Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಒಂದೆಡೆ ಮುಡಾ ಹಗರಣ, ವಾಲ್ಮೀಕಿ ನಿಗಮದಲ್ಲಿ ನಡೆದಿದ್ದಂತ ಕೋಟ್ಯಂತರ ರೂ ಅಕ್ರಮ ಹಣ ವರ್ಗಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. ಈ ಕುರಿತಂತೆ ಇಂದು ಬೆಂಗಳೂರಿನ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತು. ಇಂದು ಬಿ.ನಾಗೇಂದ್ರ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ, ಅವರಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಅಂದಹಾಗೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅವ್ಯವಹಾರ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರನ್ನು ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ಅವರಿಗೆ ಈಗ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. https://kannadanewsnow.com/kannada/bjp-jds-worker-dies-of-heart-attack-during-padayatra/…
ಚನ್ನಪಟ್ಟಣ: ಮುಡಾ ಹಗರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ಅಕ್ರಮಗಳ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಂತ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚನ್ನಪಟ್ಟಣದ ಬನಶಂಕರಿಯ ಗೌರಮ್ಮ ಎಂಬುವರು ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆ ಮಾಡುತ್ತಿದ್ದಾಗಲೇ ಚನ್ನಪಟ್ಟಣದ ಬಳಿಯಲ್ಲಿ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ತಿಳಿದಂತ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗೌರಮ್ಮ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಅಲ್ಲದೇ ಆರ್ಥಿಕ ನೆರವು ನೀಡುವುದಾಗಿಯೂ ಅಭಯ ನೀಡಿದ್ದಾರೆ. https://kannadanewsnow.com/kannada/are-you-asking-for-an-account-of-my-assets-i-will-give-everything-give-your-brothers-account-first-dk-shivakumar-to-hdk/ https://kannadanewsnow.com/kannada/men-beware-learn-about-the-early-symptoms-of-penile-cancer/ https://kannadanewsnow.com/kannada/protests-in-bangladesh-sheikh-hasina-likely-to-resign-as-pm-today/
ಬಾಂಗ್ಲಾ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಹಿರಿಯ ಸಲಹೆಗಾರರೊಬ್ಬರು ಸೋಮವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸಂಭಾವ್ಯ ನಿರ್ಗಮನದ ಬಗ್ಗೆ ಕೇಳಿದಾಗ ರಾಜೀನಾಮೆ ನೀಡುವ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. “ಪರಿಸ್ಥಿತಿ ಹೇಗಿದೆಯೆಂದರೆ ಇದು ಸಾಧ್ಯವಿದೆ, ಆದರೆ ಇದು ಹೇಗೆ ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ” ಎಂದು ಹೆಸರು ಹೇಳಲಿಚ್ಛಿಸದ ಸಹಾಯಕ ಎಎಫ್ಪಿಯೊಂದಿಗೆ ಮಾತನಾಡುತ್ತಾ ಹೇಳಿದರು. ಪ್ರಧಾನಿ ಹಸೀನಾ ಅವರ ರಾಜೀನಾಮೆಗಾಗಿ ದೇಶದಲ್ಲಿ ಹೊಸ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಸ್ವಲ್ಪ ಸಮಯದ ಮೊದಲು ಈ ವರದಿ ಬಂದಿದೆ. ದೇಶಾದ್ಯಂತ ನಡೆದ ಭೀಕರ ಘರ್ಷಣೆಗಳಲ್ಲಿ ಸುಮಾರು 100 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಹಸೀನಾ ರಾಜೀನಾಮೆ ನೀಡುವಂತೆ ಒತ್ತಾಯಿಸಲು ರಾಷ್ಟ್ರವ್ಯಾಪಿ ಕರ್ಫ್ಯೂ ಉಲ್ಲಂಘಿಸಿ ವಿದ್ಯಾರ್ಥಿ ಕಾರ್ಯಕರ್ತರು ರಾಜಧಾನಿಗೆ ಮೆರವಣಿಗೆಗೆ ಕರೆ ನೀಡಿದ್ದರು. ಕೆಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಲು ಪ್ರಾರಂಭಿಸುತ್ತಿದ್ದಂತೆ, ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು ಸೈನಿಕರು ರಾಜಧಾನಿಯ ಬೀದಿಗಳಲ್ಲಿ ಗಸ್ತು ತಿರುಗಿದರು…
ನನ್ನ ಆಸ್ತಿ ಲೆಕ್ಕ ಕೇಳ್ತಾ ಇದ್ದೀಯಾ? ಎಲ್ಲಾ ಕೊಡ್ತೀನಿ, ಮೊದಲು ನಿನ್ನ ಸಹೋದರನ ಲೆಕ್ಕ ಕೊಡು: HDKಗೆ ಡಿಕೆಶಿ ಪ್ರಶ್ನೆ
ಬೆಂಗಳೂರು : “ನನ್ನ ಕುಟುಂಬದ ಆಸ್ತಿ ಲೆಕ್ಕಾಚಾರ ಕೇಳುತ್ತಿದ್ದೀಯಾ, ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ಇದಕ್ಕೂ ಮೊದಲು ನಿನ್ನ ಸಹೋದರನ ಆಸ್ತಿ ಲೆಕ್ಕ ನೀಡು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲೆಸೆದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು “ನಿನ್ನ ಅಧಿಕಾರವಧಿಯಲ್ಲಿ ನಿನ್ನ ಸಹೋದರ ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡ ಎಂಬುದಕ್ಕೆ ಮೊದಲು ಲೆಕ್ಕಾಚಾರ ಹಾಕೋಣ. ಆನಂತರ ನನ್ನದು ಕೊಡುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ” ಎಂದು ತಿರುಗೇಟು ನೀಡಿದರು. “ಕುಮಾರಸ್ವಾಮಿ ನನ್ನ ಪ್ರಶ್ನೆ ಮಾಡುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೇ. ಆದರೆ ನಾನು ಅವರ ಸಹೋದರನ ಆಸ್ತಿ ಬಗ್ಗೆ ಮೊದಲು ಉತ್ತರ ನೀಡಲಿ. ಜೆಡಿಎಸ್, ಬಿಜೆಪಿ ಹಗರಣಗಳಿಗೆ ಉತ್ತರ ಕೊಡಿ ಎಂದು ಕೇಳಿದರೂ ಇದುವರೆಗೂ ಉತ್ತರ ಕೊಟ್ಟಿಲ್ಲ” ಎಂದರು. “ವಿಜಯೇಂದ್ರ ಹೇಳುತ್ತಾನೆ ಭ್ರಷ್ಟಾಚಾರದ ಪಿತಾಮಹಾ ನಾನು ಎಂದು. ನೀನು ಮೊದಲು ಹೇಳಪ್ಪ, ನೀನು ನಿಮ್ಮ ಅಪ್ಪನನ್ನು ಯಾಕೆ ಜೈಲಿಗೆ ಕಳುಹಿಸಿದೆ?…
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅಮೆರಿಕದ ಓಟಗಾರ ನೋಹ್ ಲೈಲ್ಸ್ 100 ಮೀಟರ್ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಲೈಲ್ಸ್ ಅತ್ಯಂತ ಕಡಿಮೆ ಅಂತರದಿಂದ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದ ಕಾರಣ ಇದು ರೇಸ್ ಗೆ ನಂಬಲಾಗದ ಅಂತ್ಯವಾಗಿತ್ತು. ಚಿನ್ನ ಮತ್ತು ಬೆಳ್ಳಿ ಪದಕಗಳ ನಡುವಿನ ವ್ಯತ್ಯಾಸವು ಸೆಕೆಂಡಿನ ಐದು ಸಾವಿರದ ಒಂದು ಭಾಗವಾಗಿತ್ತು. ಪ್ಯಾರಿಸ್ ಕ್ರೀಡಾಕೂಟದಲ್ಲಿ ನಾಟಕೀಯ ಫೋಟೋ ಫಿನಿಶ್ ಆಗಿರುವ ಲೈಲ್ಸ್ ಜಮೈಕಾದ ಕಿಶೇನ್ ಥಾಂಪ್ಸನ್ ಅವರನ್ನು 0.005 ಸೆಕೆಂಡುಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಇಬ್ಬರೂ ಓಟಗಾರರಿಗೆ ತಲಾ 9.79 ಸೆಕೆಂಡುಗಳ ರೌಂಡ್-ಅಪ್ ಸಮಯವನ್ನು ನೀಡಲಾಯಿತು. ಆದರೆ ಇಬ್ಬರನ್ನು ಬೇರ್ಪಡಿಸಿದ್ದು ಅವರ ಒಟ್ಟಾರೆ ಸಮಯದಲ್ಲಿ .005 ಸೆಕೆಂಡುಗಳ ವ್ಯತ್ಯಾಸವಾಗಿದೆ. ಲೈಲ್ಸ್ .784 ಅಂಕಗಳನ್ನು ಗಳಿಸಿದರೆ, ಥಾಂಪ್ಸನ್ .789 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು. ಥಾಂಪ್ಸನ್ ರೇಸ್ ನ ಬಹುಪಾಲು ಮುನ್ನಡೆ ಸಾಧಿಸಿದರು ಆದರೆ ಕೊನೆಯಲ್ಲಿ ಲೈಲ್ಸ್ ಅವರ ಅದ್ಭುತ ವೇಗವರ್ಧನೆಯು ಅವರನ್ನು ಅಗ್ರಸ್ಥಾನದಲ್ಲಿ ಹೊರಹೊಮ್ಮುವಂತೆ ಮಾಡಿತು, ಇದು…
ಚಿತ್ರದುರ್ಗ: ಜಿಲ್ಲೆಯಲ್ಲಿ ರಾಜ್ಯದ ಪಂಚಾಯತ್ ರಾಜ್ ಇಲಾಖೆಯಲ್ಲೊಂದು ಬಹುದೊಡ್ಡ ಕರ್ಮಕಾಂಡ ಎನ್ನುವಂತೆ, ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಕಾಮಗಾರಿ ನಡೆಸದೇ ಬಿಲ್ ಗುಳುಂ ಮಾಡೋದಕ್ಕೆ ಹೋಗಿ, ಪ್ರಕರಣ ಹೊರಬಿದ್ದಂತೆ ಅಕ್ರಮ ಮುಚ್ಚಿ ಹಾಗೋದಕ್ಕೆ ಇಲ್ಲ ಸಲ್ಲದ ಕಥೆಯನ್ನು ಅಧಿಕಾರಿಗಳು ಕಟ್ಟುತ್ತಿದ್ದಾರೆ. ಹಾಗಾದ್ರೇ ಏನಾಗಿದೆ ಅಂತಹ ಕರ್ಮಕಾಂಡ ಎನ್ನುವ ಬಗ್ಗೆ ಮುಂದೆ ಓದಿ. ಕಾಮಗಾರಿ ಮೊತ್ತವಿಲ್ಲ, ಪ್ರಾರಂಭದ ದಿನಾಂಕವಿಲ್ಲ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ. ಇನ್ನೂ ತಾಲೂಕಿನ ಉಡುವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಜ್ಜಯ್ಯನಹಟ್ಟಿ ಗ್ರಾಮದ ಸರ್ವೆ ನಂಬರ್.11ರಲ್ಲಿ ಬಾಲಪ್ಪನ ಜಮೀನಿನ ಹತ್ತಿರ ಗೋಕಟ್ಟೆ ನಿರ್ಮಾಣಕ್ಕಾಗಿ ಹಾಕಿರೋ ಬೋರ್ಡ್ ನಲ್ಲಿ ಕಾಮಗಾರಿ ಆರಂಭ, ಕಾಮಗಾರಿ ಮುಕ್ತಾಯದ ಮಾಹಿತಿಯಿಲ್ಲ. ಅದು ಕಾಮಗಾರಿ ಆರಂಭವಾದಾಗ,…
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನಿಂದ ಸಂಗ್ರಹಿಸಿದ ಬಾವಲಿ ಮಾದರಿಗಳಲ್ಲಿ ನಿಪಾಹ್ ವೈರಸ್ ಇರುವುದು ಪತ್ತೆಯಾಗಿದೆ, ಅಲ್ಲಿ ಜೂನ್ 21 ರಂದು ಸೋಂಕಿನಿಂದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಪ್ರಕಾರ, ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 27 ಹಣ್ಣಿನ ಬಾವಲಿ ಮಾದರಿಗಳಲ್ಲಿ ಆರರಲ್ಲಿ ಪ್ರತಿಕಾಯಗಳು ಕಂಡುಬಂದಿವೆ. ನಿಪಾಹ್ ಪ್ರೋಟೋಕಾಲ್ ಪ್ರಕಾರ ನಡೆಸಿದ ಸೋಂಕಿತ ವ್ಯಕ್ತಿಯ ಸಂಪರ್ಕ ಪಟ್ಟಿಯಲ್ಲಿರುವವರ ಎಲ್ಲಾ ಪರೀಕ್ಷೆಗಳು ಇಲ್ಲಿಯವರೆಗೆ ವೈರಸ್ಗೆ ನಕಾರಾತ್ಮಕವಾಗಿವೆ ಎಂದು ಸಚಿವರು ಹೇಳಿದರು. ಒಟ್ಟು 472 ಜನರು ಸಂಪರ್ಕ ಪಟ್ಟಿಯಲ್ಲಿದ್ದಾರೆ ಮತ್ತು ಕಡ್ಡಾಯ 21 ದಿನಗಳ ಪ್ರತ್ಯೇಕತೆಯ ಅವಧಿಯನ್ನು ಪೂರ್ಣಗೊಳಿಸಿದ 261 ವ್ಯಕ್ತಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಒಂದೆಡೆ ವಯನಾಡು ಭೂ ಕುಸಿತ ದುರಂತದಿಂದ ಕೇರಳ ತತ್ತರಿಸಿ ಹೋಗಿದೆ. ಈ ಬೆನ್ನಲ್ಲೇ ನಿಪಾಹ್ ವೈರಸ್ ಪತ್ತೆಯಾಗಿರೋದು, ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ. https://kannadanewsnow.com/kannada/death-toll-rises-to-91-hundreds-injured-in-clashes-between-protesters-in-bangladesh/ https://kannadanewsnow.com/kannada/death-toll-in-wayanad-tragedy-rises-to-387/
ಬಾಗ್ಲಾದೇಶ: ಬಾಂಗ್ಲಾದೇಶದಲ್ಲಿ ನಡೆದ ಹೊಸ ಹಿಂಸಾಚಾರದಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆ ಪ್ರೊಥೋಮ್ ಅಲೋ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇದು ಸಿಲ್ಹೆಟ್ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ತನ್ನ ಪ್ರಜೆಗಳನ್ನು ಜಾಗರೂಕರಾಗಿರಲು ಕೇಳಲು ಪ್ರೇರೇಪಿಸಿತು ಮತ್ತು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿತು. ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿ ಆಂದೋಲನ ಘೋಷಿಸಿದ ಅಸಹಕಾರ ಚಳವಳಿಗೆ ಕುಳಿತವರು ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆಸಿದಾಗ ಹಿಂಸಾಚಾರ ಪುನರಾರಂಭವಾಯಿತು. ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ವಿದ್ಯಾರ್ಥಿಗಳು ಕರೆ ನೀಡುವುದರೊಂದಿಗೆ ಜುಲೈನಲ್ಲಿ ಪ್ರಾರಂಭವಾದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ನಂತರ ಪ್ರತಿಭಟನಾಕಾರರು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವಿನ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಜಾಗರೂಕರಾಗಿರಲು ಸಿಲ್ಹೆಟ್ನಲ್ಲಿರುವ ಭಾರತೀಯ…
ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರ, ನಾಪತ್ತೆಯಾಗಿರುವವರು, ಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 387 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ. ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿ, ಅಲ್ಲಿ ತಲುಪಿರೋದಾಗಿ ತಿಳಿದು ಬಂದಿದೆ. ಕೇರಳದ ವಯನಾಡು ಭೂಕುಸಿತ ದುರಂತವು ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಇದರ ನಡುವೆ ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. 6 ದಿನಗಳಿಂದ ತನ್ನ ಮಾಲೀಕನಿಗಾಗಿ ಹುಡುಕಾಡಿದಂತ ನಾಯಿಯೊಂದಕ್ಕೆ ಒಡತಿಯೊಬ್ಬರು ದೊರೆತಿದ್ದು ಕಂಡು, ಸಂತಸಗೊಂಡಿರುವಂತ ಪೋಟೋಗಳು…
ಧಾರವಾಡ: ಜಿಲ್ಲೆಯಲ್ಲಿನ ಕೇಂದ್ರ ಕಾರಾಗೃಹ ಜೈಲಿನಲ್ಲೇ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಆರೋಪಿ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿ ಬಸವರಾಜ ಹೊಸೂರ(47) ಎಂಬಾತ ನೇಣಿಗೆ ಶರಣಾಗಿದ್ದಾನೆ. ಕಾರಾಗೃಹದಲ್ಲಿನ ಕಿಟಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಬಸವರಾಜ ಹೊಸೂರ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿಯಾಗಿದ್ದನು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸಂದಿಗವಾಡ ನಿವಾಸಿಯಾಗಿದ್ದರು. ಡಬ್ಬಲ್ ಮರ್ಡರ್ ಕೇಸಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಂತ ಕೈದಿ, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. https://kannadanewsnow.com/kannada/dk-shivakumar-ji-i-have-not-looted-everything-you-see-like-you-hd-kumaraswamy/ https://kannadanewsnow.com/kannada/breaking-major-fire-breaks-out-at-andhra-pradeshs-visakhapatnam-railway-station-trains-gutted-in-fire/ https://kannadanewsnow.com/kannada/decision-to-remove-sirigere-swamiji-from-chair-coordination-committee-formed-under-the-chairmanship-of-shamanur/