Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಇಂಡಸ್ಇಂಡ್ ಬ್ಯಾಂಕ್ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಕಠ್ಪಾಲಿಯಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಲದಾತ ಸಂಸ್ಥೆ ಏಪ್ರಿಲ್ 29 ರಂದು ಪ್ರಕಟಿಸಿದೆ. ಅವರ ರಾಜೀನಾಮೆ ಏಪ್ರಿಲ್ 29 ರಿಂದ ಜಾರಿಗೆ ಬರಲಿದೆ. ನನ್ನ ಗಮನಕ್ಕೆ ತರಲಾದ ವಿವಿಧ ಕಮಿಷನ್/ಲೋಪಗಳನ್ನು ಗಮನದಲ್ಲಿಟ್ಟುಕೊಂಡು ನಾನು ನೈತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಕಠ್ಪಾಲಿಯಾ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಆರ್ಬಿಐ ಈ ಹಿಂದೆ ಬ್ಯಾಂಕಿನ ನಾಯಕತ್ವವನ್ನು ಪ್ರಶ್ನಿಸಿದ ನಂತರ ಇದು ಬಂದಿದೆ. ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರ ಕರ್ತವ್ಯಗಳು, ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಬ್ಯಾಂಕ್ನಿಂದ ಶಾಶ್ವತ ಸಿಇಒ ನೇಮಕಗೊಳ್ಳುವವರೆಗೆ ಮಧ್ಯಂತರ ಅವಧಿಗೆ ನಿರ್ವಹಿಸಲು ಕಾರ್ಯನಿರ್ವಾಹಕರ ಸಮಿತಿಯನ್ನು ರಚಿಸಲು ಆರ್ಬಿಐ ಅನುಮೋದನೆಯನ್ನು ಕೇಳಿದೆ. https://kannadanewsnow.com/kannada/pahalgam-zip-line-operator-allahu-akbars-sloganeering-was-a-natural-process-nia/ https://kannadanewsnow.com/kannada/passwaord-hack-one-second/
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿದ್ದ ಜಿಪ್ ಲೈನ್ ಆಪರೇಟರ್ ಒಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ವಿಚಾರಣೆಗೊಳಪಡಿಸಿದೆ. ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ದಿನವಾದ ಏಪ್ರಿಲ್ 22 ರಂದು ಪ್ರವಾಸಿಗರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಜಿಪ್ ಲೈನ್ ಆಪರೇಟರ್ ಮುಜಮ್ಮಿಲ್ ಮೂರು ಬಾರಿ ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಿರುವುದು ಕೇಳಿಸಿತು. ಎನ್ಐಎ ಮೂಲಗಳ ಪ್ರಕಾರ, ಮುಜಮ್ಮಿಲ್ ಅವರ ಘೋಷಣೆಗಳು ಆಘಾತಕಾರಿ ಅಥವಾ ಹಠಾತ್ ವಿಷಯಕ್ಕೆ “ನೈಸರ್ಗಿಕ ಪ್ರತಿಕ್ರಿಯೆ” ಮತ್ತು ಇದು ಹಿಂದೂಗಳು ‘ಹೇ ರಾಮ್’ ಎಂದು ಹೇಳುವಂತೆಯೇ ಇದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಎನ್ಐಎಯ ಆರಂಭಿಕ ವಿಚಾರಣೆಯಲ್ಲಿ ಮುಜಮ್ಮಿಲ್ ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವುದನ್ನು ತೋರಿಸದಿದ್ದರೂ, ಗುಂಡಿನ ದಾಳಿ ಪ್ರಾರಂಭವಾದ ನಂತರ ಪ್ರವಾಸಿಯನ್ನು ಜಿಪ್ನಲ್ಲಿ ಏಕೆ ಬಿಡುಗಡೆ ಮಾಡಿದ್ದೀರಿ ಎಂದು ಕೇಳಿದಾಗ ಜಿಪ್ ಲೈನ್ ಆಪರೇಟರ್ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ವೀಡಿಯೊ…
ಜಮ್ಮು-ಕಾಶ್ಮೀರ: ಪಹಲ್ಗಾಮ್ ನಲ್ಲಿ ಏಪ್ರಿಲ್.22ರಂದು ಭಯೋತ್ಪಾದಕರು ನಡೆಸಿದ್ದಂತ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಘಟನೆಯ ನಂತ್ರ ಮೂವರು ಶಂಕಿತ ಭಯೋತ್ಪಾದಕರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿತ್ತು. ಆ ರೇಖಾಚಿತ್ರದೊಂದಿಗೆ ಮುಖಚಹರೆ ಹೋಲಿಕೆಯಾದ ಹಿನ್ನಲೆಯಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ನವದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಗಳನ್ನು ನಡೆಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತ್ರಿ-ಸೇನಾಪಡೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಸಭೆ ನಡೆಸಿದರು. ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೂರು ಅರೆಸೈನಿಕ ಪಡೆಗಳ ಮುಖ್ಯಸ್ಥರು ಮತ್ತು ಇತರ ಎರಡು ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ (ಡಿಜಿ) ದಲ್ಜಿತ್ ಸಿಂಗ್ ಚೌಧರಿ, ರಾಷ್ಟ್ರೀಯ…
ಬೆಂಗಳೂರು: ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರ ವಿರುದ್ಧ ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ದಾಖಲಾಗಿದ್ದಂತ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ ಎಸ್ ವೀರಯ್ಯ ಅವರನ್ನು CID ಅಧಿಕಾರಿಗಳು ಜುಲೈ.12, 2024ರಲ್ಲಿ ಬಂಧಿಸಿದ್ದರು. ಡಿಎಸ್ ವೀರಯ್ಯ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸುಮಾರು 47 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪದ ಅವರ ಮೇಲಿತ್ತು. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಡಿಎಸ್ ವೀರಯ್ಯ ಅವರನ್ನು ಜುಲೈ.12, 2024ರಂದು ಬಂಧಿಸಿದ್ದರು. ಆ ಬಳಿಕ ಕೋರ್ಟ್ ಮೊರೆ ಹೋಗಿದ್ದಂತ ಡಿಎಸ್ ವೀರಯ್ಯ ಅವರಿಗೆ ಜಾಮೀನು ಮಂಜೂರಾಗಿತ್ತು. ಜಾಮೀನಿನಿಂದ ಹೊರಬಂದಿದ್ದಂತ ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಅವರು ದೇವರಾಜು ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ತನ್ನ ಪಾತ್ರ ಯಾವುದು ಇಲ್ಲ. ನನ್ನ ಬಂಧನದ ವೇಳೆಯಲ್ಲಿ…
ಬೆಂಗಳೂರು: ಕಂದಾಯ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ಹೊಸದಾಗಿ ನೇಮಕಾತಿ ಹೊಂದಿರುವಂತ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಿಲ್ಲಾ ಹಂತದಲ್ಲೇ ತರಬೇತಿ ನೀಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಪೈಕಿ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಲು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಮುಖಾಂತರ ನೇಮಕಾತಿ ಅಧಿಸೂಚನೆ ಹೊರಡಿಸಿ, ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ 1000 ಗ್ರಾಮ ಆಡಳಿತ ಅಧಿಕಾರಿಗಳ ಅರ್ಹತಾ ಪಟ್ಟಿಯನ್ನು ಪಡೆದು, ತದನಂತರ ಜಿಲ್ಲಾಧಿಕಾರಿಗಳ ಹಂತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಅವಹಾಲಿಸಿದ ತರುವಾಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದ ಎಂದು ತಿಳಿಸಿದ್ದಾರೆ. ಹೀಗೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆಯ್ಕೆ ಹೊಂದಿ, ಮೂಲ ದಾಖಲಾತಿ, ಸಿಂಧುತ್ವ, ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ವರದಿ ಹಾಗೂ ಮುಂತಾದ ವರದಿಗಳು ಸ್ವೀಕೃತಗೊಂಡಿರುವ…
ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಬಳಿಕ, ವಿಜಯಪುರ ಸೇರಿದಂತೆ ಇತರೆಡೆ ಮಾಡೋದಾಗಿ ಸರ್ಕಾರದ ಮೂಲಗಳಿಂದ ತಿಳಿದು ಬಂದಿತ್ತು. ಆದರೇ ಮೇ.9ರಂದು ಬೆಂಗಳೂರಲ್ಲೇ ರಾಜ್ಯ ಸಚಿವ ಸಂಪುಟ ಸಭೆ ನಿಗದಿ ಪಡಿಸಲಾಗಿದೆ. ಈ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿ ಆರ್.ಚಂದ್ರಶೇಖರ್ ಮಾಹಿತಿ ನೀಡಿದ್ದು, ದಿನಾಂಕ 09-05-2025ರಂದು ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 10ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ಒಳ ಮೀಸಲಾತಿಯ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಸಿಎಂ ಸಿದ್ಧರಾಮಯ್ಯ ತಮ್ಮ ಸಂಪುಟದ ಸಹೋದ್ಯೇಗಿಗಳೊಂದಿಗೆ ಚರ್ಚಿಸಿದ್ದರು. ಆದರೇ ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ, ಹಣಕಾಸಿನ ನೆರವು ನೀಡಲಿದೆ ಎನ್ನಲಾಗುತ್ತಿದೆ. https://kannadanewsnow.com/kannada/good-news-for-rural-people-of-the-state-va-will-now-be-available-in-gram-panchayat/ https://kannadanewsnow.com/kannada/passwaord-hack-one-second/
ಪೂರ್ವ ಜನ್ಮದ ಕರ್ಮ ಫಲ ಈ ಜನ್ಮದಲ್ಲಿ ಪಡೆದಿರುವ ಪ್ರತಿಫಲ ನಮಗೆ ನಮ್ಮ ಪೂರ್ವ ಜನ್ಮದ ಕರ್ಮಗಳಿಂದಲೇ… ಈ ಜನ್ಮದಲ್ಲಿ… ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ಗಂಡ, ಪ್ರೇಯಸಿ, ಪ್ರಿಯಕರ, ಮಿತ್ರರು, ಶತ್ರುಗಳು ಎನ್ನುವ ಅನೇಕ ಸಂಬಂಧಗಳು ನಮಗೆ ಈ ಪ್ರಪಂಚದಲ್ಲಿ ಲಭಿಸುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ…
ಚಿಕ್ಕಮಗಳೂರು: ಗ್ರಾಮೀಣ ಜನರು ತಮ್ಮ ಕೆಲಸ ಕಾರ್ಯದ ನಿಮಿತ್ತ ಗ್ರಾಮ ಆಡಳಿತ ಅಧಿಕಾರಿಗಳಿಗಾಗಿ ಪರದಾಡುವ ಸಮಸ್ಯೆ ಇನ್ಮುಂದೆ ತಪ್ಪಲಿದೆ. ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಗ್ರಾಮ ಪಂಚಾಯ್ತಿಗಳಲ್ಲೇ ವಿಎಗಳು ಸಿಗೋದಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವಂತ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು, ರಾಜ್ಯದಲ್ಲಿ ಜನರು ಗ್ರಾಮ ಆಡಳಿತಾಧಿಕಾರಿಗಳನ್ನು ಎಲ್ಲಿದ್ದಾರೆ ಎಂದು ಹುಡುಕುವ ಸ್ಥಿತಿ ಇದೆ. ಹೀಗಾಗಿ ಇದನ್ನು ತಪ್ಪಿಸೋದಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಅವರಿಗೆ ಕಚೇರಿ ತೆರೆಯಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಹೋದರೂ ವಿಎ ಎಲ್ಲಿದ್ದಾರೆ ಅಂತ ಜನರಿಗೆ ಸಿಗುವುದು ಕಟ್ಟವಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಜಾಗ ಇದ್ದರೇ ಅಲ್ಲೇ ಕುರ್ಚಿ, ಟೇಬಲ್ ಹಾಕಿ ವ್ಯವಸ್ಥೆ ಮಾಡಬೇಕು. ಜಾಲ ಇಲ್ಲದೇ ಇದ್ದರೇ ಅದೇ ಕಚೇರಿಯಲ್ಲಿ ಸಣ್ಣ ಕೊಠಡಿ ನಿರ್ಮಿಸಿ ಅವರು ಕೂರಲು, ದಾಖಲೆ ಸಂಗ್ರಹಿಸೋದಕ್ಕೆ, ಗ್ರಾಮೀಣ ಜನರ ಕೆಲಸ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.…
ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಐಜಿಯಾಗಿ ನಿಯೋಜನೆ ಮೇರೆಗೆ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದಏಶಿಸಿದೆ. ಈ ಸಂಬಂಧ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದು, ಅಭಿಷೇಕ್ ಗೋಯಲ್, ಐಪಿಎಸ್ (ಕೆಟಿಕೆ:2005) ಅವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ವೇತನ ಮ್ಯಾಟ್ರಿಕ್ಸ್ನ ಹಂತ-14) ನಲ್ಲಿ ಇನ್ಸ್ಪೆಕ್ಟರ್ ಜನರಲ್ ಆಗಿ ನೇಮಕ ಮಾಡಲು ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ತಿಳಿಸಲು ಕೆಳಗೆ ಸಹಿ ಮಾಡಿರುವವರಿಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ. ಈ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ದಿನಾಂಕದಿಂದ 18.03.2026 ರವರೆಗೆ ಅಂದರೆ ಅಧಿಕಾರಿಯ ಉಳಿದ ಕೇಂದ್ರ ನಿಯೋಜನೆ ಅವಧಿ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ. ಈ ಅಧಿಕಾರಿಯನ್ನು ಜಾರಿ ನಿರ್ದೇಶನಾಲಯದಿಂದ ಬಿಡುಗಡೆ ಮಾಡಿದ ದಿನಾಂಕದಿಂದ ಮತ್ತು ಅವರು ಸಿಐಎಸ್ಎಫ್ಗೆ ಸೇರುವವರೆಗಿನ ಅವಧಿಯನ್ನು “ಕಡ್ಡಾಯ ಕಾಯುವಿಕೆ” ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/businessman-commits-suicide-by-shooting-himself-in-head-in-car/ https://kannadanewsnow.com/kannada/passwaord-hack-one-second/
ಕಾರ್ಕಳ: ಕಾರಿನಲ್ಲೇ ತಲೆಗೆ ಗುಂಡು ಹಾಸಿಕೊಂಡು ಖ್ಯಾತ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ತಾಲ್ಲೂಕಿನ ದೂಪದ ಕಟ್ಟೆ ಬಳಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/do-you-know-how-much-money-cm-siddaramaiah-spent-on-the-taluk-mandal-elections-in-1978/ https://kannadanewsnow.com/kannada/passwaord-hack-one-second/