Author: kannadanewsnow09

ಬೆಂಗಳೂರು: ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡದೆ ವರ್ಷದ ಕೊನೆ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳ ಅಭ್ಯಾಸದ ವಿರುದ್ಧ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗೃಹ ಕಚೇರಿ ಕೃಷ್ಣದಲ್ಲಿ ಎರಡೂವರೆ ಗಂಟೆ ಕಾಲ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸ್ಪಷ್ಟ ಸೂಚನೆ ನೀಡಿದರು. ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ. ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು. 2024-25 ನೇ ಸಾಲಿನಲ್ಲಿ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ರೂ. 5,377 ಕೋಟಿ ಅನುದಾನ ಒದಗಿಸಲಾಗಿದೆ. ಇದುವರೆಗೆ ಅನುದಾನ ರೂ.3,631 ಕೋಟಿ ಬಿಡುಗಡೆಯಾಗಿದ್ದು ಈ ಹಣ ಕೂಡ ಪೂರ್ತಿ…

Read More

ಕೊಪ್ಪಳ: ಕೆ.ಕೆ.ಆರ್.ಡಿ.ಬಿ ಹಾಗೂ ಕೊಪ್ಪಳ ಶಾಸಕರ ಅನುದಾನದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಲಾದ 21 ಹೊಸ ವಾಹನಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಮಂಗಳವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ಆವರಣದಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಗೆ 2024-25ನೇ ಆರ್ಥಿಕ ವರ್ಷದಲ್ಲಿ ಮಂಜೂರಾಗಿರುವ 200 ಲಕ್ಷ ರೂ. ಅನುದಾನದಲ್ಲಿ ಇಲಾಖೆಯ ದೈನಂದಿನ ಕರ್ತವ್ಯದ ಸಲುವಾಗಿ 16 ಬುಲೆರೋ, 2 ಸ್ಕಾರ್ಪಿಯೋ ಮತ್ತು 1 ಇನ್ನೋವಾ ವಾಹನಗಳನ್ನು ಹಾಗೂ ಕೊಪ್ಪಳ ಶಾಸಕರ ಅನುದಾನದಡಿ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ 2 ಬೋಲೆರೊ ಖರೀದಿಸಲಾಗಿದ್ದು, ಈ ವಾಹನಗಳ ಪೊಲೀಸ್ ಸೇವೆಗೆ ಸಚಿವರು, ಶಾಸಕರು ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.…

Read More

ನವದೆಹಲಿ: ರಂಗಭೂಮಿ ನಟ ಅಲೋಕ್ ಚಟರ್ಜಿ ನಿಧನರಾಗಿದ್ದಾರೆ ಎಂದು ಗೀತರಚನೆಕಾರ ಸ್ವಾನಂದ್ ಕಿರ್ಕಿರೆ ಮಂಗಳವಾರ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ, ಅವರು ಅಲೋಕ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಅವರಿಗಾಗಿ ಒಂದು ಟಿಪ್ಪಣಿಯನ್ನೂ ಬರೆದರು. ಅಲೋಕ್ ಅವರು ದಿವಂಗತ ನಟ ಇರ್ಫಾನ್ ಖಾನ್ ಅವರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ) ಬ್ಯಾಚ್ಮೇಟ್ ಆಗಿದ್ದರು. ಅಲೋಕ್ ಚಟರ್ಜಿಗೆ ಟಿಪ್ಪಣಿ ಬರೆದ ಸ್ವಾನಂದ್ ಕಿರ್ಕಿರೆ ಫೋಟೋದಲ್ಲಿ, ಅಲೋಕ್ ಔಪಚಾರಿಕ ಶರ್ಟ್ ಧರಿಸಿ ಕ್ಯಾಮೆರಾದಿಂದ ದೂರ ನೋಡುತ್ತಿರುವುದನ್ನು ಕಾಣಬಹುದು. ಸ್ವಾನಂದ್ ಈ ಪೋಸ್ಟ್ಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಶೀರ್ಷಿಕೆ ನೀಡಿದ್ದಾರೆ, “ಅಲೋಕ್ ಚಟರ್ಜಿ.. ಏಕ್ ನಯಾಬ್ ಅಭಿನೇತಾ ಚಲಾ ಗಯಾ! ಎನ್ಎಸ್ಡಿ ಎಂದರೆ ಇರ್ಫಾನ್ ಅವರ ಬ್ಯಾಚ್ಮೇಟ್ (ಅಲೋಕ್ ಚಟರ್ಜಿ.. ಒಬ್ಬ ವಿಶಿಷ್ಟ ನಟ ಇಲ್ಲ! ಅವರು ಎನ್ಎಸ್ಡಿಯಲ್ಲಿ ಇರ್ಫಾನ್ ಅವರ ಬ್ಯಾಚ್ಮೇಟ್ ಆಗಿದ್ದರು. “ಇರ್ಫಾನ್ ಅಗರ್ ಕಾಳಿದಾಸ್ ತೋ ಅಲೋಕ್ ಚಟರ್ಜಿ ವಿಲೋಮ್! ವಿಲೋಮ್ ಅಪ್ನೆ ಕಾಳಿದಾಸ್ ಸೇ ಮಿಲ್ನೆ ಚಲಾ ಗಯಾ! ಶಾಂತಿಯಿಂದ…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪಕ್ಕಾ 60 ಪರ್ಸೆಂಟ್‌ ಕಮಿಶನ್‌ ಸರ್ಕಾರ. ಕಾಂಗ್ರೆಸ್‌ನ ಆಡಳಿತದಿಂದಾಗಿ ರಾಜ್ಯದ ದಿವಾಳಿಯ ಕಡೆಗೆ ಸಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್‌ನದ್ದು ಪಕ್ಕಾ 60 ಪರ್ಸೆಂಟ್‌ ಕಮಿಶನ್‌ನ ಸರ್ಕಾರ. ಗುತ್ತಿಗೆದಾರರಿಗೆ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಎಂದು ಆರೋಪಿಸಿದ ಗುತ್ತಿಗೆದಾರರು, ಈಗ ಕಾಂಗ್ರೆಸ್‌ ಸರ್ಕಾರ 60% ಕಮಿಶನ್‌ ಸರ್ಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ 30-40 ನಿವೇಶನಕ್ಕೆ 10 ಲಕ್ಷ ರೂ. 40-60 ನಿವೇಶನಕ್ಕೆ 20 ಲಕ್ಷ ರೂ., ಇದಕ್ಕೂ ಹೆಚ್ಚಿನ ನಿವೇಶನಗಳಿಗೆ 40 ಲಕ್ಷ ರೂ. ಲಂಚ ಕಮಿಶನ್‌ ಕೊಡಬೇಕಿದೆ ಎಂದು ದೂರಿದರು. ಗುತ್ತಿಗೆದಾರರಿಗೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಿದೆ. ಈ ಹಣ ತರಲು ಎಲ್ಲದಕ್ಕೂ ಸರ್ಕಾರ…

Read More

ಬೆಂಗಳೂರು: ಹಾಸ್ಟೆಲ್ ಹುಡುಗರು ಚಿತ್ರ ತಂಡದಿಂದ ತಮ್ಮ ಅನುಮತಿಯಿಲ್ಲದೇ ದೃಶ್ಯಾವಳಿ ಬಳಕೆ ಮಾಡಿದ್ದರ ಸಂಬಂಧ ನಟಿ ರಮ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧದ ವಿಚಾರಣೆಗೆ ಇಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ವಿಚಾರಣೆ ಹಾಜರಾದರು. ಜುಲೈ.21, 2024ರಂದು ನಟಿ ರಮ್ಯಾ ಅವರು ಅನುಮತಿಯಿಲ್ಲದೇ ತಮ್ಮ ದೃಶ್ಯಾವಳಿಯನ್ನು ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ಬಳಕೆ ಮಾಡಿದ್ದರ ಕಾರಣ, ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 1 ಕೋಟಿ ಪರಿಹಾರ ನೀಡುವಂತೆಯೂ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳ ನ್ಯಾಯಾಲಯದಲ್ಲಿ ಹಾಸ್ಟೆಲ್ ಹುಡುಗರು ಚಿತ್ರದ ವಿವಾದದ ಕುರಿತಂತೆ ಕೇಸ್ ವಿಚಾರಣೆಯಿದ್ದ ಕಾರಣ, ನಟಿ ರಮ್ಯಾ ಅವರು ವಿಚಾರಣೆಗೆ ಹಾಜರಾದರು.

Read More

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಿಸುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ತಿಳಿಸಿದ್ದಾರೆ. ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು,  2025 ರ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ (ಇಸಿಐ) ಮಂಗಳವಾರ ಪ್ರಕಟಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ಬಿಜೆಪಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಎಎಪಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿರುವುದರಿಂದ ಈ ಪ್ರಕಟಣೆ ಈಗ ದೆಹಲಿಯಲ್ಲಿ ಈಗಾಗಲೇ ಬಿಸಿಯಾಗಿರುವ ರಾಜಕೀಯ ವೈಫಲ್ಯವನ್ನು ತೀವ್ರಗೊಳಿಸಿದೆ. ರಾಜಕೀಯ ಚರ್ಚೆಯಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಮೇಲುಗೈ ಸಾಧಿಸುತ್ತಿದ್ದು, ನಡೆಯುತ್ತಿರುವ ‘ಎಎಪಿಡಿಎ’ ವಿವಾದದ ಮಧ್ಯೆ ಇದು ಬಂದಿದೆ. ದೆಹಲಿ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಪ್ರಶ್ನೆ ಉಳಿದಿದೆ -…

Read More

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದಂತ ದೆಹಲಿಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರಪರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂಬುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಘೋಷಿಸಿದರು. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಸಾದ್ಯವಿಲ್ಲ. ಯಾವುದೇ ಮಾರ್ವಲ್ ಕೂಡ ಅವುಗಳಲ್ಲಿ ಇನ್ ಸ್ಟಾಲ್ ಮಾಡೋದಕ್ಕೆ ಸಾಧ್ಯವಿಲ್ಲ. ಇದನ್ನೇ ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ಹಲವು ತೀರ್ಪುಗಳಲ್ಲಿ ಸ್ಪಷ್ಟ ಪಡಿಸಿದೆ ಎಂದರು. ಪಾರದರ್ಶಕ ಚುನಾವಣೆ ನಡೆಸುವು ನಮ್ಮ ಆದ್ಯತೆಯಾಗಿದೆ. ಚುನಾವಣೆ 7-8 ದಿನಗಳ ಮೊದಲೇ ಇವಿಎಂ ಸಿದ್ಧತೆ ಕೈಗೊಳ್ಳಲಾಗುತ್ತದೆ. 7-8 ದಿನಗಳ ಮೊದಲೇ ಇವಿಎಂಗೆ ಸಿಂಬಲ್ ಅಳವಡಿಸಲಾಗುತ್ತದೆ. ಏಜೆಂಟ್ ಸಮ್ಮುಖದಲ್ಲೇ ಇವಿಎಂಗೆ ಸಿಂಬಲ್ ಗಳನ್ನು ಅಳವಡಿಸಲಾಗುತ್ತದೆ. ಇವಿಎಂ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಪೂರ್ಣ ಪಾರದರ್ಶಕತೆಯಿಂದ ಮತದಾರರ ಪಟ್ಟಿಯನ್ನು ತಯಾಗಿಸಲಾಗುತ್ತದೆ. ಮತದಾನ ಮುಗಿದ ಬಳಿಕ ಇವಿಎಂ ಸೀಲ್…

Read More

ಬೆಂಗಳೂರು: ನಗರದ ಕಾರ್ಪೋರೇಷನ್ ಬಳಿ ಇರುವಂತ ಬಿಬಿಎಂಪಿ ಪ್ರಧಾನ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಬಿಎಂಪಿ ಚೀಫ್ ಕಮೀಷನರ್ ಕಚೇರಿಯಲ್ಲಿ ಇಡಿ ಅಧಿಕಾರಿಗಳ ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಇಂದು ಬಿಬಿಎಂಪಿ ಪ್ರಧಾನ ಕಚೇರಿಯ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 7 ಅಧಿಕಾರಿಗಳ ತಂಡದಿಂದ ದಾಳಿಯನ್ನು ನಡೆಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಇಡಿ ಅಧಿಕಾರಿಗಳಿಂದ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಿಬಿಎಂಪಿ ಚೀಫ್ ಇಂಡಿನಿಯರ್ ಕಚೇರಿ ಸೇರಿದಂತೆ ವಿವಿಧ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತಂಡವು ಅಕ್ರಮ ಹಣ ವರ್ಗಾವಣೆ ಕುರಿತಂತೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/salman-khan-upgrades-security-of-his-galaxy-apartment-with-bulletproof-windows-report/ https://kannadanewsnow.com/kannada/breaking-bengaluru-another-suicide-in-bengaluru-debt-ridden-businessman-commits-suicide/

Read More

ಬೆಂಗಳೂರು: ಬಂಡೀಪುರ ಮೀಸಲು ಅರಣ್ಯದಲ್ಲಿ ರಾತ್ರಿ 9ರವರೆಗೆ ಸಾರ್ವಜನಿಕ ವಾಹನಗಳಿಗೆ,  ಆ ನಂತ್ರ ಅರಣ್ಯ ಇಲಾಖೆಯಿಂದಲೇ 2 ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇಂದು ಅರಣ್ಯ ಅಪರಾಧಗಳ ತಡೆಗಾಗಿ ಗರುಡಾಕ್ಷಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಕೇರಳದಿಂದ ನಮ್ಮ ರಾಜ್ಯಕ್ಕೆ ಬಂಡೀಪುರ ಅರಣ್ಯದ ಮೂಲಕ ಬರಲು ರಾತ್ರಿ 9 ರವರೆಗೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ರಾತ್ರಿ 9ರ ನಂತ್ರ ಎರಡು ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವನ್ಯ ಜೀವಿ ಸಂರಕ್ಷಣೆ ಆಗಬೇಕು. ಉಭಯ ರಾಜ್ಯಗಳ ಸಂಬಂಧ ಕೂಡ ಉಳಿಯಬೇಕು ಎಂದರು. ಇದೇ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ ಗರುಡಾಕ್ಷಿ ತಂತ್ರಾಂಶ ಬಿಡುಗಡೆ ಮಾಡಿದರು. ಈ ಬಳಿಕ ಮಾತನಾಡಿದ ಅವರು, ಅರಣ್ಯ ಅಪರಾಧ ಪ್ರಕರಣಗಳ ನಿರ್ವಹಣೆಗೆ ಆನ್ ಲೈನ್ ವೇದಿಕೆಯಾಗಿದೆ. ಇವತ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಕೆಲ ಸುಧಾರಣೆ ತರುತ್ತಿದ್ದೇವೆ. ದಿನದಿಂದ ದಿನಕ್ಕೆ ಅರಣ್ಯ ಅಪರಾಧಗಳು ಹೆಚ್ಚಾಗುತ್ತಿದೆ. ಭೂಮಿ ಬೆಲೆ ಜಾಸ್ತಿ ಆಗ್ತಿರೋದ್ರಿಂದ ಅಪರಾಧ ಹೆಚ್ಚು. ಒತ್ತುವರಿಗಳು…

Read More

ಬೆಂಗಳೂರು: ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ(ಹುಡುಗ ಮತ್ತು ಹುಡುಗಿಯರು) ಹಾಗೂ 9 ನೇ ತರಗತಿ(ಹುಡುಗರು ಮಾತ್ರ)ಯ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದ್ದು ಜ.13 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಅರ್ಜಿಯನ್ನು https://exams.nta.ac.in/AISSEE ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದು. ಹಾಗೂ ಲಿಖಿತ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಜಾಲತಾಣದಲ್ಲಿ ನಂತರ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in ಎಂಬ ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ. https://kannadanewsnow.com/kannada/at-least-95-killed-over-130-injured-in-tibet-earthquake/ https://kannadanewsnow.com/kannada/salman-khan-upgrades-security-of-his-galaxy-apartment-with-bulletproof-windows-report/

Read More