Subscribe to Updates
Get the latest creative news from FooBar about art, design and business.
Author: kannadanewsnow09
ಕೋಲಾರ: ಸೋಲಿನ ಭೀತಿಯಿಂದ ಬಿಜೆಪಿಯ ಅರ್ಧದಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಬಿಜೆಪಿ ದೇಶದಲ್ಲಿ 200ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಿಮ್ಮೆಲ್ಲರಿಗೂ ಅನುಕೂಲವಾಗಲಿದೆ. ಕುರುಡುಮಲೆಯಲ್ಲಿ ವಿನಾಯಕನಿಗೆ ಪೂಜೆ ಮಾಡಿ ರಾಜ್ಯದ ಕಷ್ಟ ನಿವಾರಣೆ ಮಾಡಲು ಪ್ರಾರ್ಥಿಸಿ ಈ ಪ್ರಚಾರ ಆರಂಭಿಸಿದ್ದೇವೆ. ನಾವು ಕಳೆದ ಚುನಾವಣೆಯಲ್ಲಿ ನುಡಿದಂತೆ ನಡೆದಿದ್ದೇವೆ. ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ದೇಶಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ. ನೀವು ನಮ್ಮೆಲ್ಲರ ಕೈ ಬಲಪಡಿಸಬೇಕು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕೋಲಾರದ ಮುಳಬಾಗಿಲಿನಲ್ಲಿ ನಡೆದ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಬಯಸದೇ ಬಂದ ಭ್ಯಾಗ್ಯ ಎಂಬಂತೆ ಗೌತಮ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಬರುತ್ತಿದೆಯೇ ಎಂದು ಕೇಳಿದಾಗ ಬರುತ್ತಿದೆ ಎಂದರು. ಬಸ್ ಗಳಲ್ಲಿ ಉಚಿತ…
ಬೆಂಗಳೂರು: ರಾಜ್ಯಾಧ್ಯಂತ ಭಾಷೆ-1ರ ಪತ್ರಿಕೆಯ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ 8. ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 15,402 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಾರ್ಥ್ ವಿಭಾಗದಲ್ಲಿ 45871 ಮಂದಿ, ಬೆಂಗಳೂರು ಸೌಥ್ ವಿಭಾಗದಲ್ಲಿ 58018 ವಿದ್ಯಾರ್ಥಿಗಳು, ರಾಮನಗರದಲ್ಲಿ 12755, ಬೆಂಗಳೂರು ಗ್ರಾಮಾಂತರದಲ್ಲಿ 14046 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 15551, ಕೋಲಾರದಲ್ಲಿ 19471, ಮಧುಗಿರಿಯಲ್ಲಿ 12398, ತುಮಕೂರು 21474, ಮೈಸೂರು 37199, ಉಡುಪಿ 13603, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28338 ಸೇರಿದಂತೆ ರಾಜ್ಯಾಧ್ಯಂತ 8,26,117 ವಿದ್ಯಾರ್ಥಿಗಳು ಇಂದಿನ ಭಾಷಾ ಪರೀಕ್ಷೆಯಲ್ಲಿ ಹಾಜರಾಗಿದ್ದಾರೆ ಎಂದಿದೆ. ಒಟ್ಟಾರೆಯಾಗಿ 8,41,519 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,26,117 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇಂದಿನ ಪರೀಕ್ಷೆಯಲ್ಲಿ 15,402 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.2ರಷ್ಟು ಹಾಜರಾತಿಯಿದೆ ಎಂದಿದೆ.
ಆನೇಕಲ್: ನಗರದ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿಯಲ್ಲಿ ನಡೆದಂತ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಬೃಹತ್ ಗಾತ್ರದ ತೇರು ಕುಸಿದು ಬಿದ್ದಿರುವಂತ ಘಟನೆ ನಡೆದಿದೆ. ಆದ್ರೇ ಯಾವುದೇ ಅನಾಹುತ ಸಂಭವಿಸಿಲ್ಲ. ಆನೇಕಲ್ ತಾಲೂಕಿನ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿಯಲ್ಲಿ ಹುಸ್ಕೂರ್ ಮದ್ದೂರಮ್ಮ ಜಾತ್ರೆಯನ್ನು ನಡೆಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ಎತ್ತು, ಟ್ರ್ಯಾಕ್ಟರ್ ನೆರವಿನಿಂದ ಎಳೆಯುತ್ತಿದ್ದಂತ ಸಂದರ್ಭದಲ್ಲಿ, ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 120 ಅಡಿ ಎತ್ತರದ ಹುಸ್ಕೂರು ಮದ್ದೂರಮ್ಮ ದೇವಿಯ ತೇರು, ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಎಳೆದುಕೊಂಡು ಹೋಗುತ್ತಿದ್ದಂತ ಸಂದರ್ಭದಲ್ಲಿ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನ ಬಳಿಯಲ್ಲಿ ನಿಯಂತ್ರಣ ತಪ್ಪಿ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ದಾವಣಗೆರೆ: ಬಿಎಸ್ಎನ್ಎಲ್ ಈಗ ತನ್ನ ಬಳಕೆದಾರರಿಗೆ ಉಚಿತ 4ಜಿ ಸಿಮ್ ಅಪ್ಗ್ರೇಡ್ಗಳನ್ನು ನೀಡುತ್ತಿದೆ. ಬಿಎಸ್ಎನ್ಎಲ್ ಬಳಕೆದಾರರಾಗಿದ್ದಲ್ಲಿ ಈಗಿರುವ 2ಜಿ, 3ಜಿ ಬದಲಿಗೆ ವೇಗದ 4ಜಿ ನೆಟ್ವರ್ಕ್ ಅನ್ನು ಪಡೆಯಲು ಬಯಸಿದರೆ, ಮೂಲ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಯಾವುದೇ ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರ, ಪ್ರಾಂಚೈಸಿ, ಸಿಎಸ್ಸಿಗಳಲ್ಲಿ ಉಚಿತ 4ಜಿ ಸಿಮ್ ಪಡೆಯಬಹುದಾಗಿದೆ. ಬಿಎಸ್ಎನ್ಎಲ್ ಬಳಕೆದಾರರ ಗುರುತಿನ ಡಿಜಿಟಲ್ ಪರಿಶೀಲನೆ; ಬಿಎಸ್ಎನ್ಎಲ್ನ ಎಲ್ಲಾ ಗ್ರಾಹಕರು ಈ ಹಿಂದೆ ಕಾಗದದ ಅರ್ಜಿಯನ್ನು ಸಲ್ಲಿಸುವ ಮೂಲಕ ಮೊಬೈಲ್ ಸಿಮ್ ತೆಗೆದುಕೊಂಡ ಬಿಎಸ್ಎನ್ಎಲ್ ಎಲ್ಲಾ ಗ್ರಾಹಕರನ್ನು ಡಿಜಿಟಲ್ ಮೋಡ್ನಲ್ಲಿ ಮರುಪರಿಶೀಲಿಸಿಕೊಳ್ಳಬೇಕು. ಇದು ಅಸ್ತಿತ್ವದಲ್ಲಿರುವ ಬಳಕೆದಾರರ ಗುರುತನ್ನು ದೃಢೀಕರಿಸುವ ಪ್ರಕ್ರಿಯೆಯಾಗಿದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಯಾವುದೇ ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರ, ಬಿಎಸ್ಎನ್ಎಲ್ ಫ್ರಾಂಚೈಸಿ ಮತ್ತು ರಿಟೇಲರ್ ಅಂಗಡಿಯಲ್ಲಿ ಮರುಪರಿಶೀಲಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರು ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮೂಲ ಗುರುತಿನ…
ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು. ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು. ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ…
ಬೆಂಗಳೂರು: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಕಿಡಿಗೇಡಿಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದನು. ಈ ಪೋಸ್ಟ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಕಿಡಿಗೇಡಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿಡಿಗೇಡಿ ವಿರುದ್ಧ FIR ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಸೋಲಿಗೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ ಎಂಬುದಾಗಿ ಗಜಪಡೆ ಸೋಷಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಕಿಡಿಗೇಡಿಯೊಬ್ಬ ಪೋಸ್ಟ್ ಮಾಡಿದ್ದನು. ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆರ್ ಸಿ ಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೇ ತಂಡ ಸೋತಿದೆ ಎಂಬುದಾಗಿ ಅವಾಚ್ಯ ಶಬ್ದ ಬಳಸಿ ನಿಂದಿಸಿ, ಅವಹೇಳನ ಮಾಡಲಾಗಿತ್ತು. ಈ ಪೋಷ್ಟ್ ಹಾಕಿದವರ ವಿರುದ್ಧ ಅಭಿಮಾನಿಗಳು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆದರಿಸಿ, ಕಿಡಿಗೇಡಿಯ…
ಬೆಂಗಳೂರು: ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಏಪ್ರಿಲ್ 5ರಿಂದ ಮೇ 4ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಸಂಬಂಧಿಸಿದ ಅರ್ಜಿ ಶುಲ್ಕ ಪಾವತಿಸಲು ಮೇ 7ರ ಬ್ಯಾಂಕ್ ಅವಧಿಯವರೆಗೆ ಅವಕಾಶವಿರುತ್ತದೆ ಎಂದಿದ್ದಾರೆ. ಈ ಮುಂಚೆ, ಫೆ.20ರಂದು ಅಧಿಸೂಚನೆ ಹೊರಡಿಸಿ, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 3ರವರೆಗೆ ಅವಕಾಶ ಕೊಡಲಾಗಿತ್ತು. ಆದರೆ ಆನ್ಲೈನ್ ಅರ್ಜಿಯಲ್ಲಿ ಆದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ, ಈಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. https://twitter.com/KEA_karnataka/status/1776219412112252966 ಕೆ-ಸೆಟ್-23 ಕೀ ಉತ್ತರ ಪ್ರಕಟ ಕಳೆದ ಜನವರಿ 13ರಂದು 42 ವಿವಿಧ ವಿಷಯಗಳಿಗೆ ನಡೆಸಲಾಗಿದ್ದ ಕೆ-ಸೆಟ್-2023ರ ಎಲ್ಲಾ ವಿಷಯಗಳ ಅಂತಿಮ ಕೀ ಉತ್ತರಗಳನ್ನು…
ಬೆಂಗಳೂರು: ಕೆಲ ತಿಂಗಳ ಹಿಂದೆ ನಡೆದಿದ್ದಂತ ಕೆ-ಸೆಟ್-23ರ ಪರೀಕ್ಷೆಯ ಕೀ ಉತ್ತರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಮಾಹಿತಿ ನೀಡಿದ್ದು, ಕಳೆದ ಜನವರಿ 13ರಂದು 42 ವಿವಿಧ ವಿಷಯಗಳಿಗೆ ನಡೆಸಲಾಗಿದ್ದ ಕೆ-ಸೆಟ್-2023ರ ಎಲ್ಲಾ ವಿಷಯಗಳ ಅಂತಿಮ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ. https://twitter.com/KEA_karnataka/status/1776223066726817887 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮೇ 4 ಕೊನೆ ದಿನ ಬೆಂಗಳೂರು: ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಏಪ್ರಿಲ್ 5ರಿಂದ ಮೇ 4ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಸಂಬಂಧಿಸಿದ ಅರ್ಜಿ…
ನ್ಯೂಯಾರ್ಕ್: ಜನನಿಬಿಡ ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ನ್ಯೂಜೆರ್ಸಿಯ ಲೆಬನಾನ್ ಬಳಿ 4.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಏಜೆನ್ಸಿ ವರದಿ ಮಾಡಿದೆ. ಹಾನಿಯ ಬಗ್ಗೆ ಯಾವುದೇ ಆರಂಭಿಕ ವರದಿಗಳಿಲ್ಲ ಎಂದು ನ್ಯೂಯಾರ್ಕ್ನ ಅಗ್ನಿಶಾಮಕ ಇಲಾಖೆ ತಿಳಿಸಿದೆ. https://twitter.com/USGS_Quakes/status/1776259765376778694 ಮಿಡ್ ಟೌನ್ ಮ್ಯಾನ್ಹ್ಯಾಟನ್ ನಲ್ಲಿ, ವಾಹನ ಚಾಲಕರು ಕ್ಷಣಕಾಲ ನಡುಗುವ ಬೀದಿಗಳಲ್ಲಿ ತಮ್ಮ ಹಾರ್ನ್ ಗಳನ್ನು ಬಾರಿಸುತ್ತಿದ್ದಂತೆ ಸಂಚಾರದ ಸಾಮಾನ್ಯ ಗದ್ದಲವು ಜೋರಾಗಿತ್ತು. ಕೆಲವು ಬ್ರೂಕ್ಲಿನ್ ನಿವಾಸಿಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಶಬ್ದವನ್ನು ಕೇಳಿದರು. ಅವರ ಕಟ್ಟಡವು ನಡುಗಿತು. ಮ್ಯಾನ್ಹ್ಯಾಟನ್ನ ಈಸ್ಟ್ ವಿಲೇಜ್ನಲ್ಲಿರುವ ಅಪಾರ್ಟ್ಮೆಂಟ್ ಮನೆಯಲ್ಲಿ, ಹೆಚ್ಚು ಭೂಕಂಪ ಪೀಡಿತ ಕ್ಯಾಲಿಫೋರ್ನಿಯಾದ ನಿವಾಸಿಯೊಬ್ಬರು ಆತಂಕಗೊಂಡ ನೆರೆಹೊರೆಯವರನ್ನು ಶಾಂತಗೊಳಿಸಿದರು. ಬಾಲ್ಟಿಮೋರ್, ಫಿಲಡೆಲ್ಫಿಯಾ ಮತ್ತು ಇತರ ಪ್ರದೇಶಗಳಲ್ಲಿನ ಜನರು ಸಹ ನೆಲದ ಕಂಪನವನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ತಮ್ಮ ತಂಡವು ಪರಿಣಾಮಗಳು ಮತ್ತು ಯಾವುದೇ ಸಂಭಾವ್ಯ ಹಾನಿಯನ್ನು…
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಾಧಿಸಲು ಕೆಲವು ವಿಷಯಗಳನ್ನು ಹೊಂದಿರುತ್ತಾರೆ. ನಾವು ಆ ವಿಷಯಗಳನ್ನು ಪ್ರಯತ್ನಿಸಿದಾಗ, ನಾವು ದೇವತೆಗೆ ಅನುಗುಣವಾದ ಪ್ರಾರ್ಥನೆಯನ್ನು ಮಾಡುತ್ತೇವೆ. ಯಾವುದೇ ಕೋರಿಕೆಯನ್ನು ಸಲ್ಲಿಸಿದರೂ ಅದು ಸಮಂಜಸವಾದ ಮನವಿಯಾಗಿದ್ದರೆ ಕೋರಿಕೆಯನ್ನು ಈಡೇರಿಸಲಾಗುವುದು. ಇದಕ್ಕೆ ಅನೇಕ ಪರಿಹಾರಗಳು ಮತ್ತು ಆಚರಣೆಗಳಿವೆ. ಕೆಲವು ವಾರಗಳು ಅಥವಾ ದಿನಗಳವರೆಗೆ ನಾವು ಈ ಪರಿಹಾರಗಳನ್ನು ಮತ್ತು ಆಚರಣೆಗಳನ್ನು ನಿಯಮಿತವಾಗಿ ಮಾಡಬೇಕು. ಆಗ ಮಾತ್ರ ಆ ಆಸೆ ಈಡೇರುತ್ತದೆ. ಅದೂ ಅಲ್ಲದೆ ಆಧ್ಯಾತ್ಮದ ಬಗ್ಗೆ ಈ ಪೋಸ್ಟ್ ನಲ್ಲಿ ನೋಡಲಿದ್ದೇವೆ , ನಮ್ಮ ಪ್ರಾರ್ಥನೆ ಒಂದೇ ದಿನದಲ್ಲಿ ನೆರವೇರಬೇಕಾದರೆ ಯಾವ ರೀತಿಯಲ್ಲಿ ಪೂಜೆ ಮಾಡಬೇಕು . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ,…