Subscribe to Updates
Get the latest creative news from FooBar about art, design and business.
Author: kannadanewsnow09
ಮಹಾರಾಷ್ಟ್ರ: ಇಲ್ಲಿನ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಬಹುದೊಡ್ಡ ಅವಾಂತರವೇ ಉಂಟಾಗಿದೆ. ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಉಂಟಾದ ಪರಿಣಾಮ, ತಾಂತ್ರಿಕ ಕಾರಣದಿಂದ ಮೋನೋ ರೈಲು ಕೆಟ್ಟು ನಿಂತಿದೆ. ಹೀಗಾಗಿ ಅದರಲ್ಲಿನ ಪ್ರಯಾಣಿಕರನ್ನು ಕೆಳಗಿಳಿಸಲು, ಹೊರ ಕರೆ ತರಲು ಹರಸಾಹಸವನ್ನೇ ಪಡುವಂತೆ ಆಗಿದೆ. https://twitter.com/ANI/status/1957822154365427785 ಮಂಗಳವಾರ ಮುಂಬೈನಲ್ಲಿ ಭಾರೀ ಮಳೆಯ ನಡುವೆ ಹಳಿಯಿಂದ ಹಳಿ ತಪ್ಪಿದ ಮಾನೋ ರೈಲು ಗಾಳಿಯಲ್ಲಿ ನೇತಾಡುತ್ತಿತ್ತು. ಮುಂಬೈ ಅಗ್ನಿಶಾಮಕ ದಳ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. https://twitter.com/ANI/status/1957815327867175108 ಬಾಗಿಲುಗಳು ಮುಚ್ಚಿರುವುದರಿಂದ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಎಸಿ ಕೆಲಸ ಮಾಡುವುದನ್ನು ನಿಲ್ಲಿಸಿರುವುದರಿಂದ ಅನೇಕ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ, ಉಸಿರುಗಟ್ಟಿಸುತ್ತಿದ್ದಾರೆ. https://twitter.com/ANI/status/1957812000743903706
ಬೆಂಗಳೂರು: ಹೃದಯಾಘಾತದ ಸಾವುಗಳ ತಡೆಗೆ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಬೆಂಗಳೂರಿನ ಸರ್ ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಹೊಸಪೇಟೆ ಆಸ್ಪತ್ರೆಗಳಲ್ಲಿ ಹೃದಯ ರಕ್ತನಾಳಗಳ ಸಂಬಂಧಿತ ಚಿಕಿತ್ಸೆ ನೀಡುವ ಕ್ಯಾತ್ ಲ್ಯಾಬ್ ತೆರೆಯಲಾಗುವುದು. ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರನ್ನು ತಪಾಸಣೆಗೆ ಒಳಪಡಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು. https://twitter.com/KarnatakaVarthe/status/1957785153927037358 ಟೆಲಿ ಇ.ಸಿ.ಜಿ ಮೂಲಕ ತಜ್ಞವೈದ್ಯರಿಂದ ಅಗತ್ಯ ಮಾರ್ಗದರ್ಶನ ದೊರೆಯಲಿದೆ. ಹಠಾತ್ ಹೃದಯಘಾತಗಳನ್ನ ಪ್ರಿವೆಂಟ್ ಮಾಡಲು ಅವಕಾಶವಿದ್ದು, ಆರಂಭದಲ್ಲೇ ಪತ್ತೆ ಹಚ್ಚುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಟೆಲಿ ಇಸಿಜಿ ಸಹಕಾರಿಯಾಗಲಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ರಾಜ್ಯದ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಹಠಾತ್ ಹೃದಯಾಘಾತಗಳನ್ನು ತಡೆಯಲು ಹಬ್ ಮತ್ರು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.…
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಜನತೆಗೆ ಧೈರ್ಯ ತುಂಬಿದ್ದಾರೆ. ವಿಧಾನ ಪರಿಷದ್ ನಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆ ಉತ್ತರಿಸಿದ ಅವರು, ಇತ್ತೀಚೆಗೆ ಹೃದಯಾಘಾತ, ಪ್ರಕರಣಗಳ ಸಂಖ್ಯೆ ಹೆಚ್ಚಳದ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು. ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು. ಈ ವರ್ಷವು ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಚಿವರು ಹೇಳಿದರು. ಬದಲಾದ…
ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ವಿಧಾನಸಭೆ ಕಲಾಪದಲ್ಲಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು ಅವರು ಈ ವಿಧೇಯಕವನ್ನು ಮಂಡಿಸಿದರು. ಈ ತಿದ್ದುಪಡಿ ವಿಧೇಯಕ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ವಿಸ್ಕೃತ ಚರ್ಚೆ ನಡೆಸಿದರು. ಈ ತಿದ್ದುಪಡಿ ಬೆಂಗಳೂರಿಗೆ ಮಾರಕವಾಗಿದೆ ಎಂದ ವಿರೋಧ ಪಕ್ಷದ ಶಾಸಕ ಎಸ್.ಸುರೇಶ್ ಕುಮಾರ್ ಅವರು “ಈ ತಿದ್ದುಪಡಿಯನ್ನು ಸದನ ಸಮಿತಿ ರಚನೆ ಮಾಡಿ ಅದರ ಅವಗಾಹನೆಗೆ ನೀಡಬೇಕು. ಸರ್ಕಾರ ಈ ಮನವಿಯನ್ನು ಪುರಸ್ಕರಿಸುತ್ತಿಲ್ಲ” ಎಂದು ಸಭಾತ್ಯಾಗ ಮಾಡುವುದಾಗಿ ತಿಳಿಸಿದರು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಈ ವಿಧೇಯಕಕ್ಕೆ ಮಂಗಳವಾರ ಅನುಮೋದನೆ ನೀಡಲಾಯಿತು. ವಿಧೇಯಕದ ಮೇಲೆ ನಡೆದ ಚರ್ಚೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. “ಕೆರೆಗಳ ಬಫರ್ ಜೋನ್ ವಿಚಾರವಾಗಿ ತಿದ್ದುಪಡಿ ತನ್ನಿ ಎಂದು ಯಾವುದೇ ಬಿಲ್ಡರ್ ಗಳು ಬಂದು ಸರ್ಕಾರದ ಬಳಿ ಮನವಿ ಮಾಡಿಲ್ಲ. ಈ ಹಿಂದೆ ಕಂಠೀರವ…
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಿದ್ದಾರೆ. 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ ಸಾಲದ ಮೊರೆ ಹೋಗಿದ್ದಾರೆ. ಹೌದು. ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರದಿಂದ ಸಾಲದ ಮೊರೆ ಹೋಗಲಾಗಿದೆ. 63,000 ಕೋಟಿ ಸಾಲ ಮಾಡಿದ್ದಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಎಜಿ ವರದಿಯಲ್ಲಿ 2023-24ನೇ ಸಾಲಿನಲ್ಲಿ ಸರ್ಕಾರದ ವೆಚ್ಚವಾಗಿದೆ. ಹಣಕಾಸು ನಿರ್ವಹಣೆ, ಬಜೆಟ್ ಗೆ ಸಂಬಂಧಿಸಿದ ವಿವರ ಉಲ್ಲೇಖಿಸಲಾಗಿದೆ. ರಾಜಸ್ವ ವೆಚ್ಚದಲ್ಲಿ ಶೇ.15ರಷ್ಟು 5 ಗ್ಯಾರಂಟಿ ಪಾಲು ಹೊಂದಿದೆ. 2023-24ನೇ ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ಖರ್ಚು ಮಾಡಲಾಗಿದೆ. 5 ಗ್ಯಾರಂಟಿ ಯೋಜನೆಗೆ ಕಳೆದ ವರ್ಷದ ಸಾಲಿನಲ್ಲಿ ಹೆಚ್ಚುವರಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ವಿತ್ತೀಯ ಕೊರತೆ ಹೆಚ್ಚಳವಾಗಿದೆ. ವಿತ್ತೀಯ ಕೊರತೆ 46,623 ಕೋಟಿಯಿಂದ 65,522 ಕೋಟಿ ರೂಪಾಪಿಗೆ ಹೆಚ್ಚಳವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಮಂಡಿಸಿದಂತ ಸಿಎಜಿ ವರದಿಯಲ್ಲಿ ತಿಳಿಸಿದ್ದಾರೆ. 2023-24 ಸಾಲಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 16,964 ಕೋಟಿ ರೂ., ಗೃಹಜ್ಯೋತಿಗೆ 8,900 ಕೋಟಿ, ಅನ್ನಭಾಗ್ಯಕ್ಕೆ 7,384 ಕೋಟಿ,…
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ವರದಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಮೂಲಕ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯಿತು. ಈ ಸಚಿವ ಸಂಪುಟದ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ ವಸೂಲಿ ಆಯುಕ್ತರ ನೇಮಕಾತಿಗೆ ಹೊಸ ಕಾನೂನು ತರಲಿದೆ. ಇದೇ ಅಧಿವೇಶನದಲ್ಲಿ ಹೊಸ ಕಾನೂನು ಮಂಡನೆಗೂ ಸರ್ಕಾರ ಸಿದ್ಧಗೊಂಡಿದೆ. ಹೊಸ ಕಾನೂನು ಮಂಡನೆಗೆ ಇಂದಿನ ಕ್ಯಾಬಿನೇಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. https://kannadanewsnow.com/kannada/our-government-does-not-allow-the-construction-of-illegal-buildings-deputy-chief-minister-d-k-shivakumar/ https://kannadanewsnow.com/kannada/construction-of-super-specialty-hospitals-in-all-the-hospitals-of-the-state-minister-sharanprakash-patil/
ಬೆಂಗಳೂರು: “ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳಿಂದ ಸಮಸ್ಯೆ ಹೆಚ್ಚಾಗಿದ್ದು, ನಮ್ಮ ಸರ್ಕಾರ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಸಿಸಿ, ಒಸಿ ಕಡ್ಡಾಯ ವಿಚಾರದಲ್ಲಿ ಸುಪ್ರೀಂ ಕೋರ್ಟ ಆದೇಶ ಪಾಲನೆ ಜೊತೆಗೆ, ಕಾನೂನು ಚೌಕಟ್ಟಿನಲ್ಲಿ ಜನಸಾಮಾನ್ಯರಿಗೆ ವಿನಾಯಿತಿ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ಅಶ್ವತ್ ನಾರಾಯಣ ಅವರು ಸಿಸಿ ಹಾಗೂ ಒಸಿ ಆಧಾರಿತವಾಗಿ ಎಸ್ಕಾಂಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರಿನ ಸಂಪರ್ಕ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಈ ವಿಚಾರಕ್ಕೆ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಇದು ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪಾಲಿಕೆ, ಪಂಚಾಯ್ತಿಗೆ ಸೇರಿದ ವಿಚಾರ. ನಿಯಂತ್ರಣ ಪ್ರಾಧಿಕಾರದವರು (regulatory authority) ಈ ತೀರ್ಪನ್ನು ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.…
ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಆಗಸ್ಟ್ 20ರಂದು ಕ್ಲೇಮ್ ಸ್ಲಿಪ್ ಡೌನ್ಲೋಡ್ ಮಾಡಿಕೊಂಡು ಆ ಪ್ರಕಾರ ಮೂಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ಆನ್ ಲೈನ್ ಅರ್ಜಿಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಆಧರಿಸಿ ಕ್ಲೇಮ್ ಸ್ಲಿಪ್ ಅನ್ನು ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು, ಆ ಪ್ರಕಾರ ಮೂಲ ದಾಖಲೆಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ನಂತರ ಪ್ರವೇಶ ಸಂದರ್ಭದಲ್ಲಿ ಅವುಗಳನ್ನು ಕಾಲೇಜಿಗೆ ಸಲ್ಲಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಂಬಿಎ, ಎಂಸಿಎ ಗೆ ಮಾತ್ರ ಅನ್ವಯವಾಗುವ ಹಾಗೆ ವಿಶೇಷ ವರ್ಗ, ಮಾಜಿ ಸೈನಿಕರ ಕೋಟಾದಡಿ ಸೀಟು ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಆ.22ರಂದು ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಅವರು ವಿವರಿಸಿದ್ದಾರೆ.
ಮುಂಬೈ : ಜಿಯೋ ಟ್ರೂ 5ಜಿ ಕಡೆಯಿಂದ ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ. ಹಬ್ಬದ ಋತುವಿಗೆ ನಿಜವಾಗಿಯೂ ಹಬ್ಬದ ವಾತಾವರಣವನ್ನು ಸೃಷ್ಟಿಸುವಂಥ ಅನುಕೂಲಗಳನ್ನು ಇದರಿಂದ ಪ್ರಿಪೇಯ್ಡ್ ಗ್ರಾಹಕರು ಪಡೆಯಲಿದ್ದಾರೆ. ಜಿಯೋದಿಂದ ಹೊಸದಾಗಿ ಅನಿಯಮಿತವಾಗಿ ಪ್ಲಾನ್ ಗಳನ್ನು ಘೋಷಣೆ ಮಾಡಲಾಗಿದೆ. ಆರಂಭಿಕ ಪ್ಯಾಕ್ 349 ರೂಪಾಯಿಯನ್ನು ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ 2600 ರೂಪಾಯಿ ಮೌಲ್ಯದ ಅನುಕೂಲಗಳು ದೊರೆಯಲಿವೆ. ಭಾರತದ ಅತ್ಯುತ್ತಮ ನೆಟ್ ವರ್ಕ್ ಎನಿಸಿರುವ ಜಿಯೋ ಅತ್ಯುತ್ತಮವಾದ ಪ್ಲಾನ್ ಗಳನ್ನು ನೀಡುವುದನ್ನು ಮುಂದುವರಿಸಿದ್ದು, ತನ್ನ ಗ್ರಾಹಕರಿಗೆ ಇದರ ಮೂಲಕ ಉತ್ತಮವಾದ ಅನುಭವವನ್ನು ದೊರಕಿಸುತ್ತಿದೆ. ಹೀಗೆ ಮಾಡುತ್ತಿರುವುದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಸುಸ್ಥಿರತೆ ಬಲಪಡಿಸುವ ತನ್ನ ಬದ್ಧತೆಯನ್ನು ಸಹ ಕಾಪಾಡಿಕೊಂಡುಬಂದಿದೆ. ಈ ಹೊಸ ಟ್ರೂ 5ಜಿ ಪ್ಲಾನ್ ಆರಂಭಿಕ ಪ್ಯಾಕ್ 349ರೊಂದಿಗೆ ಸಿಗುವ ಅನುಕೂಲಗಳು ಹೀಗಿವೆ: * ಅನಿಯಮಿತವಾದ 5ಜಿ ಡೇಟಾ 349 ರೂಪಾಯಿ ಮೌಲ್ಯದ್ದು ದೊರೆಯಲಿದೆ. * ಜಿಯೋ ಹಾಟ್ ಸ್ಟಾರ್ ನಲ್ಲಿ 90 ದಿನಗಳ ಅವಧಿಗೆ 299 ರೂಪಾಯಿ ಮೌಲ್ಯದಲ್ಲಿ ಉಚಿತ ಕ್ರಿಕೆಟ್…
ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟವು ಆನ್ಲೈನ್ ಗೇಮಿಂಗ್ ಮಸೂದೆಯನ್ನು ಅನುಮೋದಿಸಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ವರ್ಚುವಲ್ ವಲಯವನ್ನು ನಿಯಂತ್ರಿಸುವುದು ಮತ್ತು ಅಕ್ರಮ ಬೆಟ್ಟಿಂಗ್ ಅನ್ನು ತಡೆಯುವುದು ಪ್ರಸ್ತಾವಿತ ಕಾನೂನು ಉದ್ದೇಶವಾಗಿದೆ. ಡಿಜಿಟಲ್ ಬೆಟ್ಟಿಂಗ್ ಅಪ್ಲಿಕೇಶನ್ಗಳು ಮತ್ತು ಸೆಲೆಬ್ರಿಟಿಗಳ ಅನುಮೋದನೆಗಳಿಗೆ ಸಂಬಂಧಿಸಿದ ಹೆಚ್ಚುತ್ತಿರುವ ವಂಚನೆಯಿಂದ ಪ್ರೇರೇಪಿಸಲ್ಪಟ್ಟ ಈ ಮಸೂದೆಯು ಎಲ್ಲಾ ವೇದಿಕೆಗಳನ್ನು ಸ್ಪಷ್ಟ ಕಾನೂನು ಚೌಕಟ್ಟಿನ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದೆ. ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ. ಆನ್ಲೈನ್ ಗೇಮಿಂಗ್ ಮಸೂದೆ ಎಂದರೇನು? ಆನ್ಲೈನ್ ಗೇಮಿಂಗ್ ಮಸೂದೆಯು ಭಾರತದಲ್ಲಿ ಆನ್ಲೈನ್ ಗೇಮಿಂಗ್ ಅನ್ನು ನಿಯಂತ್ರಿಸಲು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಪ್ರಯತ್ನಿಸುತ್ತದೆ. ಮಸೂದೆಯು ಈ ಕೆಳಗಿನ ಕಳವಳಗಳನ್ನು ಎತ್ತಿ ತೋರಿಸುತ್ತದೆ: ವ್ಯಸನ. ವಂಚನೆ. ಜೂಜಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನುಗಳಲ್ಲಿನ ಅಸಂಗತತೆಗಳು. ಇದು ಗೇಮಿಂಗ್ ಪ್ಲಾಟ್ಫಾರ್ಮ್ಗಳ ಮೇಲೆ, ವಿಶೇಷವಾಗಿ ನೈಜ-ಹಣದ ಆಟಗಳನ್ನು ನೀಡುವವರ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಪ್ರಸ್ತಾಪಿಸುತ್ತದೆ. ಇದು ಆನ್ಲೈನ್ ಗೇಮಿಂಗ್ಗಾಗಿ ಕೇಂದ್ರ ನಿಯಂತ್ರಕವಾಗಿ…