Author: kannadanewsnow09

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಪರಿಶುದ್ಧವಲ್ಲ; ತನ್ನ ಭ್ರಷ್ಟಾಚಾರ ಗೊತ್ತಾಗಬಾರದೆಂದು, ಹೊರಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಪೂರ್ವತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವ ಅವರು ಒಬ್ಬ ಕ್ರಿಮಿನಲ್ ಕರಪ್ಟ್ ಪಾಲಿಟಿಶಿಯನ್ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು. ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ವಿರುದ್ಧ 65ಕ್ಕೂ ಪ್ರಕರಣಗಳ ದೂರು ಸಲ್ಲಿಕೆಯಾಗಿವೆ. ಆ ದೂರುಗಳ ಸತ್ಯಾಸತ್ಯತೆ ಹೊರಕ್ಕೆ ಬರಬಾರದು ಎಂದು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಿಕೊಂಡು 15ಕ್ಕೂ ಹೆಚ್ಚು ಪ್ರಕರಣಗಳಿಗೆ ತನ್ನ ಅಧೀನದ ಎಸಿಬಿಯಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ದೂರಿದರು. 50ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯೇ ಆಗಿಲ್ಲ ಎಂದು ತಿಳಿಸಿದರು. ತನಿಖೆಯೇ ಆಗದಂತೆ ಮುನ್ನೆಚ್ಚರಿಕೆ ವಹಿಸಿ ನಾನು ಪ್ರಾಮಾಣಿಕ ಎಂದು ಅವರಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಬಿಐಗೆ ಇದ್ದ ಮುಕ್ತ ತನಿಖೆಯ ಅಧಿಕಾರವನ್ನು ನಿನ್ನೆಯ ಸಂಪುಟ ಸಭೆ ಮೊಟಕು ಮಾಡಿದೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ?…

Read More

ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಈ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ಕೂಡ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಸಿಎಎಂ ಸಿದ್ಧರಾಮಯ್ಯ ವಿರುದ್ಧ ಎ1 ಆರೋಪಿಯಾಗಿ ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರ ಪತ್ನಿ ಪಾರ್ವತಿ ಎ.2 ಆರೋಪಿಯಾಗಿದ್ದಾರೆ.  ಸಿದ್ಧರಾಮಯ್ಯ ಭಾಮೈದ ಮಲ್ಲಿಕಾರ್ಜನ ಸ್ವಾಮಿ ಎ3 ಆರೋಪಿಯಾದರೇ, ಎ.4 ಆರೋಪಿಯನ್ನಾಗಿ ಭೂ ಮಾಲೀಕ ದೇವರಾಜು ಹಾಗೂ ಇತರರು ಎ5 ಆರೋಪಿಯನ್ನಾಗಿ ಮಾಡಿ ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ ಸಿಎಂ ಸಿದ್ಧರಾಮಯ್ಯ ಅವರ ಕುಟುಂಬಕ್ಕೆ ಸಂಕಷ್ಟ ಎದುರಾದಂತೆ ಆಗಿದೆ. ಅಂದಹಾಗೇ ಮುಡಾ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮೈಸೂರಿನ ಲೋಕಾಯುಕ್ತ ಎಸ್ಪಿಗೆ ಆದೇಶ ಮಾಡಲಾಗಿತ್ತು. ಅದರಂತೆ ಇಂದು ಮೈಸೂರಿನ ಲೋಕಾಯುಕ್ತ ಎಸ್ಪಿ ಅವರು ಸಿಎಂ ಸಿದ್ಧರಾಮಯ್ಯ ಹಾಗೂ ಅವರ ಪತ್ನಿ ಸೇರಿದಂತೆ…

Read More

ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಸೂಚಿಸಲಾಗಿತ್ತು. ಅದರಂತೆ ಈಗ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಿನ್ನೆಯಿಂದ ಲೋಕಾಯುಕ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮುಡಾ ಕೇಸ್ ಸಂಬಂಧ ಕೋರ್ಟ್ ಆದೇಶ ಪಾಲನೆ ಕುರಿತಂತೆ ಮಹತ್ವದ ಸಭೆ ನಡೆಸಲಾಗಿತ್ತು. ಇಂದು ಕೂಡ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸೋದು ಡೌಟ್ ಎನ್ನಲಾಗಿತ್ತು. ಇದರ ನಡುವೆ ಮುಡಾ ಹಗರಣದಲ್ಲಿ ಕೋರ್ಟ್ ಆದೇಶದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. https://kannadanewsnow.com/kannada/big-news-this-is-the-first-time-a-political-case-has-been-filed-against-me-cm-siddaramaiah/ https://kannadanewsnow.com/kannada/renuka-swamy-murder-case-court-adjourns-hearing-on-darshans-bail-plea-to-september-30/

Read More

ಶಿವಮೊಗ್ಗ:  ಆಲ್ಕೋಳ ವಿವಿ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಾಹಣಾ ಕೆಲಸ ಹಮ್ಮಿಕೊಂಡಿರುವ ಕಾರಣ ಸೆ. 29ರಂದು ಬೆಳಗ್ಗೆ 9.00 ರಿಂದ ಸಂಜೆ 6 ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಅಲ್ಕೋಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸರ್ಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ. ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಭೈರನಕೊಪ್ಪ, ಎ.ಪಿ.ಎಂ.ಸಿ ಲೇಔಟ್(ಆಶ್ರಯ ಬಡಾವಣೆ), ಭೋವಿ ಕಾಲೋನಿ, ಆಲದೇವರಹೊಸೂರು ಕರೆಂಟ್ ಇರೋದಿಲ್ಲ. ಶಕ್ತಿಧಾಮ, ಶಿವಸಾಯಿ ಕಾಸ್ಟಿಂಗ್ ಗೆಜ್ಜೆನಹಳ್ಳಿ. ದೇವಕಾತಿಕೊಪ್ಪ, ಶ್ರೀರಾಮ್‌ಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ,…

Read More

ಬೆಂಗಳೂರು: ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದಾರೆ. ಅವರು ಈ ಪ್ರಕರಣದಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ಸೆಪ್ಟೆಂಬರ್.30ಕ್ಕೆ ಕೋರ್ಟ್ ಮುಂದೂಡಿಕೆ. ಹೀಗಾಗಿ ನಟ ದರ್ಶನ್ ಗೆ ಜೈಲೇ ಗತಿ ಎನ್ನುವಂತೆ ಆಗಿದೆ. ಇಂದು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ2 ಆರೋಪಿಯಾಗಿರುವಂತ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯವು ನಡೆಸಿತು. ಹಿರಿಯ ವಕೀಲರು ಬರಬೇಕಿರುವುದರಿಂದ ಕಾಲಾವಕಾಶವನ್ನು ಎಸ್ ಪಿಪಿ ಪ್ರಸನ್ನ ಕುಮಾರ್ ಕೋರಿದರು. ಅಲ್ಲದೇ ದರ್ಶನ್ ಪರ ವಕೀಲರು ವಾದ ಮಂಡಿಸಲು ಕಾಲಾವಕಾಶ ಕೋರಿದ್ದರು. ಹೀಗಾಗಿ ಸೆಪ್ಟೆಂಬರ್.30ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ. ಅಂದಹಾಗೇ ನಟ ದರ್ಶನ್ ಅಂಡ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧನಕ್ಕೆ ಒಳಗಾಗಿ ಬಳ್ಳಾರಿ ಜೈಲು ಪಾಲಾಗಿದ್ದಾರೆ. ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಗೆ ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಲಾಗಿದೆ. ಹಿರಿಯ ವಕೀಲರು ವಾದ ಮಂಡನೆಗೆ…

Read More

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಬೇಕು ಎನ್ನುವುದು ಮೂರು ದಶಕಗಳ ಹೋರಾಟ. ಈ ಹೋರಾಟಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಆದೇಶವನ್ನು ಹೊರಡಿಸಿದ್ದು, ಅದಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಅಭಿನಂದಿಸುತ್ತದೆ. ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ಹಕ್ಕೋತ್ತಾಯ ಪರಿಗಣಿಸಿ, ಬಜೆಟ್‌ನಲ್ಲಿಯೇ ಉಚಿತ ಬಸ್ ಪಾಸ್ ೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಬಜೆಟ್‌ನಲ್ಲಿಯೂ ೋಷಣೆ ಮಾಡಿದ್ದರು. ಈಗ ಉಚಿತ ಬಸ್ ಪಾಸ್ ಸೌಲಭ್ಯ ನನಸಾಗುವಂತೆ ಮಾಡಿರುವುದು ಶ್ಲಾಘನೀಯ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಕ್ರಿಯಿಸಿದ್ದಾರೆ. ಉಚಿತ ಬಸ್ ಪಾಸ್‌ಗೆ 15.66 ಕೋಟಿ ರೂ ಹಣವನ್ನು ಮೀಸಲಿರಿಸಿ ಯೋಜನೆಗೆ ಅನುಮತಿ ಪಡೆಯಲು ವಾರ್ತಾ ಇಲಾಖೆ ಮತ್ತು ಹಣಕಾಸು ಇಲಾಖೆಯಲ್ಲಿ ನಿರಂತರವಾಗಿ ಕೆಯುಡಬ್ಲೂಜೆ ಮಾಡಿದ ಹೋರಾಟದ ಲವಾಗಿ…

Read More

ಬೆಂಗಳೂರು: ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮತ್ತು ಆಡಿಯೊದಲ್ಲಿ ಗುರುತನ್ನು ದೃಢಪಡಿಸಿದೆ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಹೈಕೋರ್ಟ್ಗೆ ತಿಳಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀರ್ಪನ್ನು ಕಾಯ್ದಿರಿಸಿದರು. ಈ ಪ್ರಕರಣದಲ್ಲಿ ಎಸ್ಐಟಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಇದು ಒಮ್ಮತದ ಕೃತ್ಯ ಎಂದು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಜ್ವಲ್ ನೀಡಿದ ಹೇಳಿಕೆಗೆ ವಿರುದ್ಧವಾಗಿ, ಎಫ್ಎಸ್ಎಲ್ ದೃಢಪಡಿಸಿದ ಆಡಿಯೊದಲ್ಲಿ ಸಂತ್ರಸ್ತೆಯ ಪ್ರತಿಭಟನೆ, ತಿರಸ್ಕಾರ, ಕೂಗು, ಅಳುವಿಕೆ ಮತ್ತು ಯಾತನೆಯನ್ನು ತೋರಿಸಲಾಗಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ, ಮೊದಲ ಬಾರಿಗೆ, ಅವರು ವೀಡಿಯೊದಲ್ಲಿ ಸಿಕ್ಕಿಬಿದ್ದಿದ್ದಾರೆ. ಇತರ ಪ್ರಕರಣಗಳಲ್ಲಿದ್ದಂತೆ ಅವನಿಗೆ ಉತ್ತಮ ಭದ್ರತೆ ಇರಲಿಲ್ಲ. ಅವರ ಧ್ವನಿಯನ್ನು ರೆಕಾರ್ಡ್…

Read More

ಬೆಂಗಳೂರು: ನೈಸ್ ಕೇಸ್ ಸೇರಿದಂತೆ ವಿವಿಧ ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದಂತ ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲ ಕೆ.ಸುಮನ್ (64) ಅವರು ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲ ಕೆ.ಸುಮನ್ ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಕೆ.ಸುಮನ್ ಅವರು ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲರಾಗಿದ್ದರು. ಮಂತ್ರಾಲಯ ಮಠದ ಪರವಾಗಿ ವೃಂದಾವನ ಆಧಾರನೆ ಪ್ರಕರಣ, ನೈಸ್ ಕೇಸ್ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದರು. ಇಂತಹ ಹಿರಿಯ ವಕೀಲ ಕೆ.ಸುಮನ್ ಅವರು ಇನ್ನಿಲ್ಲವಾಗಿದ್ದಾರೆ. ಮೃತ ಕೆ.ಸುಮನ್ ಅವರ ಅಂತ್ಯಕ್ರಿಯೆಯನ್ನು ನಾಳೆ ಮಧ್ಯಾಹ್ನ 2 ಗಂಟೆಗೆ ಹೆಬ್ಬಾಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. https://kannadanewsnow.com/kannada/kadalur-will-be-the-prelude-to-maddurs-model-constituency-mla-k-m-uday/ https://kannadanewsnow.com/kannada/good-news-for-rural-journalists-state-govt-orders-distribution-of-free-bus-passes/

Read More

ನವದೆಹಲಿ: ವೇರಿಯಬಲ್ ತುಟ್ಟಿಭತ್ಯೆ (ವಿಡಿಎ) ಪರಿಷ್ಕರಿಸುವ ಮೂಲಕ ಕಾರ್ಮಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸುವುದಾಗಿ ಮೋದಿ ಸರ್ಕಾರ ಗುರುವಾರ ಘೋಷಿಸಿದೆ. ಈ ಹೊಂದಾಣಿಕೆಯು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರಲಿರುವ ಹೊಸ ಪರಿಷ್ಕೃತ ಕನಿಷ್ಠ ವೇತನವು ಕಟ್ಟಡ ನಿರ್ಮಾಣ, ಲೋಡಿಂಗ್ ಮತ್ತು ಅನ್ಲೋಡಿಂಗ್, ವಾಚ್ ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛಗೊಳಿಸುವುದು, ಹೌಸ್ ಕೀಪಿಂಗ್, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಕೊನೆಯ ಪರಿಷ್ಕರಣೆಯನ್ನು ಏಪ್ರಿಲ್ 2024 ರಲ್ಲಿ ಮಾಡಲಾಯಿತು. ಪರಿಷ್ಕರಣೆಯ ನಂತರ, ಕಟ್ಟಡ ನಿರ್ಮಾಣ, ಗುಡಿಸುವಿಕೆ, ಶುಚಿಗೊಳಿಸುವಿಕೆ, ಲೋಡಿಂಗ್ ಮತ್ತು ಅನ್ಲೋಡಿಂಗ್ ಮಾಡುವ ಕಾರ್ಮಿಕರಿಗೆ ‘ಎ’ ಪ್ರದೇಶದಲ್ಲಿ ಕನಿಷ್ಠ ವೇತನ ದರಗಳು ದಿನಕ್ಕೆ 783 ರೂ (ತಿಂಗಳಿಗೆ 20,358 ರೂ.), ಅರೆ ಕೌಶಲ್ಯ ಹೊಂದಿರುವವರಿಗೆ ದಿನಕ್ಕೆ 868 ರೂ (ತಿಂಗಳಿಗೆ 22,568…

Read More

ಮಂಡ್ಯ: ನನ್ನ ಶಾಸಕ ಸ್ಥಾನದ ಆಡಳಿತಾವಧಿಯಲ್ಲಿ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಬಯಕೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು. ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕದಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ತುಮಕೂರು – ಮದ್ದೂರು ರಾಜ್ಯ ಹೆದ್ದಾರಿಯಿಂದ ಕದಲೂರು ಮಾರ್ಗವಾಗಿ ನಿಡಘಟ್ಟ ಗ್ರಾಮದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆವರೆಗೆ ಅಂದಾಜು 20 ಕೋಟಿ ವೆಚ್ಚದಲ್ಲಿ ಹೈಟೆಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ನಾನು ವಾಗ್ದಾನ ನೀಡಿದಂತೆ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಬೇಕೆಂಬ ಇರಾದೆ ನನ್ನದಾಗಿದೆ ಎಂದು ಹೇಳಿದ್ದೆ ಅದಕ್ಕೆಲ್ಲ ಈಗ ಕಾಲ ಕೂಡಿಬಂದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಮುಂದಿನ ಒಂದು ವರ್ಷದಲ್ಲಿ ನನ್ನ ಹುಟ್ಟೂರು ಕದಲೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ಹಂತಹಂತವಾಗಿ ಕ್ಷೇತ್ರದ ಎಲ್ಲಾ…

Read More