Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದಿನಾಂಕ 16.01.2025 (ಗುರುವಾರ) ಬೆಳಿಗ್ಗೆ 11:00 ಗಂಟೆಯಿAದ ಮದ್ಯಾಹ್ನ 5:00 ಗಂಟೆಯವರೆಗೆ “66/11ಕೆ.ವಿ ಪಾಟರಿ ರೋಡ್” ಸ್ಟೇಷನ್ ನಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿರ‍್ಡ್ಸ್ ಪರ‍್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆ.ಹಚ್.ಬಿ ಕಾಲೋನಿ, ಜೈಭಾರತ್ ನಗರ, ಸಿ.ಕೆ. ಗರ‍್ಡನ್, ಡಿ’ಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಮರಿಯಮ್ಮ ಟೆಂಪಲ್ ಸ್ಟ್ರೀಟ್, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮೆನ್ ಕ್ವರ‍್ಟರ‍್ಸ್, ಹಚಿನ್ಸ್ ರಸ್ತೆ ಪರ‍್ಕ್ ರಸ್ತೆ, ದೇಶೀಯನಗರ ಸ್ಲಂ, 5ನೇ ಮತ್ತು 6ನೇ ಅಡ್ಡ ಹಚಿನ್ಸ್ ರಸ್ತೆ,…
ಬೆಂಗಳೂರು: ದಿವಂಗತ ಜಯಲಲಿತಾ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದಂತ ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದಂತ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶಿಸಿದೆ. ಇಂದು ಜಯಲಲಿತಾಗೆ ಸಂಬಂಧಿಸಿದಂತ ಜಪ್ತಿಯಾದ ಒಡವೆ ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ ಆಕ್ಷೇಪಿಸಿ ಜಯಲಲಿತಾ ವಾರಸುದಾರೆ ಜೆ.ದೀಪಾ ಸಲ್ಲಿಸಿದ್ದಂತ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು. ನ್ಯಾಯಮೂರ್ತಿ ವಿ ಶ್ರಿಶಾನಂದ ಅವರಿದ್ದಂತ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಅಂದಹಾಗೇ ಕಳೆದ ಮಾರ್ಚ್ 6, 7ರಂದು ದಿವಂಗತ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಗೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದಂತ ಒಡವೆಯನ್ನು ಹಸ್ತಾಂತರಿಸಬೇಕಿತ್ತು. ಆದರೇ ವಿಶೇಷ ಕೋರ್ಟ್ ಆದೇಶದಿಂದ ತಮ್ಮ ಹಕ್ಕಿಗೆ ಧಕ್ಕೆಯಾಗಿದಂತೆ ಎಂಬುದಾಗಿ ಜೆ.ದೀಪಾ ಅರ್ಜಿಯನ್ನು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಎಸ್ ಪಿಪಿ ಕಿರಣ್ ಜವಳಿ…
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿರುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಿಯೂ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿರುವುದನ್ನು ತೆರವುಗೊಳಿಸಿ, ಅಳವಡಿಸಿರುವವರ ಮೇಲೆ ಎಫ್.ಐ.ಆರ್ ದಾಖಲಿಸಬೇಕು. ಮತ್ತೆ ಯಾವುದೇ ರೀತಿಯ ಅನಧಿಕೃತ ಜಾಹೀರಾತುಗಳು ಅಳವಡಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ಆಸ್ತಿಗಳನ್ನು ಟ್ಯಾಕ್ಸ್ ನೆಟ್ ಗೆ ತರಲು ಸೂಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳನ್ನು ಟ್ಯಾಕ್ಸ್ ನೆಟ್ ಗೆ ತರಬೇಕು. ಈ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ ಎಂಬುದನ್ನು ಗುರುತಿಸಿ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ…
ಕಾರವಾರ: ಜಿಲ್ಲೆಯ ನೌಕಾನೆಲೆಯ ಸಿಬ್ಬಂದಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಮೇಲೆಯೇ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ. ಇದನ್ನು ಖಂಡಿಸಿ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ನಿನ್ನೆ ರಾತ್ರಿ 25ಕ್ಕೂ ಹೆಚ್ಚು ನೌಕಾನೆಲೆಯ ಸಿಬ್ಬಂದಿಗಳಿಂದ ಅಯ್ಯಪ್ಪ ಮಾಲಾಧಾರಿಯೊಬ್ಬರ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ನೌಕಾನೆಲೆಯ ಗೇಟ್ ಬಳಿಯಲ್ಲಿ ಜಮಾಯಿಸಿರುವಂತ ಸಾರ್ವಜನಿಕರು ಹಲ್ಲೆ ಕೋರರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಈ ಪ್ರತಿಭಟನೆಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಕೂಡ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ಸೇರಿದಂತೆ ಇತರರು ಸ್ಥಳದಲ್ಲಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿದ್ದು, ಮುಂಜಾಗ್ರತಾ ಕ್ರಮವಾಗಿ 4 ಡಿಎಆರ್ ಎಫ್ ತುಕಡಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಸ್ಥಳದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಕೂಡ ಹೂಡಿದ್ದಾರೆ. https://kannadanewsnow.com/kannada/breaking-in-yet-another-shocking-incident-in-the-state-a-mother-four-children-died-after-jumping-into-a-canal-with-their-children/ https://kannadanewsnow.com/kannada/breaking-in-yet-another-incident-in-the-state-mother-attempts-suicide-after-killing-four-children-in-vijayapura/
ಬೆಂಗಳೂರು: ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಒಂದು ಷಡ್ಯಂತ್ರ ಮತ್ತು ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಓಡಿಸಿ ಜಾಗ ಕಬ್ಜಾ ಮಾಡುವ ದುಷ್ಕøತ್ಯ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಅಲ್ಲಿಂದ 5 ಬಾರಿ ಆಯ್ಕೆಯಾದ ಜಮೀರ್ ಅಹ್ಮದ್ ಮೂರು ಹಸು ಖರೀದಿಸಿ ನೀಡುವುದಾಗಿ ಹೇಳಿಕೆ ನೀಡಿದ್ದು ಅದು ಇನ್ನಷ್ಟು ಆಘಾತಕಾರಿ ಎಂದು ಖಂಡಿಸಿದರು. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹೀಗಾಗಿದೆ. ಇವರಿಗೆ ಮಾನವೀಯತೆ ಇಲ್ಲವೇ? ಹಸು ಖರೀದಿಸಿ ಕೊಡಲು ಇದೇನು ಆಟದ ಸಾಮಗ್ರಿಯೇ ಎಂದು ಪ್ರಶ್ನಿಸಿದರು. ಇದರಿಂದ ಹಿಂದೂಗಳಿಗೆ ದೊಡ್ಡ ಆಘಾತವಾಗಿದೆ. ರಾಜ್ಯ ಸರಕಾರದ ಅದೃಷ್ಟ ಚೆನ್ನಾಗಿದ್ದ ಕಾರಣ ಚಾಮರಾಜಪೇಟೆಯಲ್ಲಿ ರಕ್ತಪಾತ ಆಗಲಿಲ್ಲ; ಕೋಮುದಂಗೆ ಆಗುವ ಸಾಧ್ಯತೆ ಇತ್ತು. ದಾನಿಗಳಾದ ಸಜ್ಜನ್ ರಾವ್ ಅವರು ಪಶುಚಿಕಿತ್ಸೆಗಾಗಿ 100 ವರ್ಷಗಳ ಹಿಂದೆ ಆಸ್ಪತ್ರೆ ಕೊಟ್ಟಿದ್ದರು. 2,227 ಪಶುಗಳು ಅಲ್ಲಿವೆ. ಅಲ್ಲಿ…
ನವದೆಹಲಿ: ನಿರೀಕ್ಷೆಗಿಂತ ಬಲವಾದ ಯುಎಸ್ ಉದ್ಯೋಗ ವರದಿಯ ನಂತರ ತೀವ್ರ ಕುಸಿತ ಕಂಡುಬಂದಿದೆ. ಇದು ಡಾಲರ್ ಅನ್ನು ಮತ್ತಷ್ಟು ಬಲಪಡಿಸಿತು ಮತ್ತು ರೂಪಾಯಿ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳ ಮೇಲೆ ಒತ್ತಡ ಹೇರಿತು. ಯುಎಸ್ ಕೃಷಿಯೇತರ ವೇತನದಾರರ ದತ್ತಾಂಶವು ಕಳೆದ ತಿಂಗಳು 256,000 ಉದ್ಯೋಗಗಳನ್ನು ಸೇರಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಇದು 160,000 ನಿರೀಕ್ಷೆಗಳನ್ನು ಮೀರಿದೆ. ಹೆಚ್ಚುವರಿಯಾಗಿ, ಯುಎಸ್ ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ಬಲವಾದ ಕಾರ್ಯಕ್ಷಮತೆಯು ವಿಶ್ವದ ಅತಿದೊಡ್ಡ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸಿದೆ. ಹೊಸ ದತ್ತಾಂಶವು ಫೆಡರಲ್ ರಿಸರ್ವ್ ತಕ್ಷಣದ ದರ ಕಡಿತದ ಭರವಸೆಯನ್ನು ಕಡಿಮೆ ಮಾಡಿದೆ. ಡಾಲರ್ ಅನ್ನು ಹೆಚ್ಚಿಸುತ್ತದೆ ಮತ್ತು ರೂಪಾಯಿಯನ್ನು ದುರ್ಬಲಗೊಳಿಸುತ್ತದೆ. ಎಫ್ಐಐ ನಿರ್ಗಮನ ಮುಂದುವರಿಯುತ್ತದೆ ರೂಪಾಯಿ ಕುಸಿತದ ಹಿಂದಿನ ಮತ್ತೊಂದು ಅಂಶವೆಂದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಮಾರಾಟ. ಇದು ರೂಪಾಯಿ ಕುಸಿತವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ತ್ರೈಮಾಸಿಕದಲ್ಲಿ 11 ಬಿಲಿಯನ್ ಡಾಲರ್ ಹೊರಹರಿವಿನ ನಂತರ ಸಾಗರೋತ್ತರ ಹೂಡಿಕೆದಾರರು ಈ ತಿಂಗಳು ಮಾತ್ರ ಭಾರತೀಯ…
ದುಬೈ: ಭಾನುವಾರ ನಡೆದ 24 ಎಚ್ ದುಬೈ ರೇಸ್ ನಲ್ಲಿ ನಟ ಅಜಿತ್ ಕುಮಾರ್ ಅವರು ಅಭ್ಯಾಸದ ಸಮಯದಲ್ಲಿ ಕಾರು ಅಪಘಾತವನ್ನು ಎದುರಿಸಿದರೂ 3 ನೇ ಸ್ಥಾನವನ್ನು ಪಡೆದರು. ಆರಂಭದಲ್ಲಿ, ಅಜಿತ್ ಹಿಂದೆ ಸರಿಯಲು ಯೋಚಿಸಿದರು, ಆದರೆ ಅವರ ಅದಮ್ಯ ಉತ್ಸಾಹವು ಅವರನ್ನು ಮತ್ತೆ ಸ್ಪರ್ಧೆಗೆ ಕರೆತಂದಿತು. ಇದರೊಂದಿಗೆ, ಅವರು ತಮ್ಮ ತಂಡ ಅಜಿತ್ ಕುಮಾರ್ ರೇಸಿಂಗ್ ಅನ್ನು ಹೆಮ್ಮೆಪಡುವಂತೆ ಮಾಡಿದ್ದಲ್ಲದೆ, ಅವರ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದರು. ಅಭಿನಂದನೆಗಳು ನಟ ಅಜಿತ್ ಕುಮಾರ್ ಎಕ್ಸ್ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ, ಅಜಿತ್ ಕುಮಾರ್ ಅವರ ವ್ಯವಸ್ಥಾಪಕರು ನಟ ರೇಸ್ನಲ್ಲಿ 3 ನೇ ಸ್ಥಾನವನ್ನು ಪಡೆದಿದ್ದಾರೆ ಎಂದು ಬಹಿರಂಗಪಡಿಸಿದರು. “991 ವಿಭಾಗದಲ್ಲಿ ಅಜಿತ್ ಕುಮಾರ್ 3 ನೇ ಸ್ಥಾನ ಮತ್ತು ಜಿಟಿ 4 ವಿಭಾಗದಲ್ಲಿ ಸ್ಪಿರಿಟ್ ಆಫ್ ದಿ ರೇಸ್ ಗೆ ಡಬಲ್ ವ್ಹಾಮ್. ವಿರಾಮ ವೈಫಲ್ಯದಿಂದಾಗಿ ಅಪಘಾತದ ನಂತರ ಎಂತಹ ಗಮನಾರ್ಹ ಪುನರಾಗಮನ. #ajithkumar #AjithKumarRacing #24hdubai #AKRacing…
ರಾಜಸ್ಥಾನ: ಇಲ್ಲಿನ ಟೋಂಕ್ ಜಿಲ್ಲೆಯ ನಿವಾಯಿ ಪಟ್ಟಣದ ಪ್ರಸಿದ್ಧ ತಿಂಡಿ ಅಂಗಡಿಯಿಂದ ಖರೀದಿಸಿದ ಸಮೋಸಾದಲ್ಲಿ ವ್ಯಕ್ತಿಯೊಬ್ಬರು ಶೇವಿಂಗ್ ಬ್ಲೇಡ್ನ ತುಂಡು ಸಿಕ್ಕಿದೆ. ಬ್ಲೇಡ್ ತುಂಬಿದ ಸಮೋಸಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೋಮ್ ಗಾರ್ಡ್ ಜವಾನ್ ರಮೇಶ್ ವರ್ಮಾ ಅವರು ಜೈನ್ ನಮ್ಕೀನ್ ಭಂಡಾರ್ ಅವರಿಂದ ಕಚೋರಿ, ಮಿರ್ಚಿ ಬಡೆ ಮತ್ತು ಸಮೋಸಾಗಳನ್ನು ಖರೀದಿಸಿದ್ದರು. ಆದಾಗ್ಯೂ, ಅವರು ಮನೆಯಲ್ಲಿ ಸಮೋಸಾವನ್ನು ಒಡೆದು ನೋಡಿದಾಗ ಅದರ ಮಸಾಲಾದಲ್ಲಿ ಬ್ಲೇಡ್ ಹುದುಗಿರುವುದನ್ನು ಕಂಡುಕೊಂಡಾಗ ಬೆಚ್ಚಿ ಬಿದ್ದಿದ್ದಾರೆ. ನಾನು ಅಂಗಡಿಯಿಂದ ಕಚೋರಿ, ಮಿರ್ಚಿ ಬಡೆ ಮತ್ತು ಸಮೋಸಾಗಳನ್ನು ಖರೀದಿಸಿದ್ದೆ. ಮನೆಯಲ್ಲಿ ಸಮೋಸಾವನ್ನು ಒಡೆಯುವಾಗ, ನಾನು ಒಳಗೆ ಬ್ಲೇಡ್ ತುಂಡನ್ನು ಕಂಡುಕೊಂಡೆ. ನಾನು ತಕ್ಷಣ ಪೊಲೀಸರಿಗೆ ಮತ್ತು ಆಹಾರ ಇಲಾಖೆಗೆ ಮಾಹಿತಿ ನೀಡಿದ್ದೇನೆ. ತಂಡವು ಕ್ರಮ ಕೈಗೊಂಡಿದೆ ಎಂದು ವರ್ಮಾ ತಿಳಿಸಿದರು. ಈ ಸಂಪೂರ್ಣ ನಿರ್ಲಕ್ಷ್ಯದಿಂದ ದಿಗ್ಭ್ರಮೆಗೊಂಡ ವರ್ಮಾ ತಕ್ಷಣ ಅಂಗಡಿಯವನನ್ನು ಎದುರಿಸಿದರು. ಅಂಗಡಿಯವನು ದೂರನ್ನು ಪರಿಹರಿಸುವ ಬದಲು, ಅವನನ್ನು ವಜಾಗೊಳಿಸಿ ಹೊರಹೋಗುವಂತೆ ಒತ್ತಾಯಿಸಿದನು. https://twitter.com/ssgoyalat/status/1878096463789490536…
ನವದೆಹಲಿ: ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಪ್ರಯಾಗ್ರಾಜ್ ಪ್ರದೇಶದಲ್ಲಿ ಮಹಾಕುಂಭ 2025 ಗೆ ಭಾರತೀಯ ರೈಲ್ವೆಯ ಸನ್ನದ್ಧತೆಯನ್ನು ಹೆಚ್ಚಿಸಲು ಹಲವಾರು ಪ್ರಮುಖ ಉಪಕ್ರಮಗಳನ್ನು ಉದ್ಘಾಟಿಸಿದ್ದಾರೆ. ಈ ಕ್ರಮಗಳು ಲಕ್ಷಾಂತರ ಯಾತ್ರಾರ್ಥಿಗಳಿಗೆ ಸುರಕ್ಷಿತ, ತಡೆರಹಿತ ಮತ್ತು ತಾಂತ್ರಿಕವಾಗಿ ಸುಧಾರಿತ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ. ಪ್ರಮುಖ ಘೋಷಣೆಗಳು ಮತ್ತು ಉದ್ಘಾಟನೆಗಳು: ಕುಂಭ ವಾರ್ ರೂಮ್ ಪ್ರಾರಂಭ ರೈಲ್ವೆ ಮಂಡಳಿ ಮಟ್ಟದಲ್ಲಿ ಮೀಸಲಾದ ವಾರ್ ರೂಮ್ ಉದ್ಘಾಟಿಸಲಾಗಿದೆ. ವಾರ್ ರೂಮ್ 24×7 ಕಾರ್ಯನಿರ್ವಹಿಸಲಿದೆ, ಇದರಲ್ಲಿ ಕಾರ್ಯಾಚರಣೆ, ವಾಣಿಜ್ಯ, RPF, ಮೆಕ್ಯಾನಿಕಲ್, ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳ ಅಧಿಕಾರಿಗಳು ಮೇಲ್ವಿಚಾರಣೆ ಮತ್ತು ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ. 9 ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 1,176 CCTV ಕ್ಯಾಮೆರಾಗಳು ನೈಜ-ಸಮಯದ ಮೇಲ್ವಿಚಾರಣೆಗಾಗಿ ಲೈವ್ ಫೀಡ್‌ಗಳನ್ನು ಒದಗಿಸುತ್ತವೆ. ಮಾನಿಟರಿಂಗ್ ರಚನೆ: ಪ್ಲಾಟ್‌ಫಾರ್ಮ್ → ನಿಲ್ದಾಣ → ವಿಭಾಗೀಯ → ಜಿಲ್ಲೆ → ವಲಯ → ರೈಲ್ವೆ ಮಂಡಳಿ. ವಾರ್ ರೂಮ್, ಜಿಲ್ಲಾ ಅಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಪರಿಣಾಮಕಾರಿ…
ಬೆಂಗಳೂರು: ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಅತ್ಯಂತ ದೊಡ್ಡ ಯೋಜನೆಯಾಗಿದ್ದು, ಇದನ್ನು ಜಾರಿಗೆ ತರುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾಕಷ್ಟು ಶ್ರಮ ಹಾಕಿದ್ದಾರೆ. ಇದರ ರೂವಾರಿ ಅವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು. ನಾನು ಇಟ್ಟ ನಂಬಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥವಾಗಿ ನಿಭಾಯಿಸಿದ ಫಲವಾಗಿ ಇಂದು ರಾಜ್ಯದ 1.26 ಕೋಟಿ ಗೃಹಣಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಸಂದಾಯವಾಗುತ್ತಿದ್ದು, ಈ ಯೋಜನೆಗೆ ವಾರ್ಷಿಕ 33 ಸಾವಿರ ಕೋಟಿ ಮೀಸಲಿಡಲಾಗುತ್ತಿದೆ. ಇದರ ಸಂಪೂರ್ಣ ಕ್ರೆಡಿಟ್ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಲ್ಲಬೇಕು ಎಂದರು. ಇದೇ ವೇಳೆ ಮಾತನಾಡಿದಂತ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿ, ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೇ ಅತೀ ದೊಡ್ಡದಾಗಿರುವ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುವ ಭಾಗ್ಯವನ್ನು, ಅವಕಾಶವನ್ನು ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ಈ ಅವಕಾಶ…













