Author: kannadanewsnow09

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿ ಕನ್ನಡಿಗರು ಮೃತಪಟ್ಟಿದ್ದರು. ಇಂತಹ ಮೃತ ಕನ್ನಡಿಗರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ ಎಂದಿದ್ದಾರೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು…

Read More

ನವದೆಹಲಿ : “ಗಿಫ್ಟ್ ಸಿಟಿ ಮಾದರಿಯಲ್ಲಿ ಬೆಂಗಳೂರನ್ನು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿತ್ತು. ಇದು ಸಾಧ್ಯವಾಗದ ಕಾರಣಕ್ಕೆ ಸುರಂಗ ರಸ್ತೆ, ಸಿಗ್ನಲ್ ಮುಕ್ತ ರಸ್ತೆ, ಪ್ರಮುಖ ರಸ್ತೆಗಳು ಮತ್ತು ಮಳೆ ನೀರುಗಾಲುವೆಗಳ ಅಭಿವೃದ್ಧಿ ಹಾಗೂ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾತನಾಡಿದ ಅವರು “ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುವ ನಗರವಾಗಿದೆ. ಈ ನಗರಕ್ಕೆ ಬಜೆಟ್ ಅಲ್ಲಿ ಏನೋ ದೊರೆತಿಲ್ಲ. ಮಹಾರಾಷ್ಟ್ರದಂತೆ ನಮ್ಮನ್ನು ಪರಿಗಣಿಸಬೇಕು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆಎನ್ ನರ್ಮ್ ಯೋಜನೆ ಅಡಿ ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ, ನೆಲಮಂಗಲ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು” ಎಂದರು ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಮಾಡಲು ಸಾಧ್ಯ. ಎರಡು ಪ್ರದೇಶಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿದರು. ರಾಜ್ಯ ರಾಜಧಾನಿಯಲ್ಲಿ…

Read More

ಬೆಂಗಳೂರು ; ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ ಜೆಡಿಎಸ್ ವಿರುದ್ದ ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರು ರಾಜ್ಯದೆಲ್ಲಡೆ ಸಿಡಿದೇಳಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಆಗ್ರಹಿಸಿದೆ. ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಕಾರ್ಯಾಧ್ಯಕ್ಷ ಬಸವರಾಜ ಲ.ಬಸಲಿಗುಂದಿ ಸಿದ್ಧಾರಮಯ್ಯ ವಿರುದ್ಧ ಪಾದಯಾತ್ರೆಯ ಬೆದರಕೆ ಹಾಕಿದರೆ ಪರ್ಯಾಯವಾಗಿ ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳು ಇಡೀ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮ ಮತ್ತು ಹಿಂದುಳಿದ ವರ್ಗಗಳ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಾಕ್ಷಣ ತನಿಖಾ ಆಯೋಗ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜು ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ವಿರುದ್ಧ ಇಂತಹದೇ ಷಡ್ಯಂತ್ರ ರೂಪಿಸಲಾಗಿತ್ತು, ಈಗ ಸಮಸ್ತ ಹಿಂದುಳಿದ ಸಮುದಾಯಗಳು ಜಾಗೃತವಾಗಿವೆ,…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಲೈಂಗಿಕ ಅನುಭವವನ್ನು ಮತ್ತು ನೀವು ಎದುರಿಸಬಹುದಾದ ಯಾವುದೇ ಲೈಂಗಿಕ ಸಮಸ್ಯೆಯನ್ನು ನೀವು ಸುಧಾರಿಸಬಹುದು. ಲೈಂಗಿಕ ಪ್ರಚೋದನೆಯನ್ನು ಅನುಭವಿಸಲು ಆರೋಗ್ಯಕರ ಜೀವನಶೈಲಿ ಅತ್ಯಗತ್ಯ, ಇದಕ್ಕೆ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಹೃದಯರಕ್ತನಾಳದ ವ್ಯವಸ್ಥೆಯು ಉತ್ತಮ ರೂಪದಲ್ಲಿರಬೇಕು. ಈ 5 ಜೀವನಶೈಲಿ ಬದಲಾವಣೆ ಮಾಡಿಕೊಂಡ್ರೇ, ನಿಮ್ಮ ಲೈಂಗಿಕ ಜೀವನ ಉತ್ತಮವಾಗಿರುತ್ತೆ 1. ಧೂಮಪಾನವನ್ನು ತ್ಯಜಿಸುವುದು ಧೂಮಪಾನವು ವ್ಯಾಸೊಕಾನ್ಸ್ಟ್ರಿಕ್ಷನ್ ಎಂದು ಕರೆಯಲ್ಪಡುವ ಸ್ಥಿತಿಯ ಬೆಳವಣಿಗೆಗೆ ಕಾರಣವಾಗುತ್ತದೆ (ಇದು ರಕ್ತದ ಹರಿವಿನಲ್ಲಿ ಇಳಿಕೆಯನ್ನು ತರುವ ರಕ್ತನಾಳಗಳ ಸಂಕೋಚನವಾಗಿದೆ), ರಕ್ತನಾಳಗಳು ಮತ್ತು ಅಪಧಮನಿಗಳಿಗೆ ಹಾನಿಯನ್ನು ಉಲ್ಲೇಖಿಸಬೇಕಾಗಿಲ್ಲ. ಶಿಶ್ನದಲ್ಲಿನ ಸಣ್ಣ ರಕ್ತನಾಳಗಳು ಸಾಮಾನ್ಯವಾಗಿ ಈ ರೀತಿಯ ಹಾನಿಗೆ ಹೆಚ್ಚು ಒಳಗಾಗುತ್ತವೆ. ಈ ರೀತಿಯ ಹಾನಿ ಸಂಭವಿಸದಂತೆ ತಡೆಯುವ ಏಕೈಕ ಮಾರ್ಗವೆಂದರೆ ಈ ಅಭ್ಯಾಸವನ್ನು ತ್ಯೆಜಿಸುವುದು. ಇದರ ಪರಿಣಾಮವಾಗಿ, ನಿಮ್ಮ ಲೈಂಗಿಕ ಡ್ರೈವ್ ನಲ್ಲಿ ಹೆಚ್ಚಳ ಮತ್ತು ನಿಮ್ಮ ಲೈಂಗಿಕ ಜೀವನದಲ್ಲಿ ಸುಧಾರಣೆಯನ್ನು ನೀವು ಅನುಭವಿಸುತ್ತೀರಿ. 2. ನಿಯಮಿತವಾಗಿ…

Read More

ಚಾಮರಾಜನಗರ: ಕೇರಳದ ವಯನಾಡಿನಲ್ಲಿ ಸಂಭವಿಸಿದಂತ ಭೂಕುಸಿತ ದುರಂತದಲ್ಲಿ ಕರ್ನಾಟಕದ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಅಲ್ಲದೇ ಮತ್ತಿಬ್ಬರು ನಾಪತ್ತೆಯಾಗಿದ್ದಾರೆ ತಿಳಿದು ಬಂದಿದೆ. ಈ ಕುರಿತಂತೆ ಚಾಮರಾಜನಗರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಚಾಮರಾಜನಗರ ತಾಲ್ಲೂಕಿನ ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೋರಲ್ಲಾದಲ್ಲಿ ವಾಸವಾಗಿದ್ದರು. ನಾಪತ್ತೆಯಾಗಿರುವವರ ಪತ್ತೆಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ ಅಂತ ತಿಳಿಸಿದೆ. ಇನ್ನೂ ಕೇರಳದ ಮೆಪ್ಪಾಡಿಯಲ್ಲಿ ವಾಸವಿದ್ದಂತ ಚಾಮರಾಜನಗರದ ಪುಟ್ಟಸಿದ್ಧಿ(62) ಹಾಗೂ ರಾಣಿ ಎಂಬುವರ ತಾಯಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿಸಿದೆ. ಕೇರಳದ ವಯಾನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರ್ಘಟನೆಯಲ್ಲಿ ಈವರೆಗೆ 128ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. https://kannadanewsnow.com/kannada/wayanad-landslide-state-govt-launches-helpline-number-to-rescue-kannadigas/ https://kannadanewsnow.com/kannada/microsoft-365-users-face-access-issues-days-after-crowdstrike-outage/

Read More

ಬೆಂಗಳೂರು: ನೆರೆಯ ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಉಂಟಾಗಿತ್ತು. ಈ ಘಟನೆಯಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳದ ನೆರವಿಗೆ ಹಾಗೂ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಿದೆ. ಅಲ್ಲದೇ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿರುವ ಎನ್ ಡಿ ಆರ್ ಎಪ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳ ತ್ವರಿತ ರವಾನೆ ಮಾಡಲಾಗುತ್ತದೆ. ಅಗತ್ಯ ಉಪಕರಣಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ರವಾನೆಗೆ ನೆರವು ನೀಡಲಾಗುವುದು ಎಂದಿದೆ. ಕನ್ನಡಿಗರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಸಮನ್ವಯಕ್ಕಾಗಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಿ.ಜಾಫರ್ -9448355577 ಹಾಗೂ ದಿಲೀಶ್ ಶಶಿ-9446000514 ಗೆ ಸಂತ್ರಸ್ತರು ಕರೆ ಮಾಡಿ, ನೆರವು ಪಡೆಯಬಹುದು ಅಂತ ಹೇಳಿದೆ. ಇದಷ್ಟೇ ಅಲ್ಲದೇ ಚಾಮರಾಜನ ನಗರ ಜಿಲ್ಲಾಧಿಕಾರಿ ಕಚೇರಿಯಿಂದ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ. 08226-223163, 223161, 223160 ಹಾಗೂ ವಾಟ್ಸ್ ಆಪ್ ಸಂಖ್ಯೆ 9740942901ಗೆ…

Read More

ನವದೆಹಲಿ: ಕೇರಳದ ವಯನಾಡಿನಲ್ಲಿ ಭಾರೀ ಭೂ ಕುಸಿತದ ಪರಿಣಾಮ ನೂರಾರು ಜನರು ಸಾವನ್ನಪ್ಪಿದ್ದರೇ, ಹಲವರು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಕೇರಳದ ವಯನಾಡಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಭೂ ಕುಸಿತದ ಪರಿಣಾಮದಿಂದ ಈವರೆಗೆ 123 ಮಂದಿ ಸಾವನ್ನಪ್ಪಿದ್ದಾರೆ. ಮೆಪ್ಪಾಡು ಸೇರಿದಂತೆ ವಿವಿಧ ಗ್ರಾಮಗಳೇ ಭೂ ಕುಸಿತದಿಂದ ಕೊಚ್ಚಿ ಹೋಗಿ, ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಕೇರಳದ ವಯನಾಡಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ದೆಹಲಿಯಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವಂತ ಅವರು, ಮೈಸೂರಿನಿಂದ ರಸ್ತೆ ಮಾರ್ಗದ ಮೂಲಕ ನಾಳೆ ವಯನಾಡಿಗೆ ಪ್ರಯಾಣ ಬೆಳಸಲಿದ್ದಾರೆ. ಕಾರಿನಲ್ಲಿ ವಯನಾಡಿಗೆ ತೆರಳಲಿರುವಂತ ರಾಹುಲ್ ಗಾಂಧಿ ಭೂ ಕುಸಿತ ಪ್ರದೇಶವನ್ನು ವೀಕ್ಷಣೆ ಮಾಡಲಿದ್ದಾರೆ. https://kannadanewsnow.com/kannada/priest-arrested-for-raping-woman-on-pretext-of-performing-puja-for-removal-of-defects/ https://kannadanewsnow.com/kannada/microsoft-365-users-face-access-issues-days-after-crowdstrike-outage/

Read More

ಹಾಸನ: ದೋಷ ನಿವಾರಣೆ ಮಾಡುವುದಾಗಿ ಕರೆಸಿಕೊಂಡಂತ ಪೂಜಾರಿಯೊಬ್ಬ, ಆ ಮಹಿಳೆಯ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ದಾಖಲಾಗಿದ್ದಂತ ದೂರಿನ ಅನ್ವಯ ಪೊಲೀಸರು ಪೂಜಾರಿಯನ್ನು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಮಹಿಳೆಯೊಬ್ಬರು ಪುರದಮ್ಮ ದೇಗುಲಕ್ಕೆ ತೆರಳಿದ್ದಂತ ವೇಳೆಯಲ್ಲಿ ದೋಷ ಇದೆ. ಪೂಜೆ ಮಾಡಬೇಕು ಅಂತ ಸೂಚಿಸಿದ್ದರು. ಪೂಜಾರಿಯ ಮಾತು ನಂಬಿ ದೇವಸ್ಥಾನಕ್ಕೆ ತೆರಳಿದ್ದಂತ ವೇಳೆಯಲ್ಲಿ ಪೂಜೆ ಮಾಡೋದಕ್ಕೆ ಹಣ ಪಡೆದಿದ್ದು ಅಲ್ಲದೇ, ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾಗಿ, ಸಂತ್ರಸ್ತ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ದಾಖಲಿಸಿಕೊಂಡ ಬಾಗಲಗುಂಟೆ ಠಾಣೆಯ ಪೊಲೀಸರು, ದೋಷ ನಿವಾರಣೆಗಾಗಿ ಕರೆಸಿಕೊಂಡು ಅತ್ಯಾಚಾರವೆಸಗಿದಂತ ಪುದಮ್ಮ ದೇಗುಲದ ಪೂಜಾರಿ ದಯಾನಂದ್ ಎಂಬಾತನ್ನು ಬಂಧಿಸಿದ್ದಾರೆ. https://kannadanewsnow.com/kannada/actor-darshan-writes-to-jail-authorities-requests-them-to-allow-home-cooked-meals/ https://kannadanewsnow.com/kannada/microsoft-365-users-face-access-issues-days-after-crowdstrike-outage/

Read More

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಮೈಕ್ರೋಸಾಫ್ಟ್ ಸೇವೆ ಸ್ಥಗಿತಗೊಂಡಿತ್ತು. ಈ ಬೆನ್ನಲ್ಲೇ ಇಂದು ಮೈಕ್ರೋಸಾಫ್ಟ್ 365 ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಬಳಕೆದಾರರು ಪರದಾಡುತ್ತಿರುವುದಾಗಿ ತಿಳಿದು ಬಂದಿದೆ. ನಾವು ಪ್ರಸ್ತುತ ಅನೇಕ ಮೈಕ್ರೋಸಾಫ್ಟ್ 365 ಸೇವೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರವೇಶ ಸಮಸ್ಯೆಗಳು ಮತ್ತು ಕಳಪೆ ಕಾರ್ಯಕ್ಷಮತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ಅಡ್ಮಿನ್ ಸೆಂಟರ್ನಲ್ಲಿ MO842351 ಅಡಿಯಲ್ಲಿ ಕಾಣಬಹುದು ಎಂದು ಜಾಗತಿಕ ಟೆಕ್ ಮೇಜರ್ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ನಾವು ತಗ್ಗಿಸುವಿಕೆಗಳನ್ನು ಅನ್ವಯಿಸಿದ್ದೇವೆ ಮತ್ತು ಪರಿಹಾರವನ್ನು ಒದಗಿಸಲು ಬಳಕೆದಾರರ ವಿನಂತಿಗಳನ್ನು ಮರುಹೊಂದಿಸಿದ್ದೇವೆ. ರೆಸಲ್ಯೂಶನ್ ಅನ್ನು ದೃಢೀಕರಿಸಲು ನಾವು ಸೇವೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ಆಡಳಿತ ಕೇಂದ್ರದಲ್ಲಿ https://status.cloud.microsoft ಅಥವಾ MO842351 ಕೆಳಗೆ ಕಾಣಬಹುದು ಎಂದಿದೆ. ಆದಾಗ್ಯೂ, ಟೆಕ್ ಸಂಸ್ಥೆ ಒದಗಿಸಿದ ಲಿಂಕ್ ಹಲವಾರು ಬಳಕೆದಾರರಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮೈಕ್ರೋಸಾಫ್ಟ್, “ಅಜುರೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಯ” ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಇದನ್ನು ಆದಷ್ಟು…

Read More

ಬೆಂಗಳೂರು: ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನ ಊಟದಿಂದಾಗಿ ದೇಹದ ತೂಕ ಇಳಿಕೆಯಾಗುತ್ತಿದೆ. ಮನೆಯ ಊಟಕ್ಕೆ ಅವಕಾಶ ಮಾಡಿಕೊಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ, ಜೈಲು ಮಹಾನಿರ್ದೇಶಕರಿಗೆ ಪತ್ರ ಬರೆದು, ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ನಟ ದರ್ಶನ್ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಅವರು ಮನೆಯೂಟ, ಹಾಸಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಆದ್ರೇ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ತಾಂತ್ರಿಕ ಕಾರಣದಿಂದ ವಾಪಾಸ್ ಪಡೆಯಲಾಗಿತ್ತು. ಆ ನಂತ್ರ ಹೈಕೋರ್ಟ್ ಗೆ ಮೇಲ್ಮನವಿಯನ್ನು ನಟ ದರ್ಶನ್ ಪರ ವಕೀಲರು ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ನನಗೆ ಮನೆಯೂಟಕ್ಕೆ ಅವಕಾಶ ನೀಡುವಂತೆ ನಟ ದರ್ಶನ್ ಅವರು ಜೈಲು ಮಹಾನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನಟ ದರ್ಶನ್ ಜೈಲು ಅಧಿಕಾರಿಗಳಿಗೆ ಬರೆದಿರುವಂತ ಪತ್ರದಲ್ಲಿ ಜೈಲೂಟದಲ್ಲಿ ನನಗೆ…

Read More