Author: kannadanewsnow09

ಬೆಂಗಳೂರು: ಬರದ ವಿಚಾರದಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿಯನ್ನು ಕೊಡದ ಕೇಂದ್ರ ಸರ್ಕಾರ ಇಂದು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರಪರಿಹಾರದ ವಿಚಾರದಲ್ಲಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಅನಿವಾರ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಮಿತ್ ಶಾ ಅವರು ತಾವು ಆಡಿದ ಮಾತುಗಳನ್ನೇ ಸುಪ್ರೀಂ ಕೋರ್ಟ್ ಮುಂದೆ ಅಫಿಡೆವಿಟ್ ರೂಪದಲ್ಲಿ ಸಲ್ಲಿಸಲಿ ಎಂದು ಸವಾಲು ಹಾಕಿದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದು ಸ್ಪಷ್ಟ. ಸತ್ಯಾಂಶ ಜನರಿಗೆ ಗೊತ್ತಿದೆ. ಒಂದು ರೂಪಾಯಿ ಕೊಡದೇ ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಅವರು ಕರ್ನಾಟಕದ ಜನರ ಮುಂದೆ ಸುಳ್ಳು ನೆಪಗಳನ್ನ ಹೇಳಿತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಕೇಂದ್ರದ ತೆರಿಗೆ ಪಾಲಿನಲ್ಲಿ…

Read More

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India -RBI) ಹಣಕಾಸು ನೀತಿ ಸಮಿತಿ (Monetary Policy Committee -MPC) ತನ್ನ ಬಹುನಿರೀಕ್ಷಿತ ನೀತಿ ಹೇಳಿಕೆಯನ್ನು ನಾಳೆ (ಏಪ್ರಿಲ್ 5) ಬಿಡುಗಡೆ ಮಾಡಲಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಮೊದಲ ಘೋಷಣೆಯಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಸಮಿತಿಯು ಏಪ್ರಿಲ್ 5 ರಂದು ಬೆಳಿಗ್ಗೆ 10 ಗಂಟೆಗೆ ಹೇಳಿಕೆಯನ್ನು ಪ್ರಕಟಿಸಲಿದೆ. ಸಮಿತಿಯು ರಾಷ್ಟ್ರದ ವಿತ್ತೀಯ ನೀತಿ ಮತ್ತು ಸಾಲದ ದರಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಇದು ಸಮಿತಿಯ ಮೊದಲ ದ್ವೈಮಾಸಿಕ ಪರಿಶೀಲನೆಯಾಗಿದ್ದು, ಇದರ ಪ್ರಕಾರ ಬಡ್ಡಿದರಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಆರ್ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಏಪ್ರಿಲ್ 3 ರಂದು ಮೂರು ದಿನಗಳ ಚರ್ಚೆಯನ್ನು ಪ್ರಾರಂಭಿಸಿತು. ಸಮಿತಿ ಸಭೆ ಸೇರಿದ ನಂತರ ಏನಾಗುತ್ತದೆ? ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆಯನ್ನು ಪ್ರಕಟಿಸಲಿದ್ದಾರೆ. ನೀತಿ ವಿವರಗಳ ಬಗ್ಗೆ ಮಾತನಾಡಲು…

Read More

ಹಾವೇರಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಚುನಾನಣಾ ಪ್ರಚಾರದ ನಡುವೆಯೇ ದೇವಸ್ಥಾನ ಹಾಗೂ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸ್ವಾಮೀಜಿಗಳ ಹೋರಾಟದ ಫಲವಾಗಿ ಎಸ್ಟಿ ಮೀಸಲಾತಿ ಹೆಚ್ಚಳವಾಗಿದೆ ಎಂದು ಹೇಳಿದರು. ಬೆಳಿಗ್ಗೆ ಟೆಂಪಲ್ ರನ್ ಆರಂಭಿಸಿದ ಅವರು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಇರುವ ಪಾರ್ಶ್ವ ಪದ್ಮಾಲಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ್ ಕ್ರಾಸ್ ಬಳಿ ಇರುವ ಗಾಯತ್ರಿ ತಪೋ ಭೂಮಿಗೆ ಭೇಟಿ ನೀಡಿದರು‌. ಅಲ್ಲಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಿ, ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,…

Read More

ಮಂಡ್ಯ: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ 2500 ರೂ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಕಂದಾಯ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯ  ಮಳವಳ್ಳಿ ತಾಲೂಕಿನ ಬಾಚನಹಳ್ಳಿ ವೃತ್ತದ ವಿಎ ಸಿದ್ಧರಾಯ ಮಾಳಿ ಅವರು, ವಡ್ಡರಹಳ್ಳಿಯ ಶಿವಕುಮಾರ್ ಎಂಬುವರಿಗೆ ಆರ್ ಟಿಸಿಯಲ್ಲಿನ ಸಾಲದ ವಿವರಗಳನ್ನು ತೆಗೆದು ಹಾಕಲು 3000 ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ವಿಎ ಸಿದ್ದರಾಯ ಮಾಳಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮುಂಗಡವಾಗಿ ರೂ.2,500 ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಆರ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ಸಂಬಂಧ ಸಿಆರ್ ಸಂಖ್ಯೆ 7/2024ಯು / ಎಸ್ 7 (ಎ) ಪಿಸಿ ಕಾಯ್ದೆ (ತಿದ್ದುಪಡಿ) 2018 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ. https://kannadanewsnow.com/kannada/note-time-till-april-9-for-inclusion-of-names-in-electoral-rolls/ https://kannadanewsnow.com/kannada/state-govt-should-show-manhood-by-providing-drought-relief-from-its-treasury-bommai/

Read More

ಮನುಷ್ಯನು ಹುಟ್ಟಿದ ನಂತರ ಶ್ರೀಮಂತನಾಗಲು ಮಹಾಲಕ್ಷ್ಮಿ ಅನುಗ್ರಹ ಖಂಡಿತವಾಗಿ ಬೇಕು. ತಾಯಿ ಲಕ್ಷ್ಮೀದೇವಿಗೆ ಶುಭ್ರತೆ ಎಂದರೆ ಬಹಳ ಇಷ್ಟ , ಆದ್ದರಿಂದ ಸದಾಕಾಲದಲ್ಲೂ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಗೆ ಸಂಬಂಧಪಟ್ಟ ವಸ್ತುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಉದಾಹರಣೆಗೆ ಕಸಗುಡಿಸುವ ಪೊರಕೆ, ರುಬ್ಬುವ ಕಲ್ಲು, ಮನೆಯ ಮುಖ್ಯದ್ವಾರದ ಹೊಸ್ತಿಲು. ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ.…

Read More

ಹಾವೇರಿ: ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ಬಿಡುಗಡೆ ಮಾಡಿ ತನ್ನ ಗಂಡಸ್ತನ ತೋರಿಸಲಿ, ನಾವು ಅಧಿಕಾರದಲ್ಲಿದ್ದಾಗ ಪ್ರವಾಹಕ್ಕೆ ಎರಡು ಪಟ್ಟು ಪರಿಹಾರ ನೀಡಿ ನಮ್ಮ ಗಂಡಸ್ತನ ತೋರಿಸಿದ್ದೇವೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾನಗಲ್ ತಾಲೂಕು ಆಡೂರು ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದೆ ಬರಗಾಲದ ಬಗ್ಗೆ ಮಾತನಾಡಲು ಒಬ್ಬೇ ಒಬ್ಬ ಬಿಜೆಪಿ ನಾಯಕರು ಗಂಡಸರಾಗಿ ನಿಂತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೋಡಿ, ಈಗ ಸದ್ಯ ಗಂಡಸ್ಥನ ಟೆಸ್ಟ್ ಆಗೋದು ಯಾರು ಅಧಿಕಾರದಲ್ಲಿದ್ದಾರೆ ಅವರದ್ದು, ಸಿದ್ದರಾಮಯ್ಯರನ್ನು ಜನ ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ತಂದ ಮಾಲೀಕರು ಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಧಾವಿಸುವುದು ಅವರ ಕೆಲಸ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಯಾರಿಗೂ ಕಾಯದೇ ಪ್ರವಾಹ ಪರಿಹಾರ ಎರಡು ಪಟ್ಟು ಬಿಡುಗಡೆ ಮಾಡಿದ್ದೇವೆ 17 ಲಕ್ಷ ಜನರಿಗೆ ಪರಿಹಾರ…

Read More

ಬೆಂಗಳೂರು: ಗುರುವಾರ ಹೊರತುಪಡಿಸಿ ಎಲ್ಲಾ ದಿನ ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದೆ. ಈ ಕುರಿತಂತೆ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರೈಲುಗಳ ನಿಯಂತ್ರಣ ತಿರುವನಂತಪುರಂ ವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್-2024 ತಿಂಗಳ ರೈಲ್ವೆ ಸ್ವತ್ತುಗಳ ಅಗತ್ಯ ನಿರ್ವಹಣಾ ಕಾರ್ಯಗಳಿಗಾಗಿ ಈ ಕೆಳಗಿನ ರೈಲು ಸೇವೆಯನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ಏಪ್ರಿಲ್ 4  ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16315 ಮೈಸೂರು-ಕೊಚುವೇಲಿ ಎಕ್ಸ್ ಪ್ರೆಸ್ ರೈಲು 185 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ. ಏಪ್ರಿಲ್ 4  ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು 60 ನಿಮಿಷಗಳ ಕಾಲ ಮಾರ್ಗದಲ್ಲಿ ನಿಯಂತ್ರಿಸಲಾಗುತ್ತಿದೆ. ಏಪ್ರಿಲ್ 4, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12684 ಎಸ್ಎಂವಿಟಿ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು 135 ನಿಮಿಷಗಳ ಕಾಲ…

Read More

ಬೆಂಗಳೂರು: ಕಾನೂನು ಬಾಹಿರ ವಾಗಿ ಮಗವನ್ನು ದತ್ತು ಪಡೆದ ಪ್ರಕರಣದಲ್ಲಿ ಆರೋಪಿ ಸೋನು ಶ್ರೀನಿವಾಸ್ ಗೌಡ ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಸಂಬಂಧ PDJ ಕೋರ್ಟ್ ನಿಂದ ಜಾಮೀನು ತೀರ್ಪು (principal district and sessions judge) ಪ್ರಕಟಿಸಿದ್ದಾರೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದಂತ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇಬ್ಬರು ಶ್ಯೂರಿಟಿ, 1 ಲಕ್ಷ ಬ್ಯಾಂಡ್ ಷರುತ್ತನ್ನು ನ್ಯಾಯಾಲಯವು ವಿಧಿಸಿದೆ. ಹೀಗಾಗಿ ಜಾಮೀನು ಬಳಿಕ ನಾಳೆ ಅಥವಾ ನಾಡಿದ್ದು ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಬಿಡುಗಡೆಯಾಗೋ ಸಾಧ್ಯತೆಯಿದೆ. ಅಂದಹಾಗೇ ಬ್ಯಾಡರಹಳ್ಳಿ ಪೊಲೀಸರಿಂದ ಮಾರ್ಚ್ 22 ರಂದು ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದರಿಂದ ದೂರು…

Read More

ಬೆಂಗಳೂರು: ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಮತದಾರರು ಪಟ್ಟಿಯಿಂದ ಕೈಬಿಟ್ಟು ಹೊಗಿದ್ದಲ್ಲಿ ಹಾಗೂ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಏ. 09 ರ ವರೆಗೆ ಕಾಲಾವಕಾಶ ಕಲ್ಪಿಸಿಕೊಡಲಾಗಿದೆ. ಮತದಾರರೇ ನೇರವಾಗಿ http://www.nvsp.in ಮತ್ತು http://voterportal.eci.gov.in ಹಾಗೂ voter Helpline App ಗಳ ಮೂಲಕ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. https://kannadanewsnow.com/kannada/mandya-wife-anitha-is-richer-than-hd-kumaraswamys-wife/ https://kannadanewsnow.com/kannada/japan-launches-e-visa-for-indian-tourists-how-to-apply/

Read More

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆಯಾಗಿದ್ದಾರೆ. ಕುಮಾರಸ್ವಾಮಿ ಬಳಿಯಲ್ಲಿ 10,71,26,354.98 ರೂ ಚಿರಾಸ್ತಿ ಹೊಂದಿದ್ದರೇ, ಅನಿತಾ ಕುಮಾರಸ್ವಾಮಿ 90,32,28,973 ರೂ ಚಿರಾಸ್ತಿ ಹೊಂದಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿಯಲ್ಲಿ 750 ಗ್ರಾಮ ಚಿನ್ನಾಭರಣವಿದ್ದು ಅದರ ಮೌಲ್ಯ 4,06,250 ಆಗಿದೆ. ಅದೇ ಅನಿತಾ ಕುಮಾರಸ್ವಾಮಿ ಬಳಿಯಲ್ಲಿ 3852.84 ಗ್ರಾಂ ಚಿನ್ನಾಭರಣವಿದ್ದು ಅವುಗಳ ಮೌಲ್ಯ 2,41,76,571 ಕೋಟಿಯಾಗಿದೆ. ಇನ್ನೂ ಕುಮಾರಸ್ವಾಮಿ ಹತ್ರ 12.5 ಕೆಜಿ ಬೆಳ್ಳಿಯ ವಸ್ತುಗಳಿವೆ. ಅದರ ಬೆಲೆ ರೂ.9,62,500 ಆಗಿದೆ. ಅನಿತಾ ಕುಮಾರಸ್ವಾಮಿ ಬಳಿಯಲ್ಲಿ 17 ಕೆಜಿ ಬೆಳ್ಳಿ ವಸ್ತುಗಳಿದ್ದಾವೆ. ಅದರ ಬೆಲೆ ರೂ.13,09,000 ಆಗಿದೆ. ಕುಮಾರಸ್ವಾಮಿ ಬಳಿಯಲ್ಲಿ ನಾಲ್ಕು ಕ್ಯಾರೆಟ್ ವಜ್ರಗಳಿದ್ದರೇ, ಅನಿತಾ ಬಳಿಯಲ್ಲಿ 5.91 ಕ್ಯಾರೆಜ್ ಡೈಮಂಡ್ ಇದ್ದಾವೆ. ಆದರೂ ಅನಿತಾ ಕುಮಾರಸ್ವಾಮಿ 63.05 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರೆ,  ಕುಮಾರಸ್ವಾಮಿ ಅವರು…

Read More