Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಜಿಲ್ಲಾ ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಯೋಜನೆಗಳಾದ ಮಧ್ಯಮ ವರ್ಗದ ಆರ್.ಎ.ಎಸ್. ಘಟಕ ನಿರ್ಮಾಣ, ಮೀನುಕೃಷಿ ಕೊಳಗಳ ನಿರ್ಮಾಣ, ಮೀನುಕೃಷಿ ಕೊಳಗಳ ನಿರ್ಮಾಣ ಮಾಡಿಕೊಂಡು ಮೀನುಕೃಷಿ ಕೈಗೊಂಡವರಿಗೆ ಹೂಡಿಕೆ ವೆಚ್ಚದ ಮೇಲೆ ಸಹಾಯಧನ, ಮೀನುಕೃಷಿಗಾಗಿ ಬಯೋಪ್ಲಾಕ್ ಘಟಕ ನಿರ್ಮಾಣಕ್ಕೆ ಸಹಾಯ ಮತ್ತು ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪ.ಜಾ./ಪ.ಪಂ. ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಮಾ. 31 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/ https://kannadanewsnow.com/kannada/gauri-naik-digs-well-for-anganwadi-children-to-fetch-water/
ಕಲಬುರ್ಗಿ: ನಗರದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ವಿಚಾರವಾಗಿ ಹಿಂದೂ ಮುಸ್ಲೀಂರ ನಡುವೆ ವಿವಾದ ಉಂಟಾಗಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿಯ ಹೈಕೋರ್ಟ್ ನ್ಯಾಯಪೀಠವು ಹಿಂದೂಗಳು ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠವು ಮಾರ್ಚ್.8ರಂದು ಶಿವರಾತ್ರಿಯ ದಿನದಂದು ಮಧ್ಯಾಹ್ನ 15 ಹಿಂದೂಗಳಿಂದ ಶಿವಲಿಂಗ ಪೂಜೆ ಮಾಡುವುದಕ್ಕೆ ಅನುಮತಿ ನೀಡಿದೆ. ಇನ್ನೂ ಶಿವಲಿಂಗ ಪೂಜೆ ಮಾಡುವವರ 15 ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಆಂದೋಲಾ ಸಿದ್ದಲಿಂಗ ಸ್ವಾಮಿ ಸೇರಿದಂತೆ 15 ಜನರ ಹೆಸರು, ಆಧಾರ್ ಕಾರ್ಡ್ ಅನ್ನು ಹೈಕೋರ್ಟ್ ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ. ಇದಲ್ಲದೇ 15 ಮಂದಿ ಮುಸ್ಲಿಂ ಸಮುದಾಯದವರಿಗೂ ಪ್ರಾರ್ಥನೆ ಮಾಡುವುದಕ್ಕೆ ಹೈಕೋರ್ಟ್ ಅನುಮತಿಸಿದೆ. ಈ ಮೂಲಕ ಕಲಬುರ್ಗಿ ನಗರದಲ್ಲಿರುವಂತ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಹಿಂದೂ ಮುಸ್ಲೀಂರಿಗೆ ಪೂಜೆ, ಪ್ರಾರ್ಥನೆಗೆ ಅವಕಾಶ ನೀಡಿದೆ. https://kannadanewsnow.com/kannada/shivamogga-soraba-municipality-revenue-inspector-vinayak-trapped-by-lokayukta/ https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/
ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿನ ಮೊದಲ ಚಾಲಕ ರಹಿತ ರೈಲು ಸಂಚಾರದ ಕುರಿತು ಬಿಎಂಆರ್ ಸಿಎಲ್ ನಿಂದ ಮಹತ್ವದ ಅಪ್ ಡೇಟ್ ನೀಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ BMRCL, ಚೀನಾದ ಸಿ.ಆರ್.ಆರ್.ಸಿ (CRRC) ತಯಾರಿಸಿದ ಮೊದಲ ಮಾದರಿಯ ಆರು ಬೋಗಿ ಮೆಟ್ರೋ ರೈಲು ಎಲೆಕ್ಟ್ರಾನಿಕ್ ಸಿಟಿ ಹತ್ತಿರದಲ್ಲಿರುವ ಹೆಬ್ಬಗೋಡಿ ಮೆಟ್ರೋ ಡಿಪೋ ಗೆ ದಿನಾಂಕ 14 ಫೆಬ್ರವರಿ 2024 ರಂದು ಆಗಮಿಸಿದೆ. ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ ಬಹು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗಾಗಿ ಪರೀಕ್ಷಾ ಟ್ರ್ಯಾಕ್‌ಗೆ ತೆರಳುವ ಮೊದಲು ಬೋಗಿಗಳನ್ನು ಜೋಡಿಸಲಾಗಿದೆ. ನಂತರ, ಅದನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸುಮಾರು 37 ಮಾದರಿಯ ಪರೀಕ್ಷೆಗಳು ನಾಲ್ಕು ತಿಂಗಳವರೆಗೆ ನಡೆಯಲಿದೆ. ತದನಂತರ 45 ದಿನಗಳವರೆಗೆ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಇತ್ಯಾದಿಗಳೊಂದಿಗೆ ಸಿಸ್ಟಮ್ ಏಕೀಕರಣ ಪರೀಕ್ಷೆಗಳು ನಡೆಯಲಿವೆ. ಶಾಸನಬದ್ಧ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಡಿಸೈನ್ಸ್ ಮತ್ತು…
ಶಿವಮೊಗ್ಗ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪ್ರತಿಭಾ ಎಂ ನಾಯ್ಕ ಕೋಂ ಮಹೇಶ್ ನಾಯ್ಕ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇ-ಸ್ವತ್ತು ಮಾಡಿಸಲು ಲಂಚದ ಪಡೆದ ಸೊರಬ ಪುರಸಭೆ ಕಂದಾಯ ನಿರೀಕ್ಷಕ ವಿನಾಯಕ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿ ಕ.ಲೋ. ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಶ್ರೀಮತಿ ಪ್ರತಿಭಾ ಎಂಬುವವರ ಹಳೇ ಸೊರಬ ಪುರಸಭೆ ವ್ಯಾಪ್ತಿಯಲ್ಲಿ ಇರುವ ಖಾಲಿ ನಿವೇಶನದ ಇ-ಸ್ವತ್ತು ಮಾಡಿಸಲು ಕಂದಾಯ ನಿರೀಕ್ಷಕ ವಿನಾಯಕರವರನ್ನು ಭೇಟಿ ಮಾಡಿ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಸಂದರ್ಭ ಕಂದಾಯ ನಿರೀಕ್ಷಕರು 40000/- ರೂ.ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಅರ್ಜಿದಾರರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ. ಈ ದೂರಿನನ್ವಯ ಪೊಲೀಸ್ ನಿರೀಕ್ಷಕ ಪ್ರಕಾಶ್‍ರವರ ತಂಡವು ಈತನನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಹಿಡಿದು ಹಣವನ್ನು ಜಪ್ತಿ ಮಾಡಿ, ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿರುತ್ತಾರೆ. ಈ ಕಾರ್ಯಾಚರಣೆಯನ್ನು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ…
ಶಿವಮೊಗ್ಗ : ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ದಾವಣೆಗೆರೆ ನಗರದ ಪಿ.ಬಿ.ರಸ್ತೆ, ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಮಾ.11 ಮತ್ತು 12 ರಂದು ರೈತರಿಗೆ ಕುರಿ/ಮೇಕೆ ಸಾಕಾಣಿಕೆ ತರಬೇತಿಯನ್ನು ಆಯೋಜಿಸಿದೆ. ಈ ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ತರಬೇಕು ಎಂದು ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ.ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ವಿವರಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಇವರ ದೂರವಾಣಿ ಸಂಖ್ಯೆ: 08192-233787 ಗೆ ಸಂಪರ್ಕಿಸುವುದು. https://kannadanewsnow.com/kannada/good-news-for-nwkrtc-staff-cashless-medical-treatment-in-collaboration-with-kims/ https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/
ಬೆಂಗಳೂರು: ಕಿಮ್ಸ್ ಸಹಯೋಗದೊಂದಿಗೆ ವಾಕರಸಾಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಅವರ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ NWKRTC ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ನಿಗಮವು, ಸಂಸ್ಥೆಯು ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಒಟ್ಟು 21120 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು 15000 ನೌಕರರು ಚಾಲಕ-ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. > ನೌಕರರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅವಶ್ಯಕತೆಯನುಸಾರ ವೈದ್ಯಕೀಯ ಮುಂಗಡ ನೀಡಲಾಗುತ್ತಿದೆ. > ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗಗಳಿಂದ 4401 ಪ್ರಕರಣಗಳಲ್ಲಿ ರೂ.523.47 ಲಕ್ಷ ಮೊತ್ತದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲಾಗಿದೆ. ನೌಕರರಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ದರ್ಜೆಯ ಚಿಕಿತ್ಸೆಗಾಗಿ 106 ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರವು ಗುರುತಿಸಿರುವ 380 ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ. ನೌಕರರು…
ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯಿಂ ಯಶವಂತಪುರ-ವಿಜಯಪುರ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಈ ಕೆಳಗಿನ ರೈಲುಗಳ ಸಂಚಾರದ ಅವಧಿ ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ: ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (ರೈ.ಸಂ.06545) ರೈಲನ್ನು ಜೂನ್ 30, 2024 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಮಾರ್ಚ್ 3, 2024 ರವೆರೆಗೆ ಓಡಿಸಲು ಸೂಚನೆ ನೀಡಲಾಗಿತ್ತು. ವಿಜಯಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (ರೈ.ಸಂ.06546) ರೈಲನ್ನು ಜುಲೈ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಏಪ್ರಿಲ್ 1, 2024 ರವೆರೆಗೆ ಓಡಿಸಲು ಸೂಚನೆ ನೀಡಲಾಗಿತ್ತು. ಈ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/ https://kannadanewsnow.com/kannada/gauri-naik-digs-well-for-anganwadi-children-to-fetch-water/
ಬೆಂಗಳೂರು: ಬೆಂಗಳೂರು ನಗರದ ಬೃಹತ್ ಕಟ್ಟಡ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಅದನ್ನು ಪುನರ್ಬಳಕೆಗಾಗಿ ಮಾರಾಟ ಮಾಡಲು ಅವಕಾಶ ನೀಡುವ ಕುರಿತಂತೆ ಮಾನದಂಡಗಳನ್ನು ರೂಪಿಸಿ 1 ವಾರದೊಳಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದ 123 ಕೊಠಡಿಯಲ್ಲಿ ವೆಟ್ ಲ್ಯಾಂಟ್ ಅಥಾರಿಟಿ (ಕರ್ನಾಟಕ ಚೌಗುಭೂಮಿ ಪ್ರಾಧಿಕಾರ)ದ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸೂಕ್ತ ರೀತಿಯಲ್ಲಿ ನೀರು ಸಂಸ್ಕರಿಸಿದರೆ ಬೆಂಗಳೂರು ನಗರದಲ್ಲಿ ನಿತ್ಯ 250ರಿಂದ 300 ಎಂ.ಎಲ್.ಡಿ.ಯಷ್ಟು ನೀರು ಮರು ಬಳಕೆಗೆ ಲಭಿಸಲಿದೆ. ಆದರೆ ಈ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು. ಮಾರಾಟ ಮಾಡಲಾಗುವ ಮರುಬಳಕೆ ನೀರಿನ…
ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಎಎಯಿಂದ ಇಂದು ಆರೋಪಿಯ ಪೋಟೋ ಬಿಡುಗಡೆ ಮಾಡಲಾಗಿದೆ. ಜೊತೆಗೆ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಷ್ಟ್ರೀಯ ತನಿಖಾ ದಳವು ( NIA) ಈ ಪೋಟೋದಲ್ಲಿ ಇರುವಂತ ವ್ಯಕ್ತಿ ದಿನಾಂಕ 01-03-2024ರಂದು ರಾಮೇಶ್ವರಂ ಕೆಫೆಯಲ್ಲಿ ಉಂಟಾದಂತ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ. ಈತ ಮೋಸ್ಟ್ ವಾಂಟೆಂಡ್ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದೆ. ಇನ್ನೂ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಈ ಸಂಬಂಧ ಮಾಹಿತಿಗಾಗಿ ಸಂಪರ್ಕಿಸಿ 080-29510900, 8904241100ಗೆ ಕರೆ ಮಾಡಿ. ಇಲ್ಲವೇ info.blr.nia@gov.in ಗೆ ಮೇಲ್ ಕೂಡ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದೆ. https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/ https://kannadanewsnow.com/kannada/gauri-naik-digs-well-for-anganwadi-children-to-fetch-water/
ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಇಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಬಾಂಬರ್ ಪೋಟೋವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕೇವಲ ಐದು ಸೆಕೆಂಡುಗಳಲ್ಲಿ 2 ಬಾರಿ ಬಾಂಬ್ ಸ್ಪೋಟಗೊಳಿಸಲಾಗಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದರು. ರಾಜ್ಯ ಸರ್ಕಾರದಿಂದ ಆರಂಭದಲ್ಲಿ ಈ ಪ್ರಕರಣವನ್ನು ಸಿಸಿಬಿಗೆ ವಹಿಸಿತ್ತು. ಆ ಬಳಿಕ ವಿಪಕ್ಷಗಳ ಒತ್ತಾಯಕ್ಕೆ ಮಣಿದು ಎನ್ಐಎ ತನಿಖೆಗೆ ವಹಿಸಲಾಗಿತ್ತು. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದಂತ ಎನ್ಐಎ ಅಧಿಕಾರಿಗಳು ಇಂದು ಬಾಂಬರ್ ಪೋಟೋವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಆತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. https://kannadanewsnow.com/kannada/fsl-report-of-private-firms-will-not-be-recognised-cm/ https://kannadanewsnow.com/kannada/breaking-in-yet-another-shocking-incident-in-the-state-a-case-of-73-foeticide-has-come-to-light-in-nelamangala/