Author: kannadanewsnow09

ಬೆಂಗಳೂರು: ಚಿನ್ನಾಭರಣ ಪಡೆದು ಹಣ ನೀಡದೇ ವಂಚಿಸಿದಂತ ಆರೋಪದಲ್ಲಿ ಈಗಾಗಲೇ ಐಶ್ವರ್ಯಾಗೌಡ ಹಾಗೂ ಅವರ ಪತಿಯನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗ ಶಿಲ್ವಾಗೌಡ ಎಂಬುವರಿಗೆ ವಂಚಿಸಿದಂತ ಸಂಬಂಧ ದಾಖಲಾಗಿದ್ದಂತ ದೂರು ಹಿನ್ನಲೆಯಲ್ಲಿ ಮತ್ತೆ ಬಂಧಿಸಲಾಗಿದೆ. ಬೆಂಗಳೂರಿನ ಶಿಲ್ಪಾಗೌಡ ಎಂಬುವರಿಂದ 430 ಗ್ರಾಂ ಚಿನ್ನ ಪಡೆದಿದ್ದಂತ ಐಶ್ವರ್ಯಾಗೌಡ ಅದರ ಹಣವನ್ನು ನೀಡದೇ ವಂಚಿಸಿದ್ದರು. 430 ಗ್ರಾಂ ಚಿನ್ನದ ಬೆಲೆ 3.50 ಕೋಟಿಯಾಗಿತ್ತು. ಈ ಸಂಬಂಧ ಶಿಲ್ಪಾಗೌಡ ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಐಶ್ವರ್ಯಾಗೌಡ ಅವರು ಚಿನ್ನಪಡೆದು ಹಣ ವಂಚಿಸಿದ ಸಂಬಂಧ ಶಿಲ್ಪಾಗೌಡ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಆರ್ ಆರ್ ನಗರ ಠಾಣೆಯ ಪೊಲೀಸರು ಐಶ್ವರ್ಯಾಗೌಡ ಹಾಗೂ ಪತಿಯನ್ನು ಮತ್ತೆ ಬಂಧಿಸಿದ್ದಾರೆ. https://kannadanewsnow.com/kannada/actor-darshan-moves-sc-seeking-cancellation-of-bail/ https://kannadanewsnow.com/kannada/big-update-2-hmpv-confirmed-in-karnataka-icmr-hmpv-virus/

Read More

ನವದೆಹಲಿ: ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) ಜಾಗತಿಕವಾಗಿ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಆಗಿದ್ದು, ಚೀನಾದಲ್ಲಿ ಏಕಾಏಕಿ ವರದಿಯಾದ ನಂತರ ಇತ್ತೀಚೆಗೆ ಗಮನ ಸೆಳೆಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವಾಡಿಕೆಯ ಕಣ್ಗಾವಲಿನ ಭಾಗವಾಗಿ ಕರ್ನಾಟಕದಲ್ಲಿ ಇತ್ತೀಚೆಗೆ ಎರಡು ಎಚ್ಎಂಪಿವಿ ಪ್ರಕರಣಗಳು ವರದಿಯಾಗಿವೆ. HMPV ಎಂದರೇನು? ಎಚ್ಎಂಪಿವಿ ಒಂದು ವೈರಲ್ ರೋಗಕಾರಕವಾಗಿದ್ದು, ಇದು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಸೋಂಕುಗಳನ್ನು ಉಂಟುಮಾಡುತ್ತದೆ. 2001 ರಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾದ ಇದು ಪ್ಯಾರಾಮೈಕ್ಸೊವಿರಿಡೇ ಕುಟುಂಬಕ್ಕೆ ಸೇರಿದೆ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್ಎಸ್ವಿ) ಗೆ ನಿಕಟ ಸಂಬಂಧ ಹೊಂದಿದೆ. ಕೆಮ್ಮು ಅಥವಾ ಸೀನುವಿಕೆಯಿಂದ ಉಸಿರಾಟದ ಹನಿಗಳ ಮೂಲಕ ಎಚ್ಎಂಪಿವಿ ಹರಡುತ್ತದೆ, ಜೊತೆಗೆ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವ ಮೂಲಕವಾಗಿದೆ. ಈ ವೈರಸ್ ಸೌಮ್ಯ ಉಸಿರಾಟದ ಅಸ್ವಸ್ಥತೆಯಿಂದ ಹಿಡಿದು ತೀವ್ರವಾದ ತೊಡಕುಗಳವರೆಗೆ ಕಾಯಿಲೆಗಳನ್ನು ಉಂಟುಮಾಡುತ್ತದೆ, ವಿಶೇಷವಾಗಿ ಶಿಶುಗಳು, ವಯಸ್ಸಾದ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಇದೀಗ ಅದರಂತೆ ಸುಪ್ರೀಂ ಕೋರ್ಟ್ ಗೆ ನಟ ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ನಟ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್ ನೀಡಿದಂತೆ ಆಗಿದೆ. ಇಂದು ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೈಕೋರ್ಟ್ ನೀಡಿರುವಂತ ಜಾಮೀನು ರದ್ದು ಕೋರಿಗೆ ರಾಜ್ಯ ಸರ್ಕಾರದ ಪರವಾಗಿ ಪೊಲೀಸರು ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಯನ್ನು ಮುಂದಿನ ವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಂದಹಾಗೇ ಪೊಲೀಸ್ ಇಲಾಖೆಯಿಂದ ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಿರುವುದಾಗಿ ತಿಳಿದು ಬಂದಿದೆ. ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದು, ಯಾವ ತೀರ್ಪು…

Read More

ಕೋಲ್ಕತ್ತಾ : ಚೀನಾದಲ್ಲಿ ಕಾಣಿಸಿಕೊಂಡಿದ್ದಂತ ಹೆಚ್ ಎಂ ಪಿ ವಿ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಎರಡು ಸೇರಿದಂತೆ ದೇಶದ ಇತರೆಡೆ ಒಂದು ಕೇಸ್ ಪತ್ತೆಯಾಗಿದ್ದವು. ಇದೀಗ ಕೋಲ್ಕತ್ತಾದಲ್ಲಿ 5 ತಿಂಗಳ ಹಸುಗೂಸಿಗೆ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ನವೆಂಬರ್.12ರಂದು ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದಂತ 5 ತಿಂಗಳ ಹಸುಳೆ ಚಿಕಿತ್ಸೆ ಕೊಡಿಸಿಕೊಂಡು ಮನೆಗೆ ಕರೆದೊಯ್ಯಲಾಗಿತ್ತು. ಈ ಮಗುವಿಗೂ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಹೀಗಾಗಿ ಭಾರತದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಅಂದಹಾಗೇ ಬೆಂಗಳೂರಲ್ಲಿ ಇಬ್ಬರಿಗೆ ಹೆಚ್ ಎಂ ಪಿ ವಿ ವೈರಸ್ ದೃಢಪಟ್ಟಿತ್ತು. ಆ ನಂತ್ರ ಗುಜರಾತ್ ನ ಅಹಮಾದಾಬಾದ್ ನಲ್ಲಿನ ಮಗುವೊಂದಕ್ಕೂ ಹೆಚ್ ಎಂ ಪಿ ವಿ ಪತ್ತೆಯಾಗಿತ್ತು. ಈಗ ಕೋಲ್ಕತ್ತಾದಲ್ಲಿ 5 ತಿಂಗಳ ಹಸುಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ. https://kannadanewsnow.com/kannada/big-update-2-hmpv-confirmed-in-karnataka-icmr-hmpv-virus/ https://kannadanewsnow.com/kannada/what-is-hmpv-virus-what-are-its-symptoms-heres-the-information/

Read More

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದು, ಈ ಪೈಕಿ 52,80,287 ಪುರುಷರು, 49,82,589 ಮಹಿಳೆಯರು ಹಾಗೂ 1,838 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಹೇಳಿದರು. ಮತದಾರರ ಅಂತಿಮ ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ವೆಬ್‌ಸೈಟ್ www.ceokarnataka.kar.nic.inಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ…

Read More

ಬೆಂಗಳೂರು: ರಾಜ್ಯದಲ್ಲಿ ದೇಗುಲಗಳ ಆಸ್ತಿ ರಕ್ಷಣೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಕ್ರಮ ವಹಿಸಿದ್ದರು. ಈ ಪರಿಣಾಮ ದೇಗುಲಗಳಿಗೆ 11,499 ಎಕರೆ ಮರು ಸೇರ್ಪಡೆಯಾದಂತೆ ಆಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆ ವತಿಯಿಂದ ದೇವಸ್ಥಾನಗಳ ಆಸ್ತಿಗಳ ದಾಖಲೆ ಮಾಹಿತಿ ಪರಿಶೀಲಿಸಲಾಯಿತು. ಈ ಸಂದರ್ಭ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂತು. ಕೂಡಲೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪಹಣಿ ಇಂಡೀಕರಣ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೆ. ಪರಿಣಾಮ ಎರಡು ವರ್ಷಗಳಲ್ಲಿ 11,499 ಎಕರೆ ವಿಸ್ತೀರ್ಣದ ದಾಖಲೆಗಳನ್ನು ಸರಿಪಡಿಸಲಾಗಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಪ್ರತಿ ತಿಂಗಳೂ ಮುಜರಾಯಿ ಆಸ್ತಿಗಳ ಭೂಮಾಪನ, ದಾಖಲೆ ಪರಿಶೀಲನೆ, ತಿದ್ದುಪಡಿ, ಇಂಡೀಕರಣಕ್ಕೆ ಗುರಿ ನಿಗದಿಪಡಿಸಲಾಗಿದೆ. ಎಲ್ಲ ದೇವಾಲಯಗಳ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಿ, ದೇವಸ್ಥಾನಗಳ ಹೆಸರಿಗೆ ಸರಿಯಾದ ಕ್ರಮದಲ್ಲಿ ದಾಖಲಿಸಲು ಇನ್ನೂ ಎರಡು ವರ್ಷ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. https://twitter.com/KarnatakaVarthe/status/1876219309959393716 https://kannadanewsnow.com/kannada/pyaari-didi-yojana-on-the-lines-of-grihalakshmi-dk-shivakumar-announces-congress-first-guarantee-for-delhi-polls/ https://kannadanewsnow.com/kannada/bjp-fact-finding-committee-visits-victims-house-in-koppal-district-objects-to-poor-supply-of-medicines/

Read More

ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ʼಗೃಹಲಕ್ಷ್ಮಿʼ ಮಾದರಿಯಲ್ಲಿ “ಪ್ಯಾರಿ ದೀದಿ ಯೋಜನೆ” ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ನೀಡುವ ಗ್ಯಾರಂಟಿ ಭರವಸೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಪ್ರಕಟಿಸಿದರು. ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ದೆಹಲಿ ಕಾಂಗ್ರೆಸ್ ನ ಚುನಾವಣೆ ಪ್ರಣಾಳಿಕೆಯ ಭಾಗವಾಗಿ ಮೊದಲ ಗ್ಯಾರಂಟಿ ಭರವಸೆಯನ್ನು ಘೋಷಿಸಿದರು. ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ “ಪ್ಯಾರಿ ದೀದಿ ಯೋಜನೆ” ಜಾರಿ ಮಾಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ನೀಡಲಾಗುವುದು. ಉಳಿದ ಗ್ಯಾರಂಟಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಮ್ಮ ನಾಯಕರು ತಿಳಿಸಲಿದ್ದಾರೆ” ಎಂದು ಹೇಳಿದರು. “ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನಾನಿಂದು ಇಲ್ಲಿ ಪ್ರಮುಖ ಯೋಜನೆಯ ಭರವಸೆ ನೀಡುತ್ತಿದ್ದೇನೆ. ನೂರು ವರ್ಷಗಳ ಹಿಂದೆ…

Read More

ಕೊಪ್ಪಳ: ದಲಿತ ಮಹಿಳೆ ಮೃತಪಟ್ಟಿದ್ದಾರೆ. ಬಡ ಕುಟುಂಬದ ತಾಯಿ ಮೃತಪಟ್ಟರೂ, ಶಿಶುಗಳ ಸಾವಾದರೂ ಮಾನವೀಯತೆ ಮೆರೆದಿಲ್ಲ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆರೋಪಿಸಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಡೂರು ಗ್ರಾಮದ ಬಾಣಂತಿ ಶ್ರೀಮತಿ ರೇಣುಕಾ ಹಿರೇಮನಿ ಎಂಬ ಸಂತ್ರಸ್ತೆ ಮನೆಗೆ ರಾಜ್ಯ ಸತ್ಯ ಶೋಧನಾ ಸಮಿತಿಯ ತಂಡ ಭೇಟಿ ಮಾಡಿ ಸಂತ್ರಸ್ತೆಯ ಗಂಡ ಹಾಗೂ ಕುಟುಂಬಸ್ಥರಿಂದ ಮನೆಯ ವಿವರ ಪಡೆಯಿತು. ಇದೇವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರು, ಸಚಿವರು ಮನೆಗೆ ಭೇಟಿ ನೀಡಲಿಲ್ಲ ಎಂದು ಆಕ್ಷೇಪಿಸಿದರು. ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 300 ಬಾಣಂತಿಯರ ಸಾವು ಸಂಭವಿಸಿದೆ. 2,500- 3 ಸಾವಿರ ಶಿಶುಗಳು ಸಾವನ್ನಪ್ಪಿವೆ. ಇದಕ್ಕೆಲ್ಲ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ಷೇಪಿಸಿದರು. ಕಳಪೆ ಔಷಧಿಯೂ ಇನ್ನೊಂದು ಕಾರಣ ಎಂದು ಟೀಕಿಸಿದರು. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಮಾತನಾಡಿ, ಪಿಎಚ್‍ಸಿಗಳಲ್ಲಿ ಶೇ 50ಕ್ಕೂ ಹೆಚ್ಚು ಸಿಬ್ಬಂದಿಗಳ ಕೊರತೆ ಇದೆ. ವೈದ್ಯಕೀಯ…

Read More

ಛತ್ತೀಸ್ ಗಢ: ಇಲ್ಲಿನ ಬಿಜಾಪುರ್ ಜಿಲ್ಲೆಯಲ್ಲಿ ಸಿ ಆರ್ ಪಿ ಎಫ್ ಯೋಧರ ವಾಹನ ಗುರಿಯಾಗಿಸಿಕೊಂಡು ಸುಧಾರಿತ ಐಇಡಿಯನ್ನು ಮಾವೋವಾದಿ ನಕ್ಸಲರು ಸ್ಪೋಟಿಸಲಾಗಿದೆ. ಈ ಘಟನೆಯಲ್ಲಿ 9 ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ. ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ಸಿಆರ್ ಪಿಎಫ್ ವಾಹನ ಗುರಿಯಾಗಿಸಿಕೊಂಡು ನಕ್ಸಲರಿಂದ ಐಇಡಿ ಸ್ಪೋಟಿಸಲಾಗಿದೆ. ಈ ಸ್ಪೋಟದಲ್ಲಿ 9 ಯೋಧರು ಹುತಾತ್ಮರಾಗಿದ್ದಾರೆ. ಹಲವರು ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಆರ್ ಪಿಎಫ್ ವಾಹನ ತೆರಳುತ್ತಿರುವ ಮಾಹಿತಿ ತಿಳಿದಂತ ನಕ್ಸಲರು ದಾರಿಯಲ್ಲಿ ಐಇಡಿ ಇರಿಸಿ ಸ್ಪೋಟಿಸಿದ್ದಾರೆ. ಈ ಪರಿಣಾಮ ವಾಹನದಲ್ಲಿದ್ದಂತ 9 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/mla-gopalakrishna-belur-pays-last-respects-to-writer-na-dsouza/ https://kannadanewsnow.com/kannada/two-injured-in-gas-cylinder-explosion-in-bengaluru/

Read More

ಶಿವಮೊಗ್ಗ: ನಿನ್ನೆ ಅನಾರೋಗ್ಯದಿಂದ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜ(87) ಅವರ ಪಾರ್ಥೀವ ಶರೀರವನ್ನು ಸಾಗರಕ್ಕೆ ಮಂಗಳೂರಿನಿಂದ ತರಲಾಗಿತ್ತು. ಇಂತಹ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪಡೆದರು. ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದ ಸ್ವಗೃಹಕ್ಕೆ ನಿನ್ನೆ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಪಾರ್ಥೀವ ಶರೀರವನ್ನು ತರಲಾಗಿತ್ತು. ಇಂದು ಅವರ ಸ್ವಗೃಹಕ್ಕೆ ತೆರಳಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಂತಿಮ ದರ್ಶನ ಪಡೆದರು. ಇನ್ನೂ ಇಂದು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಸಾಗರದ ನಗರಸಭೆ ಆವರಣದಲ್ಲಿನ ಗಾಂಧಿ ಮೈದಾನದಲ್ಲೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಹಿರಿಯ ಸಾಹಿತಿ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಹಿರಿಯ ಸಾಹಿತಿ ನಾ.ಡಿಸೋಜ ಅವರ ಪಾರ್ಥೀವ ಶರೀರವನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ಸಾಗರದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿದೆ. https://kannadanewsnow.com/kannada/two-injured-in-gas-cylinder-explosion-in-bengaluru/ https://kannadanewsnow.com/kannada/class-3-student-dies-of-cardiac-arrest-while-showing-notes-at-school/

Read More