Subscribe to Updates
Get the latest creative news from FooBar about art, design and business.
Author: kannadanewsnow09
ಮಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ನಾಡಿನ ಹಿರಿಯ ಸಾಹಿಯಿ ಡಾ. ನಾ ಡಿಸೋಜ ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಹಿರಿಯ ಸಾಹಿತಿ ಇನ್ನಿಲ್ಲವಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿ ಹಿರಿಯ ಸಾಹಿತಿ ನಾ ಡಿಸೋಜ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೋ ನಿಧನರಾಗಿದ್ದಾರೆ ಎಂಬುದಾಗಿ ಕುಟುಂಬಸ್ಥರು ಸ್ಪಷ್ಟ ಪಡಿಸಿದ್ದಾರೆ. ಮಂಗಳೂರಿನಿಂದ ನಾಳೆ ಮೂರುಗಂಟೆಗೆ ಸಾಗರಕ್ಕೆ ನಾ ಡಿಸೋಜ ಅವರ ಪಾರ್ಥೀವ ಶರೀರ ತಲುಪಲಿದೆ. ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನವರಿ.7ರಂದು ಮೃತ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಸಾಗರದಲ್ಲಿ ನೆರವೇರಿಸುವುದಾಗಿ ತಿಳಿಸಿದ್ದಾರೆ. ಮೃತ ನಾ.ಡಿಸೋಜ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ನಾ ಡಿಸೋಜ ಬಗ್ಗೆ ಮಾಹಿತಿ ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ…
ಬೆಂಗಳೂರು: ನಾನು ಜಾತಿ ಜನಗಣತಿ ಪರವಾಗಿ ಇದ್ದೇನೆ. ಕಾಂತರಾಜ ಅವರ ವರದಿಯನ್ನು ಮುಂದಿನ ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚಿಸುವ ಉದ್ದೇಶ ಕೂಡ ಇದೆ. ನನಗೆ ನನ್ನ ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆ ಇದೆ. ಬಸವಣ್ಣ-ಅಂಬೇಡ್ಕರ್-ಕನಕದಾಸರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂಬುದಾಗಿ ಜಾತಿ ಗಣತಿ ವರದಿ ಜಾರಿಯ ಬಗ್ಗೆ ಮಹತ್ವದ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿ ಆಯೋಜಿಸಿದ್ದ 537ನೇ ಕನಕ ಜಯಂತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದಂತ ಅವರು, ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಹಾಗೂ ಮಹಾನ್ ಸಂತ. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿದ ಅವರು ದಾಸ ಶ್ರೇಷ್ಠರಾದರು ಎಂದರು. ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ಧನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ…
ನವದೆಹಲಿ: “ನಾವು ಜಾಗತಿಕ ಭವಿಷ್ಯದ ಬಗ್ಗೆ ಮಾತನಾಡುವಾಗ, ಮಾನವ-ಕೇಂದ್ರಿತ ಕಾರ್ಯವಿಧಾನಗಳು ಅಗ್ರಗಣ್ಯವಾಗಿರಬೇಕು.” ಇತ್ತೀಚೆಗೆ ಜರುಗಿದ ವಿಶ್ವಸಂಸ್ಥೆಯ ‘ಭವಿಷ್ಯದ ಶೃಂಗಸಭೆ’ಯಲ್ಲಿ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಮಾತುಗಳು ಜನರಿಗೆ ಮೊದಲ ಸ್ಥಾನ ನೀಡುವ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಈ ತತ್ವಶಾಸ್ತ್ರವು 2025ರ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ(ಡಿಪಿಡಿಪಿ) ನಿಯಮಗಳನ್ನು ರೂಪಿಸುವ ನಮ್ಮ ಪ್ರಯತ್ನಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ನಿಯಮಗಳನ್ನು ಅಂತಿಮಗೊಳಿಸಿದ ನಂತರ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆ-2023 ಅನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ವೈಯಕ್ತಿಕ ಡೇಟಾ ರಕ್ಷಣೆಯು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಜೀವಂತಗೊಳಿಸುತ್ತದೆ. ಸಬಲೀಕರಣದ ನವಯುಗ ಭಾರತೀಯ ಪ್ರಜೆಯು 2025ರ ಡಿಪಿಡಿಪಿ ನಿಯಮಗಳ ಹೃದಯಭಾಗದಲ್ಲಿರುತ್ತಾನೆ. ಡೇಟಾದಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಆಡಳಿತ ಮಾರ್ಗಸೂಚಿಯ ಹೃದಯ ಭಾಗದಲ್ಲಿ ಜನರನ್ನು ಇರಿಸುವುದು ಅತ್ಯಗತ್ಯ ಎಂಬುದನ್ನು ನಾವು ನಂಬುತ್ತೇವೆ. ಈ ನಿಯಮಗಳು ತಿಳಿವಳಿಕೆಯುಳ್ಳ ಸಮ್ಮತಿ, ಡೇಟಾ ಅಳಿಸುವಿಕೆ ಮತ್ತು ಡಿಜಿಟಲ್ ನಾಮಿನಿಗಳನ್ನು ನೇಮಿಸುವ…
ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ ಗೋಮಾಳ ಮೀಸಲಿಡುವುದು ಕಡ್ಡಾಯ. ಹಾಗಾದ್ರೇ ರಾಜ್ಯ ಸರ್ಕಾರದ ನಿಯಮಗಳಂತೆ ಉಚಿತ ಗೋಮಾಳವನ್ನು ಒದಗಿಸುವ ರೀತಿ ಹೇಗೆ ಎನ್ನುವ ಮಹತ್ವದ ಮಾಹಿತಿಯನ್ನು ಮುಂದೆ ಓದಿ. ಈ ಕುರಿತಂತೆ ಕರ್ನಾಟಕ ಭೂ ಕಂದಾಯ ನಿಯಮಗಳು 19666, 1974ರ ಮಾರ್ಚ್ 7ರ ವರೆಗೆ ತಿದ್ದುಪಾಟಾದ ರೀತ್ಯಾ ನಿಯಮಗಳ ಅಳವಡಿಕೆ ಅನುಸಾರ ಪ್ರತಿ ನೂರು ಜಾನುವಾರಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು ಎಂದಿದೆ. ಜಾನುವಾರುಗಳನ್ನು ಲೆಕ್ಕ ಹಾಕುವಾಗ ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸಬೇಕು ಎಂಬುದಾಗಿ ತಿಳಿಸಿದೆ. ಸಂಬಂಧ ಪಟ್ಟ ಗ್ರಾಮದಲ್ಲಿ ಅಥವಾ ಪಕ್ಷದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರಣವನ್ನು ಕಡಿಮೆ ಮಾಡಬಹುದಾಗಿದೆ. ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೇ ಅಥವಾ ಇರುವ ಭೂಮಿಯನ್ನು (1)ನೇ…
ಕೇರಳ: ಭಗವಾನ್ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಸ್ಥಾನವು ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇದು ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ಬೆಟ್ಟದ ತುದಿಯಲ್ಲಿರುವ ಕೇರಳದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ವಿಶಿಷ್ಟ ದೇವಾಲಯವು ಎಲ್ಲಾ ಧರ್ಮದ ಜನರಿಗೆ ತೆರೆದಿರುತ್ತದೆ, ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಈ ಸನ್ನಿಧಿಗೆ ತೆರಳುವಂತ ಅಯ್ಯಪ್ಪ ಮಾಲಾಧಾರಿಗಳಿಗೆ ಮಹತ್ವದ ಮಾಹಿತಿ ಮುಂದಿದೆ ಓದಿ. ಈ ದೇವಾಲಯವು ವರ್ಷಪೂರ್ತಿ ತೆರೆದಿರುವುದಿಲ್ಲ. ಇದನ್ನು ‘ಮಂಡಲಪೂಜೆ’, ‘ಮಕರವಿಳಕ್ಕು’, ‘ವಿಷು’ ಮತ್ತು ಪ್ರತಿ ಮಲಯಾಳಂ ತಿಂಗಳ ಮೊದಲ ದಿನದಂದು ಪೂಜೆಗೆ ಪ್ರವೇಶಿಸಬಹುದು. ಮಕರ ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಯಲ್ಲಿ ಪ್ರತಿವರ್ಷ ನಡೆಯುವ ‘ಮಕರವಿಳಕ್ಕು’ ಉತ್ಸವವು ಪವಿತ್ರ ಮಕರ ಜ್ಯೋತಿ ದರ್ಶನದಿಂದ ಗುರುತಿಸಲ್ಪಟ್ಟ ಮಹತ್ವದ ಘಟನೆಯಾಗಿದೆ. ಈ ವರ್ಷ, ಮಂಡಲ ಪೂಜೆಯ ನಂತರ ಡಿಸೆಂಬರ್ 26 ರಂದು ಮುಚ್ಚಲ್ಪಟ್ಟ ನಂತರ ಡಿಸೆಂಬರ್ 30 ರಂದು ದೇವಾಲಯವನ್ನು ಮತ್ತೆ ತೆರೆಯಲಾಯಿತು.…
ಬೆಂಗಳೂರು: ನಗರದಲ್ಲಿ ಸೆಂಟ್ರಿಂಗ್ ಪೋಲ್ ಬಿದ್ದು ಬಾಲಕಿ ಸಾವನ್ನಪ್ಪಿದ್ದರು. ಈ ಘಟನೆಯ ಸಂಬಂಧ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಂಟ್ರಿಂಗ್ ಪೋಲ್ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು. ಈ ಘಟನೆ ನಂತ್ರ ಕಂಟ್ರ್ಯಾಕ್ಟರ್ ಚಂದ್ರಶೇಖರ್ ಎಂಬಾತ ನಾಪತ್ತೆಯಾಗಿದ್ದರು. ಇಂದು ಪ್ರಕರಣ ತನಿಖೆಯನ್ನು ನಡೆಸುತ್ತಿದ್ದಂತ ವಿವಿ ಪುರಂ ಠಾಣೆಯ ಪೊಲೀಸರು ಬಾಲಕಿ ಸಾವಿಗೆ ಕಾರಣವಾಗಿದ್ದಂತ ಕಂಟ್ರ್ಯಾಕ್ಟರ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ. https://kannadanewsnow.com/kannada/is-your-aadhaar-card-being-misused-find-out-this-way-keep-it-safe/ https://kannadanewsnow.com/kannada/good-news-for-the-workers-of-the-state-you-will-get-all-these-facilities-from-the-government/
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಇನ್ನು “ಏಕಾದಶಿ” ಎಂದರೆ ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.ಅಂದರೆ ಶುಚಿಯಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ. ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564…
ನಿಮ್ಮ ‘ಆಧಾರ್ ಕಾರ್ಡ್’ ದುರುಪಯೋಗವಾಗುತ್ತಿದೆಯೇ? ಈ ರೀತಿ ಪತ್ತೆಹಚ್ಚಿ, ಸುರಕ್ಷಿತವಾಗಿರಿಸಿ | Aadhaar Card Misuse
ನವದೆಹಲಿ: ಆಧಾರ್ ಕಾರ್ಡ್ ಭಾರತೀಯ ನಿವಾಸಿಗಳಿಗೆ ನಿರ್ಣಾಯಕ ದಾಖಲೆಯಾಗಿದೆ. ಇದು ಗುರುತು ಮತ್ತು ವಿಳಾಸದ ಅನನ್ಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ 12 ಅಂಕಿಗಳ ಸಂಖ್ಯೆಯು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಮತ್ತು ದೂರಸಂಪರ್ಕದಂತಹ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಆಧಾರ್ ಕಾರ್ಡ್ನಲ್ಲಿ ಸೂಕ್ಷ್ಮ ವೈಯಕ್ತಿಕ ಮತ್ತು ಬಯೋಮೆಟ್ರಿಕ್ ಮಾಹಿತಿ ಸಂಗ್ರಹವಾಗಿರುವುದರಿಂದ ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅದು ಹೇಗೆ ಅಂತ ಮುಂದೆ ಓದಿ. ಕಳೆದುಹೋದರೆ ಅಥವಾ ದುರುಪಯೋಗವಾದರೆ, ಇದು ವಿಶೇಷವಾಗಿ ಹಣಕಾಸು ಖಾತೆಗಳು ಮತ್ತು ಸರ್ಕಾರಿ ಪ್ರಯೋಜನಗಳಿಗೆ ಲಿಂಕ್ ಮಾಡಿದಾಗ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಇದು ನಿಮ್ಮ ಆಧಾರ್ ವಿವರಗಳನ್ನು ರಕ್ಷಿಸುವುದು ಮತ್ತು ಸಂಭಾವ್ಯ ದುರುಪಯೋಗದ ವಿರುದ್ಧ ಜಾಗರೂಕರಾಗಿರುವುದು ಅತ್ಯಗತ್ಯ. ಈ ಕೆಳಗಿನ ವಿಧಾನ ಅನುಸರಿಸಿ, ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಪತ್ತೆ ಹಚ್ಚಿ. ಆನ್ ಲೈನ್ ನಲ್ಲಿ ಆಧಾರ್ ದುರುಪಯೋಗವನ್ನು ಪರಿಶೀಲಿಸಲು ಹಂತಗಳು – ಮೈಆಧಾರ್ ಪೋರ್ಟಲ್ಗೆ ಭೇಟಿ ನೀಡಿ ಅಧಿಕೃತ ಮೈಆಧಾರ್ ವೆಬ್ಸೈಟ್ಗೆ myAadhaar – Unique Identification Authority of…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ರಜೆ ಮೇಲೆ ತೆರಳುವ ಮುನ್ನ ಕಡ್ಡಾಯವಾಗಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಲಾಗಿದ್ದು, ಗೌರವಾನ್ವಿತ ಮಾನ್ಯ ಉಚ್ಚ ನ್ಯಾಯಾಲಯವು ಸರ್ಕಾರಿ ನೌಕರರು ರಜೆ ಪಡೆಯದೆ ಅನಧಿಕೃತವಾಗಿ ಕೆಲಸಕ್ಕೆ ಗೈರಾಗುವುದು ದುರ್ನಡತೆ ತೋರಿದಂತೆ, ಹಾಗಾಗಿ ಅಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಮತ್ತು ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿ ಮೇಅರುತ್ತದೆ. ರಜೆ ಮಂಜೂರಾಗದೆ ಗೈರಾಗುವುದನ್ನು ಹಕ್ಕು ಎಂದು ಉದ್ಯೋಗಿಗಳು ಪರಿಗಣಿಸಬಾರದು. ಕಚೇರಿಗೆ ಅನಧಿಕೃತವಾಗಿ ಗೈರುಹಾಜರಾಗುವ ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸಮರ್ಥನೀಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತದೆ ಎಂದಿದೆ. ಆದುದರಿಂದ, ಈ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರುಗಳು ರಜೆ ಮೇಲೆ ತೆರಳುವ ಮುನ್ನ ಕಡ್ಡಾಯವಾಗಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು ರಜೆ ಮೇಲೆ ತೆರಳಬೇಕೆಂದು, ಒಂದು ವೇಳೆ ಕಚೇರಿಗೆ ಅನಧಿಕೃತವಾಗಿ ಅಧಿಕಾರಿ/ನೌಕರರುಗಳು ಗೈರುಹಾಜರಾದಲ್ಲಿ…
ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರದುದ್ದಕ್ಕೂ BJP ಮಾಡಿದ್ದು ಕೇವಲ ರಾಜ್ಯದ ಲೂಟಿಯಾಗಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ ಕಾರುತ್ತಿದೆ ಎಂದು ಗುಡುಗಿದೆ. ಭ್ರಷ್ಟಾಚಾರದ ಪಿತಾಮಹರಾದ ಬಿಜೆಪಿ ನಾಯಕರು ಅವರ ಘನ ಕಾರ್ಯಗಳ ಬಗ್ಗೆ ಕೇಳಿದರೆ ಮಾತ್ರ ಬೆನ್ನು ತಿರುಗಿಸಿ ಓಡುತ್ತಾರೆ ಎಂದು ಹೇಳಿದೆ. ಹೆಣದ ಮೇಲೆ ಹಣ ಲೂಟಿ ಮಾಡಿದ ಸಾವಿರಾರು ಕೋಟಿ ಕೋವಿಡ್ ಹಗರಣ ನೂರಾರು ಕೋಟಿ ಕೊಳ್ಳೆ ಹೊಡೆದ ಪಿಎಸ್‌ಐ ನೇಮಕಾತಿ ಅಕ್ರಮ ಬೋವಿ ನಿಗಮದಲ್ಲಿ ₹87 ಕೋಟಿ ಹಗರಣ ದೇವರಾಜ್ ಅರಸ್ ಟ್ರಕ್ ಟರ್ಮಿನಲ್…












