Author: kannadanewsnow09

ಬೆಂಗಳೂರು: ಸಂವಿಧಾನವನ್ನು ಸುಟ್ಟ ಪೆರಿಯಾರ್‌ರನ್ನು ಪೂಜಿಸುವ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂಬುದಾಗಿ ಕರ್ನಾಟಕ ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಇಂದು ಎಕ್ಸ್ ಮಾಡಿದ್ದು, 42ನೇ ತಿದ್ದುಪಡಿ ಮೂಲಕ ಸಂವಿಧಾನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದು, ಅದರ ಮೂಲ ಸ್ವರೂಪವನ್ನು ತಿರುಚಿದ ಏಕೈಕ ಸಂವಿಧಾನ ವಿರೋಧಿ ರಾಜಕೀಯ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ವಾಗ್ಧಾಳಿ ನಡೆಸಿದೆ. ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ್ದ ಈ ಅಪಚಾರವನ್ನು 44ನೇ ತಿದ್ದುಪಡಿ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಸ್ಥಿರೀಕರಣಗೊಳಿಸಿದ್ದು ಬಿಜೆಪಿ ಎಂಬುದನ್ನು ಇತಿಹಾಸವೇ ಸಾರಿ ಹೇಳುತ್ತದೆ ಎಂದು ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಂವಿಧಾನದ ಪ್ರತಿಗೆ ನಮಸ್ಕರಿಸಿದ್ದು, ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದಿದ್ದು, ಸಂವಿಧಾನದ ಬಗ್ಗೆ ಬಿಜೆಪಿಗಿರುವ ಗೌರವ ಮತ್ತು ಭಕ್ತಿಯ ಪ್ರತೀಕವಾಗಿದೆ. https://twitter.com/BJP4Karnataka/status/1766847797339607536 https://kannadanewsnow.com/kannada/anant-kumar-hegdes-statement-on-constitution-bjp-clarifies-his-personal-opinion/ https://kannadanewsnow.com/kannada/breaking-mandya-activists-arrested-for-protesting-against-government-release-of-water-to-tamil-nadu/

Read More

ಬೆಂಗಳೂರು: ಸಂವಿಧಾನ ಕುರಿತಂತೆ ಹೇಳಿರುವಂತ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿ ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು, ಪಕ್ಷದ ಅಭಿಪ್ರಾಯವಲ್ಲ ಎಂಬುದಾಗಿ ರಾಜ್ಯ ಬಿಜೆಪಿ ಸ್ಪಷ್ಟ ಪಡಿಸಿದೆ. ಈ ಸಂಬಂಧ ಎಕ್ಸ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ಸಂವಿಧಾನ ಕುರಿತಂತೆ ಅನಂತ್ ಕುಮಾರ್ ಹೆಗಡೆ ಹೇಳಿರುವಂತ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದು ಬಿಜೆಪಿ ಪಕ್ಷದ ಅಭಿಪ್ರಾಯವಲ್ಲ ಎಂಬುದಾಗಿ ತಿಳಿಸಿದೆ. ಬಿಜೆಪಿ ಸಂವಿಧಾನವನ್ನು ಎತ್ತಿ ಹಿಡಿಯುವ ನಿಲುವಿಗೆ ಬದ್ಧವಾಗಿದೆ. ಸಂವಿಧಾನದ ಕುರಿತಂತೆ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿರುವಂತ ಹೇಳಿಕೆ ಕುರಿತಂತೆ ಅವರಿಂದ ವಿವರಣೆಯನ್ನು ಕೇಳಲಾಗಿದೆ ಎಂಬುದಾಗಿ ಹೇಳಿದೆ. https://twitter.com/BJP4Karnataka/status/1766822401944486300 https://kannadanewsnow.com/kannada/breaking-mandya-activists-arrested-for-protesting-against-government-release-of-water-to-tamil-nadu/ https://kannadanewsnow.com/kannada/congress-party-responsible-for-independent-candidates-victory-in-mandya-in-2019-hdk/

Read More

ಮೈಸೂರು : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಮೈಸೂರಿನಲ್ಲಿ 268 ಕಿ.ಮೀ ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಮೈಸೂರು ಮತ್ತು ಉತ್ತರ ಕರ್ನಾಟಕದ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹುಳಿಯಾರು-ಕೆಬಿ ಕ್ರಾಸ್-ಚುಂಚನಹಳ್ಳಿ-ನೆಲ್ಲಿಗೆರೆ ರಸ್ತೆಯಂತಹ ಉಪಕ್ರಮಗಳು ಇವುಗಳಲ್ಲಿ ಸೇರಿವೆ ಎಂದು ಸಚಿವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಸರ್ವಿಸ್ ರಸ್ತೆಗಳಿಂದ ಕೂಡಿದ ಮೈಸೂರು ರಿಂಗ್ ರಸ್ತೆ ದಟ್ಟಣೆಯನ್ನು ನಿವಾರಿಸುತ್ತದೆ. ಬೇಲೂರು-ಹಾಸನ ಮತ್ತು ಯಡೇಗೌಡನಹಳ್ಳಿ-ಬಿಳಿಕೆರೆ ರಸ್ತೆಯ ಚತುಷ್ಪಥ ವಿಸ್ತರಣೆ, ಹಂಗರಹಳ್ಳಿ ಮತ್ತು ಹೊಳೆನರಸೀಪುರ ಬೈಪಾಸ್ ನಲ್ಲಿ ರಸ್ತೆ ಮೇಲ್ಸೇತುವೆಗಳ ಸ್ಥಾಪನೆಯಿಂದ ಪ್ರಯಾಣದ ಸಮಯ 2 ಗಂಟೆ ಕಡಿಮೆಯಾಗಲಿದೆ. https://twitter.com/BJP4Karnataka/status/1766829981160841403 ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಪ್ರಮುಖ ಸೇತುವೆಯ ನಿರ್ಮಾಣವು ಹುಣಸೂರು ಪಟ್ಟಣದ ಜನದಟ್ಟಣೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಇದು ಸುವ್ಯವಸ್ಥಿತ ನಗರ ಯೋಜನೆಯ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಹೆಚ್ಚುವರಿಯಾಗಿ, ಶ್ರೀನಿವಾಸಪುರ ಮತ್ತು ಚಿಂತಾಮಣಿ ಬೈಪಾಸ್ ಗಳ ಅಭಿವೃದ್ಧಿಯು ಎರಡೂ ನಗರಗಳಲ್ಲಿ ದಟ್ಟಣೆಯನ್ನು…

Read More

ಹೊಸಕೋಟೆ : ಬಜೆಟ್ ನಲ್ಲಿ ಗ್ಯಾರಂಟಿಗಳ ಜೊತೆಗೂ ಅಭಿವೃದ್ಧಿಗೆ ಅಪಾರ ಅನುದಾನ ಇಡಲಾಗಿದ್ದು, ಈ ಸತ್ಯವನ್ನು ಚರ್ಚಿಸಲು ರಾಜ್ಯದ ಜನರ ಮುಂದೆ ಬಹಿರಂಗ ಚರ್ಚೆ ಮಾಡೋಣ ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು. ಅವರು ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳನ್ನು ನೀಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗ್ಯಾರಂಟಿಗಳನ್ನು ಜಾರಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಖಜಾನೆಯಲ್ಲಿ ದುಡ್ಡು ಉಳಿದಿಲ್ಲ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಸುಳ್ಳು ಸೃಷ್ಟಿಸುತ್ತಿದ್ದು, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಇಂದು ಈ ಕ್ಷೇತ್ರದಲ್ಲಿ 600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಗೆ ದುಡ್ಡೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು. ನಾವು ಅಧಿಕಾರಕ್ಕೆ ಬಂದು 9 ತಿಂಗಳ ಒಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು,36 ಸಾವಿರ ಕೋಟಿ ವೆಚ್ಚವಾಗಿದ್ದರೂ, ನಮ್ಮ ಖಜಾನೆ ಖಾಲಿಯಾಗಿಲ್ಲ. ಬಜೆಟ್ ನಲ್ಲಿ ಅಭಿವೃದ್ಧಿಗೆ…

Read More

ಮಂಡ್ಯ: ಜಿಲ್ಲೆಯಲ್ಲಿ ಇಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಇಂದು ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನಾನು ಮತ್ತು ಸಿದ್ದರಾಮಯ್ಯ ಅವರು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಮಂಡ್ಯದ 8 ವಿಧಾನಸಭಾ ಸ್ಥಾನಗಳಲ್ಲಿ 7ರಲ್ಲಿ ಗೆಲ್ಲಿಸಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಕೊಟ್ಟ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ ಎಂದರು. ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನೀವು ನಮಗೆ ಕೊಟ್ಟ ಅವಕಾಶದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಮೊದಲ ಕ್ಯಾಬಿನೆಟ್ ನಲ್ಲೆ ಈ ಯೋಜನೆಗಳಿಗೆ ನಮ್ಮ ಸರ್ಕಾರ ಅನುಮೋದನೆ ನೀಡಿತು. ಆಮೂಲಕ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಮಾದರಿಯಾಗಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ…

Read More

ಮಂಡ್ಯ: ಈಗ ನೆಂಟಸ್ತನ ಬೆಳೆಸಿರುವ ಜೆಡಿಎಸ್, ಬಿಜೆಪಿ ನಾಯಕರು ಒಂದು ದಿನವಾದರೂ ನಿಮ್ಮ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರಾ? ದೇವೇಗೌಡರು ಈಗ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರ ಕಣ್ಣೀರು ಅವರ ಕುಟುಂಬಕ್ಕೆ ಸೀಮಿತವಾಯಿತೇ ಹೊರತು ಬಡ ಜನರಪರವಾಗಿ ಇಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದಂತ ಅವರು, ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ಅದರಲ್ಲಿ 5 ಕೆ.ಜಿ ಅಕ್ಕಿಯ ಹಣ, ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದರು. ಇಲ್ಲಿರುವ ತಾಯಂದಿರಿಗೆ 2 ಸಾವಿರ ಹಣ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅಕ್ಕಿ ಹಾಗೂ ಹಣ ಸಿಗುತ್ತಿದೆಯಲ್ಲವೆ? ಮಂಡ್ಯದಲ್ಲಿ…

Read More

ನೈಜೀರಿಯಾ: ಕುರಿಗಾದಲ್ಲಿ ನಡೆದ ಸಾಮೂಹಿಕ ಅಪಹರಣವು ಕಳೆದ ವಾರದಿಂದ ಉತ್ತರ ನೈಜೀರಿಯಾದಲ್ಲಿ ನಡೆದ ಮೂರನೇ ಅಪಹರಣವಾಗಿದೆ. ಮತ್ತೊಂದು ವಾಯುವ್ಯ ರಾಜ್ಯವಾದ ಸೊಕೊಟೊದ ಶಾಲೆಯಿಂದ ಬಂದೂಕುಧಾರಿಗಳ ಗುಂಪು ಶನಿವಾರ ಮುಂಜಾನೆ 15 ಮಕ್ಕಳನ್ನು ಅಪಹರಿಸಿದೆ. ಕೆಲವು ದಿನಗಳ ಹಿಂದೆ ಸಂಘರ್ಷದಿಂದ ಸ್ಥಳಾಂತರಗೊಂಡ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 200 ಜನರನ್ನು ನಾರ್ಥಿಯಾಸ್ನಲ್ಲಿ ಅಪಹರಿಸಲಾಗಿದೆ. ರಶೀದತ್ ಹಮ್ಜಾ ಹತಾಶೆಯಲ್ಲಿದ್ದಾರೆ. ನೈಜೀರಿಯಾದ ವಾಯವ್ಯ ಭಾಗದಲ್ಲಿರುವ ಶಾಲೆಯಿಂದ ಅಪಹರಿಸಲ್ಪಟ್ಟ ಸುಮಾರು 300 ವಿದ್ಯಾರ್ಥಿಗಳಲ್ಲಿ ಆಕೆಯ ಆರು ಮಕ್ಕಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಇಸ್ಲಾಮಿಕ್ ಉಗ್ರಗಾಮಿಗಳು ಮತ್ತು ಸಶಸ್ತ್ರ ಗುಂಪುಗಳಿಂದ ತುಂಬಿದ್ದಾರೆ. ಕಡುನಾ ರಾಜ್ಯದ ಕುದೂರದ ಪಟ್ಟಣವಾದ ಕುರಿಗಾದಲ್ಲಿ ಅವರ 7 ರಿಂದ 18 ವರ್ಷದ ಮಕ್ಕಳು ಶಾಲೆಗೆ ಹೋಗಿ ಎರಡು ದಿನಗಳು ಕಳೆದಿವೆ. ಅವಳು ಶನಿವಾರ ಇನ್ನೂ ಆಘಾತದಲ್ಲಿದ್ದಳು. ಹಿಂಸಾತ್ಮಕ ಹತ್ಯೆಗಳು, ಕಾನೂನುಬಾಹಿರತೆ ಮತ್ತು ಅಪಾಯಕಾರಿ ರಸ್ತೆಗಳಿಗೆ ಹೆಸರುವಾಸಿಯಾದ ರಾಜ್ಯದಲ್ಲಿ ಅಪಹರಣಕಾರರಲ್ಲಿ 12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 100 ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು…

Read More

ಹಾವೇರಿ: ಆಕೆ ಬಿಎಡ್ ಓದುತ್ತಿದ್ದಂತ ವಿದ್ಯಾರ್ಥಿನಿ. ಆಕೆಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಪಾಗಲ್ ಪ್ರೇಮಿಯೊಬ್ಬ ಹಿಂದೆ ಬಿದ್ದಿದ್ದನು. ಆದ್ರೇ ಬಿಎಡ್ ವಿದ್ಯಾರ್ಥಿನಿ ಮಾತ್ರ ಪಾಗಲ್ ಪ್ರೇಮಿಯ ಪ್ರೀತಿಯನ್ನು ಮಾತ್ರ ಒಪ್ಪಿಕೊಳ್ಳಲೇ ಇಲ್ಲ. ಇದೇ ಕಾರಣಕ್ಕೆ ಸಿಟ್ಟಾದಂತ ಆ ಪಾಗಲ್ ಪ್ರೇಮಿ ದಿಢೀರ್ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿದ್ದಾನೆ. ಮುಂದೇನಾಯ್ತು ಅಂತ ಮುಂದೆ ಓದಿ. ಹಾವೇರಿಯ ಹಳೆಯ ಪೋಸ್ಟ್ ಆಫೀಸ್ ಬಳಿಯಲ್ಲಿ ಬಿಎಡ್ ವಿದ್ಯಾರ್ಥಿನಿಯೊಬ್ಬಳನ್ನು ಪಾಗಲ್ ಪ್ರೇಮಿಯೊಬ್ಬ ಪ್ರೀತಿಸುತ್ತಿದ್ದನು. ಅದು ಒನ್ ಸೈಡ್ ಲವ್ ಆಗಿತ್ತು. ಆಕೆಯ ಹಿಂದೆ ಬಿದ್ದಂತ ಆತ ಇಂದು  ಬಿಎಡ್ ವಿದ್ಯಾರ್ಥಿನಿಯೊಬ್ಬಳು ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿದ್ದಾನೆ. ಇಂದು ಬೆಳಿಗ್ಗೆ.9 ಗಂಟೆಗೆ ಯುವತಿ ಕಾಲೇಜಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಆಕೆಯನ್ನು ಹಿಂಬಾಲಿಸಿ ತೆರಳಿದಂತ ಪಾಗಲ್ ಪ್ರೇಮಿ, ಕಾರಿನಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾನೆ. ಕೂಡಲೇ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತಂತ ಪೊಲೀಸರು, ಪಾಗಲ್ ಪ್ರೇಮಿಯನ್ನು ಹಿಡಿಯೋ ಮುನ್ನವೇ, ಪೊಲೀಸರು ತನ್ನ ಬಂಧಿಸಿ, ಜೈಲಿಗಟ್ಟಬಹುದು…

Read More

ನವದೆಹಲಿ: ಭಾರತದ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕವನ್ನು ಮಾರ್ಚ್ 15 ರೊಳಗೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆಯ ನಂತರ ಚುನಾವಣಾ ಸಮಿತಿಯಲ್ಲಿ ಎರಡು ಸ್ಥಾನಗಳ ಭರ್ತಿಗಾಗಿ ತಯಾರಿ ನಡೆದಿದೆ. ಅರುಣ್ ಗೋಯೆಲ್ ದಿಢೀರ್ ರಾಜೀನಾಮೆಯಿಂದ ತೆರವಾದ ಹುದ್ದೆ ಹಾಗೂ ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ತೆರವಾದ ಸ್ಥಾನಗಳಿಗೆ ಮಾರ್ಚ್.15ರೊಳಗೆ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡೋ ಸಾಧ್ಯತೆ ಇದೆ ಎಂಬುದಾಗಿ ವರದಿಯಿಂದ ತಿಳಿದು ತಿಳಿದು ಬಂದಿದೆ. ಇದರ ನಡುವೆ ಮಾರ್ಚ್.14, 15ರ ಒಳಗಾಗಿ ಲೋಕಸಭಾ ಚುನಾವಣೆ 2024ಕ್ಕೆ ಚುನಾವಣಾ ದಿನಾಂಕ ಘೋಷಣೆ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುಂಚೆಯೇ ಕೇಂದ್ರ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕವನ್ನು ಮಾಡೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ. https://kannadanewsnow.com/kannada/do-you-know-that-your-children-can-score-more-marks-by-chanting-this-one-mantra/ https://kannadanewsnow.com/kannada/breaking-mandya-activists-arrested-for-protesting-against-government-release-of-water-to-tamil-nadu/

Read More

ದಡ್ಡ ಮಕ್ಕಳು ಕೂಡ ಗಣೇಶನಿಗೆ ಈ ದೀಪವನ್ನು ಹಚ್ಚಿ ಮಕ್ಕಳು ಮಂತ್ರವನ್ನು ಚೆನ್ನಾಗಿ ಓದುತ್ತಾರೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಜೀವನದಲ್ಲಿ ಮುನ್ನಡೆಯಬೇಕು ಎಂಬುದು ಪೋಷಕರ ಕನಸು. ಇಂದು ಪ್ರತಿಯೊಬ್ಬ ಪಾಲಕರು ಅವರಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದ್ದಾರೆ. ಹಾಗಿದ್ದರೂ ಎಲ್ಲಾ ಮಕ್ಕಳು ಚೆನ್ನಾಗಿ ಕಲಿಯುವುದಿಲ್ಲ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ…

Read More