Subscribe to Updates
Get the latest creative news from FooBar about art, design and business.
Author: kannadanewsnow09
ಶುಕ್ರವಾರ ಮುತೈದೆಯರು ಈ ಕೆಲಸವನ್ನು ಮಾಡಿದರೆ ಸಾಕು ಮನೆಯಲ್ಲಿ ನೆಮ್ಮದಿಯ ಸುಖ ಸಂಸಾರದ ಜೀವನ ನಡೆಸಲು..!!! ೧] ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು. ೨] ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು, ೩] ಯಾವುದೇ ಕಾರಣಕ್ಕೂ ಸಂಧ್ಯಾ ಕಾಲದಲ್ಲಿ ಕಣ್ಣಲ್ಲಿ ನೀರು ಹಾಕಬಾರದು. ೪] ಮನೆಗೆ ಬಂದ ಹೆಂಗಸರಿಗೆ ಹರಿಶಿನ, ಕುಂಕುಮ, ಹೂಗಳನ್ನು ಕೊಟ್ಟೆ ಕಳಿಸಬೇಕು. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ೫] ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ…
ಚಿತ್ರದುರ್ಗ : ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗದ ಶ್ರೀ ಕ್ಷೇತ್ರ ಗೊಲ್ಲಗಿರಿ ಮಠದ ಶ್ರೀ ಕೃಷ್ಣ ಯಾದವನಂದ ಸ್ವಾಮಿಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ಈರಲಿಂಗೇಶ್ವರ ಸ್ವಾಮಿ ದೇವರ ನೂತನ ದೇವಸ್ಥಾನ ನಿರ್ಮಾಣದ ಅಡಿಪಾಯ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕತೆಯಿದೆ. ಈಗಾಗಲೇ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಡುಗೊಲ್ಲ ಕಡತಗಳಲ್ಲಿ ತೊಡಕುಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯ ಸರ್ಕಾರ, ಕಡತವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ದೇಶದ ಪರಂಪರೆಯಲ್ಲಿ ದೇವಸ್ಥಾನಗಳಿಗೆ ತನ್ನದೇ ಆದಂತಹ ಸ್ಥಾನಮಾನವಿದೆ. ಅದರಲ್ಲೂ ಕೂಡ ಕಾಡುಗೊಲ್ಲರು ಅನಾದಿಕಾಲದಿಂದಲೂ ದೇವರುಗಳಿಗೆ ಅತ್ಯಂತ ಭಕ್ತಿ ಮತ್ತು ಗೌರವದಿಂದ…
ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಇತರ ಎರಡು ಘಟಕಗಳ ಮೇಲೆ ಮಾರುಕಟ್ಟೆ ನಿಯಂತ್ರಕ ವಿಧಿಸಿದ್ದ ದಂಡವನ್ನು ರದ್ದುಗೊಳಿಸಿದ ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಆದೇಶದ ವಿರುದ್ಧ ಸೆಬಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. 2007ರ ನವೆಂಬರ್ ನಲ್ಲಿ ಹಿಂದಿನ ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್ (RPL)ನ ಷೇರುಗಳಲ್ಲಿ ಕುಶಲ ವ್ಯಾಪಾರ ಮಾಡಿದ ಆರೋಪ ಇತ್ತು. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ಪೀಠವು ಎಸ್‌ಎಟಿ ನೀಡಿದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಒಲವು ಹೊಂದಿಲ್ಲ ಎಂದು ಹೇಳಿದೆ. “2023 ರಲ್ಲಿ ಆಕ್ಷೇಪಾರ್ಹ ಆದೇಶವನ್ನು ಅಂಗೀಕರಿಸಲಾಯಿತು, ಅದನ್ನು 2023ನೇ ಇಸವಿಯಲ್ಲಿ ಪ್ರಶ್ನಿಸಲಾಯಿತು ಹಾಗೂ ಒಂದು ವರ್ಷದ ನಂತರ ಈಗ ವಿಷಯವನ್ನು ಪ್ರಸಾರ ಮಾಡಲಾಗುತ್ತಿದೆ. “ನಮ್ಮ ಹಸ್ತಕ್ಷೇಪವನ್ನು ಸಮರ್ಥಿಸುವ ಈ ಮೇಲ್ಮನವಿಯಲ್ಲಿ ಕಾನೂನಿನ ಪ್ರಶ್ನೆಯೇ ಇಲ್ಲ. ಇದನ್ನು ವಜಾಗೊಳಿಸಲಾಗಿದೆ. ನೀವು ಅಂತಹ ವ್ಯಕ್ತಿಯನ್ನು ವರ್ಷಗಳವರೆಗೆ ಬೆನ್ನಟ್ಟಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ. ಸೆಬಿಯು ಡಿಸೆಂಬರ್ 4,…
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಬಲಾಡಿ ಕಲ್‌ತ್ತೋಡ್ಮಿ ಮನೆಯವರ ಹಾಗೂ ಕುಟುಂಬಸ್ಥರ ಮೂಲನಾಗಬನದಲ್ಲಿ ನಡೆಯಲಿರುವ ಚತುಃ ಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಮುಹೂರ್ತ ದರ್ಶನ, ಚಪ್ಪರ ಮುಹೂರ್ತ ಕಾರ್ಯಕ್ರಮ ವೇದಮೂರ್ತಿ ಶಂಕರನಾರಾಯಣ ಉಡುಪ ಬಲಾಡಿ, ವೇದಮೂರ್ತಿ ಶ್ರೀನಿವಾಸ ಅಡಿಗ ಸೌಕೂರು ಹಾಗೂ ವೇದಮೂರ್ತಿ ವಿನಾಯಕ ಉಡುಪ ಬಲಾಡಿ ಅವರ ನೇತೃತ್ವದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿದೆ. ನಾವಪಾತ್ರಿ ಸುದರ್ಶನ ಉಡುಪ ಮೂಡುಗೋಪಾಡಿ ಅವರು ಮುಹೂರ್ತ ದರ್ಶನವನ್ನು ನೆರವೇರಿಸಿ ಪ್ರಸಾದ ವಿತರಿಸಿದರು. ನಾಗಮಂಡಲೋತ್ಸವದ ವೈದ್ಯರಾದ ಸರ್ವೋತ್ತಮ ವೈದ್ಯ ಅಂಪಾರು, ಪಾಕತಜ್ಞರಾದ ಸುರೇಶ್ ಉಡುಪ ಶಾನ್ಕಟ್ ವಾದ್ಯವೃಂದದವರ ಪರವಾಗಿ ಸುದರ್ಶನ ದೇವಾಡಿಗ ಹಳ್ನಾಡು, ಮಂಡಲ ಚಪ್ಪರ, ಶ್ಯಾಮಿಯಾನ, ಅಡುಗೆ ಪಾತ್ರೆ, ಆಸನ ವ್ಯವಸ್ಥೆಯ ಪರವಾಗಿ ಹುಣ್ಸೆಮಕ್ಕಿ- ಜಪ್ತಿ ಮಣಿಕಂಠ ಶಾಮಿಯಾದ ಪರವಾಗಿ ಮಂಜುನಾಥ ಕಾಂಚನ್ ಹಾಗೂ ರಾಘವೇಂದ್ರ, ದೀಪಾಲಂಕಾರದ ನೆರವೇರಿಸುವ ಕಂದಾವರ ಉಳ್ಳೂರು ಕಾರ್ತಿಕೇಯ ಸೌಂಡ್ಸ್ & ಲೈಟಿಂಗ್ಸ್‌ನ ಕುಮಾರ ದೇವಾಡಿಗ, ಪುಷ್ಪಾಲಂಕಾರ ನೆರವೇರಿಸುವ ಬಸ್ರೂರು ಶ್ರೀ ಮೂಕಾಂಬಿಕಾ ಆರ್ಟ್ಸ್ & ಡೆಕೋರೇಟರ್ಸ್…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಇನ್ನೂ ಅಧ್ಯಕ್ಷರು, ರಾಜ್ಯ ಪರಿಷತ್ ಸ್ಥಾನದ ಅಂತಿಮ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದಾರೆ. ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಗರ ತಾಲ್ಲೂಕು ಶಾಖೆಯ ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಧ್ಯಕ್ಷರ ಸ್ಥಾನದಲ್ಲಿ ಅಂತಿಮ ಕಣದಲ್ಲಿ ಸುರೇಶ್.ಎಸ್.ಕೆ ಹಾಗೂ ಸಂತೋಷ್ ಕುಮಾರ್.ಎನ್ ಇದ್ದಾರೆ. ಇನ್ನುಳಿದಂತ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯ ಪರಿಷತ್ ಸ್ಥಾನಗಳಿಗೆ ಅಂತಿಮ ಕಣದಲ್ಲಿ ದೇವೇಂದ್ರಪ್ಪ.ಕೆ, ನಾಗರಾಜ್.ಕೆ ಹಾಗೂ ಮಂಜುನಾಥ ಎಂ.ಎಸ್ ಇದ್ದಾರೆ. ಖಜಾಂಚಿಯಾಗಿ ಅವಿರೋಧವಾಗಿ ಸಹದೇವ್ ಎಸ್ ಬಡಿಗೇರ್ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನದ ಅಂತಿಮ ಕಣದಲ್ಲಿರುವಂತ ಸುರೇಶ್ ಎಸ್ ಕೆ ಹಾಗೂ ಸಂತೋಷ್ ಕುಮಾರ್ ಎನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಕಲಬುರ್ಗಿಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ(ರಿ)ಯಲ್ಲಿ ನಡೆದಿದೆ ಎನ್ನಲಾದಂತ ಅಕ್ರಮಗಳ ಕುರಿತಂತೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ. ಇಂದು ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ನಡವಳಿಯನ್ನು ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ), ಕಲಬುರಗಿ ಇವುಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರಿನ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು, ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆ ನಡೆಸಿ ಆರೋಪಿತರ ಮಾಹಿತಿಯೊಂದಿಗೆ ಪರಿಪೂರ್ಣ ತನಿಖಾ ವರದಿಯನ್ನು ಸ್ಪಷ್ಟ ಅಭಿಪ್ರಾಯ/ಶಿಫಾರಸ್ಸಿನೊಂದಿಗೆ 15 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಿದೆ. ಅಲ್ಲದೆ, ತನಿಖಾಧಿಕಾರಿಗಳು ಈ ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕಾಗಿ ಅಗತ್ಯವಿರುವವರನ್ನು ತೆಗೆದುಕೊಳ್ಳತಕ್ಕದ್ದು ಮತ್ತು ತನಿಖೆಯ ವ್ಯಾಪ್ತಿಯಲ್ಲಿ ಮಂಡಳಿ ಮತ್ತು…
ಹಾವೇರಿ: ಶಿಗ್ಗಾಂವಿಯ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ವಿರುದ್ಧ ರೌಡಿ ಶೀಟ್ ಇದೆ ಎಂಬುದಾಗಿ ಹಾವೇರಿ ಎಸ್ಪಿ ಮಾಹಿತಿ ನೀಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೇ ಶಿಗ್ಗಾವಿ ಡಿಎಸ್ಪಿ ಹಾಗೂ ಪಿಐ ಕಚೇರಿಯ ದಾಖಲಾತಿಗಳಲ್ಲಿ ಯಾಸೀರ್ ಅಹ್ಮದ್ ವಿರುದ್ಧ ಯಾವುದೇ ರೌಡಿ ಶೀಟ್ ಇರುವುದಿಲ್ಲ ಎಂಬುದಾಗಿ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಹಾವೇರಿ ಜಿಲ್ಲಾ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯಾಸೀರ್ ಅಹ್ಮದ್ ತಂದೆ ಮೊಹ್ಮದ್ ಖಾನ್ ಪಠಾಣ, ಬೊಮ್ಮನಹಳ್ಳಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ ಇವರ ಮೇಲೆ ರೌಡಿ ಶೀಟ್ ಇದೆ ಅಂತ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇರುತ್ತದೆ ಎಂದಿದ್ದಾರೆ. ಡಿಎಸ್ಪಿ ಶಿಗ್ಗಾವಿ ಹಾಗೂ ಪಿಐ ಶಿಗ್ಗಾವಿ ಅವರ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿ, ಪ್ರಸ್ತುತ ಯಾಸೀರ್ ಅಹ್ಮದ್ ತಂದೆ ಮೊಹಮ್ಮದ್ ಖಾನ್ ಪಠಾಣ ಅವರ ಮೇಲೆ ಯಾವುದೇ ರೀತಿ ರೌಡಿ ಶೀಟ್ ಇರುವುದಿಲ್ಲ ಎಂಬುದಾಗಿ ಹಾವೇರಿ ಪೊಲೀಸ್ ಅಧೀಕ್ಷಕರು ಸ್ಪಷ್ಟ ಪಡಿಸಿದ್ದಾರೆ. https://kannadanewsnow.com/kannada/chitradurga-district-congress-working-president-shivu-yadav-campaigns-in-channapatna-seeks-votes-from-kadugollas/ https://kannadanewsnow.com/kannada/big-shock-to-those-who-parked-vehicles-in-no-parking-zone-in-sagar-police-issues-notice/
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದಂತ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಪೊಲೀಸರಿಂದ 6ಕ್ಕೂ ಹೆಚ್ಚು ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದು, ದಿನಾಂಕ 10-11-2024ರಂದು ಸಂಜೆ ಸುಮಾರು 5.54ಕ್ಕೆ ಸಾಗರ ಸರ್ಕಲ್ ಹತ್ತಿರ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದಂತ ಕೆಎ 15, ಎನ್ 2093 ಕಾರು ಮಾಲೀಕರಿಗೆ ಸಾರ್ವಜನಿಕರ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದ ಕಾರಣ ನೋಟಿಸ್ ನೀಡಲಾಗಿದೆ. ಇನ್ನೂ ನೋಟಿಸ್ ತಲುಪಿದ ಕೂಡಲೇ ಕಡ್ಡಾಯವಾಗಿ ವಾಹನ ಮತ್ತು ದಾಖಲಾತಿಗಳೊಂದಿಗೆ ಸಾಗರ ಪೇಟೆ ಠಾಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ 179, 201 ಐಎಂವಿ ಕಾಯ್ದೆ ಹಾಗೂ ಕೆಪಿ ಕಾಯ್ದೆ 1963ರ ರೀತಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗುವುದಾಗಿ ತಿಳಿಸಲಾಗಿದೆ. ಈ ವಾಹನದ ಮಾಲೀಕರಿಗೆ ಅಷ್ಟೇ ಅಲ್ಲದೇ ಜೆಸಿ ರಸ್ತೆಯ ಸಾಗರ ಸರ್ಕಲ್ ಬಳಿಯಲ್ಲಿನ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದಂತ ಕೆಎ17,…
ಚನ್ನಪಟ್ಟಣ: ಇಂದು ಚನ್ನಪಟ್ಟಣ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು. ಈ ವೇಳೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಕೀಲ ಸಿ.ಶಿವು ಯಾದವ್ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಅಲ್ಲದೇ ಕಾಡುಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿದಂತ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಇಂದು ಚಿತ್ರದುರ್ಗದಿಂದ ತೆರಳಿದಂತ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವು ಯಾದವ್ ಅವರು, ಚನ್ನಪಟ್ಟಣದಲ್ಲಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಪರವಾಗಿ ಮತಬೇಟೆಯನ್ನು ನಡೆಸಿದರು. ಚೆನ್ನಪಟ್ಟಣದ ನ್ಯಾಯಾಲಯದಲ್ಲಿ ಚೆನ್ನಪಟ್ಟಣ ವಕೀಲರ ಸಂಘದ ಅದ್ಯಕ್ಷರಾದ ಗಿರೀಶ್ ಮತ್ತು ಪದಾಧಿಕಾರಿಗಳೊಂದಿಗೆ ವಕೀಲರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಿ ಪಿ ಯೋಗೇಶ್ವರ ಪರ ಮತಯಾಚನೆ ಮಾಡಿದುವಂತೆ ಮನವಿ ಮಾಡಿದರು. ಇದಲ್ಲದೇ ಚನ್ನಪಟ್ಟಣದ ಅರಳಲ ಸಂದ್ರ, ವಿಟ್ಟನಹಳ್ಳಿ, ಬಾಚಳ್ಳಿ, ದೇವರಹೊಸಹಳ್ಳಿ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದಂತ ಅವರು, ಜನಾಂಗದ ಮುಖಂಡರೊಂದಿಗೆ ಮತ್ತು ಮಹಿಳೆಯರೊಂದಿಗೆ ಚರ್ಚಿಸಿದರು. ಕಾಡುಗೊಲ್ಲ ಜನಾಂಗಕ್ಕೆ ಅಸ್ಮಿತೆ ನೀಡಿದ್ದು…
ಬೆಂಗಳೂರು: ಇ-ಖಾತಾ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಇ-ಖಾತಾ ಪಡೆಯವು ಬಗ್ಗೆ ವೀಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ವ್ಯವಸ್ಥೆ: ನಗರದಲ್ಲಿ ಇ-ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ದಾಖಲೆಗಳನ್ನು ತೆಗದುಕೊಂಡು ಹೋಗಿ 45 ರೂ. ಪಾವತಿಸಿದರೆ ಇ-ಖಾತಾ ಸಿಗಲಿದೆ. ಇ-ಖಾತಾ ಪಡೆಯುವ ವೀಡಿಯೋ ಬಿಡುಗಡೆ: ನಾಗರೀಕರು ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಸಲುವಾಗಿ ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಈ ವೀಡಿಯೋ ನೋಡಿಕೊಂಡು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ. ಇದೇ ರೀತಿ ಇನ್ನಿತರೆ ವೀಡಿಯೋಗಳನ್ನು ಕೂಡಾ ಅಪ್ಲೋಡ್ ಮಾಡಲಿದ್ದು, ಪಾಲಿಕೆಯ ಯೂಟ್ಯೂಬ್ ಚಾನಲ್ ಅನ್ನು Subscribe ಮಾಡಿಕೊಳ್ಳಲು ನಾಗರೀಕರಲ್ಲಿ ಕೋರಿದೆ. ವಲಯವಾರು ಇ-ಖಾತಾ ಸಹಾಯವಾಣಿ ಸಂಖ್ಯೆಯ ವಿವರಗಳು: ಇ-ಖಾತಾ ಪಡೆಯಲು ತಾಂತ್ರಿಕ…