು ಗೊತ್ತಿಲ್ಲ ಆಹ್ವಾನ ಕೊಟ್ಟವರು ಹೋಗುತ್ತಾರೆ, ಇಲ್ಲದವರು ಇಲ್ಲ ಎಂದರು.…
ವಿಜಯಪುರ : ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿದರು. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು ಎಂದು ತಮ್ಮ ಒಳಹನ್ನು ತೆರೆದಿಟ್ಟರು. ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ವಿವರಿಸಿದರು. ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮಿಗಳ ಆಶಯವಾಗಿತ್ತು. ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು…
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸೋ ನಿರ್ಧಾರವನ್ನು 2024ರಲ್ಲಿ ಮಾಡೋದಾಗಿ ಘೋಷಿಸಿದೆ. ಅಲ್ಲದೇ 2024 ಅನ್ನು ಪ್ರಯಾಮಿಕ ಸ್ನೇಹಿ ವರ್ಷವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಕೆ ಎಸ್ ಆರ್ ಟಿಸಿಯಿಂದ ಮಾಹಿತಿ ನೀಡಲಾಗಿದ್ದು, ಕೆ ಎಸ್ ಆರ್ ಟಿ ಸಿಯು ತನ್ನ ಗತವೈಭವದ ಪಯಣಕ್ಕೆ ಮರುಕಳಿಸಿದ್ದು, ಈ ಪ್ರಯಾಣದ ಅವಿಭಾಜ್ಯ ಅಂಗವಾದ ನಿಗಮದ ಸಮಸ್ತ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಪುಯಾಣಿಕರಿಗೆ ಹೊಸ ವರುಷ 2024ರ ಹಾರ್ದಿಕ ಶುಭಾಶಯಗಳು. ಕೆ ಎಸ್ ಆರ್ ಟಿ ಸಿ ಯು 2024 ನೇ ವರ್ಷವನ್ನು “ಪಯಾಣಿಕ ಸ್ನೇಹಿ ವರ್ಷ” ವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷ” ವೆಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು ಎಂದಿದೆ. • ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12…
ಟೋಕಿಯೊ: ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್ ವೇಯಲ್ಲಿ ಮಂಗಳವಾರ ಜಪಾನ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೂರದರ್ಶನ ಚಿತ್ರಗಳು ತೋರಿಸಿವೆ. ಆದ್ರೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಮಿಕರು ತುರ್ತು ನಿರ್ಗಮನ ದ್ವಾರದಿಂದ ಹೊರ ಓಡಿ ಬಂದ ಪರಿಣಾಮ, 367 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮಂಗಳವಾರ ಜಪಾನ್ ಏರ್ಲೈನ್ಸ್ ವಿಮಾನವು ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ನಿಪ್ಪಾನ್ ಟಿವಿ ವರದಿ ಮಾಡಿದೆ. ಸಾರ್ವಜನಿಕ ಪ್ರಸಾರಕ ಎನ್ಎಚ್ಕೆಯಲ್ಲಿನ ಲೈವ್ ತುಣುಕುಗಳು ವಿಮಾನದ ಕಿಟಕಿಗಳಿಂದ ಜ್ವಾಲೆಗಳು ಹೊರಬರುತ್ತಿರುವುದನ್ನು ತೋರಿಸಿದೆ. ವಿಮಾನದಲ್ಲಿದ್ದ ಸುಮಾರು 400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಪಾನ್ ಏರ್ಲೈನ್ಸ್ ಅನ್ನು ಉಲ್ಲೇಖಿಸಿ ಎನ್ಎಚ್ಕೆ ಹೇಳಿದೆ. ಎನ್ಎಚ್ಕೆ ಪ್ರಸಾರದ ಚಿತ್ರಗಳು ವಿಮಾನದ ಕೆಳಗಡೆಯಿಂದ ಜ್ವಾಲೆಗಳು ಬರುತ್ತಿರುವುದನ್ನು ತೋರಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. https://kannadanewsnow.com/kannada/bitcoin-jumps-above-45000-for-first-time-since-april-2022/ https://kannadanewsnow.com/kannada/supreme-court-seeks-details-on-safety-measures-to-prevent-train-accidents/