Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವಂತ ನಿರ್ವಾಹಕ (ದರ್ಜೆ 3) 2,500 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ದ್ವಿತೀಯ ಪಿಯುಸಿ ಪಾಸ್ ಆದಂತವರು ಏಪ್ರಿಲ್.10ರೊಳಗೆ ಅರ್ಜಿ ಸಲ್ಲಿಸೋದು ಮಿಸ್ ಮಾಡಬೇಡಿ. ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ. ಹುದ್ದೆಗಳ ವಿವರ ಮಿಕ್ಕುಳಿದ ವೃಂದ -2286 ಹುದ್ದೆಗಳು ಸ್ಥಳೀಯ ವೃಂದ – 199 ಹುದ್ದೆಗಳು ಹಾಗೂ ಹಿಂಬಾಕಿ 15 ಹುದ್ದೆಗಳು ಸೇರಿ 214 ಹುದ್ದೆಗಳು ಶೈಕ್ಷಣಿಕ ವಿದ್ಯಾರ್ಹತೆ ಪಿಯುಸಿ ಆರ್ಟ್ಸ್, ಕಾಮರ್ಸ್, ಸೈನ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ಅಥವಾ 10+2 ಐಸಿಎಸ್ಇ, ಸಿಬಿಎಸ್ಇರಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ವಿದ್ಯಾಹ್ರತೆ ಅಂದರೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 3 ವರ್ಷಗಳ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರತಕ್ಕದ್ದು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ…
ಬೆಂಗಳೂರು: ನಗರದ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಆಸ್ತಿ ತೆರಿಗೆಯನ್ನು ಸಂಪೂರ್ಣ ಪಾವತಿ ಮಾಡಿದವರಿಗೆ ಶೇ.5ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಅಧಿಸೂಚನೆಯನ್ನ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿದ್ದಾರೆ. ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಬಿಬಿಎಂಪಿಯ ಆರ್ಥಿಕ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದಿದ್ದಾರೆ. ಇನ್ನೂ ಈ ತೆರಿಗೆಯ ಮೇಲಿನ ಶೇ.5ರಷ್ಟು ರಿಯಾಯಿತಿಯ ಅವಧಿಯನ್ನು ದಿನಾಂಕ 01-05-2024ರಿಂದ 31-07-2024ರವರೆಗೆ ವಿಸ್ತರಿಸಿ ಆದೇಶಿಸೋದಾಗಿ ತಿಳಿಸಿದ್ದಾರೆ. https://kannadanewsnow.com/kannada/parliament-has-the-right-to-make-laws-amit-shah-to-kerala-tamil-nadu-bengal-governments-on-caa/ https://kannadanewsnow.com/kannada/allow-mistakes-to-be-corrected-former-cm-hd-kumaraswamys-emotional-speech/
ಬೆಂಗಳೂರು : “ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡೋದು ಬಿಟ್ಟು ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸವಾಲು ಹಾಕಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ ಎಂಬ ಸುಳ್ಳು ಆರೋಪ ಮಾಡಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು ಅವರು, “ಕಾವೇರಿ ನೀರು ಪೂರೈಕೆ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಕೊಳವೆ ಬಾವಿಗಳು ಬತ್ತಿರುವ ಕಡೆಗಳಲ್ಲಿ ಮಾತ್ರ ಅಭಾವ ಹೆಚ್ಚಾಗಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಸುಳ್ಳು. ನಮ್ಮಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ? ಮೇಲಾಗಿ ಅವರು ನೀರು ಕೇಳಿಯೇ ಇಲ್ಲ. ಬಿಜೆಪಿಯದು ಕೇವಲ ರಾಜಕೀಯ ಗಿಮಿಕ್. ರಾಜ್ಯ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ಮೇಕೆದಾಟು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುಮತಿ ಕೊಡಿಸಲಿ.”…
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನಸೌಧದ ಮುಂದೆ ಈಗಾಗಲೇ ಹಲವು ಪ್ರತಿಮೆಗಳನ್ನು ಸ್ಥಾಪನೆ ಮಾಡಲಾಗಿದೆ. ಈಗ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪನೆ ಮಾಡೋದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಪುಟದ ನಿರ್ಧಾರಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು. 23 ಕೋಟಿ ರೂ ವೆಚ್ಚದಲ್ಲಿ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆಯ ಪಕ್ಕದಲ್ಲೇ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಆಗಲಿದೆ ಎಂದರು. ಭುವನೇಶ್ವರಿ ಪ್ರತಿಮೆ ಸ್ಥಾಪನೆಗಾಗೆ ಕಲ್ಲು, ಲೋಹದಲ್ಲಿ ನಿರ್ಮಾಣಕ್ಕಾಗಿ ಹಣ ಬೇಕಾಗುತ್ತದೆ. ಈ ಹಿಂದೆ ಏರ್ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ 40 ರಿಂದ 60 ಕೋಟಿ ಖರ್ಚಾಗಿತ್ತು ಎಂದು ತಿಳಿಸಿದರು. ಬೆಂಗಳೂರಲ್ಲಿ ಸಂಚಾರ ಸಮಸ್ಯೆ ತಡೆಗಟ್ಟೋ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಅಂತ ಇರೋದು ಮೆಟ್ರೋ ಮಾರ್ಗ ಮಾತ್ರವೇ ಆಗಿದೆ. ಭವಿಷ್ಯದಲ್ಲಿ ಅವಶ್ಯಕತೆ ಗಮನದಲ್ಲಿ ಇಟ್ಟುಕೊಂಡು 3ನೇ ಹಂತದ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಎಲ್ಲಾ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳ ಚುನಾವಣೆಯನ್ನು ಮುಂದಿನ ಆದೇಶದವರೆಗೆ ಮುಂದೂಡಿಕೆ ಮಾಡಿ ಹಾಗೂ ಸಹಕಾರ ಸಂಘಗಳ ಆಡಳಿತ ಮಂಡಳಿಯ ಹಾಗೂ ಪದಾಧಿಕಾರಿಗಳ ಅವಧಿಯನ್ನು ಮುಂದುವರೆಸಿ ಆದೇಶಿಸಿದೆ. ಈ ಕುರಿತಂತೆ ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024ರ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಚುನಾವಣೆ ನೀತಿ ಸಂಹಿತೆಯು ಜಾರಿಗೆ ಬರುವ ಸಾಧ್ಯತೆ ಇರುತ್ತದೆಯೆಂದು, ರಾಜ್ಯದಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರಡಿಯಲ್ಲಿ ಸುಮಾರು ನಲವತ್ತೈದು ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು, ಮಾರ್ಚ್ 20240 ಮಾಹಯಿಂದ ಜೂನ್-2024ರ ಮಾಹೆಯ ಅವಧಿಯಲ್ಲಿ ಹಲವು ಸಹಕಾರ ಸಂಘಗಳ ಆಡಳಿತ ಮಂಡಳಿಯ ಪದಾವಧಿಯು ಮುಕ್ತಾಯಗೊಳ್ಳಲಿದ್ದು, ಅಂತಹ ಸಹಕಾರ ಸಂಘಗಳ ಚುನಾವಣೆಗೆ ಈಗಾಗಲೇ ಮಾರ್ಚ್-2024ರ ಮಾಹೆಯಿಂದ ಮೇ-2024ರ ಮಾಹೆಯ ಅವಧಿಯಲ್ಲಿ ಚುನಾವಣಾ ದಿನಾಂಕಗಳನ್ನು ನಿಗದಿಪಡಿಸಿ ಚುನಾವಣಾ ಪಕ್ರಿಯೆ ಪ್ರಾರಂಭಿಸಲಾಗಿರುತ್ತದೆ ಎಂದು, ಅಲ್ಲದೇ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ…
ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ ಎಂದು ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ಸರ್ಕಾರ ಜನರ ಕಷ್ಟಕ್ಕೆ ಮಿಡಿದು ಪರಿಹಾರ ಕೊಡುವ ಬದಲಿಗೆ ಪ್ರಚಾರದಲ್ಲಿ ಮುಳುಗಿದೆ ಎಂದಿದ್ದಾರೆ. ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ನಾನು ಕೈ ಜೋಡಿಸಿ ಮನವಿ ಮಾಡಲು ಬಂದಿದ್ದೇನೆ. ನಿಮ್ಮ ಎದುರು ಹುಟ್ಟಿದ ಮಕ್ಕಳು ನಾವು. ನಾವು ದಾರಿ ತಪ್ಪಿದ್ದರೆ ತಿದ್ದಿಕೊಳ್ಳಲು ಅವಕಾಶ ಕೊಡಲು ಸಾದ್ಯವಿಲ್ಲವೇ ಎಂದು ಕೇಳಲು ಬಂದಿದ್ದೇನೆ. ನಮ್ಮಿಂದ ಕೆಲವು ಲೋಪಗಳು ಆಗಿರಬಹುದು. ನಿಮ್ಮ ಮನಸ್ಸಿನಲ್ಲಿ ಆಗಿರುವ ನೊವನ್ನು ನೀವು ನಮ್ಮೆದುರು ಹೇಳಲ್ಲ. ಹೇಳಿದರೆ ನಮಗೆ ನೋವಾಗುತ್ತದೆ ಎಂದು ಸುಮ್ಮನಾಗಿದ್ದೀರಿ. ಆದರೆ, ನೀವು ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಮುಂದೆ ಏನಾಗುತ್ತೆ ಎನ್ನೋದು ಗೊತ್ತಿದೆ. ಕೈ ಮುಗಿದು ಮನವಿ ಮಾಡ್ತೇನೆ, ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ ಎಂದು ಗದ್ಗದಿತರಾದರು…
ತುಮಕೂರು: ಜಿಲ್ಲೆಯ ಕೊರಟಗೆರೆ ಬಳಿಯಲ್ಲಿ ಎರಡು ಕೆಎಸ್ಆರ್ ಟಿಸಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಲ್ಲಿ ಎರಡು ಕೆಎಸ್ಆರ್ ಟಿಸಿ ಬಸ್ಸುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಎರಡು ಬಸ್ಸಿನಲ್ಲಿದ್ದಂತ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಅಪಘಾತಕ್ಕೆ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕೊರಟಗೆರೆ ಠಾಣೆಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸೋದಕ್ಕೆ ನೆರವಾಗಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/the-state-government-has-ordered-the-offices-of-sub-registrars-to-remain-open-on-sundays-as-well/ https://kannadanewsnow.com/kannada/breaking-news-bureaucrats-sukhbir-sandhu-gyanesh-kumar-appointed-new-election-commissioners/
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ ಪ್ರತಿ ಭಾನುವಾರವೂ ಏಪ್ರಿಲ್ ತಿಂಗಳಿಂದ ಉಪ ನೋಂದಣಾಧಿಕಾರಿಗಳ ಕಚೇರಿ ತೆರೆದಿರೋದಕ್ಕೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಚುರುಕು ಮುಟ್ಟಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ನೋಂದಣಿ ಮತ್ತು ಮುದ್ರಾಂಕದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 ರಿಂದ ಪ್ರಾರಂಭಿಸುತ್ತಾ ಬೆಂಗಳೂರು ನಗರ ಜಿಲ್ಲೆಯ 5 ನೋಂದಣಿ ಜಿಲ್ಲೆಗಳಲ್ಲಿ ಪ್ರತಿ ಒಂದು ನೋಂದಣಿ ಜಿಲ್ಲೆಯಲ್ಲಿ ಒಂದು ಉಪ ನೋಂದಣಿ ಕಛೇರಿಯು ಪಾರದರ್ಶಕ ವಾರದ ಸರದಿಯ ಆಧಾರದ ಮೇಲೆ ಮತ್ತು ಬೆಂಗಳೂರು ಗ್ರಾಮಾಂತರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಉಪ ನೋಂದಣಿ ಕಛೇರಿಗಳ ಪೈಕಿ ಯಾವುದಾದರೂ ಒಂದು ಉಪ ನೋಂದಣಿ ಕಛೇರಿ ಪಾರದರ್ಶಕವಾದ ವಾರದ ಸರದಿಯ ಆಧಾರದ ಮೇಲೆ ಪ್ರತಿ…
ಬೆಂಗಳೂರು : ಕರ್ನಾಟಕ ಗೃಹಮಂಡಳಿ ವತಿಯಿಂದ ರಾಜಧಾನಿ ಬೆಂಗಳೂರು ಹೊರವಲಯದಲ್ಲಿ 500 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ (ಮಿನಿ ಟೌನ್ ಶಿಪ್ ) ನಿರ್ಮಾಣ ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಹಾಗೂ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಯ ಏಳು ಗ್ರಾಮಗಳ 500 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಬಡಾವಣೆ ನಿರ್ಮಾಣ ವಾಗಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. 1066.50ಕೋಟಿ ರೂ. ಮೊತ್ತದ ಯೋಜನೆಗೆ ರೈತರು ಜಮೀನು ನೀಡಲು ರೈತರು ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಯೋಜನೆ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಯಿಂದ 5.5 ಕಿ. ಮೀ. ವ್ಯಾಪ್ತಿಯಲ್ಲಿ ಬರಲಿದೆ. ರೈತರ ಜತೆ ಪಾಲುದಾರಿಕೆ ಯಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸತಿ ಯೋಜನೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಕೆಂಗೇರಿ ಹೋಬಳಿ ಹಾಗೂ ಬಿಡದಿ ಹೋಬಳಿಯಲ್ಲಿ ನಿವೇಶನ ಬೇಡಿಕೆ ಸಮೀಕ್ಷೆ ಮಾಡಿದ್ದು, 2666 ಅರ್ಜಿಗಳು ಬಂದಿದ್ದು,…
ಬೆಂಗಳೂರು : ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ನಾಳೆಗಾಗಿ ಭಾರತದ ಬದ್ಧತೆಗಳನ್ನು ಬೆಂಬಲಿಸುವ ಗುರಿಯೊಂದಿಗೆ; ಮತ್ತು UN SDG #12 ರಲ್ಲಿ ವಿವರಿಸಿದಂತೆ, Sunfeast YiPPee! ‘ಎ ಬೆಟರ್ ವರ್ಲ್ಡ್’ ಕಾರ್ಯಕ್ರಮವನ್ನು ರೂಪಿಸಿದ್ದು, ತನ್ನ ಬ್ರಾಂಡ್ ಮಿಷನ್‌ಗೆ ಅನುಗುಣವಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ. YiPPee ಮೂಲಕ! ಬೆಟರ್ ವರ್ಲ್ಡ್ ಪ್ರೋಗ್ರಾಂ’, ಬೆಂಗಳೂರಿನ 500 ಶಾಲೆಗಳಲ್ಲಿ 2.5 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಅಭ್ಯಾಸಗಳ ಬಗ್ಗೆ ಶಿಕ್ಷಣ ನೀಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಪರಿಸರದ ಮೇಲೆ ಅದರ ಪರಿಣಾಮ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ, ಮರುಬಳಕೆ ಮಾಡುವ ತಂತ್ರಗಳ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಬೆಂಗಳೂರಿನಾದ್ಯಂತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ಮನೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಶಾಲೆಗಳಲ್ಲಿ ಗೊತ್ತುಪಡಿಸಿದ ಸಂಗ್ರಹಣಾ ಕೇಂದ್ರಗಳಲ್ಲಿ ಠೇವಣಿ ಮಾಡಲು ಪ್ರೋತ್ಸಾಹಿಸಲಾಯಿತು. ಸಂಗ್ರಹಿಸಿದ ಈ ಪ್ಲಾಸ್ಟಿಕ್ ತ್ಯಾಜ್ಯಗಳ ಮರುಬಳಕೆ…