Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅವರ ಬದಲಾವಣೆಯಿಲ್ಲ. ಸಿಎಂ ಬದಲಾವಣೆ ಎನ್ನುವುದು ಕೇವಲ ಗೊಂದಲ ಸೃಷ್ಠಿಯಷ್ಟೇ. ಇದು ಬಿಜೆಪಿಗರು ಸೃಷ್ಠಿಸುತ್ತಿರುವ ಗೊಂದಲ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಅಲ್ಲದೇ ಹಳೆಯ ಕಾರಾಗೃಹಕ್ಕೂ ಭೇಟಿ ನೀಡಿ, ಅಲ್ಲಿ ನಡೆಯುತ್ತಿದ್ದಂತ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು. ತಡವಾಗಿ ಬರುವ ಆರೋಗ್ಯ ಸಿಬ್ಬಂದಿ ವೇತನ ತಡೆಗೆ ಖಡ್ ಸೂಚನೆ ಸಾಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯಕ್ಕೆ ತಡವಾಗಿ ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ರಾತ್ರಿ ಪಾಳಿಯಲ್ಲಿ ವೈದ್ಯರಿರೋದಿಲ್ಲ. ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾರೆಲ್ಲ ಡ್ಯೂಟಿಗೆ ತಡವಾಗಿ ಬರುತ್ತಾರೋ ಅವರ ವೇತನ ತಡೆ ಹಿಡಿಯಿರಿ ಎಂಬುದಾಗಿ ಸ್ಥಳದಲ್ಲಿದ್ದಂತ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರಿಗೆ ಸೂಚಿಸಿದರು. ಸಾಗರ ತಾಲ್ಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ…
ಬೆಂಗಳೂರು: ರಾಜ್ಯದ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯಾಧ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ 10 ಸಾವಿರ ಕ್ರೆಶ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ 10 ಸಾವಿರ ಕ್ರೆಶ್ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಪಕ್ಕದಲ್ಲೇ ಪ್ರತ್ಯೇಕವಾಗಿ ಮಕ್ಕಳ ಪಾಲನಾ ಕೇಂದ್ರ ತೆರೆಯಲಾಗುತ್ತದೆ ಎಂದಿದ್ದಾರೆ. 6 ತಿಂಗಳಿನಿಂದ 3 ವರ್ಷದ ಮಕ್ಕಳನ್ನು ಇಲ್ಲಿ ಪಾಲನೆ ಮಾಡಲಾಗುತ್ತದೆ. ಮನೆಗೆಲಸ, ಕಾರ್ಖಾನೆ, ಇತರ ಕೆಲಸಗಳಿಗೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಈ ಕೇಂದ್ರಗಳಲ್ಲಿ ಬಿಟ್ಟು ಹೋಗಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. https://twitter.com/KarnatakaVarthe/status/1831314134266249517 https://kannadanewsnow.com/kannada/17000-anganwadi-centres-to-be-set-up-across-the-state-on-a-modern-model-minister-laxmi-hebbalkar/ https://kannadanewsnow.com/kannada/important-information-for-farmers-applications-invited-for-competition-of-various-crops-of-kharif-season-under-krishi-puraskar-scheme/ https://kannadanewsnow.com/kannada/bbreaking-wrestler-vinesh-phogat-bajrang-punia-join-congress-joining-congress/
Good News: ರಾಜ್ಯಾಧ್ಯಂತ ಆಧುನಿಕ ಮಾದರಿಯಲ್ಲಿ ‘17,000 ಅಂಗನವಾಡಿ ಕೇಂದ್ರ’ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ರಾಜ್ಯದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯಾಧ್ಯಂತ ಆಧುನಿಕ ಮಾದರಿಯಲ್ಲಿ 17 ಸಾವಿರ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ ಆಧುನಿಕ ಮಾದರಿಯಲ್ಲಿ 17 ಸಾವಿರ ಅಂಗನವಾಡಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಅದಕ್ಕಾಗಿ 104 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. 234 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ತುಮಕೂರು ಜಿಲ್ಲೆಯಲ್ಲಿ 234 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುವುದು. ತುಮಕೂರು ನಗರದಲ್ಲಿ ಸಿಎ ಸೈಟ್ ಸಿಕ್ಕರೆ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಆಗದ ವಿಚಾರ ಕೇಂದ್ರ ಸರ್ಕಾರ ಹಾಗೂ ರಾಜ್ಯ…
ಮೈಸೂರು: ಮೈಸೂರಿನ ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನಲೆಯಲ್ಲಿ, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಮುಡಾ ಅಧ್ಯಕ್ಷರಾಗಿರುವಂತ ಕೆ.ಮರಿಗೌಡ ಅವರು, ಬೆಂಗಳೂರಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದರು. ಇಂದು ಮೈಸೂರಿಗೆ ವಾಪಾಸ್ ಆಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/thippeswamy-a-teacher-at-rmsa-high-school-surapura-has-been-selected-for-the-yadgir-district-level-best-teacher-award/ https://kannadanewsnow.com/kannada/bbreaking-wrestler-vinesh-phogat-bajrang-punia-join-congress-joining-congress/ https://kannadanewsnow.com/kannada/big-news-muslim-rule-in-this-country-after-19-years-world-war-baba-vanga-shocking-predictions/
ಯಾದಗಿರಿ: 2024-25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಪ್ರೌಢ ಶಾಲಾ ವಿಭಾಗದಲ್ಲಿ ಸುರಪೂರದ ಆರ್ ಎಂ ಎಸ್ ಎ ದೇವಿಕೇರಾ ಪ್ರೌಢ ಶಾಲೆಯ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ. ಯಾದಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪಟ್ಟಿಯನ್ನು ಪ್ರಕಟಿಸಿದ್ದು, 2024-25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಲ್ವರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೂವರು ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಮೂವರು ಶಿಕ್ಷಕರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಯಾದಗಿರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಿಪ್ಪೇಸ್ವಾಮಿ ಆಯ್ಕೆ ಯಾದಗಿರಿ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಶ್ರೀ ತಿಪ್ಪೇಸ್ವಾಮಿ ಎಂ ಆರ್ ಗಣಿತ ಶಿಕ್ಷಕರು ಸರಕಾರಿ ಪ್ರೌಢಶಾಲೆ ( ಪಿ ಎಮ್ ಶ್ರೀ ಶಾಲೆ ) ದೇವಿಕೇರಾ ತಾಲೂಕು ಸುರಪುರ ಲಭಿಸಿರುತ್ತದೆ. 20 ವರ್ಷಗಳಿಂದ ಗಣಿತ ಶಿಕ್ಷಕರಾಗಿ ರಾಷ್ಟ್ರ ಹಾಗೂ ರಾಜ್ಯ ಹಂತದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ…
ಅಂಗಾರಕ ಜಯಂತಿ ಪೂಜೆ ನಮಗೆಲ್ಲ ಗೊತ್ತು. ನವಗ್ರಹಗಳಲ್ಲಿ ಭೂಮಿಗೆ ಸೇರಿದವನು ಮಂಗಳ. ಅದರ ಹೊರತಾಗಿ ಬಂಧುಬಳಗಕ್ಕೆ ಶಕ್ತಿ ಬರಬೇಕು ಆದರೆ ಈ ಬಾರಿ ಮಂಗಳ ದೇವರ ಕೃಪೆ ಬೇಕು. ಮನೆ ಖರೀದಿಸಲು ಬಯಸುವವರು, ಮನೆ ಮಾರಲು ಒತ್ತಾಯಿಸುವವರು, ಭೂಮಿ ಖರೀದಿಸಲು ಬಯಸುವವರು, ಮನೆ ಮತ್ತು ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಿಲುಕಿರುವವರು, ಸಾಲ ಮಾಡಿ ಸಂಕಷ್ಟದಲ್ಲಿರುವವರು ನಾಳೆ ಮಂಗಳವಾರ ದೇವರ ಪೂಜೆ ಮಾಡಿ. ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ. ನಾಳೆ ಮಂಗಳ ದೇವರ ಅವತಾರ ದಿನ, ಇದನ್ನು ಅಂಗಾರಕ ಜಯಂತಿ ಎಂದು ಹೇಳಲಾಗುತ್ತದೆ. ಈ ದಿನದಂದು ಮಂಗಳ ಭಗವಂತನನ್ನು ಹೇಗೆ ಪೂಜಿಸಬೇಕು ಎಂದು ತಿಳಿಯೋಣ ಈ ಆಧ್ಯಾತ್ಮಿಕ ಲೇಖನವನ್ನು ಓದುವುದನ್ನು ಮುಂದುವರಿಸಿ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ಕಾಯಿಲೆ ಎಂಬುದಾಗಿ ಘೋಷಣೆ ಮಾಡಿದೆ. ಜೊತೆ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವಂತೆಯೂ ಖಡಕ್ ಸೂಚನೆ ನೀಡಿದೆ. ಒಂದು ವೇಳೆ ಸ್ವಚ್ಛತೆಯನ್ನು ಕಾಪಾಡದೇ ಇದ್ದರೇ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಡೆಂಘಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಡೆಂಘಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಅಡಿಯ ನಿಯಮಗಳಿಗೆ ತಿದ್ದುಪಡಿ ಮಾಡಿ, “ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ ನಿಯಮಗಳು)2024” ಎಂಬ ಶೀರ್ಷಿಕೆಯಡಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಿದೆ ನಗರ ಪ್ರದೇಶದ ದಂಡದ ವಿವರ ರೂ.400 ಕುಟುಂಬಗಳಿಗೆ ರೂ.1000 ವಾಣಿಜ್ಯ ಸಂಸ್ಥೆ, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ ರೂ.2000 ಖಾಲಿ ನಿವೇಶನಗಳಿಗೆ ಹೀಗಿದೆ ಗ್ರಾಮೀಣ ಪ್ರದೇಶದ ದಂಡದ ವಿವರ ರೂ.200 ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ ರೂ.500 ಗ್ರಾಮೀಣ ಪ್ರದೇಶದ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ ರೂ.1000 ಖಾಲಿ ನಿವೇಶನಗಳಿಗೆ…
ಕಠ್ಮಂಡು: ನೇಪಾಳದ ಕೇಂದ್ರ ಬ್ಯಾಂಕ್, ನೇಪಾಳ ರಾಷ್ಟ್ರ ಬ್ಯಾಂಕ್, ಭಾರತೀಯ ಭೂಪ್ರದೇಶಗಳನ್ನು ಒಳಗೊಂಡ ದೇಶದ ಪರಿಷ್ಕೃತ ನಕ್ಷೆಯನ್ನು ಒಳಗೊಂಡ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮಂಗಳವಾರ (ಸೆಪ್ಟೆಂಬರ್ 3) Nepalkhabar.com ವರದಿಯ ಪ್ರಕಾರ, ಈ ಕ್ರಮವು ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ನೇಪಾಳ ರಾಷ್ಟ್ರ ಬ್ಯಾಂಕಿನ ಜಂಟಿ ವಕ್ತಾರ ದೆಹಲಿರಾಮ್ ಪೋಖರೆಲ್ ಪ್ರಕಟಣೆಗೆ ತಿಳಿಸಿದ್ದಾರೆ. ಪರಿಷ್ಕೃತ ನಕ್ಷೆಯಲ್ಲಿ ಭಾರತದ ಪ್ರದೇಶಗಳಾದ ಕಾಲಾಪಾನಿ, ಲಿಪುಲೆಖ್ ಮತ್ತು ಲಿಂಪಿಯಾಧುರಾವನ್ನು ನೇಪಾಳದ ಭಾಗವಾಗಿ ತೋರಿಸಲಾಗಿದೆ. ಈ ನೋಟುಗಳ ಉತ್ಪಾದನೆಯನ್ನು ಅಂತಿಮಗೊಳಿಸಲು ಆರು ತಿಂಗಳಿನಿಂದ ಒಂದು ವರ್ಷದವರೆಗೆ ತೆಗೆದುಕೊಳ್ಳುತ್ತದೆ ಎಂದು ಪೋಖರೆಲ್ ಸಲಹೆ ನೀಡಿದರು. ಪ್ರತಿಕ್ರಿಯೆಗೆ ಲಭ್ಯವಿಲ್ಲದ ಕಾರಣ ಬ್ಯಾಂಕಿನ ಪ್ರಾಥಮಿಕ ವಕ್ತಾರರಿಂದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಪಡೆಯುವ ಅವರ ಪ್ರಯತ್ನಗಳು ವಿಫಲವಾಗಿವೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ತಿಳಿಸಿದೆ. ಹೊಸ ನೋಟುಗಳನ್ನು ಮುದ್ರಿಸುವ ನಿರ್ಧಾರವನ್ನು ಅಂದಿನ ಪ್ರಧಾನಿ ಪುಷ್ಪ ಕಮಲ್ ದಹಲ್…
ಧಾರವಾಡ : ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗಿದ್ದು, ಕೃಷಿ ಇಲಾಖೆಯ ಕೆ-ಕಿಸಾನ ಫೋರ್ಟಲ್‍ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ. ಸಿಟಿಜನ್ ಲಾಗಿನ್ ಅಥವಾ ಆರ್‍ಎಸ್‍ಕೆ ಲಾಗಿನ್ ಮೂಲಕ ಹತ್ತಿರದ ರೈತಸಂಪರ್ಕಕೇಂದ್ರ ಅಥವಾ ಸೇವಾಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಸದರಿ ಪ್ರಶಸ್ತಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್‍ಐಡಿ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳ ರೈತರು ಸೆಪ್ಟೆಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ…
ಬೆಂಗಳೂರು: ಇಂದು ನ್ಯಾಯಾಲಯಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರು ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಲಾಗಿದೆ. ಹಾಗಾದ್ರೇ ನಟ ದರ್ಶನ್ ವಿರುದ್ಧದ ಕೊಲೆ ಕೇಸ್ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಿರುವಂತ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಏನಿದೆ ಎನ್ನುವಂತ ಸಂಪೂರ್ಣ ಮಾಹಿತಿ ಮುಂದಿದೆ ಓದಿ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 4,800 ಪುಟಗಳ ಪೊಲೀಸ್ ಚಾರ್ಜ್ಶೀಟ್ ಬುಧವಾರ ಸಲ್ಲಿಕೆಯಾಗಲಿದ್ದು, ಈ ಅಪರಾಧದಲ್ಲಿ ಜೈಲಿನಲ್ಲಿರುವ ಕನ್ನಡ ಸೂಪರ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಪಾತ್ರವನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್, ಅವರ ಪಾರ್ಟ್ನರ್ ಪವಿತ್ರಾ ಗೌಡ ಮತ್ತು 15 ಸಹಚರರ ವಿರುದ್ಧ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು. ಪಿತೂರಿ, ಯೋಜನೆ, ಅಪಹರಣ, ಚಿತ್ರಹಿಂಸೆ, ಕೊಲೆ, ಸಾಕ್ಷ್ಯ ನಾಶದಲ್ಲಿ ದರ್ಶನ್, ಗೌಡರ ಪಾತ್ರ…