Subscribe to Updates
Get the latest creative news from FooBar about art, design and business.
Author: kannadanewsnow09
ಮಡಿಕೇರಿ: ಸಂಚಾರಿ ಪೊಲೀಸರ ಕೆಲಸ ಅಂತ್ರೆ ಕೇವಲ ಟ್ರಾಫಿಕ್ ನಿಯಂತ್ರಣ ಮಾಡೋದಲ್ಲ. ಬದಲಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಆಗಿರುತ್ತದೆ. ಇದಲ್ಲದೇ ಅನೇಕ ಕಡೆ ರಸ್ತೆಯಲ್ಲಿ ಗುಂಡಿ ಬಿದ್ದಾಗ ಅವುಗಳನ್ನು ತಾವೇ ಸ್ವತಹ ಮುಚ್ಚಿದ್ದು ನಡೆದಿದೆ. ಇದರ ನಡುವೆ ಈ ಸಂಚಾರಿ ಮಹಿಳಾ ಹೆಡ್ ಕಾನ್ಸ್ ಸ್ಟೇಬಲ್ ಕೆಲಸ ಮಾತ್ರ ಎಲ್ಲರೂ ಮೆಚ್ಚುವಂತದ್ದು. ಜೊತೆಗೆ ಮೇಡಂ ಹ್ಯಾಟ್ಸ್ ಆಫ್ ಅನ್ನದೇ ಇರೋಕಾಗಲ್ಲ. ಅನೇನು ಅಂತ ಮುಂದೆ ಓದಿ. ಕಾನೂನು ಪಾಲನೆ ಒಂದೆಡೆಯಾದ್ರೇ, ಮಾತೃ ಮಮತೆ ಇನ್ನೊಂದು ಕಡೆ ಎಂಬುದಕ್ಕೆ ಕುಶಾಲನಗರದ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಶಾ ಸಾಕ್ಷಿಯಾಗಿದ್ದಾರೆ. ಶಾಲಾ ಮಕ್ಕಳ ಬಗ್ಗೆ ಇವರು ತೋರಿದಂತ ಕಾಳಜಿ, ಕಾನೂನು ಪಾಲನೆಯ ಜೊತೆಗೆ ಮಕ್ಕಳ ಜೀವ ರಕ್ಷಣೆಯ ಮಹತ್ವದ ಕೆಲಸವನ್ನೇ ಮಾಡಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಅವರು ಮಾಡಿದಂತ ಕೆಲಸದ ವೀಡಿಯೋ ನೋಡಿದಂತ ಪ್ರತಿಯೊಬ್ಬರು ಹೇಳೋ ಮಾತಾಗಿದೆ. ಈ ಬಗ್ಗೆ Coorg the kashmir of…
ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಪಾರದರ್ಶಕ, ಅಕ್ರಮ ರಹಿತವಾಗಿ ನಡೆಸೋದಕ್ಕೆ ಚುನಾವಣಾ ಆಯೋಗ ನಿರ್ಧರಿಸಿದೆ. ಅಕ್ರಮ ತಗೆಡೆ ವಿವಿಧ ಕ್ರಮ ಕೈಗೊಂಡಿದ್ದರೇ, ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿ ಮಾಹಿತಿ ಒಂದೇ ಕ್ಲಿಕ್ ನಲ್ಲಿ ಲಭ್ಯವಾಗುವಂತೆಯೂ ಮಾಡಿದೆ. ಅದು ಹೇಗೆ ಅಂತ ಮುಂದೆ ಓದಿ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳ ಮಾಹಿತಿ ಮತದಾರರಿಗೆ ಕುಳಿತಲ್ಲೇ ಸಿಗುವಂತೆ ಮಾಡಿದೆ. ಆಯ್ಕೆಗಳು ಹಲವಾರಿದ್ದರೂ, ನೀವು ಆಯ್ಕೆ ಮಾಡೋಕೆ ಆಗೋದು ಒಂದೇ ಅಭ್ಯರ್ಥಿ ಮಾತ್ರ. ಅವರು ಯಾರಾಗಿರಬೇಕು ಎನ್ನುವ ಮಾಹಿತಿಯನ್ನು ನೀವು ಅವರ ಬಗ್ಗೆ ತಿಳಿದುಕೊಂಡು ಮಾಡೋದು ಒಳಿತು ಅಂತ ಹೇಳಿದೆ. ಈ ಹಿನ್ನಲೆಯಲ್ಲಿ ಮತದಾರರ ಎಲ್ಲರೂ KYC-ECI ಬಳಸಿ, ಅಭ್ಯರ್ಥಿಗಳ ಅಫೀಡೆವಿಟ್ ನಲ್ಲಿ ತುಂಬಿರುವಂತ ಮಾಹಿತಿಯನ್ನು ತಿಳಿದುಕೊಳ್ಳಿ. ಈ ಮೂಲಕ ಲೋಕಸಭಾ ಕಣದಲ್ಲಿರುವಂತ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಕೊಳ್ಳೋದು ಮರೆಯಬೇಡಿ ಅಂತ ತಿಳಿಸಿದೆ. ಸೋ ನೀವು ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಕುರಿತು ಸಕಲ ಮಾಹಿತಿಯನ್ನು ಈಗ ಒಂದೇ ಕ್ಲಿಕ್ಕಿನಲ್ಲಿ ಪಡೆಯೋದಕ್ಕಾಗಿ, ಈ ಕೂಡಲೇ…
ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್.4ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಗೆ ಪ್ರಕರಣಗಳು ದಾಖಲಾಗಿದ್ದಾವೆ. ಹಾಗಾದ್ರೇ ಎಷ್ಟು ಪ್ರಕರಣ ದಾಖಲಾಗಿದ್ದಾವೆ ಅಂತ ಮುಂದೆ ಓದಿ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದ್ದು, a. ಕ್ಷಿಪಪಡೆಗಳು (FS), ಸ್ಥಿರ ಕಣಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ (Freebies) ವಶಪಡಿಸಿಕೊಂಡ ಪಕರಣಗಳಿಗೆ ಸಂಬಂಧಿಸಿದಂತೆ 600 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.b. 79,349 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ, 838 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ, CRPCಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 4,629 ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ 5,156 ವ್ಯಕ್ತಿ / ವ್ಯಕ್ತಿಗಳನ್ನು ಒಳಪಟ್ಟ ಪಕರಣಗಳನ್ನು ದಾಖಲಿಸಿದೆ ಎಂದಿದೆ. C. ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 624 ಪ್ರಕರಣಗಳನ್ನು ದಾಖಲಿಸಿದೆ,…
1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು 2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ ಎಂದರೆ ತಗೊಂಡ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ…
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ನಂತ್ರ, ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮವನ್ನು ಆಯೋಗವು ಕೈಗೊಂಡಿದೆ. ಇದರ ನಡುವೆ ಇಂದು ಬರೋಬ್ಬರಿ 2.84 ಕೋಟಿ ಮೌಲ್ಯದ ಹಣ, ವಸ್ತು, ಮದ್ಯವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಕುರಿತಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ರೂ.1,87,81,820 ಹಣವನ್ನು ಜಪ್ತಿ ಮಾಡಿರೋದಾಗಿ ತಿಳಿಸಿದ್ದಾರೆ. ಇನ್ನೂ ಇಂದು ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸರು ಸೇರಿ 133 ಕ್ವಿಂಚಾಲ್ ಪಿಡಿಎಸ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅದರ ಬೆಲೆ ರೂ.3,33,000 ಆಗಿದೆ. ಇದಲ್ಲದೇ 764.55 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ. ಒಟ್ಟಾರೆಯಾಗಿ ಇಂದು 5.04 ಕೆಜಿ ಮಾದಕ ದ್ರವ್ಯ, ಅಬಕಾರಿ ಇಲಾಖೆಯಿಂದ 3.65 ಕೆಜಿ ಸೇರಿದಂತೆ 8.69 ಕೆಜಿ ಮಾದಕ ದ್ರವ್ಯ ಸೇರಿದಂತೆ ರೂ.2,84,21,200 ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿರೋದಾಗಿ ತಿಳಿಸಿದೆ. https://kannadanewsnow.com/kannada/hdd-urges-pm-modi-to-intervene-in-mekedatu-project-implementation/ https://kannadanewsnow.com/kannada/krpp-party-to-merge-with-bjp-tomorrow-morning-mla-janardhana-reddy-to-join-bjp/
ಬೆಂಗಳೂರು: ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಮಾಜಿ ಪ್ರಧಾನಿಗಳು ಹಾಗೂ ಜಾತ್ಯತೀತ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ. ಅಲ್ಲದೆ; ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ಅಚಲ ನಿರ್ಧಾರವನ್ನು ಇದೇ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ದೃಢ ಹೆಜ್ಜೆಯನ್ನು ಇಡಲಿ ಎಂದು ಮಾಜಿ ಪ್ರಧಾನಿಗಳು ಆಗ್ರಹಪಡಿಸಿದರು. ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿಗಳು; ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ಅಂಶವನ್ನು ಸೇರಿಸುವುದನ್ನು ಜೆಡಿಎಸ್ ಖಂಡಿಸುತ್ತದೆ. ನಾವು ಕೂಡ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಬೆಂಬಲಿಸಿ ಆ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಜನರಿಗೆ ತಿಳಿಸುತ್ತೇವೆ ಎಂದು ಗುಡುಗಿದರು. ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಇಂತಹ ಬೆದರಿಕೆಗಳಿಗೆ…
ಚಿಕ್ಕಮಗಳೂರು: ನಾನು ಸಂಸದನಾಗಿ ಸಂಸತ್ ನಲ್ಲಿ ಕನ್ನಡಲ್ಲೇ ಪ್ರಮಾಣವಚನ ಸ್ವೀಕರಿಸುತ್ತೇನೆ. ಸಂಸದನಾದ 6 ತಿಂಗಳಲ್ಲೇ ಹಿಂದಿ ಕಲಿಯೋದಾಗಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಹಿಂದಿ, ಇಂಗ್ಲೀಷ್ ಬರೋದಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದಂತ ಅವರು ಜಯಪ್ರಕಾಶ್ ಹೆಗಡೆಯವರು ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ಮುಂದೆ ಮುಜುಗರ ಆಗಬಾರದೆಂದು ಹಾಗೆ ಹೇಳಿದ್ದಾರೆ ಎಂದರು. ನಾನು ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಅಭಿಮಾನ, ಪ್ರೀತಿಯಿಂದ ಮುಂದೆ ಮುಜುಗರ ಆಬಾರದೆಂಬ ಕಾರಣಕ್ಕೆ ಹಾಗೆ ಹೇಳಿದ್ದಾರೆ. ನಾನು ಸಂಸತ್ ನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಸಂಸತ್ ಪ್ರವೇಶಿಸಿದ 6 ತಿಂಗಳಲ್ಲೇ ಹಿಂದಿ ಕಲಿಯುತ್ತೇನೆ ಎಂದರು. ನಾನು ಜಯಪ್ರಕಾಶ್ ಹೆಗಡೆ ಅವರಿಗೆ ಸಮಾಧಾನ ಆಗುವಂತೆ ಹಿಂದಿಯಲ್ಲೇ ಭಾಷಣ ಮಾಡೇ ಮಾಡುತ್ತೇನೆ. ಅವರು ಕಾದು ನೋಡುವಂತೆ ಹಿಂದಿ ಮಾತನಾಡುವೆ ಎಂದು ಹೇಳಿದರು. https://kannadanewsnow.com/kannada/rr-vs-lsg-match-stopped-for-a-moment-after-just-two-balls-know-why/ https://kannadanewsnow.com/kannada/lok-sabha-elections-2024-how-much-money-and-goods-have-been-seized-in-the-state-so-far-here-are-the-details/
ಸ್ಪೋರ್ಟ್ಸ್ ಡೆಸ್ಕ್: ಸಂಜು ಸ್ಯಾಮ್ಸನ್ ಪರ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದರು. ಎರಡು ಎಸೆತಗಳನ್ನು ಆಡಿದ ನಂತರವೇ ಪಂದ್ಯವನ್ನು ನಿಲ್ಲಿಸಲಾಯಿತು. ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದ ಅಭಿಮಾನಿಗಳು ಸಹ ಆಶ್ಚರ್ಯಚಕಿತರಾದರು. ಪಂದ್ಯವನ್ನು 5-6 ನಿಮಿಷಗಳ ಕಾಲ ಏಕೆ ನಿಲ್ಲಿಸಲಾಯಿತು, ಅದರ ಹಿಂದಿನ ಕಾರಣವನ್ನು ತಿಳಿಯೋಣ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2024 ರ ನಾಲ್ಕನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಜೈಪುರದಲ್ಲಿ ನಡೆಯಬೇಕಿದ್ದ ರಾಜಸ್ಥಾನ-ಲಕ್ನೋ ಪಂದ್ಯ ರದ್ದು ವಾಸ್ತವವಾಗಿ, ರಾಜಸ್ಥಾನ್ ರಾಯಲ್ಸ್ (ಆರ್ಆರ್ ವರ್ಸಸ್ ಎಲ್ಎಸ್ಜಿ) ಇನ್ನಿಂಗ್ಸ್ನ ಮೊದಲ ಓವರ್ನ ಎರಡು ಎಸೆತಗಳ ನಂತರ, ಸ್ಪೈಡರ್ ಕ್ಯಾಮ್ನಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ಸ್ಪೈಡರ್ ಕ್ಯಾಮ್ ಮೈದಾನದ ಸುತ್ತಲೂ ಚಲಿಸುತ್ತದೆ ಮತ್ತು ಪ್ರತಿ ಕೋನದಿಂದ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸ್ಪೈಡರ್ ಕ್ಯಾಮ್ ಕೆಲವೊಮ್ಮೆ ಮೈದಾನದ…
ಬೆಂಗಳೂರು: ರಾಜ್ಯದ ಜನತೆಯ ಹಿತ ಕಾಪಾಡುವುದೇ ನಮ್ಮ ಮೊದಲ ಆದ್ಯತೆ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದೇವೆ. ಕಳೆದ 5 ತಿಂಗಳಿನಿಂದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಕಾದು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯವಾಗಿತ್ತು ಎಂದಿದ್ದಾರೆ. ಜವಾಬ್ದಾರಿಯುತ ಒಕ್ಕೂಟ ಸರ್ಕಾರವಾಗಿ ಕೇಂದ್ರವು ನಮ್ಮ ಮನವಿ, ರಾಜ್ಯದ ಬರ ಪರಿಸ್ಥಿತಿ, ಕೇಂದ್ರದ ಬರ ಅಧ್ಯಯನ ತಂಡದ ವರದಿ ಎಲ್ಲವನ್ನು ಪರಿಶೀಲಿಸಿ ಬರ ಪರಿಹಾರ ಬಿಡುಗಡೆ ಮಾಡಿದ್ದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ನಾವು ಮಳೆ ಕಡಿಮೆಯಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾದಾಗ ಕಳೆದ 5 ತಿಂಗಳ ಹಿಂದೆಯೇ ಅಂದಾಜು 18,000 ಕೋಟಿ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೆವು. ಆದರೆ ಕೇಂದ್ರ ನಮ್ಮ ಮನವಿಗೆ ಇದೂವರೆಗೂ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ. ರಾಜ್ಯದ 26…
ಬೆಂಗಳೂರು: ಅಂತೂ ಇಂತೂ ಬಿಜೆಪಿಯೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಸರ್ವಸಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪದಾಧಿಕಾರಿಗಳು, ಬೆಂಬಗಲಿರೊಂದಿಗೆ ಬಿಜೆಪಿ ಪಕ್ಷವನ್ನು ಶಾಸಕ ಜನಾರ್ಧನ ರೆಡ್ಡಿ ನಾಳೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಇಂದು ಈ ಸಂಬಂಧ ತಮ್ಮ ನಿವಾಸದಲ್ಲಿ ಸಭೆ ನಡೆಸಿದಂತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಜನಾರ್ಧನರೆಡ್ಡಿ ಅವರು, ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾಳೆ ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿಪಿ ಪಕ್ಷವನ್ನು ವೀಲನಗೊಳಿಸೋದಾಗಿ ತಿಳಿಸಿದರು. ನಾಳೆ ಪಕ್ಷವನ್ನು ಬಿಜೆಪಿಜೊತೆಗೆ ವಿಲೀನಗೊಳಿಸೋದರ ಜೊತೆಗೆ, ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತಾವು ಸೇರ್ಪಡೆಯಾಗಲಿದ್ದೇನೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರೋದಾಗಿ ತಿಳಿಸಿದರು. https://kannadanewsnow.com/kannada/nikhil-kumaraswamy-seeks-a-days-time/ https://kannadanewsnow.com/kannada/lok-sabha-elections-2024-how-much-money-and-goods-have-been-seized-in-the-state-so-far-here-are-the-details/