Author: kannadanewsnow09

ನವದೆಹಲಿ: ಏರ್ ಏಷ್ಯಾ ಏರ್ಲೈನ್ಸ್ ಮಾಲೀಕ ಎಐಎಕ್ಸ್ ಕನೆಕ್ಟ್ ಪ್ರೈವೇಟ್ ಲಿಮಿಟೆಡ್ ಅನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಲಿಮಿಟೆಡ್ ಕಂಪನಿಯೊಂದಿಗೆ ವಿಲೀನಗೊಳಿಸಲು ಚಂಡೀಗಢದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಮಂಗಳವಾರ ಅನುಮೋದನೆ ನೀಡಿದೆ. ನ್ಯಾಯಾಂಗ ಸದಸ್ಯ ಹರ್ನಾಮ್ ಸಿಂಗ್ ಠಾಕೂರ್ ಮತ್ತು ತಾಂತ್ರಿಕ ಸದಸ್ಯ ಎಲ್.ಎನ್.ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು ವಿಲೀನ ಪ್ರಸ್ತಾಪಕ್ಕೆ ಕಂಪನಿಗಳ ರಿಜಿಸ್ಟ್ರಾರ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಸೇರಿದಂತೆ ವಲಯ ನಿಯಂತ್ರಕರಿಂದ ಅನುಮೋದನೆ ನೀಡಲಾಗಿದೆ ಎಂದು ಗಮನಿಸಿದೆ. ಅದರಂತೆ, 2013 ರ ಕಂಪನಿಗಳ ಕಾಯ್ದೆಯ ಸೆಕ್ಷನ್ 230 ರಿಂದ 232 ರ ಅಡಿಯಲ್ಲಿ ಎನ್ಸಿಎಲ್ಟಿ ಮುಂದೆ ಸಲ್ಲಿಸಿದ ಎರಡು ಕಂಪನಿಗಳನ್ನು ವಿಲೀನಗೊಳಿಸುವ ಯೋಜನೆಗೆ ಅದು ಅವಕಾಶ ನೀಡಿತು. “ಅರ್ಜಿದಾರರ ಕಂಪನಿಗಳು ಮತ್ತು ಅವುಗಳ ಷೇರುದಾರರ ನಡುವೆ ಸೆಕ್ಷನ್ 230 ರಿಂದ 232 ಮತ್ತು ಕಂಪನಿಗಳ ಕಾಯ್ದೆ, 2013 ರ ಅನ್ವಯವಾಗುವ ಇತರ ನಿಬಂಧನೆಗಳ ಅಡಿಯಲ್ಲಿ ‘ವಿಲೀನ ಯೋಜನೆಗೆ’ ಈ ಮೂಲಕ ಅನುಮತಿ ನೀಡಲಾಗಿದೆ” ಎಂದು ನ್ಯಾಯಮಂಡಳಿ…

Read More

ಬೆಂಗಳೂರು: ಚಿತ್ರದುರ್ಗದಿಂದ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾನೆ ಎನ್ನುವಂತ ಒಂದೇ ಒಂದು ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ಡಿ ಬಾಸ್ ಅಂಡ್ ಗ್ಯಾಂಗ್ ಬಂದಿತ್ತು. ಅವರನ್ನು ಶೆಡ್ ಒಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ಹತ್ಯೆಗೈದಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸರೆಂಡರ್ ಆದವರಿಗೆ 5 ಲಕ್ಷ ಕೊಡುವುದಾಗಿ ಆಫರ್ ನೀಡಿದ್ರು ಎಂಬುದಾಗಿ ಹೇಳಲಾಗುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರಿಗೆ ಸರೆಂಡರ್ ಆದಂತ ಆರೋಪಿಗಳಿಗೆ ತನ್ನ ಗ್ಯಾಂಗ್ ಟೀಂ ಸದಸ್ಯರ ಮೂಲಕ 5 ಲಕ್ಷ ನೀಡುವ ಆಫರ್ ಕೊಟ್ಟಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ದೀಪಕ್ ಮೂಲಕ ಪ್ರದೋಶ್ ಗೆ ನಟ ದರ್ಶನ್ ಗೆ ಹಲ್ಲೆ ಮಾಡಿ, ಪೊಲೀಸರಿಗೆ ಸರೆಂಡರ್ ಆದಂತವರಿಗೆ ಐದು ಲಕ್ಷ ನೀಡುವುದಾಗಿ ಹಣದ ಆಫರ್ ನೀಡಿದ್ದರು ಎನ್ನಲಾಗುತ್ತಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ…

Read More

ಬೆಂಗಳೂರು: ದೇಶದಲ್ಲೇ ಪ್ರಥಮ ಎನ್ನುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಪಘಾತದಲ್ಲಿ ಮೃತರಾಗುವಂತ ನೌಕರರಿಗೆ 1 ಕೋಟಿ ವಿಮಾ ಪರಿಹಾರ ಘೋಷಣೆ ಮಾಡಿತ್ತು. ಅದರಂತೆ ಅಪಘಾತದಲ್ಲಿ ಮೃತಪಟ್ಟಂತ ನಾಲ್ವರು ಅವಲಂಭಿತರಿಗೆ ತಲಾ 1 ಕೋಟಿ ವಿಮಾ ಪರಿಹಾರವನ್ನು ವಿತರಿಸಲಾಗಿದೆ. ಇದಲ್ಲದೇ ಕುಟುಂಬ ಕಲ್ಯಾಣ ಯೋಜನೆಯಡಿ ಸೇವೆಯಲ್ಲಿದ್ದು ಮೃತಪಟ್ಟಂತ 23 ಮಂದಿ ನೌಕರರ ಅವಲಂಭಿತರಿಗೆ ತಲಾ 10 ಲಕ್ಷ ಪರಿಹಾರ ನೀಡಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಈ ವಿಮಾ ಪರಿಹಾರ ವಿತರಣೆ ಬಳಿಕ ಮಾತನಾಡಿದಂತ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು, ನಿಗಮದ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಪ್ರಯಾಣಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೃತಪಟ್ಟವರ ಜೀವ ಅಮೂಲ್ಯವಾದದ್ದು, ಅದನ್ನು ಮರಳಿ ತರಲಾಗುವುದಿಲ್ಲ. ಆದರೆ ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ನಿಗಮವು ರೂಪಿಸಿರುವ ಯೋಜನೆ ದೂರದೃಷ್ಠಿಯನ್ನು ಹೊಂದಿರುವುದಾಗಿ ತಿಳಿಸಿದರು. ಈ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ…

Read More

ಬೆಂಗಳೂರು: ನಟ ದರ್ಶನ್ ಅಂಡ್ ಟೀಂನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರ ವಶಕ್ಕೆ ಕೋರ್ಟ್ ನೀಡಿದೆ. ಈ ಆರೋಪಿಗಳನ್ನು ಮೂರು ಟೀಂ ಮಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿನ್ನೆ ಕೋರ್ಟ್ ಗೆ ಹಾಜರುಪಡಿಸಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಹೆಚ್ಚಿನ ವಿಚಾರಣೆಗಾಗಿ ಪಡೆದಿದ್ದರು. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸುತ್ತಿರೋ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಪ್ಲಾನ್ ಮಾಡಿ ಉತ್ತರ ನೀಡೋ ಸಾಧ್ಯತೆಯ ಬಗ್ಗೆ ಊಹೆ ಮಾಡಿರುವಂತ ಪೊಲೀಸರು, ಕೊಲೆ ಆರೋಪಿಗಳನ್ನು ಮೂರು ಟೀಂ ಮಾಡಿ, ವಿಚಾರಣೆ ನಡೆಸೋದಕ್ಕೆ ತಯಾರಿ ನಡೆಸಿದ್ದಾರೆ. ಪ್ಲಾನ್ ಮಾಡಿ ಉತ್ತರ ಕೊಡೋದಕ್ಕೆ ಅವಕಾಶ ನೀಡದಂತೆ ಮೂರು ಟೀಂಗಳನ್ನು ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಮಾಡಿ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.…

Read More

ಕುವೈತ್: ಕುವೈತ್ನ ದಕ್ಷಿಣ ಮಂಗಾಫ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಕುವೈತ್ ಸುದ್ದಿ ಸಂಸ್ಥೆ (ಕುನಾ) ತಿಳಿಸಿದೆ. ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡವು ಬೆಂಕಿಗೆ ಆಹುತಿಯಾಗಿದೆ. ಮುಂಜಾನೆ ಪ್ರಾರಂಭವಾದ ಬೆಂಕಿ ಬೇಗನೆ ಕಟ್ಟಡದಾದ್ಯಂತ ಹರಡಿತು, ಅನೇಕರನ್ನು ಒಳಗೆ ಸಿಲುಕಿಸಿತು. ಬೆಂಕಿಯಲ್ಲಿ ಸಾವನ್ನಪ್ಪಿದವರಲ್ಲಿ ಐವರು ಕೇರಳಿಗರು ಸೇರಿದ್ದಾರೆ ಎಂದು ಒನ್ಮನೋರಮಾ ವರದಿ ಮಾಡಿದೆ. ಬೆಂಕಿಯ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯಿಂದಾಗಿ ಸುಮಾರು 43 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದ ಐವರು ಸೇರಿದಂತೆ ಈವರೆಗೆ 35 ಮಂದಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ. https://kannadanewsnow.com/kannada/actress-harshika-ponacha-assault-case-court-rejects-anticipatory-bail-plea-of-accused/ https://kannadanewsnow.com/kannada/encounter-in-jammu-and-kashmirs-kathua-leaves-2-militants-1-crpf-personnel-dead/

Read More

ಬೆಂಗಳೂರು: ನಟಿ ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಅವರ ಕಾರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಹಲ್ಲೆ ನಡೆಸಿದ್ದರ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ನಟಿ ಹರ್ಷಿಕಾ ಪೊಣಚ್ಚ, ಭುನವ್ ಪೊನ್ನಣ್ಣ ಮೇಲೆ ಹಲ್ಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಅಂದಹಾಗೇ ಬೆಂಗಳೂರಿನ ಫ್ರೆಜರ್ ಟೌನ್ ಪ್ರದೇಶದ ಪುಲಕೇಶಿ ನಗರದ ಮಸೀದಿ ರಸ್ತೆಯಲ್ಲಿ ಕಾರು ತಡೆದಿದ್ದಂತ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು. ಈ ಸಂಬಂಧ ಫರ್ವೇಜ್ ಆಲಿ ಫಹೀಮ್, ಶಾಬಾಜ್ ಖಾನ್, ದನೀಶ್ ಆಲಿ ಫರ್ವೇಜ್ ಸೇರಿದಂತೆ ನಾಲ್ವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. https://kannadanewsnow.com/kannada/encounter-in-jammu-and-kashmirs-kathua-leaves-2-militants-1-crpf-personnel-dead/ https://kannadanewsnow.com/kannada/at-least-35-people-including-four-indians-killed-in-kuwait-fire/

Read More

ನವದೆಹಲಿ: ಕಥುವಾ ಜಿಲ್ಲೆಯ ಕೂಟಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕೆಲವೇ ಗಂಟೆಗಳ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಈ ಪ್ರದೇಶದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಹತ್ಯೆಗೀಡಾದ ಉಗ್ರ ಮಂಗಳವಾರ ರಾತ್ರಿ ತನ್ನ ಸಹಚರನ ಸಾವಿನ ನಂತರ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ನಂತರ ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಕೂಟಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಇಬ್ಬರು ಉಗ್ರರು ಕಳೆದ ರಾತ್ರಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ನೀರು ಕೇಳಿದ್ದರು, ನಂತರ ಅವರು ಗುಂಡು ಹಾರಿಸಿ ನಾಗರಿಕನನ್ನು ಗಾಯಗೊಳಿಸಿದ್ದರು. ಬುಧವಾರ ಬೆಳಿಗ್ಗೆ, ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕರು ಅರಣ್ಯ ಪ್ರದೇಶದಿಂದ ಜಂಟಿ ತಂಡದ ಮೇಲೆ ಗುಂಡು ಹಾರಿಸಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಕೊಂದಿದ್ದರು. ಅವರು ಹಾರಿಸಿದ ಕೆಲವು ಗುಂಡುಗಳು ಕಥುವಾ ಎಸ್ಎಸ್ಪಿ ಅನಾಯತ್ ಅಲಿ ಚೌಧರಿ ಅವರ ವಾಹನ ಮತ್ತು ಜಮ್ಮು-ಸಾಂಬಾ-ಕಥುವಾ ವಲಯದ ಡಿಐಜಿ ಡಾ.ಸುನಿಲ್ ಗುಪ್ತಾ ಅವರ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ತಮ್ಮ ವಶಕ್ಕೆ ಪಡೆದಿರುವಂತ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದರ್ಶನ್ ಅಭಿಮಾನಿಗಳ ದಂಡೇ ನೆರೆದಿದ್ದು, ಹೈಡ್ರಾಮಾವೇ ನಡೆದಿದೆ. ಹೀಗಾಗಿ ಪೊಲೀಸರಿಂದ ಅವರನ್ನು ನಿಯಂತ್ರಿಸೋದಕ್ಕೆ ಲಾಠಿ ಚಾರ್ಜ್ ಕೂಡ ಮಾಡಲಾಗಿದೆ. ಬೆಂಗಳೂರಿಗೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದು, ಆತ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದು, ಮೋರಿಗೆ ಎಸೆದಂತ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಇದೀಗ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡೋದಕ್ಕೆ ಪೊಲೀಸ್ ಠಾಣೆಯ ಮುಂದೆ ಫ್ಯಾನ್ಸ್ ಭಾರೀ ದಂಡೇ ನೆರೆದಿದೆ. ಈ…

Read More

ಬೆಂಗಳೂರು: ಕರ್ತವ್ಯದ ಅವಧಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ. ಆಸ್ಪತ್ರೆಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದೂರೊಂದನ್ನು ನೀಡಲಾಗಿತ್ತು. ಆ ದೂರಿನ ಅನ್ವಯ ಆರೋಗ್ಯ ಇಲಾಖೆಯಿಂದ ಆಸ್ಪತ್ರೆಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿ, ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ ಅಂತ ಆದೇಶ ಮಾಡಿದೆ. ಕೆಲ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ವೈದ್ಯರು, ಶುಶ್ರೂಷಕರು, ಗ್ರೂಪ್-ಡಿ ಸಿಬ್ಬಂದಿಗಳು ರೋಗಿಗಳನ್ನು ಉಪಚಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಚಿಕಿತ್ಸೆ ನೀಡದೇ ಮೊಬೈಲ್ ನೋಡುತ್ತಿರುವುದು ಆರೋಗ್ಯ ಸಚಿವರ ಗಮನಕ್ಕೆ ಬಂದಿದೆ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಯಪಡಿಸುವುದೇನೆಂದರೇ, ಆಸ್ಪತ್ರೆಯ ಕರ್ತವ್ಯದ ಅವಧಿಯಲ್ಲಿ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡುವಾಗ ಮಾತ್ರವೇ ಮೊಬೈಲ್ ಬಳಸುವುದು. ಇದರ ಹೊರತಾಗಿ ಇನ್ನಿತರೆ ಅಂದರೆ ಸಾಮಾಜಿಕ ಚಾಲತಾಣಕ್ಕಾಗಿ…

Read More

ನವದೆಹಲಿ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ. ಜನರಲ್ ದ್ವಿವೇದಿ ಅವರು ಜೂನ್ 30 ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ ಭರತ್ ಭೂಷಣ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ತಿಳಿಸಿದ್ದಾರೆ. https://twitter.com/SpokespersonMoD/status/1800577330286600198

Read More