Subscribe to Updates
Get the latest creative news from FooBar about art, design and business.
Author: kannadanewsnow09
ಕಲಬುರಗಿ : “ತಾಲೂಕು ಕೇಂದ್ರಗಳು ಸೇರಿದಂತೆ ಎಲ್ಲೆಲ್ಲಿ ಮಿನಿ ವಿಧಾನಸೌಧಗಳಿವೆ ಅವುಗಳ ಹೆಸರನ್ನು ಪ್ರಜಾಸೌಧಗಳು ಎಂದು ಬದಲಾವಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕಲಬುರ್ಗಿಯಲ್ಲಿ ಮಂಗಳವಾರದಂದು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, “ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದರು. ಸೆ.22 ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ: “ಇದೇ ಸೆಪ್ಟೆಂಬರ್ 22 (ಭಾನುವಾರದಂದು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು” ಎಂದು ತಿಳಿಸಿದರು. “ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅನ್ನು ಕೇವಲ ಐದು ದಿನಗಳಲ್ಲಿ ಮರು ಸ್ಥಾಪಿಸಿ, ನೀರನ್ನು ಹಾಗೂ ರೈತರನ್ನು ಉಳಿಸಿದ್ದೇವೆ. ಗೇಟ್ ದುರಸ್ತಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು, ಇಂಜಿನಿಯರು ಹಾಗೂ ಕಾರ್ಮಿಕರು ಸೇರಿ ಸುಮಾರು 108 ಜನರಿಗೆ ಅಂದು ಸತ್ಕರಿಸಿ, ಗೌರವಿಸಲಾಗುವುದು” ಎಂದು ತಿಳಿಸಿದರು. “ಇಷ್ಟೊತ್ತಿಗಾಗಲೇ ನಾವು ಗಂಗೆ ಪೂಜೆ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಬೆಳಿಗ್ಗೆ ಒಂದು ಕಪ್ ಕಾಫಿ(Coffee) ಕುಡಿಯುವುದು ಅಥವಾ ಊಟದ ನಂತರದ ಪಾನೀಯವನ್ನು ಸೇವಿಸುವುದು ಹೆಚ್ಚಿನ ಜನರಿಗೆ ದೈನಂದಿನ ದಿನಚರಿಯಾಗಿದೆ. ಆದರೆ, ವೈದ್ಯರು ಕಾಫಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ ಎಂದು ತಿಳಿಸಿದ್ದಾರೆ. ಕಾಫಿ ಕೆಫೀನ್ ಅನ್ನು ಹೊಂದಿದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುವುದು ಸೇರಿದಂತೆ ಹಲವಾರು ಹೃದಯರಕ್ತನಾಳದ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ. ವಾಸ್ತವವಾಗಿ, ಕಾಫಿಯು ಆಂಟಿಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸುವ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ ನಂತಹ ಸೂಕ್ಷ್ಮ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. “ವಿಟಮಿನ್ ಇ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಹೃದ್ರೋಗಗಳಂತಹ ವಿವಿಧ ರೀತಿಯ ಕಾಯಿಲೆಗಳನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಕಾಫಿ ಕೆಲವು ರೀತಿಯ ಕ್ಯಾನ್ಸರ್ ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ. ನಾವು ಕಾಫಿ ಅಥವಾ ಕೆಫೀನ್ ಅನ್ನು ನಿಯಮಿತವಾಗಿ ಮಿತಿಯಲ್ಲಿ ಸೇವಿಸಿದರೆ ಅದು ಆತಂಕದ…
ಕೆಎನ್ಎನ್ ಡಿಜಿಟಲ್ ಡೆಸ್ಕ್: ಎನ್ಎಚ್ಎಸ್ ವಿಜ್ಞಾನಿಗಳು ಹೊಸ ರಕ್ತದ ಗುಂಪು ವ್ಯವಸ್ಥೆಯನ್ನು ಗುರುತಿಸಿದ್ದಾರೆ. ಇದು 50 ವರ್ಷಗಳಿಂದ ತಜ್ಞರನ್ನು ಗೊಂದಲಕ್ಕೀಡು ಮಾಡಿದ ವೈದ್ಯಕೀಯ ರಹಸ್ಯವನ್ನು ಪರಿಹರಿಸಿದೆ. ಈ ಆವಿಷ್ಕಾರವು ರಕ್ತ ವರ್ಗಾವಣೆ ಅಭ್ಯಾಸಗಳನ್ನು ಪರಿವರ್ತಿಸಬಹುದು ಮತ್ತು ವಿಶ್ವಾದ್ಯಂತ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ. MAL ರಕ್ತದ ಗುಂಪಿನ ಗುರುತಿಸುವಿಕೆ ದಕ್ಷಿಣ ಗ್ಲೌಸೆಸ್ಟರ್ಶೈರ್ನ ಎನ್ಎಚ್ಎಸ್ ಬ್ಲಡ್ ಅಂಡ್ ಟ್ರಾನ್ಸ್ಪ್ಲಾಂಟ್ (ಎನ್ಎಚ್ಎಸ್ಬಿಟಿ) ಸಂಶೋಧಕರು ಎಂಎಎಲ್ ರಕ್ತದ ಗುಂಪನ್ನು ಗುರುತಿಸಿದ್ದಾರೆ. ಈ ಪ್ರಗತಿಯು 1972 ರಲ್ಲಿ ಮೊದಲು ಕಂಡುಹಿಡಿಯಲಾದ ಆದರೆ ಈ ಹಿಂದೆ ವಿವರಿಸಲಾಗದ ಎಎನ್ಡಬ್ಲ್ಯೂಜೆ ಪ್ರತಿಜನಕದ ಆನುವಂಶಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟತೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ 20 ವರ್ಷಗಳಿಂದ ಕೆಲಸ ಮಾಡಿದ ಹಿರಿಯ ಸಂಶೋಧಕ ಲೂಯಿಸ್ ಟಿಲ್ಲಿ, ಈ ಹೊಸ ಪರೀಕ್ಷೆಯು ಅಪರೂಪದ ರಕ್ತದ ಪ್ರಕಾರಗಳನ್ನು ಹೊಂದಿರುವ ರೋಗಿಗಳಿಗೆ ಆರೈಕೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸಿದ್ದಾರೆ. ಆವಿಷ್ಕಾರದ ಪ್ರಭಾವ ಫಿಲ್ಟನ್ ನಲ್ಲಿರುವ ಎನ್ ಎಚ್ ಎಸ್ ಬಿಟಿ ಪ್ರಯೋಗಾಲಯವು ಎಎನ್ ಡಬ್ಲ್ಯುಜೆ ಆಂಟಿಜೆನ್ ಇಲ್ಲದ ವ್ಯಕ್ತಿಗಳನ್ನು…
ಬೆಂಗಳೂರು: ಸಮುದಾಯ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನ 1,928 ಭಾಗವಹಿಸುವವರಲ್ಲಿ ಸುಮಾರು 21 ಪ್ರತಿಶತದಷ್ಟು ಜನರು ಪ್ರತಿದಿನ ಬಿಸ್ಕತ್ತು ಮತ್ತು ಕೇಕ್ಗಳಂತಹ ಬೇಕರಿ ಉತ್ಪನ್ನಗಳನ್ನು ಸೇವಿಸುತ್ತಾರೆ ಎಂದು ತಿಳಿದುಬಂದಿದೆ. ಕೇವಲ 8 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಕುಟುಂಬಗಳು ಅಂತಹ ಉತ್ಪನ್ನಗಳನ್ನು ತಿಂಗಳುಗಟ್ಟಲೆ ತಪ್ಪಿಸುತ್ತಾರೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಹೆಚ್ಚಿನವರು ತಮ್ಮ ಕುಟುಂಬವು ತಿಂಗಳಿಗೆ ಅನೇಕ ಬಾರಿ ಬೇಕರಿ ಪದಾರ್ಥಗಳನ್ನು ಸೇವಿಸುತ್ತದೆ ಎಂದು ಸೂಚಿಸುತ್ತಾರೆ, ಇದು ಈ ಆಹಾರ ಪದ್ಧತಿಯ ಆರೋಗ್ಯದ ಪರಿಣಾಮಗಳ ಬಗ್ಗೆ ಕಳವಳವನ್ನು ಹೆಚ್ಚಿಸುತ್ತದೆ. ಸೋಮವಾರ ಬಿಡುಗಡೆಯಾದ ಸಮೀಕ್ಷೆಯು ನಗರ ಜನಸಂಖ್ಯೆಯಲ್ಲಿ ಅನಾರೋಗ್ಯಕರ ಮಾದರಿಯನ್ನು ಬಹಿರಂಗಪಡಿಸಿದೆ, ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕದ ಬೇಕರಿ ಉತ್ಪನ್ನಗಳನ್ನು ಆಗಾಗ್ಗೆ ಸೇವಿಸುವುದರಿಂದ ತೂಕ ಹೆಚ್ಚಳ, ಬೊಜ್ಜು, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ.ಡಿ.ಮಂಜುನಾಥ್ ಮಾತನಾಡಿ, “ಬೊಜ್ಜು ಮತ್ತು ಅನಾರೋಗ್ಯಕರ ತೂಕ ಹೆಚ್ಚಳದಂತಹ ಸಮಸ್ಯೆಗಳು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು…
ಕಲಬುರ್ಗಿ: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತ್ರ, ರಾಜ್ಯಪಾಲರ ನಡೆದೆ ಸಚಿವ ಸಂಪುಟ ಅಸಮಾಧಾನಗೊಂಡಿದೆ. ಈ ಬೆನ್ನಲ್ಲೇ ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕುಲಪತಿ ನೇಮಕ ನಿರ್ಧಾರವನ್ನು ತನ್ನ ಸುಪರ್ಧಿಗೆ ರಾಜ್ಯ ಸರ್ಕಾರ ಪಡೆದಿದೆ. ಮಂಗಳವಾರದಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಿಎಂ ಆದಿಯಾಗಿ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಇತ್ತೀಚಿನ ನಡೆ ಸರಿಯಾದುದಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವಂತ ಸಚಿವ ಸಂಪುಟದ ಸದಸ್ಯರು, ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ವಿಶ್ವವಿದ್ಯಾಲಯದ ಅನುದಾನ ಆಯೋಗವು ರಾಷ್ಟ್ರದಲ್ಲಿ ವಿವಿಗಳ ಸ್ಥಾನ ಆಡಳಿತ ನಿರ್ವಹಣೆ ಹಾಗೂ ಬೋಧನಾ ವರ್ಗದವರನ್ನು ನೇಮಿಸಿಕೊಳ್ಳಲು ಏಕರೂಪ ವ್ಯವಸ್ಥೆಯನ್ನು ರೂಪಿಸಲು…
ಬೆಂಗಳೂರು: ಸರ್ಕಾರದ ಎಲ್ಲಾ ಪ್ರವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಸಿರುವ ಹಿನ್ನಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ 247 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಕೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ನೀಡಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕೆಪಿಎಸ್ಸಿ ಕಲ್ಪಿಸಿದೆ. ಈ ಮೂಲಕ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ. ಅಂದಹಾಗೆ 247 ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್.3 ಕೊನೆಯ ದಿನವಾಗಿದೆ. ಅರ್ಜಿಯನ್ನು www.kapsc.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪಿಎಸ್ಐ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ( PSI Recruitment Exam ) ದಿನಾಂಕ 03-10-2024ರಂದು ಬೆಳಿಗ್ಗೆ 10.30ರಿಂದ 12 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಇಲ್ಲಿದೆ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ…
ಇಂದಿನ ವಾತಾವರಣದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚುತ್ತಿದೆ. ಒಳ್ಳೆಯದಕ್ಕೆ ಖರ್ಚು ಮಾಡಿದರೆ ಖರ್ಚು ಮಾಡುವುದು ದೊಡ್ಡ ಮಾನಸಿಕ ನ್ಯೂನತೆಯಲ್ಲ. ಆದರೆ ನಮ್ಮ ಹಣವನ್ನು ಅನಗತ್ಯ ವಿಷಯಗಳಿಗೆ ಮತ್ತು ವೈದ್ಯಕೀಯ ವೆಚ್ಚಗಳಿಗೆ ವ್ಯರ್ಥ ಮಾಡುವುದನ್ನು ಮುಂದುವರೆಸಿದರೆ, ಅದು ನಮಗೆ ಅನಾನುಕೂಲವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯನ್ನು ಎಷ್ಟರ ಮಟ್ಟಿಗೆ ಬದಲಾಯಿಸಬಹುದು ಎಂಬುದು ತಿಳಿದಿಲ್ಲ. ಆದರೆ ಆದಾಯವನ್ನು ಹೆಚ್ಚಿಸುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು, ಆದರೆ ಖರ್ಚು ಮಾಡದಿರುವುದು ಅಸಾಧ್ಯ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ 1 ರೂಪಾಯಿ ಖರ್ಚನ್ನೂ 1000 ರೂಪಾಯಿಗಳಾಗಿ ಪರಿವರ್ತಿಸಲು ನಾವು ಏನು ಮಾಡಬೇಕೆಂದು ತಿಳಿಯಬಹುದು . ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು…
ಕಲಬುರ್ಗಿ: ಕಲಬುರ್ಗಿಯಲ್ಲಿ ನಡೆದಂತ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಕಲ್ಯಾಣ ಭಾಗದ 7 ಜಿಲ್ಲೆಗಳ ಅಭಿವೃದ್ಧಿಗೆ 11,779 ಕೋಟಿ ರೂ.ಗಳ ಯೋಜನೆಗಳಿಗೆ ಅಂಗೀಕಾರವನ್ನು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಂಗಳವಾರದಂದು ನಡೆದಂತ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರದಂದು 10 ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿದ್ಧರಾಮಯ್ಯ ಅವರು, ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 46 ವಿಷಯಗಳಿಗೆ ಒಟ್ಟು 11770 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಬೀದರ್ ಮತ್ತು ರಾಯಚೂರು ಪಟ್ಟಣಗಳನ್ನು ಮಹಾನಗರ ಪಾಲಿಕೆಯಾಗಿ ಮಾಡುವ ಹಾಗೂ ಬೀದರ್ ಮತ್ತು ಕಲಬುರಗಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಯನ್ನು 7200 ಕೋಟಿ ರೂಗಳ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಮಂಗಳವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ…
ನವದೆಹಲಿ: ಅಪರೂಪದ ಧೂಮಕೇತು ಅಟ್ಲಾಸ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಗೋಚರಿಸಲಿದೆ. 2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ಕಂಡು, ಇದನ್ನು ಶತಮಾನದ ಧೂಮಕೇತು ಎಂದೇ ಬಣ್ಣಿಸಲಾಗಿತ್ತು. ಈಗ ಇದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದ್ದು, ಭೂಮಿಗೆ ಸಮೀಪಕ್ಕೆ ಬರುವಂತ ಅಟ್ಲಾಸ್ ಧೂಮಕೇತುವನ್ನು ಈ ಬಾರಿ ಬರಿಗಣ್ಣಿನಿಂದ ನೋಡಬಹುದಾಗಿದೆ. ಸುಚಿನ್ಸನ್-ಅಟ್ಲಾಸ್ ಹೆಸರಿನ ಧೂಮಕೇತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಿಸಲಿದೆ. ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ಅಂದರೆ ಸುಮಾರು 3 ಜ್ಯೋತಿರ್ವರ್ಷ ಅಂದರೆ 30 ಟ್ರಿಲಿಯನ್ ಕಿಮೀ ದೂರದಿಂದ ಹೊರಟ ಈ ಧಊಮಕೇತು ಸೆಕೆಂಡ್ ಗೆ ಸುಮಾರು 30 ಕಿಲೋ ಮೀಟರ್ ವೇಗದಲ್ಲಿ ಕ್ರಮಿಸುತ್ತಾ ಸೆ.27ರಂದು ಸೂರ್ಯನನ್ನು ಸಮೀಪಿಸಲಿದೆ. ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂತಿರುಗುವಾಗ ಅಕ್ಟೋಬರ್.12ರಂದು ಭೂಮಿಗೆ ಸಮೀಪದಲ್ಲಿ ಸಂಜೆ ವೇಳೆ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಲಿದೆ. https://kannadanewsnow.com/kannada/man-arrested-for-theft-to-pay-off-tomato-crop-loss-loan/ https://kannadanewsnow.com/kannada/karnataka-high-court-judge-m-nagaprasanna-sets-another-record-hears-503-petitions-in-a-single-day/ https://kannadanewsnow.com/kannada/sc-issues-notice-to-dk-shivakumar-in-disproportionate-assets-case/
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮತ್ತೊಂದು ದಾಖಲೆ ಎನ್ನುವಂತೆ ಒಂದೇ ದಿನ ಬರೋಬ್ಬರಿ 503 ಅರ್ಜಿಗಳನ್ನು ವಿಚಾರಣೆ ನಡೆಸಿದ್ದಾರೆ. ಹೌದು ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಹೆಸರುವಾಸಿಯಾಗಿರುವಂತ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮಂಗಳವಾರದಂದು ಕಲಪದಲ್ಲಿ ಬರೋಬ್ಬರಿ 503 ಅರ್ಜಿಗಳನ್ನು ವಿಚಾರಣೆ ನಡೆಸಿದರು. ಬೆಂಗಳೂರಿನ ಪ್ರಧಾನ ಪೀಠದಲ್ಲಿನ 17ನೇ ಕೋರ್ಟ್ ಹಾಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮಂಗಳವಾರದಂದು ಕಲಾಪದಲ್ಲಿ ಪಟ್ಟಿ ಒಟ್ಟು 503 ಕ್ರಿಮಿನಲ್ ಹಾಗೂ ರಿಟ್ ಅರ್ಜಿ ವಿಚಾರಣೆಗೆ ನಿಗದಿಯಾಗಿದ್ದವು. ದಿನದ ಕಲಾಪದ ಅವಧಿ ಪೂರ್ಣಗೊಳ್ಳುವುದಕ್ಕೆ 45 ನಿಮಿಷ ಮುಂಚಿತವಾಗೇ ಅಷ್ಟೂ ಅರ್ಜಿಗಳನ್ನು ವಿಚಾರಣೆ ನಡೆಸಿ ಮುಕ್ತಾಗೊಳಿಸಿದರು. ಇನ್ನೂ 187 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದರೇ, 125 ಪ್ರಕರಣಗಳಲ್ಲಿ ಮಧ್ಯಂತರ ಆದೇಶ ನೀಡಲಾಗಿದೆ. ಈ ಹಿಂದೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಒಂದೇ ದಿನ ಕಲಾಪದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿ ದಾಖಲೆ ಬರೆದಿದ್ದರು. https://kannadanewsnow.com/kannada/man-arrested-for-theft-to-pay-off-tomato-crop-loss-loan/ https://kannadanewsnow.com/kannada/nekkanti-nagaraj-a-close-aide-of-former-minister-b-nagendra-the-main-accused-in-the-valmiki-scam-has-been-granted-bail/