Subscribe to Updates
Get the latest creative news from FooBar about art, design and business.
Author: kannadanewsnow09
BREAKING: ಲೈಂಗಿಕ ಕಿರುಕುಳ ಕೇಸಲ್ಲಿ ‘ಜಾನಿ ಮಾಸ್ಟರ್’ಗೆ ತಾತ್ಕಾಲಿಕ ರಿಲೀಫ್: ‘ಕೋರ್ಟ್’ನಿಂದ 5 ದಿನ ಜಾಮೀನು ಮಂಜೂರು
ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಂತ ಜಾನಿ ಮಾಸ್ಟರ್ ಅವರಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಐದು ದಿನಗಳ ಕಾಲ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ತಮಿಳಿನ ತಿರುಚಿತ್ರಬಲಂ ಸಿನಿಮಾದ ಕೋರಿಯೋಗ್ರಫಿಗಾಗಿ ಜಾನಿ ಮಾಸ್ಟರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಈ ರಾಷ್ಟ್ರಪ್ರಶಸ್ತಿ ಸಮಾರಂಭ ಅಕ್ಟೋಬರ್.6ರಿಂದ 10ರವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗಲು ಜಾನಿ ಮಾಸ್ಟರ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿದೆ. ಅಂದಹಾಗೇ ಮಹಿಳೆಯೊಬ್ಬರು ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಕೇಸ್ ದಾಖಲಿಸಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 376, 506, 323ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತೆಲುಗಿನ ಖ್ತಾಯ ನೃತ್ಯ ಸಂಯೋಜಕರಾಗಿರುವಂತ ಜಾನಿ ಮಾಸ್ಟರ್, ಕನ್ನಡ ಸಿನಿಮಾಗಳಲ್ಲಿಯೂ ಕೋರಿಯೋಗ್ರಾಫಿ ಮಾಡುತ್ತಿದ್ದಾರೆ. https://kannadanewsnow.com/kannada/big-update-i-have-not-received-any-notice-from-ed-minister-byrathi-suresh/ https://kannadanewsnow.com/kannada/breaking-jailed-actor-darshan-has-swelling-in-the-back-of-his-back-doctors-instruct-him-to-undergo-a-scan/
ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್ಲೈನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಟಿ ಅಪ್ಲಿಕೇಶನ್ಗಳ ಉನ್ನತೀಕರಣಕ್ಕೆ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಪ್ಲಿಕೇಶನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಪಿಡಿಎಸ್ ಐಟಿ ಹಂತ-2ರ ಯೋಜನೆಯ ಭಾಗವಾಗಿ ಆರ್ಎಪಿಡಿಆರ್ಪಿ ಅಪ್ಲಿಕೇಷನ್ ಸೇವೆ ಲಭ್ಯ ಇರುವುದಿಲ್ಲ. ಸಿಸ್ಟಂ ಡೌನ್ಟೈಮ್ ಅಕ್ಟೋಬರ್ 4ರ ರಾತ್ರಿ 9ರಿಂದ ಆರಂಭವಾಗಿ 7ರ ಬೆಳಗ್ಗೆ 6ಕ್ಕೆ ಕೊನೆಗೊಳ್ಳುತ್ತದೆ. ಐಟಿ ಮೂಲಸೌಕರ್ಯ ವರ್ಧನೆ ಮತ್ತು ಕಾರ್ಯಾಚರಣೆ ಪ್ರದೇಶಗಳಲ್ಲಿ ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯ ಕೈಗೊಂಡಿದೆ. 2024ರ ಮಾರ್ಚ್ 20 ರಂದು ಬಿಐಪಿ ಮತ್ತು ಡಬ್ಲ್ಯುಎಸ್ಎಸ್ಗೆ ನವೀಕರಣಗಳೊಂದಿಗೆ ಒರಾಕಲ್ ಸಿಸಿಬಿಯನ್ನು ಆವೃತ್ತಿ 2.3 ರಿಂದ 2.8 ಕ್ಕೆ ಯಶಸ್ವಿಯಾಗಿ ಅಪ್ಗ್ರೇಡ್ ಮಾಡುವುದರೊಂದಿಗೆ ಹಂತ-1 ಅನ್ನು…
ಡಮಾಸ್ಕಸ್: ಭದ್ರತಾ ಪ್ರಧಾನ ಕಚೇರಿ ಮತ್ತು ರಾಯಭಾರ ಕಚೇರಿಗಳ ನೆಲೆಯಾಗಿರುವ ನೆರೆಹೊರೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಬುಧವಾರ ಮೂವರು ಸಾವನ್ನಪ್ಪಿದ್ದಾರೆ ಎಂದು ಮೇಲ್ವಿಚಾರಕರು ತಿಳಿಸಿದ್ದಾರೆ. “ಹಿಜ್ಬುಲ್ಲಾ ನಾಯಕರು ಮತ್ತು ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಆಗಾಗ್ಗೆ ಭೇಟಿ ನೀಡುವ ಮಝೆಹ್ ನೆರೆಹೊರೆಯ ವಸತಿ ಕಟ್ಟಡದ ಫ್ಲ್ಯಾಟ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯು ದಾಳಿ ನಡೆಸಿದೆ” ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಇದು ಕನಿಷ್ಠ ಮೂರು ಜನರನ್ನು ಕೊಂದಿದೆ, ಅವರಲ್ಲಿ ಇಬ್ಬರು ವಿದೇಶಿಯರು ಎಂದು ಮಾನಿಟರ್ ತಿಳಿಸಿದೆ. ಇಸ್ರೇಲಿ ಶತ್ರುಗಳು ವಾಯುದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲವನ್ನು ಉಲ್ಲೇಖಿಸಿ ಸರ್ಕಾರಿ ಸುದ್ದಿ ಸಂಸ್ಥೆ ಸನಾ ಹೇಳಿದೆ. ಮಝೆಹ್ ನೆರೆಹೊರೆಯ ವಸತಿ ಕಟ್ಟಡಗಳಲ್ಲಿ ಒಂದನ್ನು ಗುರಿಯಾಗಿಸಿಕೊಂಡಿದೆ “. ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರದ ಮುಷ್ಕರವು ಮಂಗಳವಾರದ ಮುಷ್ಕರದಿಂದ ಸುಮಾರು 500 ಮೀಟರ್ (ಗಜಗಳು) ದೂರದಲ್ಲಿದೆ. ಈ ಹಿಂದಿನ ದಾಳಿಯಲ್ಲಿ…
ಬೆಂಗಳೂರು: ಕುಮಾರಸ್ವಾಮಿರವರು ರಾಜ್ಯದಲ್ಲಿ ಪ್ರತೀ ದಿನ ತಮ್ಮ ಮೇಲೆ ತನಿಖೆ ಮಾಡುವ ಅಧಿಕಾರಿಗಳನ್ನು ತೇಜೋವದೆ ಮಾಡುವ ಕೆಲಸಕ್ಕೆ ಮುಂದಾಗಿರುತ್ತಾರೆ. ಇವರ ಸುಳ್ಳಿನ ಆರೋಪಕ್ಕೆ ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಉತ್ತರ ನೀಡಿರುತ್ತಾರೆ. ಮಾನ್ಯ ಕುಮಾರಸ್ವಾಮಿರವರು ಪದೇ ಪದೇ ತನಿಖಾ ಸಂಸ್ಥೆಗಳ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮತ್ತು ಬೆದರಿಕೆ ಹಾಕುವ ಪ್ರಯತ್ನವನ್ನು ಕೈಬಿಡಲಿ ಎಂಬುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರು ಹಾಗೂ ಮಾಜಿ ಪರಿಷತ್ ಸದಸ್ಯರಾದಂತ ರಮೇಶ್ ಬಾಬು ತಿಳಿಸಿದ್ದಾರೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೇಂದ್ರ ಸಚಿವರಾದ ಹೆಚ್. ಡಿ ಕುಮಾರಸ್ವಾಮಿರವರು ಮೂಡ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಮತ್ತು ಮೂಡ ಆಯುಕ್ತರನ್ನು ರಾಜಕೀಯವಾಗಿ ಟೀಕಿಸಿರುವುದು ಅವರ ಹತಾಶವದದ ಸಂಕೇತವಾಗಿರುತ್ತದೆ ಎಂದಿದ್ದಾರೆ. ತನಿಖಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಮೂಗಿನ ನೇರಕ್ಕೆ ವರ್ತಿಸುವ ರೀತಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.…
ದಾವಣಗೆರೆ : ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಮುಂದಿನ ನಾಲ್ಕೈದು ತಿಂಗಳು ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಹಲವು ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೇರ ರೈಲು ಮಾರ್ಗವು ನಿಧಾನಗತಿಯಲ್ಲಿ ಸಾಗುತ್ತಿದ್ದು ಕಳೆದ ಎರಡೂವರೆಗೆ ತಿಂಗಳಿಂದ ಇದರ ಪ್ರಗತಿ ವೇಗ ಹೆಚ್ಚಿಸಲಾಗಿದೆ. ಒಟ್ಟು ಈ ಯೋಜನೆಗೆ 2406.73 ಎಕರೆ ಭೂಮಿ ಬೇಕಾಗಿದ್ದು ಈಗಾಗಲೇ 2119.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 287.54 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಹಾದುಹೋಗುವ 263.78 ಎಕರೆ ಜಮೀನಿನಲ್ಲಿ 246.20 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 17.58 ಎಕರೆಯ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ ಎಂದರು. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ…
ಜೆರುಸಲೇಂ: ಲೆಬನಾನ್ನಲ್ಲಿ ಬುಧವಾರ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಇದು ಹಿಜ್ಬುಲ್ಲಾವನ್ನು ಗುರಿಯಾಗಿಸಲು ತನ್ನ ಪಡೆಗಳು ಗಡಿಯನ್ನು ದಾಟಿದ ನಂತರ ಮೊದಲ ನಷ್ಟವಾಗಿದೆ. ಇದಕ್ಕೂ ಮುನ್ನ, ಇಸ್ರೇಲಿ ಸೇನಾ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಅವರು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು, ಇದು ಲೆಬನಾನ್ನಲ್ಲಿ ತನ್ನ ನೆಲದ ಕಾರ್ಯಾಚರಣೆಯಲ್ಲಿ ಮೊದಲ ಇಸ್ರೇಲಿ ಯುದ್ಧ ಸೋಲನ್ನು ಸೂಚಿಸುತ್ತದೆ. “ಇನ್ನೂ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಐಡಿಎಫ್ (ಇಸ್ರೇಲಿ ಸೇನೆ) ಘೋಷಿಸಿದೆ” ಎಂದು ಲೆಬನಾನ್ನಲ್ಲಿ ಮೊದಲ ಸೈನಿಕನ ಮರಣವನ್ನು ಘೋಷಿಸಿದ ನಂತರ ಅದು ಹೇಳಿಕೆಯಲ್ಲಿ ತಿಳಿಸಿದೆ. “ಕ್ಯಾಪ್ಟನ್ ಈಟನ್ ಇಟ್ಜಾಕ್ ಓಸ್ಟರ್, ವಯಸ್ಸು 22 … ಲೆಬನಾನ್ ನಲ್ಲಿ ನಡೆದ ಯುದ್ಧದ ವೇಳೆ ಪತನಗೊಂಡಿದೆ’ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನೀಡದೆ ಓಸ್ಟರ್ ಅವರನ್ನು ಬುಧವಾರ ಕೊಲ್ಲಲಾಗಿದೆ ಎಂದು ಮಿಲಿಟರಿ ವೆಬ್ಸೈಟ್ ತಿಳಿಸಿದೆ. ದಕ್ಷಿಣ ಗಡಿ ಗ್ರಾಮದೊಳಗೆ ನುಸುಳಿದ್ದ ಇಸ್ರೇಲಿ ಪಡೆಗಳೊಂದಿಗೆ ತನ್ನ ಹೋರಾಟಗಾರರು ಘರ್ಷಣೆ ನಡೆಸುತ್ತಿದ್ದಾರೆ…
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಒತ್ತಾಯಿಸುತ್ತಾರೆ. ಮಾನ್ಯ ಆರ್ ಅಶೋಕ್ ಅವರೇ ಸ್ವತಃ ಅಕ್ರಮ ಭೂ ವಂಚನೆ ಕೇಸಿಗೆ ಫಿಟ್ಟಾಗಿ ಹೈಕೋರ್ಟ್ ಮೆಟ್ಚಿಲೇರಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಮಾನ್ಯ ಸತ್ಯವಂತ ನೀತಿವಂತ ಅಶೋಕ್ ಅವರೇ… ನೀವು ಮೊದಲು ರಾಜೀನಾಮೆ ಕೊಡಿ ಎಂಬುದಾಗಿ ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಉದಾಹರಣೆ ಸಂಪೂರ್ಣ ಸರ್ಕಾರೀ ಒಡೆತನದಲ್ಲಿದ್ದ ಲೊಟ್ಟೆಗೊಲ್ಲಹಳ್ಳಿ (ಡಾಲರ್ಸ್ ಕಾಲೋನಿ ಪಕ್ಕ) ಜಮೀನನ್ನು ಅಕ್ರಮವಾಗಿ ಬಿಡಿಗಾಸಿಗೆ ಖರೀದಿಸಿ, ಅಕ್ರಮವಾಗಿ ಸಂಬಂಧಪಡದ ವ್ಯಕ್ತಿಯಿಂದ ಅರ್ಜಿ ಕೊಡಿಸಿ, ಯಡಿಯೂರಪ್ಪನವರಿಂದ ಡೀನೋಟಿಫಿಕೇಷನ್ ಮೂಲ ಮಾಲೀಕರಿಗೆ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರ್.ಅಶೋಕ್, ಸಿಕ್ಕಿ ಹಾಕಿಕೊಂಡು ಎಫ್ಐಆರ್ ಆದಾಗ ಯಾವ ರಾಜೀನಾಮೆಯನ್ನೂ ನೀಡಲಿಲ್ಲ ಎಂದಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದಾಗ ಇದ್ದಕ್ಕಿದ್ದಂತೆ ತನ್ನದಲ್ಲದ ಸರ್ಕಾರಿ ಜಮೀನನ್ನೇ ಬಿಡಿಎಗೆ ದಾನಪತ್ರ ಮಾಡಿ ಕೊಟ್ಟರು. ಈಗ ಸ್ವಂತ ಜಮೀನಿಗೆ ಕಾನೂನು ಪ್ರಕಾರ ಸೈಟು ಪರಿಹಾರ ಪಡೆದುಕೊಂಡಿದ್ದ ಪಾರ್ವತಮ್ಮನವರು, ಕ್ಷುಲ್ಲಕ…
ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್ಲೈನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಟಿ ಅಪ್ಲಿಕೇಶನ್ಗಳ ಉನ್ನತೀಕರಣಕ್ಕೆ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಪ್ಲಿಕೇಶನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಪಿಡಿಎಸ್ ಐಟಿ ಹಂತ-2ರ ಯೋಜನೆಯ ಭಾಗವಾಗಿ ಆರ್ಎಪಿಡಿಆರ್ಪಿ ಅಪ್ಲಿಕೇಷನ್ ಸೇವೆ ಲಭ್ಯ ಇರುವುದಿಲ್ಲ. ಸಿಸ್ಟಂ ಡೌನ್ಟೈಮ್ ಅಕ್ಟೋಬರ್ 4ರ ರಾತ್ರಿ 9ರಿಂದ ಆರಂಭವಾಗಿ 7ರ ಬೆಳಗ್ಗೆ 6ಕ್ಕೆ ಕೊನೆಗೊಳ್ಳುತ್ತದೆ. ಐಟಿ ಮೂಲಸೌಕರ್ಯ ವರ್ಧನೆ ಮತ್ತು ಕಾರ್ಯಾಚರಣೆ ಪ್ರದೇಶಗಳಲ್ಲಿ ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯ ಕೈಗೊಂಡಿದೆ. 2024ರ ಮಾರ್ಚ್ 20 ರಂದು ಬಿಐಪಿ ಮತ್ತು ಡಬ್ಲ್ಯುಎಸ್ಎಸ್ಗೆ ನವೀಕರಣಗಳೊಂದಿಗೆ ಒರಾಕಲ್ ಸಿಸಿಬಿಯನ್ನು ಆವೃತ್ತಿ 2.3 ರಿಂದ 2.8 ಕ್ಕೆ ಯಶಸ್ವಿಯಾಗಿ ಅಪ್ಗ್ರೇಡ್ ಮಾಡುವುದರೊಂದಿಗೆ ಹಂತ-1 ಅನ್ನು…
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಗೆ ಈಗಾಗಲೇ ಬಿಜೆಪಿಯಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಕೂಡ ರಾಜು ಪೂಜಾರಿಯವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಸಂಬಂಧ ಎಐಸಿಸಿ ಜನರಲ್ ಸೆಕ್ರೇಟರಿ ಕೆ.ಸಿ ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯ ಮೇರೆಗೆ ರಾಜು ಪೂಜಾರಿ ಅವರನ್ನು ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದಿದ್ದಾರೆ. https://kannadanewsnow.com/kannada/hundreds-of-crores-of-land-scam-bombs-against-r-ashoka-minister-parameshwara-releases-documents/ https://kannadanewsnow.com/kannada/note-how-many-times-can-the-address-be-changed-in-the-aadhaar-card-heres-the-information/
ಬೆಂಗಳೂರು: ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಹಗರಣದ ಹೊಸ ಬಾಂಬ್ ಅನ್ನು ಸಚಿವ ಡಾ.ಜಿ ಪರಮೇಶ್ವರ್ ಸಿಡಿಸಿದ್ದಾರೆ. ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದಂತ ಅವರು, ಮುಖ್ಯಮಂತ್ರಿಯವರ ಧರ್ಮಪತ್ನಿಯವರು ತಾವು ಕಳೆದುಕೊಂಡ ಜಮೀನಿಗೆ ಪರಿಹಾರ ರೂಪದಲ್ಲಿ ಬಂದಂತಹ ನಿವೇಶನಗಳನ್ನು ಮೂಡಾಗ ವಾಪಸ್ಸು ಕೊಟ್ಟಾಗ ಈ ವಿಷಯವನ್ನು ದೊಡ್ಡ ಅಪರಾಧವೆಂದು ಅಬ್ಬರಿಸುತ್ತಾ ವಿಪಕ್ಷ ನಾಯಕರಾದ ದಾನವೀರ ಸಾಮ್ರಾಟ ಶ್ರೀ ಆರ್. ಅಶೋಕ್ ಅವರ ಹಾಗೂ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಒಂದು ರೋಚಕ ರಿರ್ಟನ್ ಗಿಫ್ಟ್ ಕಥೆ ಇಲ್ಲಿದೆ ಎಂದರು. ನೂರಾರು ಕೋಟಿ ರೂ.ಗಳ ಲೊಟ್ಟೆಗೊಲ್ಲಹಳ್ಳಿ ಭೂ ಹಗರಣವನ್ನು ಮುಚ್ಚಿ ಹಾಕಿ ಅದರ ಮೇಲೆ ವಿಜೃಂಭಿಸುತ್ತಿರುವ ಬಿಜೆಪಿ ನಾಯಕರು. ಸರ್ಕಾರದ ಜಾಗವನ್ನೇ ಕಬಳಿಸಿ, ಸಿಕ್ಕಿ ಬೀಳುವ ಹಂತದಲ್ಲಿ ಕಬಳಿಸಿದ ಭೂಮಿಯನ್ನು ಸರ್ಕಾರಕ್ಕೆಗಿಫ್ಟ್ ಡೀಡ್ ಕೊಟ್ಟ ದಾನ ಶೂರ ಕರ್ಣ…