Subscribe to Updates
Get the latest creative news from FooBar about art, design and business.
Author: kannadanewsnow09
ಇಸ್ಲಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಮಾರ್ಚ್ 9ರ ಇಂದು ಪಾಕಿಸ್ತಾನದ 14 ನೇ ಅಧ್ಯಕ್ಷರಾಗಿ ಆಯ್ಕೆಯಾದರು. 68 ವರ್ಷದ ಜರ್ದಾರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಜಂಟಿ ಅಭ್ಯರ್ಥಿಯಾಗಿದ್ದರೆ, ಅವರ ಪ್ರತಿಸ್ಪರ್ಧಿ ಮಹಮೂದ್ ಖಾನ್ ಅಚಕ್ಜೈ (75) ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್ಐಸಿ) ಅಭ್ಯರ್ಥಿಯಾಗಿದ್ದರು. ಸಂವಿಧಾನದ ನಿಬಂಧನೆಗಳ ಪ್ರಕಾರ ರಾಷ್ಟ್ರೀಯ ಅಸೆಂಬ್ಲಿ ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ಎಲೆಕ್ಟೋರಲ್ ಕಾಲೇಜ್ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಜರ್ದಾರಿ ಅವರು ಹತ್ಯೆಗೀಡಾದ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ. ಅವರು 255 ಮತಗಳನ್ನು ಪಡೆದರೆ, ಅವರ ಎದುರಾಳಿ 119 ಮತಗಳನ್ನು ಪಡೆದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷ ಐದು ವರ್ಷಗಳ ಅವಧಿ ಮುಕ್ತಾಯಗೊಂಡ ಹಾಲಿ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಜರ್ದಾರಿ ತುಂಬಲಿದ್ದಾರೆ. ಆದಾಗ್ಯೂ, ಹೊಸ ಎಲೆಕ್ಟೋರಲ್ ಕಾಲೇಜ್…
ರಾಯಚೂರು: ರಾಜ್ಯದಲ್ಲೇ ಹೃದಯವಿದ್ರಾವಕ ಘಟನೆ ಎನ್ನುವಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ತಂದೆ-ತಾಯಿ ಸಾವನ್ನಪ್ಪಿದೇ, ಮಗಳು ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ರಾಯಚೂರಲ್ಲಿ ನಡೆದಿದೆ. ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ರಸ್ತೆಯ ಓವರ್ ಬ್ರಿಡ್ಜ್ ಕೆಳಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಈ ಘಟನೆಯಲ್ಲಿ ತಂದೆ-ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ರೇ, ಮಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರನ್ನು ಮೊಹಮ್ಮದ್ ಸಮೀರ್(45) ಹಾಗೂ ಜುಲ್ಲೇಕಾ ಬೇಗಂ(40) ಎಂದು ಗುರುತಿಸಲಾಗಿದೆ. ಗಾಯಾಳಾಗಿ ಚಿಕಿತ್ಸೆ ಪಡೆಯುತ್ತಿರುವಂತ ಮೈಮೂಲಾ ಎಂದು ತಿಳಿದು ಬಂದಿದೆ. ರೈಲಿಗೆ ತಲೆ ಕೊಟ್ಟು ಮೊಹಮ್ಮದ್ ಸಮೀರ್, ಜುಲ್ಲೇಕಾ ಬೇಗಂ ಆತ್ಮಹತ್ಯೆ ಮಾಡಿಕೊಂಡಿದ್ದರೇ, ಈ ಘಟನೆಯಲ್ಲಿ ಅವರ ಮಗಳು ಮೈಮೂಲಾ ಕೈ ಮುರಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/ballari-family-members-donate-eyes/ https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/
ಬಳ್ಳಾರಿ : ಅಕಾಲಿಕ ನಿಧನ ಹೊಂದಿದ ಸಿರುಗುಪ್ಪ ತಾಲೂಕಿನ ಭೈರಾಪೂರ ಗ್ರಾಮದ ಮಾರುತಿ ಶೆಟ್ಟಿ.ಬಿ ಅವರ ನೇತ್ರಗಳನ್ನು ದಾನ ಮಾಡಿ, ಕುಟುಂಬದ ಸದಸ್ಯರು ಮಾನವೀಯತೆ ಮೆರೆದರು. ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ಬಳ್ಳಾರಿಯ ಆದರ್ಶ ಹಾರ್ಟ್ಕೇರ್ ಸೆಂಟರ್, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 68 ನೇ ವಯಸ್ಸಿನ ಮಾರುತಿ ಶೆಟ್ಟಿ ತಂದೆ ನಾರಾಯಣ ಶೆಟ್ಟಿ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಾ.08 ರಂದು ಮರಣ ಹೊಂದಿದ್ದರು. ಅನ್ಯಕಾರ್ಯ ನಿಮಿತ್ಯ ಆಸ್ಪತ್ರೆಗೆ ತೆರಳಿದ್ದ ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ್ ಕುಟುಂಬದ ಸದಸ್ಯರಿಗೆ ಮರಣಾನಂತರ ಇತರರ ಬಾಳಿಗೆ ಬೆಳಕಾಗುವ ಅವಕಾಶ ಹಿನ್ನಲೆಯಲ್ಲಿ ನೇತ್ರದಾನವನ್ನು ಮಾಡುವ ಕುರಿತು ಮಹತ್ವ ತಿಳಿಸಿದ ನಂತರ ಮಗನಾದ ಪ್ರದೀಪ್ ಅವರು ಒಪ್ಪಿಗೆ ಸೂಚಿಸಿದ ತಕ್ಷಣ ವಿಮ್ಸ್ ನೇತ್ರಬಂಡಾರಕ್ಕೆ ಸಂಪರ್ಕಿಸಲಾಗಿದೆ. ವಿಮ್ಸ್ ನೇತ್ರತಜ್ಞರಾದ ಡಾ.ಪರಸಪ್ಪ ಅವರು ತಕ್ಷಣ ಡಾ.ಅನುಷಾ ನೇತೃತ್ವದಲ್ಲಿ ತಂಡವನ್ನು ಕಳುಹಿಸಿ ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕರಾದ ಪಲ್ಲೇದ ಬಸವರಾಜ, ಹಾಗೂ ಡಾ.ಕೋಟ್ರೇಶ್ ಅವರ ಸಹಕಾರದೊಂದಿಗೆ ಕಣ್ಣಿನ ಮಸೂರ (ಕಾರ್ನಿಯಾ) ವನ್ನು ಪಡೆದುಕೊಂಡಿದ್ದಾರೆ. ನೋವಿನಲ್ಲೂ ಕಣ್ಣಿನ ದಾನ…
ರಾಯಚೂರು: ದೇವಸ್ಥಾನಗಳಲ್ಲಿನ ದೇವರ ಹುಂಡಿಗಳಿಗೆ ಹಣ ಹಾಕುವುದು ದಾನವಲ್ಲ. ನಾವು ಮಾಡಿರುವಂತ ಪಾಪದ ಪ್ರಾಯಶ್ಚಿತ್ತದ ಒಂದು ಮುಖವಾಗಿದೆ. ದೇವರ ಹುಂಡಿಗೆ ಹಣ ಹಾಕೋದು ಅಸಹ್ಯಕರವಾದದ್ದು ಎಂಬುದಾಗಿ ಖ್ಯಾತ ಸಾಹಿತಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಆಯೋಜಿಸಿದ್ದಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ದೇವರ ಹುಂಡಿಗೆ ಹಣ ಹಾಕುವುದು ಪಾಪವನ್ನ ರಿನಿವಲ್ ಮಾಡಿದಹಾಗೆ ಆಗುತ್ತದೆ. ನಾನು ಇಷ್ಟೊಂದು ಪಾಪ ಮಾಡಿದ್ದೀನಿ, ಭ್ರಷ್ಟಾಚಾರ ಮಾಡಿದ್ದೀನಿ, ಇಷ್ಟು ಜನರನ್ನ ಹಾಳು ಮಾಡಿದ್ದೀನಿ. ದಯವಿಟ್ಟು ಇದನ್ನ ಕ್ಷಮಿಸಿ ಎಂದಂತೆ. ಹೊಸದಾಗಿ ಪಾಪ ಮಾಡಲಿಕ್ಕೆ ಅವಕಾಶ ಮಾಡಿಕೊಡು ಅನ್ನೋದು ಆಗಿದೆ ಎಂದು ಹೇಳಿದರು. ಇನ್ನೇನು ರೋಜಾ, ಹಜ್, ರಜಾಕ್ ಇವೆಲ್ಲಾ ಶುರುವಾಗ್ತದೆ. ಅವೆಲ್ಲವೂ ಇನ್ನೊಬ್ಬರಿಗೆ ದಾನ ಕೊಡಬೇಕು ಅಂತಾನೇ ಹೇಳುತ್ತವೆ. ಕುರಾನ್ ಬಗ್ಗೆ ಹೇಳಿದ್ರೆ ಮುಸ್ಲಿಂ ಪರ ಮಾತನಾಡುತ್ತೇನೆ ಅಂತಲ್ಲ. ಕುರಾನ್ ನಮಗೆ ಯಾಕೆ ಇಪಾರ್ಟೆಂಟ್ ಅನಿಸ್ತದೆ. ಒಳ್ಳೆಯದು ಎಲ್ಲಿದೆ ಅದನ್ನ ನಾವು ಸ್ವೀಕರಿಸಬೇಕು. ಬಸವಣ್ಣ ಹೇಳಿದ್ದಾನೆ ಅದು ನಮ್ಮದು. ಮಹಮ್ಮದ್ ಪೈಗಂಬರ್…
ಬೀದರ್: ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಆರ್ ಪಾಟೀಲ್ ಅವರಿಗೆ ನೋವಾಗಿದ್ದರೇ ಅದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಅವರ ಅಸಮಾಧಾನಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಬಿಆರ್ ಪಾಟೀಲ್ ಬಗ್ಗೆ ಅಪಾರವಾದಂತ ಗೌರವವಿದೆ. ಅವರು ಹಿರಿಯರಾಗಿದ್ದಾರೆ. ನಾನು ಸಿಎಂ ಅಭಿನಂದನಾ ಕಾರ್ಯಕ್ರಮಕ್ಕೆ ಮೊದಲು ಒಂದು ದಿನ ಮುಂಚೆಯೇ ಹೋಗಿ ಅವರಿಗೆ ಶಿಷ್ಟಾಚಾರದ ಪ್ರಕಾರವಾಗಿ ಮೊದಲ ಸಾಲಿನಲ್ಲೇ ಕುರ್ಚಿ ಹಾಕಿಸಿದ್ದೆನು. ಅಲ್ಲದೇ ಅದಕ್ಕೆ ಅವರ ಹೆಸರನ್ನು ಅಂಟಿಸಿದ್ದನ್ನು ನೋಡಿಕೊಂಡು ಬಂದಿದ್ದೆನು ಎಂದು ಹೇಳಿದರು. ನಾನು ಸಿಎಂ ಸಿದ್ಧರಾಮಯ್ಯ ಅವರನ್ನು ಸ್ವಾಗತ ಮಾಡಿಕೊಂಡು ಬರುವಾಗ ವಿಳಂಬವಾಗಿದೆ. ಆ ಸಮಯದಲ್ಲಿ ಹಿರಿಯರಾಗಿದ್ದಂತ ಬಿಆರ್ ಪಾಟೀಲ್ ಬಂದಿದ್ದನ್ನು ನಾನು ಗಮನಿಸಿರಲಿಲ್ಲ ಎಂದರು. ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಅಚಾತುರ್ಯವಾಗಿದೆ. ಈ ಘಟನೆಯ ಬಗ್ಗೆ ನಾನು ಅತ್ಯಂತ ವಿಷಾದ ವ್ಯಕ್ತ ಪಡಿಸುತ್ತೇನೆ. ಬಿಆರ್ ಪಾಟೀಲ್ ಅವರು ಮನಸ್ಸಿನಲ್ಲಿ ಯಾವುದು ಇಟ್ಟುಕೊಳ್ಳಬಾರದು ಅಂತ ಈ ಮೂಲಕ ಅವರಲ್ಲಿ…
ದಾವಣಗೆರೆ : ರಾಜ್ಯದ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವಂತ 9000 ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅವರು ಶನಿವಾರ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು. ದಾವಣಗೆರೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿನ ಮೊದಲ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮುಖ್ಯ ಬಸ್ ನಿಲ್ದಾಣವನ್ನು ಶೇ 109.84 ಕೋಟಿಯಲ್ಲಿ 6.07 ಎಕರೆ…
ದಾವಣಗೆರೆ: ಬೆಳಗಾವಿಯ ನಿಪ್ಪಾಣಿಯಲ್ಲಿರುವಂತ ಶ್ರೀರಾಮಮಂದಿರ ದೇವಾಲಯಕ್ಕೆ ಬಾಂಬ್ ಬೆದರಿಕೆ ಪತ್ರವನ್ನು ಕಳುಹಿಸಲಾಗಿತ್ತು. ಈ ಹಿನ್ನಲ್ಲೆಯಲ್ಲಿ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹೈ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಬೆಳಗಾವಿಯ ನಿಪ್ಪಾಣಿಯ ಶ್ರೀರಾಮಮಂದಿರ ದೇವಾಲಯವನ್ನು ಸ್ಪೋಟಿಸೋದಾಗಿ ಬಾಂಬ್ ಬೆದರಿಕೆ ಪತ್ರ ಬಂದಿದೆ. ಹೀಗಾಗಿ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸೋದಕ್ಕೆ ಸೂಚಿಸಲಾಗಿದೆ ಎಂದರು. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳೋದಕ್ಕೆ ಮುಜರಾಯಿ ಇಲಾಖೆಯ ಎಂಡಿಗೆ ಸೂಚಿಸಿದ್ದೇನೆ. ಅವರು ಸೂಕ್ತ ಭದ್ರತೆ ಕುರಿತಂತೆ ಆದೇಶ ಮಾಡಲಿದ್ದಾರೆ ಎಂದು ತಿಳಿಸಿದರು. https://kannadanewsnow.com/kannada/ban-on-cotton-candy-gobi-manchuri-in-state-state-govt-likely-to-make-official-announcement-on-monday/ https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/
ಬೆಂಗಳೂರು: ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲೂ ವಿಷಕಾರಕ, ಕ್ಯಾನ್ಸರ್ ಕಾರಕ ಅಂಶಗಳಿರುವಂತ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡೋದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಈಗಾಗಲೇ ಹಾನಿಕಾರ ಅಂಶವಿರುವಂತ ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯಲ್ಲಿ (Gobi Manchuri)ಯ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿ, ಪರೀಕ್ಷಾ ವರದಿಯನ್ನು ಪಡೆದುಕೊಂಡಿದೆ. ಈ ವರದಿಯನ್ನು ಆಧರಿಸಿ ಕರ್ನಾಟಕದಲ್ಲಿ ಬಾಂಬೆ ಮಿಠಾಯಿ ಹಾಗೂ ಗೋಬಿ ಮಂಚೂರು ಬ್ಯಾನ್ ಮಾಡೋದಾಗಿ ಹೇಳಲಾಗುತ್ತಿದೆ. ಇನ್ನೂ ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ಸೋಮವಾರ (ಮಾ.11) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸ್ಯಾಂಪಲ್ನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ…
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಮುದ್ರ ಮಾರ್ಗದಲ್ಲಿ ಪಲಾಯಣ ಮಾಡಿರೋ ಶಂಕೆಯಲ್ಲಿ ಕರಾವಳಿ ಕಾವಲುಪಡೆಯಿಂದ ಪರಿಶೀಲನೆ ನಡೆಸುತ್ತಿದ್ದರೇ, ಮತ್ತೊಂದು ಆಯಾಮವಾಗಿ ಈಗ ಬಾಂಬರ್ ಪುಣೆಯಲ್ಲಿರುವ ಶಂಕೆ ವ್ಯಕ್ತವಾಗಿದೆ. ಮಾ.1ರಂದು ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಸ್ಪೋಟಗೊಂಡಿದ್ದವು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದರು. ಈಗಾಗಲೇ ಗಾಯಾಳುಗಳಲ್ಲಿ ಹಲವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಕೆಲವರು ಬ್ರೂಕ್ ಫೀಲ್ಡ್ ಹಾಗೂ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೇಸ್ ಸಂಬಂಧ ತನಿಖೆಯನ್ನು ಎನ್ಐಎ ಅಧಿಕಾರಿಗಳು ಚುರುಕಾಗಿ ನಡೆಸುತ್ತಿದ್ದಾರೆ. ಈಗಾಗಲೇ ಬಾಂಬರ್ ಎರಡು ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಇಂದು ಮೂರು ಬಾಂಬರ್ ಕ್ಲಿಯರ್ ಪೋಟೋಗಳನ್ನು ಬಿಡುಗಡೆ ಮಾಡಲಾಗಿತ್ತು. ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ನಗದು ಬಹುಮಾನ ಕೂಡ ಘೋಷಣೆ ಮಾಡಲಾಗಿದೆ. ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ…
ಚೆನ್ನೈ: 2,000 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮಾಜಿ ಕಾರ್ಯಕರ್ತ ಜಾಫರ್ ಸಾದಿಕ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬಂಧಿಸಿದೆ. ಎನ್ಸಿಬಿ ಶನಿವಾರ ಹೇಳಿಕೆಯಲ್ಲಿ, ಮಾದಕವಸ್ತು “ಬ್ಯಾರನ್” ಅನ್ನು ಬಂಧಿಸಿದೆ ಎಂದು ಹೇಳಿದೆ. ಆಡಳಿತಾರೂಢ ಡಿಎಂಕೆಯ ಎನ್ಆರ್ಐ ಸೆಲ್ನ ಮಾಜಿ ಪದಾಧಿಕಾರಿಯಾಗಿದ್ದ ಸಾದಿಕ್ ಕೂಡ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಒಂದು ವಾರದ ಹಿಂದೆ ಎನ್ಸಿಬಿ ತನ್ನ ಕೆಲವು ಸಹಾಯಕರನ್ನು ಬಂಧಿಸಿದ ನಂತರ ಸಾದಿಕ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದರು. ಆಹಾರ ಉತ್ಪನ್ನಗಳಲ್ಲಿ ಅಡಗಿಸಿಟ್ಟಿರುವ ಮಾದಕವಸ್ತುಗಳನ್ನು ತಮ್ಮ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಅಧಿಕಾರಿಗಳು ಭಾರತೀಯ ಏಜೆನ್ಸಿಗಳಿಗೆ ಮಾಹಿತಿ ನೀಡಿದ ನಂತರ ಈ ದಂಧೆಯನ್ನು ಬಯಲಾಗಿತ್ತು. ಅಂತರರಾಷ್ಟ್ರೀಯ ಡ್ರಗ್ ಕಾರ್ಟೆಲ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವರದಿಗಳ ನಡುವೆ ಸಾದಿಕ್ ಅವರನ್ನು ಡಿಎಂಕೆಯಿಂದ ವಜಾಗೊಳಿಸಲಾಯಿತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/ https://kannadanewsnow.com/kannada/pedestrian-killed-in-hit-and-run-on-nelamangala-highway/