Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಶುಕ್ರವಾರ (ಮಾರ್ಚ್ 15, 2024) ಬೆಳಿಗ್ಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿಯಾಗಿದೆ. 81 ವರ್ಷದ ನಟ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾರ್ಯವಿಧಾನಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಬಿಗ್ ಬಿ ಅವರನ್ನು ಹೆಚ್ಚಿನ ಭದ್ರತೆಯ ನಡುವೆ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆ. “ನಿಮ್ಮ ಅಭಿಮಾನಕ್ಕೆ ಕೃತಜ್ಞ ಎಂಬುದಾಗಿ ಅವರು ಎಕ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. https://twitter.com/SrBachchan/status/1768525624639967501 ಶಸ್ತ್ರಚಿಕಿತ್ಸೆಯ ನಂತರ ಅಮಿತಾಬ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ನಂಬಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಐಎಸ್ಪಿಎಲ್ ಪಂದ್ಯದ ಗೆಲುವನ್ನು ಸಂಭ್ರಮಿಸಿದ ಅಮಿತಾಭ್ ಗುರುವಾರ (ಮಾರ್ಚ್ 14, 2024) ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ತಮ್ಮ ತಂಡವು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್ಪಿಎಲ್) ಫೈನಲ್ಗೆ ಅರ್ಹತೆ ಪಡೆದ ನಂತರ ಸಂಭ್ರಮದ ಮನಸ್ಥಿತಿಯಲ್ಲಿ ಕಾಣಿಸಿಕೊಂಡರು. ಥಾಣೆಯ ದಾಡೋಜಿ ಕೊಂಡದೇವ್…
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ದೂರು ನೀಡಿದಂತ ಮಹಿಳೆ ಮಾನಸಿಕ ಅಸ್ವಸ್ಥೆ. ಆ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪೋಕ್ಸೋ ಕೇಸ್ ಬಹಳ ಸೂಕ್ಷ್ಮವಾದಂತ ವಿಚಾರವಾಗಿದೆ. ನಾವು ರಾಜಕೀಯ ಇದರಲ್ಲಿ ಮಾಡೋದಿಲ್ಲ. ಯಾವುದೇ ವಿಷಯ ತಿಳಿಸೋದಕ್ಕೂ ಆಗಲ್ಲ. ಮಹಿಳೆಯ ದೂರು ಆಧರಿಸಿ, ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ನೀಡಿದಂತ ಮಹಿಳೆ ಮಾನಸಿಕವಾಗಿ ಅಸ್ವಸ್ಥೆ ಎಂಬುದಾಗಿ ಹೇಳಲಾಗುತ್ತಿದೆ. ಜೊತೆಗೆ ಆಕೆ ಕೈ ಬರಹದಿಂದ ದೂರು ನೀಡಿಲ್ಲ. ಬದಲಾಗಿ ಟೈಪ್ ಮಾಡಿಸಿದಂತ ದೂರನ್ನು ಪೊಲೀಸರಿಗೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ನಂತ್ರ ಇನ್ನಷ್ಟು ಮಾಹಿತಿ ತಿಳಿಸುತ್ತೇನೆ. ಅಲ್ಲಿಯವರೆಗೆ ನಾನು ಈ ಪ್ರಕರಣ ಕುರಿತಂತೆ ಏನೂ ಮಾತನಾಡುವುದಿಲ್ಲ ಎಂಬುದಾಗಿ ಹೇಳಿದರು. https://kannadanewsnow.com/kannada/bmrcl-plans-to-build-double-decker-model-for-expansion-of-namma-metro-phase-iii/ https://kannadanewsnow.com/kannada/breaking-massive-fire-breaks-out-due-to-cylinder-blast-at-tent-house-in-bhopal/
ಬೆಂಗಳೂರು: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು-ಕೊಚುವೇಲಿ ನಿಲ್ದಾಣಗಳ ನಡುವೆ ಎರಡು ಟ್ರಿಪ್, ಎಸ್ಎಂವಿಟಿ ಬೆಂಗಳೂರು-ಕಣ್ಣೂರು ನಿಲ್ದಾಣಗಳ ನಡುವೆ ಎರಡು ಟ್ರಿಪ್ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಅಹಮದಾಬಾದ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿದೆ. ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿವೆ: 1.ಎಸ್ಎಂವಿಟಿ ಬೆಂಗಳೂರು-ಕಣ್ಣೂರು ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06557/06558) ರೈಲುಗಳ ಸಂಚಾರ: ಮಾರ್ಚ್ 19 ಮತ್ತು 26, 2024 ರಂದು ರೈಲು ಸಂಖ್ಯೆ 06557 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11:55 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 2:00 ಗಂಟೆಗೆ ಕಣ್ಣೂರು ನಿಲ್ದಾಣವನ್ನು ತಲುಪಲಿದೆ. ಮಾರ್ಚ್ 20 ಮತ್ತು 27ರಂದು ರೈಲು ಸಂಖ್ಯೆ 06558 ಕಣ್ಣೂರಿನಿಂದ ರಾತ್ರಿ 8 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 1 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.…
ಒಂದು ವೇಳೆ ಉದ್ಯೋಗದಲ್ಲಿ,ವ್ಯಾಪಾರದಲ್ಲಿ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ತೊಂದರೆ ಇದ್ದರೆ ಸೋಮವಾರ ಹಾಗೂ ಶುಕ್ರವಾರ ದಿನ ನಾವು ಹೇಳುವ ಈ ಉಪಾಯವನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತಿಯನ್ನು ಹೊಂದಬಹುದು. ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564. ಈ ಉಪಾಯವನ್ನು ಸಾಯಂಕಾಲ ದೀಪವನ್ನು ಹಚ್ಚಿದ ನಂತರ ರಾತ್ರಿ ಮಲಗುವ ಮುನ್ನ 2 ರೂಪಾಯಿಯ ನಾಣ್ಯದಿಂದ ಮಾಡಬೇಕು. ಮೊದಲಿಗೆ 2 ರೂಪಾಯಿಯ ನಾಣ್ಯವನ್ನು ಕೈಯಲ್ಲಿ ಹಿಡಿದುಕೊಂಡು ಮಲಗುವ ಮುನ್ನ ಇಷ್ಟದೇವರು ಅಥವಾ ಕುಲದೇವರ ಬಳಿ ಸಂಕಲ್ಪವನ್ನು…
ಬೀದರ್: ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚೌವ್ಹಾಣ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ. ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕಳೆದ 3 ದಿನಗಳ ಹಿಂದೆ ಎದೆಬಡಿತದಲ್ಲಿ ಏರುಪೇರಾಗಿ ಮುಂಬೈನ ಬಾಂದ್ರಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆ ಬಡಿತದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 3 ದಿನಗಳ ಹಿಂದೆ ಔರಾದ್ ನ ನಿವಾಸದಲ್ಲಿ ಇದ್ದಂತ ವೇಳೆಯಲ್ಲಿ ಎದೆಬಡಿತದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. 2022ರಲ್ಲೇ ಇದೇ ರೀತಿ ಎದೆಬಡಿತದಲ್ಲಿ ಏರುಪೇರಾಗಿ ಮಾಜಿ ಸಚಿವ ಪ್ರಭು ಚೌವ್ಹಾಣ್ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಗುಣಮುಖರಾಗಿದ್ದರು. ಇದೀಗ ಮತ್ತೆ ಮಾಜಿ ಸಚಿವ, ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.…
ನವದೆಹಲಿ: ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಕಡಿತಗೊಳಿಸಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಬೆಲೆಗಳಲ್ಲಿ ಇತ್ತೀಚಿನ ಕಡಿತದೊಂದಿಗೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 100 ರೂ.ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಬೆಲೆ ಕಡಿತವು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್ಪಿಜಿ) ಅಡುಗೆ ಇಂಧನವಾಗಿ ಬಳಸುವ ಸುಮಾರು 33 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಚಂಚಲತೆ, ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಕಂಪನಿಗಳ ಆರ್ಥಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ನ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡುವ ನಿರ್ಧಾರವನ್ನು “ಬಹಳ…
ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಬಳಿಕ, ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಆದ್ರೇ ಹೈಕೋರ್ಟ್ ಗೆ ಬೋರ್ಡ್ ಪರೀಕ್ಷೆಗೆ ಅನುಮತಿ ಕೋರಿ ಪೋಷಕರು ಸಲ್ಲಿಸಿದ್ದಂತ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ. ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಕೋರಿ ಖಾಸಗಿ ಶಾಲೆಗಳ ಸಂಘದಿಂದ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದಂತ ಏಕ ಸದಸ್ಯ ನ್ಯಾಯಪೀಠವು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗಿಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್, 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಆದ್ರೇ ಹೈಕೋರ್ಟ್ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘದಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ…
ಬೆಂಗಳೂರು: ಪಾಕಿಸ್ತಾನದ ಪರವಾಗಿ ವಿಧಾನಸೌಧದಲ್ಲಿ ಘೋಷಣೆ ಕೂಗಿದ್ದಂತ ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 27, 2024ರಂದು ವಿಧಾನಸೌಧದಲ್ಲಿ ನಾಸಿರ್ ಹುಸೇನ್ ಗೆಲುವಿನ ಬಳಿಕ ಮೂವರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ಕೂಗಲಾಗಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಬಳಿಕ ಆ ವೀಡಿಯೋವನ್ನು ಎಫ್ಎಸ್ಎಲ್ ತನಿಖೆಗೂ ಕಳುಹಿಸಿಕೊಡಲಾಗಿತ್ತು. ಇದರ ನಡುವೆ ವಿಧಾನಸೌಧ ಠಾಣೆಯ ಪೊಲೀಸರಿಂದ ಮೊಹಮ್ಮದ್ ಶಫಿ ನಾಶಿಪುಡಿ, ಮಿಜಾಮಿಲ್ ಹಾಗೂ ಇಮ್ತಿಯಾಜ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು. ಇಂತಹ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎಸಿಎಂಎಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಮೂವರು ಆರೋಪಿಗಳಿಗೆ ಇಬ್ಬರ ಶೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. https://kannadanewsnow.com/kannada/former-mlc-ramesh-babu-appointed-chairman-of-d-devaraj-urs-truck-terminals-limited/ https://kannadanewsnow.com/kannada/major-surgery-from-state-government-to-administrative-machinery-five-ias-officers-transferred/
ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಅಧ್ಯಕ್ಷರನ್ನಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಅವರನ್ನು ನೇಮಕ ಮಾಡಿ, ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಹೊರಡಿಸಿದ್ದು, ರಮೇಶ್ ಬಾಬು ಇವರನ್ನು ಅಧ್ಯಕ್ಷರು, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್, ಬೆಂಗಳೂರು ಹುದ್ದೆಗೆ ನೇಮಿಸುವಂತೆ ಸೂಚಿಸಿದ್ದಾರೆ. ಇನ್ನೂ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳೊಂದಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ನೇಮಿಸಲಾಗಿದೆ. ಈ ಬಗ್ಗೆ ಕೂಡಲೇ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ. https://kannadanewsnow.com/kannada/west-bengal-cm-mamata-banerjee-injured-after-slipping-at-home-hospitalised/ https://kannadanewsnow.com/kannada/election-commission-uploads-electoral-bonds-data-shared-by-sbi-on-its-website/
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ್ದು, ಡಾ.ಅಜಯ್ ನಾಗಭೂಷಣ್ ಎಂ.ಎನ್., ಐಎಎಸ್ (ಕೆಎನ್: 2004) ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಮುಂದಿನ ಆದೇಶದವರೆಗೆ ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಡಾ.ಅಜಯ್ ನಾಗಭೂಷಣ್ ಎಂ.ಎನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹುದ್ದೆಯ ಸಮವರ್ತಿ ಉಸ್ತುವಾರಿ ವಹಿಸಲಾಗಿದೆ. ಬೆಂಗಳೂರಿನ ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ (ಕೆಎನ್: 2005) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ…