Subscribe to Updates
Get the latest creative news from FooBar about art, design and business.
Author: kannadanewsnow09
ಅಥಣಿ : ಕಾಂಗ್ರೆಸ್ ಸರಕಾರ ಗ್ಯಾರಂಟಿಯ ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಬಿಜೆಪಿಯವರ ಕಣ್ಣಿಗೆ ಇದೆಲ್ಲ ಕಾಣುತ್ತಿಲ್ಲವೇ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ. ಅಥಣಿಯಲ್ಲಿ ಬುಧವಾರ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಎಂದರೆ ಬದ್ದತೆ, ಬಸವಣ್ಣನವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವ ಪಕ್ಷ. ಆದರೆ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಕೀಳಾಗಿ ಮಾತನಾಡಿದರು. ಗ್ಯಾರಂಟಿ ಸುಳ್ಳು ಎಂದರು, ಗ್ಯಾರಂಟಿಯಿಂದ ಮಹಿಳೆಯರು ದೇವಸ್ಥಾನಗಳಿಗೆ ತಿರುಗುತ್ತಿದ್ದಾರೆ, ಗಂಡಸರು ಕುಡಿದು ಹಾಳಾಗುತ್ತಿದ್ದಾರೆ ಎಂದು ಅವಮಾನ ಮಾಡಿದರು. ಆದರೆ ಮಹಿಳಾ ಸ್ವಾವಲಂಬನೆ ಕಾಂಗ್ರೆಸ್ ಬದ್ದತೆ. ಅದನ್ನು ಅತ್ಯಂತ ಸಮರ್ಥವಾಗಿ ಈಡೇರಿಸಿದ್ದೇವೆ ಎಂದು ಅವರು ಹೇಳಿದರು. 1.20 ಕೋಟಿ ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಎಲ್ಲ 5 ಗ್ಯಾರಂಟಿಗಳನ್ನು ಈಡೇರಿಸಿ ಕಾಂಗ್ರೆಸ್ ಪಕ್ಷ ಜನಪ್ರಿಯತೆ ಪಡೆಯುತ್ತಿರುವುದನ್ನು ಬಿಜೆಪಿಯವರಗೆ ಸಹಿಸಿಕೊಳ್ಳಲು ಆಗುವುದಿಲ್ಲ. 5 ಗ್ಯಾರಂಟಿ…
ಬೆಂಗಳೂರು: ಶ್ರೀ ವರದರಾಜೇಶ್ವರ ಶಿವಾಲಯ.. ನಿಮ್ಮೆಲ್ಲ ಇಷ್ಟಾರ್ಥಗಳನ್ನ ಈಡೇರಿಸುವ ದೇಗುಲ. ಈ ದೇವಾಲಯ 13ನೇ ಜ್ಯೋತಿರ್ಲಿಂಗ ಆಗುತ್ತೆ ಅಂತ ಸಾಕಷ್ಟು ಸಾಧು-ಸಂತರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡವನ್ನು ಕೇಳಿದರೆ ಖಂಡಿತ ನಿಮಗೆ ಅಚ್ಚರಿಯಾಗುತ್ತೆ. ಇಲ್ಲಿಗೆ ಬಂದ ಭಕ್ತರ ಇಷ್ಟಾರ್ಥಗಳನ್ನು ಆ ಶಿವ ಪರಮಾತ್ಮ ಪೂರೈಸದೇ ಕಳುಹಿಸಲಾರ. ಶ್ರೀವರದರಾಜೇಶ್ವರ ಶಿವಾಲಯದ ಇತಿಹಾಸ, ಪವಾಡ, ಪೂಜೆ ಹಾಗೂ ಸೇವೆಗಳೇ ವಿಭಿನ್ನ. ಹೌದು, ಇದು ಬಿಡದಿಯ ಸಮೀಪವಿರುವ ಜಡೇನಹಳ್ಳಿ ಗ್ರಾಮದಲ್ಲಿರುವ ಅತ್ಯಂತ ಶಕ್ತಿಶಾಲಿ ಶಿವ ದೇವಾಲಯ. ಶ್ರೀ ನಾರಾಯಣ ರೆಡ್ಡಿ ಗುರುಗಳು ಈ ದೇವಾಲಯದ ಮೂಲ ಸಂಸ್ಥಾಪಕರು. ಖುಷಿಯೊಬ್ಬರು ಕನಸಿನಲ್ಲಿ ಬಂದು ಹೇಳಿದಂತೆ ನರ್ಮದಾ ತೀರದಲ್ಲಿ ಕೆಂಪು ಶಿವಲಿಂಗ ದೊರಕಿತ್ತು. ಅದನ್ನ ವಿಧಿವಿಧಾನಗಳಂತೆ ಪ್ರತಿಷ್ಟಾಪನೆ ಮಾಡಿ ಪೂಜಿಸಿಕೊಂಡು ಬರಲಾಗಿದೆ. ಪ್ರತಿಷ್ಟಾಪನೆಯ ದಿನವೇ ಅಚ್ಚರಿ ಎಂಬಂತೆ ಕಪ್ಪೆಯೊಂದು ಇದ್ದಕ್ಕಿದ್ದಂತೆ ಬಂದು ಶಿವಲಿಂಗವನ್ನ 3 ಬಾರಿ ಪ್ರದಕ್ಷಿಣೆ ಮಾಡಿ ಹೋಗುತ್ತದೆ. ಇದಾದ 2 ತಿಂಗಳ ಬಳಿಕ ಶಿವ ದೇವಾಲಯದ ಬಳಿ ಎಂದೂ ಕೇಳರಿಯದ ಗುಡುಗು…
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಂತ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇಂತಹ ಆರೋಪಿಗಳಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ, ಓರ್ವ ಪೊಲೀಸ್ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಫೆಬ್ರವರಿ.27ರಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದಂತ ಘಟನೆ ನಡೆದಿತ್ತು. ವಿಧಾನಸೌಧದ ಕಾರಿಡಾರಿನಲ್ಲಿ ನಡೆದಿದ್ದಂತ ಈ ಘಟನೆ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬಳಿಕ ವಿಧಾನಸೌಧದ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಘಟನೆ ಸಂಬಂಧ ತನಿಖೆ ನಡೆಸಿದ್ದಂತ ವಿಧಾನಸೌಧ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತೆ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರು ಮೊಹಮ್ಮದ್ ನಾಶಿ ಪುಡಿಯನ್ನು ಪೊಲೀಸ್ ವಶಕ್ಕೆ ನೀಡಿದೆ. ಅಲ್ಲದೇ ಇಲ್ತಾಜ್ ಹಾಗೂ ಮುನಾವರ್ ನನ್ನು ನ್ಯಾಾಯಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಅಂದಹಾಗೇ, ಇಲ್ತಾಜ್,…
ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಮಿತ ವೇತನವನ್ನು ರೂ.13,000ರಿಂದ ರೂ.15,000ಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ನಡವಳಿಯನ್ನು ಹೊರಡಿಸಿದ್ದು, ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಾಸಿಕ ಮಿತಿ ವೇತನವನ್ನು ದಿನಾಂಕ 01-04-2024ರಿಂದ ಅನ್ವಯವಾಗುವಂತೆ ಮಾಸಿಕ ರೂ.13,000ಗಳಿಂದ ರೂ.15,000ಗಳಿಗೆ ಹೆಚ್ಚಿಸಿ ಆದೇಶಿಸಿದೆ. ಇನ್ನೂ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2029-101-1-01-Revenue Divisions-034-Contract/Outsource ರ ಅಡಿಯಲ್ಲಿ ಭರಿಸುವಂತೆ ಸೂಚಿಸಿದೆ. ಅಲ್ಲದೇ ಈ ಆದೇಶವನ್ನು ಆರ್ಥಿಕ ಇಲಾಖೆಯು ದಿನಾಂಕ 27-02-2024ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ ಎಂದಿದ್ದಾರೆ. https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/
ವರದಿ: ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕಗಳ ಪರಿಷ್ಕರಣಾ ವರದಿಯನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಶಾಲಾ ಶಿಕ್ಷಣ ಆಯುಕ್ತರು ಹಾಗೂ ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ಯಿಂದ ಮಾಹಿತಿ ನೀಡಲಾಗಿದೆ. ಅದರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ 01 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 09 ಮತ್ತು 10 ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಮತ್ತು 06 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ವಿಷಯವಾರು ತಜ್ಞರ ಸಮಿತಿಯನ್ನು…
ಬೆಂಗಳೂರು: ಇಂಧಾನ ಇಲಾಖೆಯ ವೆಬ್ ಸೈಟ್ ಸಾಫ್ಟ್ ವೇರ್ ಅಪ್ ಡೇಟ್ ಕಾರಣದಿಂದಾಗಿ ಮಾರ್ಚ್.10 ರಿಂದ 19ರವರೆಗೆ 10 ದಿನಗಳ ಕಾಲ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬಿಲ್ ಸೇರಿದಂತೆ ಇತರೆ ಸೇವೆಗಳು ಸ್ಥಗತಗೊಳಿಸಲಾಗುತ್ತಿದೆ. ಈ ಕುರಿತಂತೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ ಲೈನ್ ಸೇವೆಗಳು ಹತ್ತು ದಿನಗಳ ಕಾಲ ಸೇವೆಗಳು ಲಭ್ಯವಿರುವುದಿಲ್ಲ. ಮಾರ್ಚ್.10 ರಿಂದ 19ರವರೆಗೆ ಹತ್ತು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದಿದೆ. ತಂತ್ರಾಂಶವು ಕಾರ್ಯಾರಂಭಗೊಂಡ ನಂತ್ರ ಪರೀಕ್ಷೆಯ ಬಳಿಕ ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಮಾರ್ಚ್.20ರ ನಂತ್ರ ಈ ಆನ್ ಲೈನ್ ಸೇವೆ ಸರಿಯಾಗಲಿದ್ದು, ಗ್ರಾಹಕರು ವಿದ್ಯುತ್ ಪಾವತಿ ಮಾಡದೇ ಇದ್ದರೂ ಸಂಪರ್ಕ ಕಡಿತಗೊಳಿಸೋದಿಲ್ಲ ಅಂತ ಎಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಿದೆ. ಈ ಎಲ್ಲಾ ಜಿಲ್ಲೆಗಳ ಎಸ್ಕಾಂ ಸೇವೆಯಲ್ಲಿ ವ್ಯತ್ಯಯ ಬೆಸ್ಕಾಂ:…
ಬೆಂಗಳೂರು: ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ ಸಂದರ್ಭದ ಬಳಿಕ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾಂಗ್ರೆಸ್‍ನಿಂದ ಆಯ್ಕೆಯಾದ ನಾಸೀರ್ ಹುಸೇನ್ ಮತ್ತು ಬೆಂಬಲಿಗರ ವಿರುದ್ಧ ಬಿಜೆಪಿ ನಿಯೋಗವು ಪೊಲೀಸರಿಗೆ ದೂರು ನೀಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ರಾಜ್ಯ ಎಸ್‍ಸಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮತ್ತಿತರ ಮುಖಂಡರ ನಿಯೋಗವು ಈ ಮನವಿ ಸಲ್ಲಿಸಿತು. ನಾಸೀರ್ ಹುಸೇನ್ ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲು ಈ ಹಿಂದೆ ಬಿಜೆಪಿ ಎಂಎಲ್‍ಸಿ ಎನ್.ರವಿಕುಮಾರ್ ಅವರು ಈ ಹಿಂದೆ ಫೆಬ್ರವರಿ 27ರಂದು ನೀಡಿದ್ದ ದೂರಿನ ಕುರಿತು ಈ ದೂರಿನಲ್ಲಿ ಗಮನ ಸೆಳೆಯಲಾಗಿದೆ. ಈ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನು ಮೊದಲ ಆರೋಪಿ ಎಂದು ಪರಿಗಣಿಸಬೇಕಿತ್ತು ಎಂದು ಗಮನ ಸೆಳೆಯಲಾಗಿದೆ. https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/ https://kannadanewsnow.com/kannada/breaking-sandeshkhali-case-bengal-govt-moves-sc-against-hc-order-to-hand-over-cbi-probe/
ಬನವಾಸಿ: ದ್ವೇಷದ ಬೀಜ ಬಿತ್ತಿ ಮನುಷ್ಯರ ನಡುವೆ ವೈಷಮ್ಯ ಹರಡಿ ಸಮಾಜವನ್ನು ಛಿದ್ರಗೊಳಿಸುವವರ ಬಗ್ಗೆ ಎಚ್ಚರದಿಂದಿರಿ. ನಮ್ಮದು ಬಸವಾದಿ ಶರಣರ, ಸೂಫಿ-ಸಂತರ, ಬುದ್ದ, ಗಾಂಧಿಯ ನಾಡು ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಕರೆ ನೀಡಿದರು. ಬನವಾಸಿಯ ಐತಿಹಾಸಿಕ ಕದಂಬೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬನವಾಸಿ ನೆಲದಲ್ಲಿ ನಿಂತು ಮುಖ್ಯಮಂತ್ರಿಗಳು ಪಂಪ ಮಹಾಕವಿಯ “ಮನುಷ್ಯ ಜಾತಿ ತಾನೊಂದೆ ವಲಂ” ಮೌಲ್ಯವನ್ನು ಸ್ಮರಿಸಿ ಇದು ನಮ್ಮ ನಾಡಿನ ಸಂಸ್ಕೃತಿ, ಕನ್ನಡ ಸಂಸ್ಕೃತಿಯ ಚಾಲಕ ಶಕ್ತಿ ಎಂದು ವಿವರಿಸಿದರು. ಜಾತಿ, ಧರ್ಮದ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡಿದರೆ ನಿಮ್ಮ ಬದುಕು ಸುಧಾರಿಸುತ್ತದಾ? ನಾವು ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಕೆಣಕುವುದಿಲ್ಲ-ಆದರೆ ಜನರ ಬದುಕು ರೂಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇವ ನಾರವ ಎನ್ನದೆ, ಇವ ನಮ್ಮವ ಎನ್ನುವ ಮೌಲ್ಯದಲ್ಲಿ ಸರ್ಕಾರದ ಕಾರ್ಯಕ್ರಮ ರೂಪಿಸುತ್ತೇವೆ ಎಂದರು. ಇವತ್ತಿನ ಪಾರ್ಲಿಮೆಂಟು ಮತ್ತು ವಿಧಾನಸಭೆಯ ಮಾದರಿಯನ್ನು 12 ನೇ ಶತಮಾನದಲ್ಲೇ ಅನುಭವ ಮಂಟಪ ದ ಮೂಲಕ ವಿಶ್ವಕ್ಕೆ ಬಸವಾದಿ ಶರಣರು ನೀಡಿದ್ದಾರೆ ಎಂದರು. ನಾಡಿನ…
ಭಟ್ಕಳ: ಇಲ್ಲಿನ ತೆಂಗಿನಗುಂಡಿ ಸಮುದ್ರ ತೀರದಲ್ಲಿ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ ಪ್ರಕರಣ ಸಂಬಂಧ ಸಂಸದ ಅನಂತ್ ಕಮಾರ್ ಹೆಗಡೆ ಸೇರಿ 20 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಟ್ಕಳದ ತೆಂಗಿನಗುಂಡಿಯ ಸಮುದ್ರ ತೀರದಲ್ಲಿ ತೆರವುಗೊಳಿಸಲಾಗಿದ್ದಂತ ಸಾರ್ವಕರ್ ಕಟ್ಟೆಯಿದ್ದಂತ ಜಾಗದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯ್ಕ್ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ್ದರು. ಈ ಸಂಬಂಧ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯಕ್ ಸೇರಿದಂತೆ 20 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 153ಎ ಅನ್ವಯ ಪ್ರಕರಣ ದಾಖಲಾಗಿದೆ. https://kannadanewsnow.com/kannada/farmer-gets-45-feet-of-2-5-inches-of-water-in-borewells-even-in-summer/ https://kannadanewsnow.com/kannada/west-bengal-police-refuses-to-hand-over-sheikh-shahjahan-to-cbi/
ಪಶ್ಚಿಮ ಬಂಗಾಳ: ಕಲ್ಕತ್ತಾ ಹೈಕೋರ್ಟ್ ಆದೇಶದ ಹೊರತಾಗಿಯೂ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ಅವರನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ಪಶ್ಚಿಮ ಬಂಗಾಳ ಸಿಐಡಿ ನಿರಾಕರಿಸಿದ್ದರಿಂದ ಕೋಲ್ಕತ್ತಾದಲ್ಲಿ ಹೈ ಡ್ರಾಮಾ ನಡೆಯಿತು. ಶಹಜಹಾನ್ ಅವರನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಿರ್ದೇಶಿಸಿದ ಹೈಕೋರ್ಟ್ ಆದೇಶವನ್ನು ಮಮತಾ ಬ್ಯಾನರ್ಜಿ ಸರ್ಕಾರ ಪ್ರಶ್ನಿಸಿದ ಕೆಲವೇ ಗಂಟೆಗಳ ನಂತರ ಪಶ್ಚಿಮ ಬಂಗಾಳ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಜನವರಿ 5 ರಂದು ಸಂದೇಶ್ಖಾಲಿ ಗ್ರಾಮದಲ್ಲಿ ಶಹಜಹಾನ್ ಬೆಂಬಲಿಗರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಕೇಂದ್ರ ಸಂಸ್ಥೆ ನಡೆಸುತ್ತಿದೆ. ಸಂದೇಶ್ಖಾಲಿಯಲ್ಲಿ ಭೂ ಕಬಳಿಕೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಶಹಜಹಾನ್ ನನ್ನು ವಶಕ್ಕೆ ತೆಗೆದುಕೊಳ್ಳಲು ಸಿಆರ್ಪಿಎಫ್ ಬೆಂಗಾವಲುಗಳೊಂದಿಗೆ ಮೂವರು ಸದಸ್ಯರ ಸಿಬಿಐ ತಂಡ ಮಂಗಳವಾರ ಸಿಐಡಿ ಪ್ರಧಾನ ಕಚೇರಿ ಭಬಾನಿ ಭವನಕ್ಕೆ ಆಗಮಿಸಿತ್ತು. ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ…