Author: kannadanewsnow09

ಶೃಂಗೇರಿ : “ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಶೃಂಗೇರಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು. ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಗಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ನನಗೆ ಯಾರ ಬೆಂಬಲವೂ ಬೇಡ. ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು. ಟೆಂಪಲ್ ರನ್ ಎನ್ನುವವರು, ದೇವಾಲಯ ಮುಚ್ಚಿಬಿಡಿ: ನೀವು ದೇವಾಲಯ ಹಾಗೂ ಮಠಗಳ…

Read More

ಶೃಂಗೇರಿ : ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ. ಶೃಂಗೇರಿಯಲ್ಲಿ ಅವರು ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಕೇಳಿದಾಗ, “ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು…

Read More

ಬೆಂಗಳೂರು: ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ( India Meteorological Department – IMD)  ಶನಿವಾರ ತಿಳಿಸಿದೆ. ಜನವರಿ 13 ಮತ್ತು 14 ರಂದು ಕರ್ನಾಟಕದ ರಾಜಧಾನಿಯಲ್ಲಿ ಮೊದಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯು ತಾಪಮಾನದಲ್ಲಿ ಕುಸಿತಕ್ಕೆ ಕಾರಣವಾಗಬಹುದು ಎಂದು ಅದು ಹೇಳಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತದ ಪರಿಚಲನೆಯಿಂದಾಗಿ ಹವಾಮಾನದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಇದಲ್ಲದೆ, ಬೆಂಗಳೂರಿನ ಹಲವಾರು ಭಾಗಗಳಲ್ಲಿ ಆಳವಿಲ್ಲದ ಮತ್ತು ಮಧ್ಯಮ ಮಂಜು ಬೀಳುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಬೀಸುವ ಗಾಳಿಯಿಂದಾಗಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ಮುಖ್ಯಸ್ಥ ಎನ್.ಪುವಿಯರಸನ್ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ 16.3 ಡಿಗ್ರಿ ಸೆಲ್ಸಿಯಸ್ ಮತ್ತು 17.3 ಡಿಗ್ರಿ ಸೆಲ್ಸಿಯಸ್ ನಡುವೆ ಹೆಚ್ಚಿನ ಕನಿಷ್ಠ ತಾಪಮಾನವನ್ನು ದಾಖಲಿಸಿರುವುದರಿಂದ ಜನವರಿಯಲ್ಲಿ ಇಲ್ಲಿಯವರೆಗೆ ನಗರವು ಬೆಚ್ಚಗಿದೆ. ನಗರದಲ್ಲಿ ಸರಾಸರಿ ದೈನಂದಿನ…

Read More

ಹೈದರಾಬಾದ್: ನಟ ಅಲ್ಲು ಅರ್ಜುನ್ ಅವರ ವಿರುದ್ಧದ ಕಾಲ್ತುಳಿತ ಪ್ರಕರಣದಲ್ಲಿ ಕೋರ್ಟ್ ಮತ್ತೊಂದು ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣ ಸಂಬಂಧ ಕೋರ್ಟ್ ವಿಧಿಸಿದ್ದಂತ ಷರತ್ತುಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಅದರಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಿದೆ. ಅಲ್ಲದೇ ವಿದೇಶಿ ಪ್ರವಾಸ ಕೈಗೊಳ್ಳೋದಕ್ಕೂ ಅನುಮತಿ ನೀಡಿದೆ. ಪುಷ್ಪಾ 2 ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯವು ಅಲ್ಲು ಅರ್ಜುನ್ಗೆ ಹಲವಾರು ಸಡಿಲಿಕೆಗಳನ್ನು ನೀಡಿದೆ. ತೆಲುಗು ಸೂಪರ್ಸ್ಟಾರ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ ತಿಂಗಳು ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ನಂತರ ಅವರಿಗೆ ಜಾಮೀನು ನೀಡಲಾಯಿತು. ಪುಷ್ಪಾ 2 ನಟನಿಗೆ ಪ್ರತಿ ಭಾನುವಾರ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಶನಿವಾರ ವರದಿಯಾಗಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಅಲ್ಲು ಅರ್ಜುನ್ ಅವರ ಕಾನೂನು ತಂಡವು ವಿನಾಯಿತಿ ಕೋರಿದ ನಂತರ ಇದು ಬಂದಿದೆ. ಇದಲ್ಲದೆ, ಅಲ್ಲು ಅರ್ಜುನ್ಗೆ ಈಗ ವಿದೇಶ ಪ್ರವಾಸಕ್ಕೂ ಅನುಮತಿ ನೀಡಲಾಗಿದೆ. ‘ಪುಷ್ಪಾ 2’ ಚಿತ್ರದ ಪ್ರೀಮಿಯರ್ ಶೋ ವೇಳೆ…

Read More

ಬೆಂಗಳೂರು: ನಗರದ ಜನರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ( BMTC Bus Service ) ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರು ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ನೂತನ ಮಾರ್ಗವನ್ನು ದಿನಾಂಕ: 16.01.2025 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ : ಮಾರ್ಗ ಸಂಖ್ಯೆ        ಎಲ್ಲಿಂದ        ಎಲ್ಲಿಗೆ  ಮಾರ್ಗ        ಬಸ್ಸು/ಸುತ್ತುವಳಿಗಳ ಸಂಖ್ಯೆ 168-ಎ ಜೈ ಭೀಮನಗರ       ಕೃ.ರಾ.ಮಾರುಕಟ್ಟೆ    ತಾವರೆಕೆರೆ, ಸುದ್ದಗುಂಟೆ ಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ಗಾರ್ಡನ್ ಪೊಲೀಸ್ ಸ್ಟೇಷನ್, ಲಾಲ್ಬಾಗ್ ಮೈನ್ಗೇಟ್ 1 ಬಸ್ಸು/ 18 ಸುತ್ತುವಳಿಗಳು 161-ಬಿ ಜೈ ಭೀಮನಗರ       ಶಿವಾಜಿನಗರ  ತಾವರೆಕೆರೆ, ಸುದ್ದಗುಂಟೆ ಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ಗಾರ್ಡನ್ ಪೊಲೀಸ್ ಸ್ಟೇಷನ್, ರಿಚ್ ಮಂಡ್ ವೃತ್ತ, ಗಾಂಧಿ ಪ್ರತಿಮೆ     1…

Read More

ನವದೆಹಲಿ: ಭಾರತ ಸರ್ಕಾರ, ರೈಲ್ವೆ ಸಚಿವಾಲಯ, ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಪಾಯಿಂಟ್ಸ್ಮನ್, ಅಸಿಸ್ಟೆಂಟ್, ಟ್ರ್ಯಾಕ್ ಮೆಂಟೇನರ್ ಮತ್ತು ಇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖ ದಿನಾಂಕಗಳು: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23-01-2025 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-02-2025 ರೈಲ್ವೆ ಗ್ರೂಪ್‌ ಡಿ ಹುದ್ದೆಗಳ ವಿವರ ಹೀಗಿದೆ ಟ್ರ್ಯಾಕ್ ಮೇಂಟೆನರ್ ಗ್ರೇಡ್‌ IV ತಾಂತ್ರಿಕ ವಿಭಾಗದ ಸಹಾಯಕ ಅಸಿಸ್ಟಂಟ್‌ ಪಾಯಿಂಟ್ಸ್‌ಮನ್ ಟ್ರ್ಯಾಕ್‌ ಮನ್ ಅಸಿಸ್ಟಂಟ್ ಬ್ರಿಡ್ಜ್‌ ಇತರೆ ಹಲವು ವಿಭಾಗಗಳ ಲೆವೆಲ್‌ 1 ಪೋಸ್ಟ್‌ಗಳು: ಆರ್ಆರ್ಬಿ ಗ್ರೂಪ್ ಡಿ ಅರ್ಹತಾ 2025 ಎನ್ಸಿವಿಟಿ / ಎಸ್ಸಿವಿಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರೌಢಶಾಲಾ (10 ನೇ ತರಗತಿ) ಪೂರ್ಣಗೊಳಿಸಿದ ಅಥವಾ ಎನ್ಸಿವಿಟಿ ಒದಗಿಸಿದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಹೊಂದಿರುವ…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ. ರಾಜ್ಯ ಸರ್ಕಾರದಿಂದ ಪ್ರತಿ ಮಾಹೆ 5000 ರೂ ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು. ಪೋರ್ಟಲ್ ಸುಧಾರಣೆಗೆ ಸೂಚನೆ ಮಾಹಿತಿಯನ್ನು ಪೋರ್ಟಲ್ ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಗೌರವಧನ ನಿಲ್ಲಿಸದೆ ರಜೆ ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು. ಸರ್ಕಾರ ನಿಮ್ಮೊಂದಿಗಿದೆ ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು.…

Read More

ದಕ್ಷಿಣ ಕನ್ನಡ: ಜಿಲ್ಲೆಯ ಮುಸ್ಲಿಂ ಯುವತಿಯೊಬ್ಬಳು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಹಿಂದೂ ಯುವಕನನ್ನು ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವಂತ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಟ್ರು ಗ್ರಾಮದ ಹರೀಶ್ ಗೌಡ ಜೊತೆಗೆ ಮುಸ್ಲೀಂ ಯುವತಿ ಸುಹಾನಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾಳೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಇಬ್ಬರು ವಿವಾಹವಾಗಿದ್ದಾರೆ. ನಾಪತ್ತೆಯಾಗಿದ್ದಂತ ಮುಸ್ಲೀಂ ಯುವತಿ ಹಿಂದೂ ಯುವಕನೊಂದಿಗೆ ಮದುವೆಯಾಗಿ ಬಂದು ಪೊಲೀಸ್ ಠಾಣೆಯಲ್ಲಿ ತಮಗೆ ರಕ್ಷಣೆ ಕೊಡುವಂತೆ ಕೋರಿದ್ದಾಳೆ.

Read More

ಬೆಂಗಳೂರು: ನಗರದಲ್ಲಿ ಪೊಲೀಸರಿಗೆ ಬೇಕಿದ್ದಂತ ಕುಖ್ಯಾತ ರೌಡಿಯನ್ನು ಪೊಲೀಸರು ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ದಕ್ಷಿಣ ವಿಭಾಗದ ಹನುಮಂತನಗರ ಪೊಲೀಸರು 2016 ರಿಂದಲೂ ನಿರಂತರವಾಗಿ ಕೊಲೆ ಪ್ರಯತ್ನ, ಹಲ್ಲೆ, ದರೋಡೆಗೆ ಸಿದ್ಧತೆ, ಸುಲಿಗೆ, ಸಾಕ್ಷಿಗಳಿಗೆ ಬೆದರಿಕೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಠಾಣಾ ರೌಡಿಪಟ್ಟಿ ವ್ಯಕ್ತಿಯಾದ ಅಜಿತ್ @ ಕರಿಯಾ ಬಿನ್ (ಲೇಟ್) ರಾಜೇಶ್ ವಯಸ್ಸು 26 ವರ್ಷ, ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರು ಕರ್ನಾಟಕ ಗೂಂಡಾ ಕಾಯಿದೆ ಅಡಿ ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು ಎಂದಿದ್ದಾರೆ. ಈತನ ವಿರುದ್ಧ ಈವರೆಗೆ ಕೊಲೆ ಪ್ರಯತ್ನ, ಹಲ್ಲೆ, ಸುಲಿಗೆ, ದರೋಡೆಗೆ ಸಿದ್ಧತೆ, ಸೇರಿದಂತೆ 07 ಪ್ರಕರಣಗಳು ದಾಖಲಾಗಿರುತ್ತವೆ. ಈತನು ಜಾಮೀನು ಪಡೆದು ಬಿಡುಗಡೆ ಹೊಂದಿದ ನಂತರ, ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. 04 ಪ್ರಕರಣಗಳಲ್ಲಿ…

Read More

ಮಂಡ್ಯ: ಜಿಲ್ಲೆಯ ಮದ್ದೂರು ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯಲ್ಲಿ ಜಮೀನು ಗಲಾಟೆ ಸಂಬಂಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಎದುರುದಾರರಿಗೆ ಸಮನ್ಸ್ ಮತ್ತು ವಾರೆಂಟ್ ಜಾರಿ ಮಾಡದೇ ಹೆಡ್ ಕಾನ್ಸ್ ಸ್ಟೇಬಲ್ ರವಿ ಹಾಗೂ ಕಾನ್ಸ್ ಸ್ಟೇಬಲ್ ವಿಷ್ಣುವರ್ಧನ್ ಕರ್ತವ್ಯ ಲೋಪವೆಸಗಿದ್ದರು. ಇವರ ವಿರುದ್ಧ ದೂರುದಾರರ ಜೊತೆಗೆ ಶಾಮೀಲಾಗಿ ಸಮನ್ಸ್, ವಾರೆಂಟ್ ಜಾರಿಗೊಳಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದಾಗಿ ದೂರು ನೀಡಲಾಗಿ್ತತು. ಈ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು. ಈ ವೇಳೆ ಸಮನ್ಸ್, ವಾರೆಂಟ್ ಜಾರಿ ಮಾಡದಿದ್ದರೂ ಕೋರ್ಟ್ ಗೆ ಸುಳ್ಳು ವರದಿಯನ್ನು ಇಬ್ಬರು ಪೊಲೀಸ್ ಸಿಬ್ಬಂದಿ ನೀಡಿರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಜಮೀನು ಗಲಾಟೆ ಸಂಬಂಧ ಕರ್ತವ್ಯ ಲೋಪ ಎಸಗಿದ್ದಂತ ಮದ್ದೂರು ಠಾಣೆಯ ಹೆಚ್ ಸಿ ರವಿ ಹಾಗೂ ಪಿಸಿ ವಿಷ್ಣುವರ್ಧನ್ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾ…

Read More