Author: kannadanewsnow09

ಬೆಂಗಳೂರು: ನಾಳೆ ಬಿಡದಿ ಹಾಫ್ ಮ್ಯಾರಥಾನ್ 2025 ನಡೆಯಲಿದೆ. ಈ ಪ್ರಯುಕ್ತ ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4 ಗಂಟೆಯಿಂದಲೇ ಆರಂಭಗೊಳ್ಳಲಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಾರ್ಚ್ 23, 2025ರ ಭಾನುವಾರದ ನಾಳೆ ನಡೆಯಲಿರುವ ಬಿಡದಿ ಹಾಫ್ ಮ್ಯಾರಥಾನ್ ಪುಯುಕ್ತ ಎಲ್ಲಾ ನಾಲ್ಕು, ಟರ್ಮಿನಲ್‌ಗಳಿಂದ 7.00 ಗಂಟೆಗೆ ಬದಲಾಗಿ ಮುಂಜಾನೆ 5.00 ಗಂಟೆಗೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿವೆ ಎಂದು ತಿಳಿಸಿದೆ. ಆದಾಗ್ಯೂ, ಸಾರ್ವಜನಿಕರು ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ, ಮೆಟ್ರೋ ರೈಲು ಸೇವೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್ ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕಡೆಗೆ ಮುಂಜಾನೆ 4.00 ಗಂಟೆಯಿಂದ ಲಭ್ಯವಿರುತ್ತದೆ ಎಂದಿದೆ. https://twitter.com/officialbmrcl/status/1903047898264215940?s=46 https://kannadanewsnow.com/kannada/in-a-shocking-incident-a-woman-was-seen-walking-in-the-middle-of-the-road-in-hassan/ https://kannadanewsnow.com/kannada/nagpur-violence-14-more-held-number-of-arrests-reaches-105-3-fresh-firs-registered/

Read More

ಹಾಸನ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಹಾಸನದಲ್ಲಿ ಮಹಿಳೆಯೊಬ್ಬರು ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಓಡಾಡಿದಂತ ಘಟನೆಯ ವೀಡಿಯೋ ವೈರಲ್ ಆಗಿದೆ. ಹಾಸನ ನಗರ ಬಸ್ ನಿಲ್ದಾಣದಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಮಹಿಳೆ ಲಾಂಗ್ ಹಿಡಿದು ಓಡಾಡಿದಂತ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇದಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದಲೂ ನಿಂದಿಸುತ್ತಾ ಗಂಡನನ್ನು ಲಾಂಗ್ ಹಿಡಿದಿದ್ದಂತ ಮಹಿಳೆ ಓಡಾಡಿರುವುದು ವೈರಲ್ ಆಗಿರುವಂತ ವೀಡಿಯೋ ದೃಶ್ಯಾವಳಿಯಲ್ಲಿದೆ. ಮಹಿಳೆ ಲಾಂಗ್ ಹಿಡಿದು ಗಂಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವಂತ ಘಟನೆಯನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. https://kannadanewsnow.com/kannada/heavy-rain-accompanied-by-hailstorm-in-bengaluru/ https://kannadanewsnow.com/kannada/nagpur-violence-14-more-held-number-of-arrests-reaches-105-3-fresh-firs-registered/

Read More

ಬೆಂಗಳೂರು: ನಗರದಲ್ಲಿ ಇಂದು ಬಿಸಿಲ ಬೇಗೆಯಿಂದ ತತ್ತರಿಸಿದ್ದಂತ ಜನರಿಗೆ ತಂಪು ಎನ್ನುವಂತೆ ಆಲಿಕಲ್ಲು ಸಹಿತ ಭಾರೀ ಮಳೆ ಹಲವೆಡೆಯಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿದೆ. ಬೆಂಗಳೂರಿನ ಸಂಜಯನಗರ, ಭೂಪಸಂದ್ರ, ಹೆಬ್ಬಾಳ, ಮೇಖ್ರಿ ಸರ್ಕಲ್ ಸೇರಿದಂತೆ ಹಲವೆಡೆ ದಿಢೀರ್ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೆಜೆಸ್ಟಿಕ್, ಶಾಂತಿನಗರ, ಕೆ ಆರ್ ಮಾರ್ಕೆಟ್, ಹಲಸೂರು, ಜಯನಗರ ಸೇರಿದಂತೆ ವಿವಿಧೆಡೆ ಮಳೆಯಾಗಿತ್ತು. ಭಾರೀ ಮಳೆಯಿಂದಾಗಿ ಬೆಂಗಳೂರು ಜನತೆ ಬಿಸಿಲಿನ ಝಳಕ್ಕೆ ತಂಪನ್ನು ಎರೆಯಲಾಗಿತ್ತು. ಇದೀಗ ಇಂದು ಬೆಂಗಳೂರಲ್ಲಿ ದಿಢೀರ್ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. https://kannadanewsnow.com/kannada/drunk-man-calls-108-ambulance-do-you-know-what-happened-next/ https://kannadanewsnow.com/kannada/pvr-inox-partners-with-bcci-to-screen-ipl-2025-live-across-india/

Read More

ಶೃಂಗೇರಿ: ಕುಡಿದ ಮತ್ತಿನಲ್ಲಿ ಕುಡುಕನೊಬ್ಬ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಗಲಾಟೆಯಾಗಿ ಹಲವರಿಗೆ ಗಾಯವಾಗಿದೆ. ಬೇಗ ಬನ್ನಿ ಅಂತ ಕೋರಿದ್ದಾನೆ. ಆನಂತ್ರ ಮುಂದೇನಾಯ್ತು ಗೊತ್ತಾ.? ಶೃಂಗೇರಿಯಲ್ಲಿ ವ್ಯಕ್ತಿಯೊಬ್ಬ ಕುಡಿತ ಮತ್ತಿನಲ್ಲಿ 108 ಆಂಬುಲೆನ್ಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಶೃಂಗೇರಿಯ ಬಸ್ ನಿಲ್ದಾಣದಲ್ಲಿ ದೊಡ್ಡ ಗಲಾಟೆಯಾಗಿದೆ. ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. ಬೇಗ ಸ್ಥಳಕ್ಕೆ ಬನ್ನಿ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಅಂತ ತಿಳಿಸಿದ್ದಾನೆ. ಶೃಂಗೇರಿ ಹಾಗೂ ಕೊಪ್ಪದ 108 ಅಂಬುಲೆನ್ಸ್ 45 ಕಿಲೋಮೀಟರ್ ದೂರದಲ್ಲಿ ಇದ್ದ ಕಾರಣ, ಸಮೀಪದಲ್ಲೇ ಇದ್ದಂತ ಬಾಳೆಹೊನ್ನೂರಿನ 108 ಆಂಬುಲೆನ್ಸ್ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಆದರೇ ಅಲ್ಲಿ ನೋಡಿದ್ರೇ ಯಾವುದೇ ಗಲಾಟೆಯೂ ಆಗಿಲ್ಲ. ಯಾರಿಗೂ ಗಾಯವೂ ಆಗಿಲ್ಲ. ಈ ವಿಚಾರದ ನಂತ್ರ 112ಗೂ ದೂರು ನೀಡಲಾಗಿದೆ. ಸ್ಥಳಕ್ಕೆ ಬಂದಂತ ಪೊಲೀಸರು ಪರಿಶೀಲಿಸಿ ಯಾವುದೇ ಆ ರೀತಿಯ ಗಲಾಟೆ ಆಗಿರದೇ ಇದ್ದದ್ದನ್ನು ಕಂಡು, ಪೋನ್ ಮಾಡಿದಾತನ ಹುಡುಕಾಟಕ್ಕೆ ನಿಂತಿದ್ದಾರೆ. ಅದೇ ಪೋನ್ ನಂಬರ್ ಗೆ ಪೋನ್ ಮಾಡಿದಾಗ, ಅತ್ತ…

Read More

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಶನಿವಾರ ಮಿನಿ ಬಸ್ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 14 ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಘಟನೆಗೆ ತಕ್ಷಣ ಸ್ಪಂದಿಸಿದವು. ಜಮ್ಮು ಪ್ರದೇಶದಲ್ಲಿ ಒಂದು ವಾರದಲ್ಲಿ ಎರಡನೇ ಅಪಘಾತ ಮಹೋರ್ನ ಗಂಗೋಟ್ ಬಳಿ ಮಿನಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಮತ್ತು 10 ಜನರು ಗಾಯಗೊಂಡ ಮತ್ತೊಂದು ದುರಂತ ರಸ್ತೆ ಅಪಘಾತದ ಒಂದು ವಾರದ ನಂತರ ಈ ಅಪಘಾತ ಸಂಭವಿಸಿದೆ. ಎಎನ್ಐ ವರದಿಯ ಪ್ರಕಾರ, ಮಹೋರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ವಿಶೇಷ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಕಳುಹಿಸಲಾಗಿದೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಪರಮ್ವೀರ್ ಸಿಂಗ್ ಹೇಳಿದ್ದಾರೆ. ಎರಡೂ ಘಟನೆಗಳಲ್ಲಿ, ಸ್ಥಳೀಯ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತ್ವರಿತವಾಗಿ ಸ್ಥಳಕ್ಕೆ ಬಂದರು. ಜಿಲ್ಲಾಡಳಿತವು…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ, ಜಾಮೀನಿನ ಮೇಲೆ ನಟ ದರ್ಶನ್ ಹೊರ ಬಂದಿದ್ದಾರೆ. ಅವರು ಕೇರಳದ ಪ್ರಸಿದ್ಧ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆಯನ್ನು ಮಾಡಿಸಿದ್ದಾಗಿ ಹೇಳಲಾಗುತ್ತಿದೆ. ಕೇರಳದ ಕಣ್ಣೂರಿನಲ್ಲಿ ಇರುವಂತ ಶ್ರೀ ಭಗವತೀ ದೇವಸ್ಥಾನ ಶತ್ರು ಸಂಹಾರ ಪೂಜೆಗೆ ಹೆಸರುವಾಸಿಯಾಗಿರುವಂತ ದೇವಾಲಯವಾಗಿದೆ. ಈ ದೇವಾಲಯಕ್ಕೆ ರಾಜ್ಯ, ರಾಷ್ಟ್ರ, ಹೊರ ದೇಶಗಳಿಂದಲೂ ರಾಜಕಾರಣಗಳು ಸೇರಿದಂತೆ ವಿವಿಧ ವರ್ಗದವರು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ಈ ದೇವಾಲಯದ್ಲಿ ನಟ ದರ್ಶನ್ ಅವರು ಕುಟುಂಬ ಸಮೇತರಾಗಿ ಪ್ರತ್ಯಕ್ಷರಾಗಿರೋದು ಇಂತಹದ್ದೊಂದು ಕುತೂಹಲಕ್ಕೆ ಕಾರಣವಾಗಿದೆ. ಕೇರಳದ ಕಣ್ಣೂರಿನ ಶ್ರೀ ಭಗವತೀ ದೇವಸ್ಥಾನದಲ್ಲಿ ನಟ ದರ್ಶನ್ ಕುಟುಂಬ ಸಹಿತ ಶತ್ರು ಸಂಹಾರ ಪೂಜೆ ಮಾಡಿಸಿದ್ದಾಗಿ ಹೇಳಲಾಗುತ್ತಿದೆ. ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀ, ಪುತ್ರ ಧನ್ವೀರ್ ಜೊತೆಗೂಡಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೇ ಅದು ನಿಜವೋ, ಸುಳ್ಳೋ ಎಂಬುದನ್ನು ನಟ ದರ್ಶನ್ ಖಚಿತ ಪಡಿಸಿದಾಗಲೇ ತಿಳಿಯಲಿದೆ. ಅಂದಹಾಗೇ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ…

Read More

ಬೆಳಗಾವಿ: ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ‌ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಸಮಸ್ತ ಪತ್ರಕರ್ತರ ಬಳದಿಂದ ಸನ್ಮಾನಿಸಲಾಯಿತು. ಇಂದು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್, ಬೆಳಗಾವಿ ಮುದ್ರಣ ಮಾದ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪತ್ರಕರ್ತರು ಸಚಿವರನ್ನ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು. ಸನ್ಮಾನದ ವೇಳೆ ಹಿರಿಯ ಪತ್ರಕರ್ತರಾದ ನೌಷಾಧ ಬಿಜಾಪುರ,ರಾಜು ಗೌಳಿ, ಶ್ರೀಶೈಲ್ ಮಠದ, ಮಂಜುನಾಥ ಪಾಟೀಲ್, ಶ್ರೀಕಾಂತ ಕುಬಕಡ್ಡಿ, ಚಂದ್ರಕಾಂತ ಸುಗಂಧಿ, ಅನೀಲ ಕಾಜಗಾರ, ಶ್ರೀಧರ ಕೋಟಾರಗಸ್ತಿ, ಮೈಲಾರಿ ಪ‌ಠಾತ್, ಅಡವೆಪ್ಪ ಪಾಟೀಲ್, ಮೈಬೂಬ್ ಮಕನದಾರ, ಇಮಾಮ್ ಗೂಡುನವರ್, ಸಿದ್ಧನಗೌಡ ಪಾಟೀಲ್, ಸುನೀಲ್ ಪಾಟೀಲ್, ಮುನ್ನಾ ಬಾಗವಾನ ಸೇರಿ ಹಲವು ಪತ್ರಕರ್ತರು ಉಪಸ್ಥಿತರಿದ್ದರು ಸಚಿವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತನ್ನ 20 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ…

Read More

ಬೆಂಗಳೂರು: ನಟಿ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದಾರೆ. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿಕೆ ಮಾಡಿ, ಮತ್ತೆ ಶಾಕ್ ನೀಡಿದೆ. ಇಂದು ನಟಿ ರನ್ಯಾ ರಾವ್ ಅವರು ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಬೆಂಗಳೂರಿನ 64ನೇ ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿತು. ಈ ಅರ್ಜಿಯನ್ನು ಮಾರ್ಚ್.24ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ. ಅಂದಹಾಗೇ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಸಿಕ್ಕಿ ಬಿದ್ದು ಜೈಲುಪಾಲಾಗಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೇ ಕೇಸಲ್ಲಿ ತರುಣ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. https://kannadanewsnow.com/kannada/whatsapp-bans-over-99-lakh-accounts-in-india/ https://kannadanewsnow.com/kannada/nagpur-violence-14-more-held-number-of-arrests-reaches-105-3-fresh-firs-registered/

Read More

ನವದೆಹಲಿ:  ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಂಚನೆಗಳು ಮತ್ತು ವಂಚನೆಯ ಚಟುವಟಿಕೆಗಳನ್ನು ತಡೆಗಟ್ಟಲು ವಾಟ್ಸಾಪ್ ಬಲವಾದ ನೀತಿಗಳನ್ನು ಹೊಂದಿದೆ. ಇತ್ತೀಚಿನ ಮಾಸಿಕ ವರದಿಯಲ್ಲಿ, ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ವೇದಿಕೆಯು ಜನವರಿ 1 ರಿಂದ ಜನವರಿ 30 ರ ನಡುವೆ ಭಾರತದಲ್ಲಿ 99 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ಎಲ್ಲಾ ನಿಷೇಧಿತ ಖಾತೆಗಳಲ್ಲಿ, ಯಾವುದೇ ಬಳಕೆದಾರರ ವರದಿಗಳನ್ನು ಸ್ವೀಕರಿಸುವ ಮೊದಲು 13.27 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವರದಿ ಉಲ್ಲೇಖಿಸುತ್ತದೆ. ಪೂರ್ವಭಾವಿ ನಿಷೇಧಗಳ ಜೊತೆಗೆ, ವಾಟ್ಸಾಪ್ ತನ್ನ ಅಧಿಕೃತ ಕುಂದುಕೊರತೆ ಮಾರ್ಗಗಳ ಮೂಲಕ ಭಾರತದಲ್ಲಿ ಬಳಕೆದಾರರಿಂದ 9,474 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ. ಆದಾಗ್ಯೂ, ಈ ದೂರುಗಳ ಆಧಾರದ ಮೇಲೆ ಕೇವಲ 239 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬ್ಯಾನ್ ಮೇಲ್ಮನವಿಗಳು ಅತಿ ಹೆಚ್ಚು ವರದಿಗಳನ್ನು (4,212) ಹೊಂದಿದ್ದು, ಪರಿಶೀಲನೆಯ ನಂತರ 111 ಖಾತೆಗಳನ್ನು ಮರುಸ್ಥಾಪಿಸಲಾಗಿದೆ. ವಾಟ್ಸಾಪ್ ಖಾತೆಗಳನ್ನು ಏಕೆ ನಿಷೇಧಿಸಿದೆ ವರದಿಯ ಪ್ರಕಾರ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ…

Read More

ಬೆಂಗಳೂರು: ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆಕ್ಷೇಪಿಸಿದರು. ಸ್ಪೀಕರ್ ಅವರು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಖಂಡಿಸಿದರು. ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಮೀಸಲಾತಿ ಕೊಟ್ಟ ಸರಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಪ್ರಕಟಿಸಿದರು. ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಘೋಷಿಸಿದರು.…

Read More